ಸಿರಿಯಾ ಆಸ್ಪತ್ರೆ ಮೇಲೆ ಶೆಲ್ ದಾಳಿ : ಇಬ್ಬರು ವೈದ್ಯಕೀಯ ಸಿಬ್ಬಂದಿ ಸೇರಿ 13 ಮಂದಿ ಸಾವು
Team Udayavani, Jun 13, 2021, 10:26 PM IST
ಬೈರುತ್: ಉತ್ತರ ಸಿರಿಯಾದ ಟರ್ಕಿ ಬೆಂಬಲಿತ ಹೋರಾಟಗಾರರ ನಿಯಂತ್ರಣದಲ್ಲಿರುವ ಆಸ್ಪತ್ರೆಯ ಮೇಲೆ ಕ್ಷಿಪಣಿ ದಾಳಿ ನಡೆದಿದ್ದು, ಇಬ್ಬರು ವೈದ್ಯಕೀಯ ಸಿಬ್ಬಂದಿ ಸೇರಿದಂತೆ 13 ಮಂದಿ ಮೃತಪಟ್ಟಿದ್ದಾರೆ. 27 ಮಂದಿ ಗಾಯಗೊಂಡಿದ್ದಾರೆ.
ದಾಳಿಯಿಂದ ಪಾಲಿಕ್ಲಿನಿಕ್ ವಿಭಾಗ, ಐಸಿಯು ಮತ್ತು ಹೆರಿಗೆ ಕೊಠಡಿ ಧ್ವಂಸವಾಗಿದ್ದು, ಸದ್ಯಕ್ಕೆ ಸೇವೆಯನ್ನು ನಿರ್ಬಂಧಿಸಲಾಗಿದೆ. ಸರ್ಕಾರಿ ಪಡೆಗಳು ಮತ್ತು ಕುರ್ದಿಶ್ ನೇತೃತ್ವದ ಹೋರಾಟಗಾರರನ್ನು ನಿಯೋಜಿಸಲ್ಪಟ್ಟಿರುವ ಪ್ರದೇಶದ ಮೇಲೆ ಯಾರು ಶೆಲ್ ದಾಳಿ ನಡೆಸಿದ್ದಾರೆ ಎಂಬುದು ತಿಳಿದು ಬಂದಿಲ್ಲ.
ಆಫ್ರಿನ್ ಗಡಿಯಾಚೆಗಿನ ದಾಳಿಯಲ್ಲಿ ರಾಕೆಟ್ಗಳನ್ನು ಬಳಸಿದ್ದಾರೆ. ಸಿರಿಯಾ ಕುರ್ದಿಷ್ ಗುಂಪು ಈ ದಾಳಿ ಮಾಡಿದೆ ಎಂದು ಗೌರ್ನರ್ ಕಚೇರಿ ಆರೋಪಿಸಿದೆ.
ಇದನ್ನೂ ಓದಿ : ರಕ್ಷಣಾ ಶಸ್ತ್ರಾಸ್ತ್ರ ತಯಾರಿಕಾ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಕ್ಕೆ ನಗದು ಬಹುಮಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.