ತಮಿಳು ನಾಡು : ನಾಳೆಯಿಂದ 27 ಜಿಲ್ಲೆಗಳಲ್ಲಿ ಮೊದಲ ಹಂತದ ಅನ್ ಲಾಕ್ ಘೋಷಿಸಿದ ಸರ್ಕಾರ
Team Udayavani, Jun 13, 2021, 8:29 PM IST
ಚೆನ್ನೈ : ಕೋವಿಡ್ ಸೋಂಕಿನ ನಿರಂತರ ಇಳಿಮುಖವಾಗುತ್ತಿರುವ ಹಿನ್ನಲೆಯಲ್ಲಿ ತಮಿಳು ನಾಡಿನ 27 ಜಿಲ್ಲೆಗಳಲ್ಲಿ ನಾಳೆಯಿಂದ(ಜೂನ್ 14) ಲಾಕ್ ಡೌನ್ ಸಡಿಲಗೊಳಿಸಿ ಅಲಲಿನ ಸರ್ಕಾರ ಾದೇಶ ಹೊರಡಿಸಿದೆ.
27 ಜಿಲ್ಲೆಗಳನ್ನು ಹೊರತಾಗಿ ಉಳಿದ ಇತರೆ 11 ಜಿಲ್ಲೆಗಳಲ್ಲಿ ಕೋವಿಡ್ ಸೋಂಕಿನ ಹೊಸ ಪ್ರಕರಣಗಳಲ್ಲಿ ಇಳಿಮುಖ ಕಂಡುಬಂದಿಲ್ಲವಾದ್ದರಿಂದ ಕಠಿಣ ಲಾಕ್ ಡೌನ್ ಮುಂದುವರಿಯಲಿದೆ ಎಂದು ಸ್ಟ್ಯಾಲಿನ್ ನೇತೃತ್ವದ ಸರ್ಕಾರ ಮಾಹಿತಿ ನೀಡಿದೆ.
ಇದನ್ನೂ ಓದಿ : ಬಿಜೆಪಿಯ ಮಾಜಿ ಶಾಸಕ ಜಿ.ವೀರಪ್ಪ ನಿವಾಸಕ್ಕೆ ಎಚ್.ಆರ್.ಶ್ರೀನಾಥ್ ಭೇಟಿ, ರಾಜಕೀಯ ಚರ್ಚೆ
ಟೀ ಶಾಪ್ ತೆರೆಯಲು ಅನುಮತಿಸಿರುವುದನ್ನು ಒಳಗೊಂಡು ಹಲವು ನಿರ್ಬಂಧಗಳನ್ನು ಸಡಿಲಿಕೆ ಮಾಡಿ ಘೋಷಣೆ ಮಾಡಿದೆ.
ಇನ್ನು, ಚೆನ್ನೈ ನಗರವನ್ನು ಸೇರಿದಂತೆ ಈ 27 ಜಿಲ್ಲೆಗಳಲ್ಲಿ ಟೀ ಶಾಪ್ ಗಳನ್ನು ಬೆಳಿಗ್ಗೆ 6 ರಿಂದ ಸಂಜೆ 5ರವರೆಗೂ ತೆರೆಯಲು ಅವಕಾಶ ಕೊಟ್ಟಿದ್ದು, ಪಾರ್ಸಲ್ ಗೆ ಅವಕಾಶವಿದೆ. ಬಿಸಿ ಪಾನೀಯ ಒಯ್ಯಲು ಪಾತ್ರೆ ಬಳಸಬೇಕು. ಆದಷ್ಟು ಪ್ಲಾಸ್ಟಿಕ್ ಬ್ಯಾಗ್ ಬಳಕೆ ತಪ್ಪಿಸಬೇಕು ಎಂದು ಸರ್ಕಾರ ಮಾರ್ಗ ಸೂಚಿಯ ಮೂಲಕ ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದೆ.
ಮೊದಲ ಹಂತದ ಅನ್ ಲಾಕ್ ಘೋಷಣೆ ಮಾಡಿರುವ ತಮಿಳು ನಾಡು ಸರ್ಕಾರ, ಸಿಹಿ ಮತ್ತು ಖಾರದ ತಿನಿಸು ಮಾರುವ ಅಂಗಡಿಗಳಿಗೆ ಬೆಳಿಗ್ಗೆ 8 ರಿಂದ ಮಧ್ಯಾಹ್ನ 2ರವರೆಗೆ ತೆರೆಯಲು ಅನುಮತಿ ನೀಡಿದ್ದು, ಕೇವಲ ಪಾರ್ಸಲ್ ಒಯ್ಯಬಹುದು ಎಂದು ತಿಳಿಸಲಾಗಿದೆ.
ತಮಿಳುನಾಡಿನಲ್ಲಿ ಟೀ ಶಾಪ್‌ಗಳು ಅಧಿಕ ಸಂಖ್ಯೆಯಲ್ಲಿದ್ದು, ಲಾಕ್ ಡೌನ್ ಕಾರಣ ಮೇ 10ರಿಂದ ಬಂದ್ ಆಗಿವೆ. ಉಳಿದಂತೆ, ರೆಸ್ಟೋರಂಟ್ ಗಳು ಮತ್ತು ಬೇಕರಿಗಳು ಈಗಾಗಲೇ ವಹಿವಾಟು ನಡೆಸುತ್ತಿವೆ. ಸರ್ಕಾರಿ ಸೇವೆ ನಿರೀಕ್ಷಿಸುತ್ತಿರುವ ಜನರಿಗೆ ನೆರವಾಗಲು, ಇ–ಸರ್ವೀಸ್ ಸೆಂಟರ್ ತೆರೆಯಲು ಅನುಮತಿಸಲಾಗಿದೆ.
ಇದನ್ನೂ ಓದಿ : ಬೆಳಕು, ಕತ್ತಲೆಗಳ ಘರ್ಷಣೆಯಿಂದ ಹೊರಬಂದ ಹಾಡು ‘ಮರಳಿ ಬಾ ಮನ್ವಂತರವೇ ಕಂಬನಿಗಳ ಬಳಿಗೆ..
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಆಮ್ ಆದ್ಮಿಯ ಮಾಜಿ ಶಾಸಕ ಸುಖ್ಬೀರ್ ದಲಾಲ್ ಬಿಜೆಪಿ ಸೇರ್ಪಡೆ, ಕೇಜ್ರಿಗೆ ಹಿನ್ನಡೆ
iPhone: ಕೈತಪ್ಪಿ ಕಾಣಿಕೆ ಹುಂಡಿಗೆ ಬಿದ್ದ ಐಫೋನ್… ಇದು ದೇವರ ಸೊತ್ತು ಎಂದ ಸಿಬ್ಬಂದಿ
Parliament Session: 26 ದಿನಗಳಲ್ಲಿ 7 ಮಸೂದೆಗಳಿಗೆ ಅನುಮೋದನೆ, 65 ಗಂಟೆ ನಷ್ಟ!
Parliament Session: ವಿಪಕ್ಷಗಳ ಕೋಲಾಹಲ ನಡುವೆ ಏಕ ಚುನಾವಣೆ ಮಸೂದೆ ಜೆಪಿಸಿಗೆ
ಜೋಡೋ ಯಾತ್ರೆಯಲ್ಲಿ”ನಗರ ನಕ್ಸಲರು’: ಮಹಾರಾಷ್ಟ್ರ ಸಿಎಂ ಫಡ್ನವೀಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
Mangaluru: ಅಂಬೇಡ್ಕರ್ – ಸಂವಿಧಾನ ಯಾರಿಗೂ ಟೂಲ್ ಆಗಬಾರದು: ಕೈ ವಿರುದ್ದ ಸಂತೋಷ್ ಟೀಕೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Lalbagh: ಇಂದಿನಿಂದ ಕರಾವಳಿ ಉತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.