ಬದುಕಿನಲ್ಲಿ ತುಂಬಿರಲಿ ಕೃಷ್ಣನಂಥ ವಿನೋದ
Team Udayavani, Jun 14, 2021, 2:38 AM IST
ಹೇಗೆ ಬದುಕಬೇಕು ಎನ್ನುವುದಕ್ಕೆ ಶ್ರೀಕೃಷ್ಣನ ಜೀವನ ಒಂದು ಉತ್ತಮ ಉದಾಹರಣೆ. ಹುಟ್ಟಿದಲ್ಲಿಂದ ತೊಡಗಿ ನಿರ್ಯಾಣದವರೆಗಿನ ಅವನ ಬದು ಕನ್ನು ಕಣ್ಣಮುಂದೆ ತಂದುಕೊಳ್ಳಿ. ಮಥುರೆಯಲ್ಲಿ ಅವನ ಬಾಲ್ಯವನ್ನು ಗಮನಿಸಿ. ಅವನ ಮೋಹಕ ರೂಪ, ಸ್ನಿಗ್ಧ ನಗು, ಕೊಳಲು, ನರ್ತನ – ಪ್ರತಿ ಯೊಂದು ಕ್ಷಣವನ್ನೂ ಆನಂದ, ಉಲ್ಲಾ ಸದಿಂದ ಕಳೆಯಬೇಕು ಎನ್ನುವ ಅರಿ ವನ್ನು ನಮಗೆ ಒದಗಿಸುತ್ತದೆ.
ಬಾಲ್ಯದಲ್ಲಿ ಶ್ರೀಕೃಷ್ಣ ಗೆಳೆಯ ರೊಂದಿಗೆ ಕೂಡಿ ಹಾಲು, ಮೊಸರು, ಬೆಣ್ಣೆ ಕದಿಯು ತ್ತಿದ್ದ. ಮೊಸರಿನ ಗಡಿಗೆ ಯನ್ನು ಎತ್ತರದ ನೆಲುವಿ ನಲ್ಲಿ ಇರಿಸಿದರೆ ಗೆಳೆ ಯರು ಒಬ್ಬರ ಮೇಲೊ ಬ್ಬರು ನಿಂತು ಛಾವಣಿ ಯನ್ನೇರಿ ಹೆಂಚು ತೆಗೆದು ಮನೆಯೊಳಗಿಳಿದು ಕದಿ ಯುತ್ತಿದ್ದರು. ಎತ್ತರದಲ್ಲಿ ಇರಿಸಿದ ಗಡಿಗೆಗೆ ಕಲ್ಲು ಹೊಡೆದು ಒಡೆಯುತ್ತಿದ್ದರು. ಗಡಿಗೆ ತೂತಾಗಿ ಹರಿಯುವ ಹಾಲಿನ ಧಾರೆಗೆ ಬಾಯಿ ಒಡ್ಡಿ ಕುಡಿಯುತ್ತಿದ್ದರು. ನೆಲದಲ್ಲಿ ಮೊಸರು, ಬೆಣ್ಣೆ ಚೆಲ್ಲಿದರೆ ಬಾಚಿ ಬಾಯಿಗಿಡುತ್ತಿದ್ದರು. ಮಥುರೆಯ ಗೋಪಿಕೆಯರಿಗೆ ಹಾಲು, ಮೊಸರು, ಬೆಣ್ಣೆಯೇ ಬದುಕು. ಆದರೆ ಯಾರೂ ಕೃಷ್ಣನ ಮೇಲೆ ಸಿಟ್ಟಾಗುತ್ತಿರಲಿಲ್ಲ, ವೈರ ಸಾಧಿಸು ತ್ತಿರಲಿಲ್ಲ. ತೀರಾ ಕೋಪಿಸಿ ಕೊಂಡು ಯಶೋದೆಗೆ ದೂರಿತ್ತರೂ ಆಗ ಆಕೆಯ ಸೆರಗಿನ ಹಿಂದೆ ಅವಿತುಕೊಂಡ ಮುದ್ದುಕೃಷ್ಣನ ಮೊಗ ಕಂಡಾಗ ಅವರ ಸಿಟ್ಟು ಕರಗಿಹೋಗುತ್ತಿತ್ತು!
ಕೃಷ್ಣನ ಈ ತುಂಟಾಟಗಳ ಸುತ್ತ ಹಾಡು, ನೃತ್ಯ, ಕೊಳಲಿನ ನಾದ, ಹಸುಕ ರುಗಳ ಸಮ್ಮಿಲನ. ದಿನದ ಇಪ್ಪತ್ತನಾಲ್ಕು ತಾಸು ಕೂಡ ಸಂತೋಷವಾಗಿರುವುದಕ್ಕೆ ಕೃಷ್ಣನಷ್ಟು ಒಳ್ಳೆಯ ಮಾದರಿ ಇನ್ನೊಂ ದಿಲ್ಲ. ಇವೆಲ್ಲವೂ ಯಾವುದರ ನಡುವೆ? ಕೃಷ್ಣ ಹುಟ್ಟಿದಾಗಿನಿಂದ ಅವನನ್ನು ಕೊಲ್ಲಲು ಅನುದಿನವೂ ಪ್ರಯತ್ನಗಳು ನಡೆಯು ತ್ತಲೇ ಇದ್ದವು. ಆದರೆ ಅಗತ್ಯ ಬಿದ್ದಾಗ ಮಾತ್ರ ದೈವೀ ಶಕ್ತಿಯನ್ನು ಪ್ರದರ್ಶಿಸುತ್ತ ಇನ್ನುಳಿದ ಹೊತ್ತಿನಲ್ಲಿ ಉತ್ತಮೋತ್ತಮ ಮನುಷ್ಯ ನಾಗಿಯೇ ಇದ್ದವನು ಕೃಷ್ಣ.
ನಮ್ಮ ನಿಮ್ಮ ಬದುಕನ್ನು ನೋಡಿಕೊ ಳ್ಳೋಣ. ಹಲವು ಬಾರಿ ಸ್ವಂತಕ್ಕಾಗಿ ಹತ್ತು ನಿಮಿಷ ಮೀಸಲಿಡುವಷ್ಟು ವ್ಯವ ಧಾನವೂ ನಮಗೆ ಇರುವುದಿಲ್ಲ. ನಾವು ಅತ್ಯಂತ ಪ್ರೀತಿಸುವ ವ್ಯಕ್ತಿಯ ಎದುರು ಕುಳಿತು ಒಂದಷ್ಟು ಹೊತ್ತು ಕಣ್ಣಿನಲ್ಲಿ ಕಣ್ಣಿಟ್ಟು ಮಾತನಾಡುವಷ್ಟು ಸಮಯ ಇರುವು ದಿಲ್ಲ. ಹತ್ತು ನಿಮಿಷ ಬೇರೇನೂ ಆಲೋಚಿಸದೆ ಹಿತ್ತಿಲಿನಲ್ಲಿ ಸಂತೋಷ ವಾಗಿ ಅಡ್ಡಾಡುವುದಿಲ್ಲ. ಹೀಗಿರುವುದೇ ಆದರೆ ಅದಕ್ಕೆ ಮಥುರೆ ಯಲ್ಲಿ ಜಾಗವಿಲ್ಲ.
ಕೃಷ್ಣನಿರುವ ಮಥುರೆ ಸಂಪೂರ್ಣ ಖುಷಿಯ ಲೋಕ. ಜನರು ತಮ್ಮ ತಮ್ಮ ರೂಢಿಯ ಕೆಲಸಗ ಳನ್ನು ಕೂಡ ಹಾಡುತ್ತ, ಖುಷಿ ಪಡುತ್ತ, ಉಲ್ಲಾಸ ದಿಂದ ಕೈಗೊಳ್ಳುವ ಲೋಕ. ನಮ್ಮ ಬದುಕು ಕೂಡ ಇರಬೇಕಾದದ್ದು ಹೀಗೆ.
ಕೃಷ್ಣ ಕೆಲವೇ ತಿಂಗಳುಗಳ ಹಸುಳೆ ಯಾಗಿದ್ದಾಗ ನಡೆದ ಒಂದು ಘಟನೆ. ಅಂದು ಪೌರ್ಣಮಿ. ಮಥುರೆಯ ಜನರು ಯಮುನೆಯ ದಡದಲ್ಲಿ ಬೆಳ ದಿಂಗಳ ಊಟ ಮಾಡಲು ಸಿದ್ಧತೆ ನಡೆಸಿ ದ್ದರು. ಯಶೋದೆ ಶಿಶು ಕೃಷ್ಣನನ್ನು ಚಕ್ಕಡಿಯ ಕೆಳಗೆ ಮಲಗಿಸಿ ಅಡುಗೆ ಕೆಲಸದಲ್ಲಿದ್ದಳು. ನಿದ್ದೆಯಲ್ಲಿದ್ದ ಕೃಷ್ಣನಿಗೆ ಎಚ್ಚರವಾಯಿತು. ಎತ್ತಿಕೊಳ್ಳಲು ಹತ್ತಿರ ಯಾರೂ ಇಲ್ಲ. ದೂರದಲ್ಲಿ ಎಲ್ಲರೂ ಹಾಡು, ಕುಣಿತದಲ್ಲಿ ಮಗ್ನರಾಗಿರು ವುದು ಕಂಡಿತು. ಅವನಿಗೂ ಅಲ್ಲಿಗೆ ಹೋಗಬೇಕು, ಅವರೊಡನೆ ಭಾಗಿ ಯಾಗಬೇಕು ಎನಿಸಿತು. ಆದರೆ ಹೋಗು ವುದು ಹೇಗೆ – ಇನ್ನೂ ಶಿಶು ವಲ್ಲವೆ! ಆತ ಪುಟ್ಟ ಪಾದಗಳಿಂದ ಚಕ್ಕಡಿಯನ್ನು ಮೆಲ್ಲನೆ ಒದ್ದನಂತೆ, ಬಂಡಿ ಉರುಳಿ ಪುಡಿಯಾಯಿತಂತೆ!
ಸದ್ದು ಕೇಳಿ ಎಲ್ಲರೂ ಬಂದರು, ಪುಟ್ಟ ಕೃಷ್ಣನನ್ನು ಎತ್ತಿಕೊಂಡರು – ಬಂಡಿಯ ಕೆಳಗೆ ಸಿಲುಕಿ ಕಂದನಿಗೆ ಗಾಯವಾಯಿತೇ ಎಂದು ಗಾಬರಿ ಗೊಂಡರು. ಅಲ್ಲೇ ಇದ್ದ ಕೆಲವು ಮಕ್ಕಳು ಕೃಷ್ಣನೇ ಬಂಡಿಯನ್ನು ಒದೆದದ್ದು ಎಂದರೆ ಯಾರೂ ನಂಬಲಿಲ್ಲ.
ಇದು ಪ್ರಾಯಃ ಕೃಷ್ಣನ ಮೊದಲ ನೆಯ ಲೀಲೆ. ಇಂಥ ತುಂಟತನ, ಲೀಲಾ ವಿನೋದಗಳೇ ತುಂಬಿದ ಜೀವನ ಅವನದು.
( ಸಾರ ಸಂಗ್ರಹ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.