ಈ ಸರ್ಕಾರ ಬೆಲೆ ಏರಿಕೆ ಮಾಡಿದ್ದು ಬಿಟ್ಟರೆ, ಸಂಬಳ ಜಾಸ್ತಿ ಮಾಡಲಿಲ್ಲ: ಡಿ.ಕೆ.ಶಿವಕುಮಾರ್


Team Udayavani, Jun 15, 2021, 5:22 PM IST

ಈ ಸರ್ಕಾರ ಬೆಲೆ ಏರಿಕೆ ಮಾಡಿದ್ದು ಬಿಟ್ಟರೆ, ಸಂಬಳ ಜಾಸ್ತಿ ಮಾಡಲಿಲ್ಲ: ಡಿ.ಕೆ.ಶಿವಕುಮಾರ್

ಮಂಡ್ಯ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರ ಜೇಬನ್ನು ಪಿಕ್ ಪ್ಯಾಕೆಟ್ ಮಾಡುವ ಕೆಲಸ ಮಾಡಿದ್ದು, ಇವು ಪಿಕ್ ಪ್ಯಾಕೆಟ್ ಸರ್ಕಾರಗಳಾಗಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದರು.

ತಾಲೂಕಿನ ಯಲಿಯೂರು ಸರ್ಕಲ್‌ನಲ್ಲಿರುವ ಪೆಟ್ರೋಲ್ ಬಂಕ್ ಬಳಿ ಜಮಾಯಿಸಿ ಬೆಲೆ ಏರಿಕೆ ವಿರುದ್ಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ನಡೆದ ಪ್ರತಿಭಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಪೆಟ್ರೋಲ್, ಡಿಸೇಲ್ ದರ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವ ಸರ್ಕಾರಗಳು ದುಡಿಯುವ ವರ್ಗದ ಜನರ ಸಂಬಳವನ್ನು ಮಾತ್ರ ಏರಿಕೆ ಮಾಡಲಿಲ್ಲ. ದರ ಏರಿಕೆ ಮಾಡಿರುವ ಸರ್ಕಾರಗಳು ಸಂಬಳವನ್ನು ಹೆಚ್ಚು ಮಾಡಬಹುದಿತ್ತಲ್ಲವೇ ಎಂದು ಪ್ರಶ್ನಿಸಿದರು.

ಇದೇ ತಿಂಗಳು ತೈಲ ಬೆಲೆಯನ್ನು 17 ಬಾರಿ ಏರಿಕೆ ಮಾಡಿದ್ದು, ಈ ವರ್ಷ 51 ಬಾರಿ ಏರಿಕೆ ಮಾಡಿದ್ದಾರೆ. ಮಧ್ಯೆ ಮಾರ್ಚ್, ಏಪ್ರಿಲ್‌ನಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಮಾಡಿಲ್ಲ. ಬೆಲೆ ಏರಿಕೆ ಮಾಡಿದವರು ಸರ್ಕಾರಿ, ಖಾಸಗಿಯವರ ಯಾರ ಸಂಬಳವನ್ನು ಏರಿಕೆ ಮಾಡಲಿಲ್ಲ. ಕೂಡಲೇ ತೆರಿಗೆ ವಾಪಸ್ ಪಡೆದು, ಅಕ್ಕಪಕ್ಕದ ದೇಶದಲ್ಲಿ ಯಾವ ರೀತಿ ಬೆಲೆ ಇದೆಯೋ ಅದೇ ರೀತಿ ಕಡಿಮೆ ಮಾಡಬೇಕು. ಪಕ್ಕದ ಬಾಂಗ್ಲಾದೇಶ, ಶ್ರೀಲಂಕಾ, ಅಮೆರಿಕಾದಲ್ಲೂ ಕಡಿಮೆ ಇದೆ. ಎಲ್ಲ ಕಡೆ ಶೇ.60ರಷ್ಟು ಕಡಿಮೆ ಇದ್ದರೆ, ಭಾರತದಲ್ಲಿ ಮಾತ್ರ ಹೆಚ್ಚಿದೆ. ಇದರ ವಿರುದ್ಧ ಹೋರಾಟ ಮಾಡುತ್ತಿದ್ದೇವೆ ಎಂದರು.

ದರ ಏರಿಕೆ ವಿರುದ್ಧ ಹೋರಾಟ: ರಾಜ್ಯಾದ್ಯಂತ 5 ಸಾವಿರ ಕಡೆ 100 ನಾಟ್‌ಔಟ್ ಘೋಷಣೆ ಮೂಲಕ ತೈಲ ಬೆಲೆ ಏರಿಕೆ ಹಾಗೂ ಅಗತ್ಯ ವಸ್ತುಗಳ ದರ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ. ತಾಲೂಕು, ಜಿಲ್ಲಾ, ಜಿಪಂ, ಗ್ರಾಪಂ, ಹೋಬಳಿ ಮಟ್ಟದಲ್ಲೂ ನಡೆಸಲಾಗಿದೆ. ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಲ್ಲ. ಇದೊಂದು ಶ್ರೀ ಸಾಮಾನ್ಯರ ಕಾರ್ಯಕ್ರಮವಾಗಿದೆ. ಇದರಲ್ಲಿ ಎಲ್ಲ ಪಕ್ಷದವರು ಪಾಲ್ಗೊಂಡಿದ್ದಾರೆ. ಕೆಲವೊಂದು ಕಡೆ 25, 50 ರೂ.ಗಳನ್ನು ಗ್ರಾಹಕರಿಗೆ ಹಂಚಿದ್ದಾರೆ. ಕೆಲವರು ಜಾಗಟೆ, ಸಿಹಿ ಹಂಚಿ ಸರ್ಕಾರಗಳ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ ಎಂದು ತಿಳಿಸಿದರು.

ಈಶ್ವರಪ್ಪಗೆ ತಿರುಗೇಟು: ಈಶ್ವರಪ್ಪನ ಸುದ್ದಿ ನಾನ್ ಯಾಕೆ ಮಾತನಾಡಲಿ. ಈಶ್ವರಪ್ಪ ಅವನ ಪಾರ್ಟಿ, ಗವರ್ನರ್ ಲೆಟರ್, ಅವನ ಪರಿಸ್ಥಿತಿ ವ್ಯಾಖ್ಯಾನ ಮಾಡಿಕೊಂಡರೆ ಸಾಕು. ನನ್ನ ಸುದ್ದಿ ಯಾಕೆ ಪಾಪ ಎಂದು ಪರೋಕ್ಷವಾಗಿ ತಿರುಗೇಟು ನೀಡಿದರು.

ರಾಮ ಜನ್ಮಭೂಮಿ ಅವ್ಯವಹಾರ ದೇಶಕ್ಕೆ ಅವಮಾನ: ರಾಮ ಜನ್ಮಭೂಮಿ ಅವ್ಯವಹಾರದಿಂದ ಇದು ದೇಶಕ್ಕೆ ದೊಡ್ಡ ಅವಮಾನವಾಗಿದೆ. ಇಡೀ ನಮ್ಮ ಜನ ಕೈಲಾದ ಸಹಾಯ ಮಾಡಿದ್ದಾರೆ. ಇದು ನಮ್ಮ ಸಂಸ್ಕೃತಿಗೆ ದೊಡ್ಡ ಅವಮಾನವಾಗಿದೆ. ನಮ್ಮ ಭಾವನೆ, ಧರ್ಮ, ದೇವಸ್ಥಾನಕ್ಕೆ ಸಹಾಯವಾಗಬೇಕು ಹಳ್ಳಿ ಹಳ್ಳಿಯ ಜನ ಹಣ ನೀಡಿದ್ದಾರೆ. ಜಮೀನು ಖರೀದಿ ಮಾಡಿ ಬಿಜಿನೆಸ್ ಮಾಡಲಿ ಅಂತ ದುಡ್ಡು ನೀಡಿಲ್ಲ. ಇಡೀ ದೇಶ ಇದನ್ನು ಖಂಡಿಸಬೇಕಿದೆ. ಜನರು ನೀಡಿರುವ ಹಣವನ್ನು ವಾಪಸ್ ನೀಡಬೇಕು. ಯಾರು ಅವ್ಯವಹಾರದಲ್ಲಿ ಭಾಗಿಯಾಗಿರುವವರನ್ನು ಕೇಂದ್ರ ಹಾಗೂ ಯೋಗಿ ಸರ್ಕಾರ ಬಂಧಿಸಬೇಕು ಎಂದು ಒತ್ತಾಯಿಸಿದರು.

ಟಾಪ್ ನ್ಯೂಸ್

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

CM-Shiggavi

By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ

Hasanmbe

Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!

1-gopal

Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ

5

Chocolate ಕೇವಲ ಸಸ್ಯಾಹಾರವೇ? ಸಸ್ಯಾಹಾರಿಗಳೇ ಗಮನಿಸಿ…

jairam ramesh

Maharashtra polls; ಫಲಿತಾಂಶದ ಬಳಿಕವೇ ಸಿಎಂ ಯಾರೆಂದು ನಿರ್ಧಾರ: ಕಾಂಗ್ರೆಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!

Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!

2047ಕ್ಕೆ ವಿಕಸಿತ ಭಾರತ ನಿರ್ಮಾಣ: ಉಪರಾಷ್ಟ್ರಪತಿ

Vice President: 2047ಕ್ಕೆ ವಿಕಸಿತ ಭಾರತ ನಿರ್ಮಾಣ: ಜಗದೀಪ್‌ ಧನಕರ್‌

20-mandya

Mahadevapura: ಲಿಫ್ಟ್ ಗುಂಡಿಗೆ ಬಿದ್ದ ಬಾಲಕ ಸಾವು

Mandya: ದೇಶದ ಮೊದಲ “ರೈತರ ಶಾಲೆ’ ಶೀಘ್ರ ಆರಂಭ

Mandya: ದೇಶದ ಮೊದಲ “ರೈತರ ಶಾಲೆ’ ಶೀಘ್ರ ಆರಂಭ

Mandya1

Mandya: ಸಾಹಿತ್ಯ ಸಮ್ಮೇಳನ ಸಂಭ್ರಮಕ್ಕೆ ಕೊರತೆಯಾಗದಂತೆ ಮಿತಿಯಲ್ಲಿ ಖರ್ಚು ಮಾಡಿ: ಸಚಿವ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

9

Kasaragod: ಪಟಾಕಿ ದುರಂತ ಪ್ರಕರಣ; ಸಾವಿನ ಸಂಖ್ಯೆ 4ಕ್ಕೆ ಏರಿಕೆ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

death

Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ

4

Kasaragod: ಸ್ಕೂಟರ್‌ ಅಪಘಾತ; ಸವಾರನ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.