ಕೊರೊನಾ ಇಳಿದ ಬಳಿಕ ಉಗ್ರ ಹೋರಾಟ
Team Udayavani, Jun 13, 2021, 6:54 PM IST
ಹನೂರು: ಕೊರೊನಾ ಸಂಕಷ್ಟದಲ್ಲಿಕೇಂದ್ರ ಮತ್ತು ರಾಜ್ಯ ಸರ್ಕಾರಗಳುಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನುನಿರಂತರವಾಗಿ ಏರಿಸಿ ಶತಕ ದಾಟಿಸಿ ದ್ದಾರೆ.ಇದು ಜನವಿರೋಧಿ ನೀತಿ ಎಂದು ಶಾಸಕ ಆರ್.ನರೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಟಿಎಪಿಸಿಎಂಎಸ್‌ಪೆಟ್ರೋಲ್ ಬಂಕ್ ಸಮೀಪ ಕಾಂಗ್ರೆಸ್‌ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕೂಡಲೇ ಬೆಲೆ ಇಳಿಸದಿದ್ದರೆ ಕೊರೊನಾ ಕಡಿಮೆಯಾದ ಬಳಿಕಉಗ್ರ ಹೋರಾಟ ನಡೆಸಲಾಗುವುದು.ವಿದ್ಯುತ್ ಬೇಡಿಕೆಗಿಂತ ಹೆಚ್ಚು ಉತ್ಪಾದನೆಯಾಗುತ್ತಿದ್ದರೂ ಬೆಲೆ ಏರಿಕೆ ಮಾಡಿರುವುದು ಖಂಡನೀಯ ಎಂದರು.
ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್‌ಅಧ್ಯಕ್ಷ ಕೆ.ಈಶ್ವರ್, ಕಾರ್ಯದರ್ಶಿಉದ್ದನೂರು ಸಿದ್ಧರಾಜು, ತಾಪಂ ಸದಸ್ಯಸವಾದ್ ಅಹಮ್ಮದ್, ಪಪಂ ಉಪಾಧ್ಯಕ್ಷ ಹರೀಶ್ ಕುಮಾರ್, ಸದಸ್ಯರಾದಸುದೇಶ್, ಗಿರೀಶ್, ಸಂಪತ್, ಸೋಮಶೇಖರ್, ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ಸತೀಶ್, ಮಂಜೇಶ್,ಗುಂಡಾಪುರ ಮಾದೇಶ್ ಇತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.