ಲಸಿಕೆ ಅಭಿಯಾನದಲ್ಲಿ ಜಿಲ್ಲೆಯಲ್ಲೆ ಕೆ.ಆರ್.ನಗರ ನಂ.1
Team Udayavani, Jun 15, 2021, 5:33 PM IST
ಕೆ.ಆರ್.ನಗರ: ರಾಜ್ಯದಲ್ಲೇ ಭತ್ತವನ್ನು ಹೇರಳ ವಾಗಿ ಬೆಳೆದು ಭತ್ತದ ಕಣಜ ಎಂದೇ ಪ್ರಸಿದ್ಧಿಯಾದ ಕೆ.ಆರ್.ನಗರ ತಾಲೂಕು ಮಂಡ್ಯ ಮತ್ತು ಹಾಸನ ಜಿಲ್ಲೆಗಳ ಗಡಿಯನ್ನು ಹಂಚಿಕೊಂಡಿದೆ. ಕೊರೊನಾ 2ನೇ ಅಲೆಯ ಕಠಿಣ ಪರಿಸ್ಥಿತಿಯಲ್ಲಿ ಶಾಸಕ ಸಾ.ರಾ.ಮಹೇಶ್ ಅವರು ಹೇಗೆ ಸೋಂಕು ನಿರ್ವಹಣೆ ಮಾಡುತ್ತಿದ್ದಾರೆ? ಸಮಸ್ಯೆಗಳ ಪರಿಹಾರಕ್ಕೆ ಕಂಡುಕೊಂಡಿರುವ ಮಾರ್ಗೋಪಾಯಗಳ ಬಗ್ಗೆ”ಉದಯವಾಣಿ’ಯ ಕಿರು ಸಂದರ್ಶನ.
ತಾಲೂಕಿನಲ್ಲಿ ಕೋವಿಡ್ ಪರಿಸ್ಥಿತಿ ಹೇಗಿದೆ?
ಮೈಸೂರು ಜಿಲ್ಲೆಯ ಪ್ರಮುಖ ವಿಧಾನಸಭಾ ಕ್ಷೇತ್ರವಾದ ಕೆ.ಆರ್.ನಗರವು ಸಾಲಿಗ್ರಾಮ ಮತ್ತುಕೆ.ಆರ್.ನಗರ 2 ತಾಲೂಕು ಒಳಗೊಂಡಿದೆ.ತಾಲೂಕಿನ ವ್ಯಾಪ್ತಿಯಲ್ಲಿ ಪುರಸಭೆ, 34 ಗ್ರಾಪಂಗಳಿದ್ದು, ಒಟ್ಟು 2.80 ಲಕ್ಷ ಜನಸಂಖ್ಯೆ ಹೊಂದಿದೆ. ತಾಲೂಕು ಹಾಗೂ ಗ್ರಾಪಂ ಟಾಸ್ಕ್ಫೋರ್ಸ್ ಮೂಲಕ ಕೊರೊನಾ ನಿಯಂತ್ರಣಕ್ಕೆ ಶಕ್ತಿ ಮೀರಿ ಕಾರ್ಯನಿರ್ವಹಿಸಿದ್ದೇನೆ. 15 ದಿನಗಳ ಹಿಂದೆ ಸೋಂಕಿನ ತೀವ್ರತೆ ಹೆಚ್ಚಾಗಿತ್ತು. ಈಗೀಗ ಕಡಿಮೆಯಾಗುತ್ತಿದೆ. 782 ಸೋಂಕಿತರಿದ್ದು, 60 ಮಂದಿ ಸಾವನ್ನಪ್ಪಿದ್ದಾರೆ.ಲಸಿಕೆ ಅಭಿಯಾನದಲ್ಲಿ ಜಿಲ್ಲೆಯಲ್ಲಿ ಕೆ.ಆರ್.ನಗರತಾಲೂಕು ಪ್ರಥಮ ಸ್ಥಾನದಲ್ಲಿದ್ದು, ಶೇ.84ರಷ್ಟು ಸಾಧನೆಯಾಗಿರುವುದು ತಾಲೂಕಿಗೆ ಹೆಮ್ಮೆ. ಜಿಲ್ಲೆಯಲ್ಲಿ ಮೊದಲ ಕೊರೊನಾ ಮುಕ್ತ ತಾಲೂಕು ನಮ್ಮದಾಗಬೇಕೆಂಬ ಸಂಕಲ್ಪ ತೊಟ್ಟಿದ್ದೇನೆ.
ಸೋಂಕು ನಿಯಂತ್ರಣಕ್ಕೆ ಕೈಗೊಂಡಕ್ರಮಗಳೇನು?
ಕೊರೊನಾ ಲಕ್ಷಣಗಳಿದ್ದವರನ್ನು ಪತ್ತೆ ಹಚ್ಚಿಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ. ಸೋಂಕು ದೃಢಪಟ್ಟವರಿಗೆ ಸಕಾಲದಲ್ಲಿ ಔಷಧ ನೀಡಲಾಗುತ್ತಿದೆ.ಸೋಂಕಿತರನ್ನು 3 ವರ್ಗಗಳಾಗಿ ವಿಂಗಡಿಸಿ ಸೋಂಕಿನ ತೀವ್ರತೆ ಆಧಾರದ ಮೇರೆಗೆ ಚಿಕಿತ್ಸೆ ನೀಡಲಾಗುತ್ತಿದೆ.
ಕೋವಿಡ್ ನಿರ್ವಹಣೆಗೆ ಶಾಸಕರಾಗಿ ಏನೇನುಕೆಲಸ ಮಾಡಿದ್ದೀರಿ?
ವೈಯಕ್ತಿಕವಾಗಿ 10 ಲಕ್ಷ ರೂ. ವೆಚ್ಚದಲ್ಲಿ ಔಷಧಖರೀದಿಸಿದ್ದೇನೆ ಜತೆಗೆ ಆಶಾ ಹಾಗೂ ಅಂಗನವಾಡಿಕಾರ್ಯಕರ್ತೆಯರನ್ನು ಬಳಸಿಕೊಂಡು ರೋಗಲಕ್ಷಣ ಇರುವ ಮತ್ತು ಹೋಮ್ ಐಸೋಲೇಷನ್‌ನಲ್ಲಿದ್ದ ಬಡವರಿಗೆ ಔಷಧ ಕಿಟ್ ವಿತರಿಸಿದ್ದೇನೆ.ಸೋಂಕಿನಿಂದ ಮೃತಪಟ್ಟವರ ಕುಟುಂಬಗಳಿಗೆವೈಯಕ್ತಿಕವಾಗಿ ತಲಾ 25 ಸಾವಿರ ರೂ.ಪರಿಹಾರನೀಡಿದ್ದೇನೆ. ತಾಲೂಕಿನ ಕಗ್ಗೆರೆ ಗ್ರಾಮ, ಅಂಬೇಡ್ಕರ್‌ವಿದ್ಯಾರ್ಥಿ ನಿಲಯದಲ್ಲಿ ಕೋವಿಡ್ ಕೇರ್ ಸೆಂಟರ್‌ಸ್ಥಾಪಿಸಲಾಗಿದೆ.
ಶಾಸಕರ ನಿಧಿಯಿಂದ ಎಷ್ಟು ಹಣ ವ್ಯಯಿಸಿದ್ದಿರಿ?
ಶಾಸಕರ ಅನುದಾನದಡಿ ಗ್ರಾಮಾಂತರ ಪ್ರದೇಶಕ್ಕೆ30 ಲಕ್ಷ ರೂ. ಮೌಲ್ಯದ ಒಂದು ಸುಸಜ್ಜಿತ ತುರ್ತುವಾಹನ ಖರೀದಿಸಲಾಗಿದೆ. ಜತೆಗೆ ದಾನಿಗಳು, ಸಂಘಸಂಸ್ಥೆಗಳು, ಸ್ನೇಹಿತರ ನೆರವಿನಿಂದ ಅಸಹಾಯಕಕುಟುಂಬಗಳಿಗೆ ಔಷಧ ಮತ್ತು ಆಹಾರದ ಕಿಟ್ ವಿತರಿಸಲಾಗುತ್ತಿದೆ.
ತಾಲೂಕಿನ ಜನತೆಗೆ ನಿಮ್ಮ ಸಲಹೆ ಏನು?
ಆರೋಗ್ಯವೇ ಭಾಗ್ಯ ಎಂಬ ಮಾತಿದೆ.ಆರೋಗ್ಯವೊಂದಿದ್ದರೆ ಸಕಲವೂ ನಿಮ್ಮದಾದಂತೆ.ನಿಮ್ಮ ಆರೋಗ್ಯ, ನಿಮ್ಮ ಕೈಯಲ್ಲಿದೆ. ಹಾಗಾಗಿ ತೀರಅಗತ್ಯವಾದ ಸಂದರ್ಭ ಹೊರತುಪಡಿಸಿ ಮನೆಗಳಿಂದಹೊರಗಡೆ ಬರಬೇಡಿ. ರೋಗದ ಲಕ್ಷಣಗಳಿದ್ದರೆಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಿರಿ.ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ.
ಸಾರ್ವಜನಿಕರ ಸಹಕಾರ ಇದೆಯೇ?
ಜಿಪಂ ಮಾಜಿ ಸದಸ್ಯ ಅಚ್ಯುತಾನಂದ 1.10 ಲಕ್ಷರೂಗಳ ಔಷಧಿ ಕಿಟ್, ಪಟ್ಟಣದ ಸಿಲ್ವರ್ ಜ್ಯೂಬಿಲಿಕ್ಲಬ್‌ನ ವತಿಯಿಂದ 2.50 ಲಕ್ಷ ರೂ. ಔಷಧಿ ಕಿಟ್‌ಹಾಗೂ ಸುಕೃತಾ ಕ್ರೀಡಾ ಸಂಸ್ಥೆಯಿಂದ 2.0 ಲಕ್ಷರೂ,ಗಳ ವೆಚ್ಚದ 400 ಮಂದಿಗಾಗುವಷ್ಟು ಔಷಧಿಕಿಟ್ ವಿತರಿಸಲಾಗಿದೆ. ಹಲವಾರು ಸಂಘ ಸಂಸ್ಥೆಗಳುಹಾಗೂ ದಾನಿಗಳು ಕೈಲಾದ ಸಹಾಯ ಮಾಡಿದ್ದಾರೆ.
ವೈಯಕ್ತಿಕವಾಗಿ ನಿಮ್ಮದೇ ಆದ ಕೊಡುಗೆ ಏನು?
ವೈಯಕ್ತಿಕ ವೆಚ್ಚದಲ್ಲಿ ತಾಲೂಕಿನ ಕಗ್ಗೆರೆ ಗ್ರಾಮದ ಬಳಿ 200 ಬೆಡ್‌ಗಳ ಸಾ.ರಾ.ಕೋವಿಡ್ ಕೇರ್ ಸೆಂಟರ್ ತೆರೆದಿದ್ದೇನೆ. ಇದರ ಸಂಪೂರ್ಣನಿರ್ವಹಣೆ ನನ್ನದ್ದೇ ಆಗಿದೆ. ಏಳು ಮಂದಿ ಖಾಸಗಿ ವೈದ್ಯರನ್ನುನೇಮಕ ಮಾಡಿಕೊಳ್ಳಲಾಗಿದೆ. ಅದರಲ್ಲಿ ನಾಲ್ಕು ಮಂದಿಗೆ ತಲಾ1 ಲಕ್ಷ ರೂ. ವೇತನವನ್ನು ವೈಯಕ್ತಿಕವಾಗಿ ಭರಿಸಲಿದ್ದು, ಉಳಿದಮೂವರಿಗೆ ಸರ್ಕಾರದಿಂದ 60 ಸಾವಿರ ವೇತನ ನೀಡಿದರೆ,
40ಸಾವಿರವನ್ನು ವೈಯಕ್ತಿಕ ಹಣದಿಂದ ಪ್ರತಿ ತಿಂಗಳು ನೀಡಲಾಗುತ್ತಿದೆ.ಸಾ.ರಾ.ಕೋವಿಡ್ ಸೆಂಟರ್‌ನಲ್ಲಿ ಸೋಂಕಿತರ ಮನರಂಜನೆಗಾಗಿ10 ಟೀವಿಗಳು, 100 ಲೀ.ಸಾಮರ್ಥ್ಯದ ಶುದ್ಧ ನೀರಿನ ಘಟಕಅಳವಡಿಸಲಾಗಿದೆ. ವೈಯಕ್ತಿಕ ಹಣದಿಂದ ಸೋಂಕಿತರನ್ನು ಕರೆ ತರಲುನಾಲ್ಕು ತುರ್ತುವಾಹನಗಳು ಮತ್ತು ಶವಗಳನ್ನು ಸಾಗಿಸಲು ಎರಡುಮುಕ್ತಿರಥ ವಾಹನಗಳನ್ನು ಸೇವೆಗೆ ಸಮರ್ಪಿಸಲಾಗಿದೆ. ತಾಲೂಕಿನಲ್ಲಿ ಕೊರೊನಾದಿಂದ ಮೃತಪಟ್ಟ ಕುಟುಂಬಗಳಿಗೆ ತಲಾ 25 ಸಾವಿರರೂ. ಪರಿಹಾರ ನೀಡುತ್ತಿದ್ದೇನೆ.
ಗೇರದಡ ನಾಗಣ್ಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.