ಸಹಾಯ ಮಾಡುವುದೇ ಧರ್ಮ
Team Udayavani, Jun 14, 2021, 7:37 PM IST
ಕನಕಪುರ: ಸಂಕಷ್ಟದಲ್ಲಿ ಉಳ್ಳವರು ಇಲ್ಲದವರಿಗೆ ಸಹಾಯ ಮಾಡಬೇಕು. ಅದೇ ನಮ್ಮನೆಲದ ಸಂಸ್ಕೃತಿ ಮತ್ತು ಮನುಷ್ಯ ಧರ್ಮಎಂದು ರಾಮನಗರ ಶಾಖಾ ಮಠದಅನ್ನದಾನೇಶ್ವರ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಉಯ್ಯಂಬಳ್ಳಿ ಹೋಬಳಿಯಹೆಗ್ಗನೂರುದೊಡ್ಡಿ ಗ್ರಾಮದ ಸಮಾಜಸೇವಕ ಜಗದೀಶ್ ಅವರು ತಮ್ಮ ತಂದೆಸಿದ್ದರಾಮು ಅವರ ಸ್ಮರಣಾರ್ಥ ದಿನಸಿ ಕಿಟ್‌ವಿತರಣೆ ಕಾರ್ಯಕ್ರಮದಲ್ಲಿ ದೊಡ್ಡಾಲಹಳ್ಳಿಬಡ ಜನರಿಗೆ ದಿನಸಿ ಕಿಟ್ ವಿತರಿಸಿಮಾತನಾಡಿದರು.ಜನರ ಬಗ್ಗೆ ಹೆಚ್ಚಿನ ಕಾಳಜಿ: ಕೊರೊನಾದೇಶದ ಜನರನ್ನು ಬಾಧಿಸುತ್ತಿದೆ.
ಲಾಕ್‌ಡೌನ್‌ನಿಂದ ಬಡವರು, ಕೂಲಿ ಕಾರ್ಮಿಕರುಕೆಲಸವಿಲ್ಲದೆ ಮನೆಯಲ್ಲೇ ಇದ್ದು ಆರ್ಥಿಕವಾಗಿ ಕಷ್ಟದಲ್ಲಿದ್ದಾರೆ. ಇಂತಹ ಸಮಯದಲ್ಲಿಮನುಷ್ಯ ಮನುಷ್ಯನಿಗೆ ಸಹಾಯಮಾಡುವ ಗುಣ ಬೆಳಸಿಕೊಳ್ಳಬೇಕು.ಜಗದೀಶ್ ಅವರು ಬಡವರಿಗೆ ತಮ್ಮ ಕೈಲಾದಸಹಾಯ ಮಾಡಲು ಮುಂದೆ ಬಂದಿರುವುದು ಸಂತೋಷದ ವಿಷಯ. ಶಾಸಕರು,ಸಂಸದರು ಕ್ಷೇತ್ರದ ಜನರ ಬಗ್ಗೆ ಹೆಚ್ಚಿನಕಾಳಜಿ ಇಟ್ಟುಕೊಂಡಿದ್ದಾರೆ. ಯಾರಾದರೂನಿವೇಶನ ರಹಿತರು ಇದ್ದರೆ ಅವರ ಪಟ್ಟಿ ನೀಡಿಶಾಸಕರ ಗಮನಕ್ಕೆ ತಂದು ಅವರಿಗೂ ಸೂರುಕಲ್ಪಿಸಿಕೊಡುವ ಪ್ರಯತ್ನ ಮಾಡುತ್ತೇವೆಎಂದರು.
ಸಮಾಜ ಸೇವಕ ಜಗದೀಶ್‌ಮಾತ ನಾಡಿ, ಕೊರೊನಾದಿಂದ ಹಲವುಕುಟುಂಬ ಗಳು ಕಷ್ಟದಲ್ಲೇ ಕಾಲ ಕಳೆಯುತ್ತಿವೆ. ಗ್ರಾಪಂ ಅಧ್ಯಕ್ಷರು, ಮುಖಂಡರಸಲಹೆ ಪಡೆದು ಬಡವರಿಗೆ ದಿನಸಿ ಕಿಟ್ ವಿತರಣೆ ಮಾಡುತ್ತಿದ್ದೇವೆ ಎಂದು ಹೇಳಿದರು.ಗ್ರಾಪಂ ಅಧ್ಯಕ್ಷ ನಂದೀಶ್, ಸದಸ್ಯಕಾಳಯ್ಯ, ಬಾಬಣ್ಣ, ಮುಖಂಡ ಉಮೇಶ್,ಶಿಕ್ಷಕ ಗುರುಮೂರ್ತಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.