ಜನರ ಬದುಕು ಹೈರಾಣಾಗಿಸಿದ ಸರ್ಕಾರ: ಮೀಗಾ
Team Udayavani, Jun 15, 2021, 10:08 PM IST
ಶೃಂಗೇರಿ: ತೈಲೋತ್ಪನ್ನಗಳ ಮೇಲೆ ರಾಜ್ಯ ಹಾಗೂ ಕೇಂದ್ರ ಸರಕಾರ ಹೆಚ್ಚು ತೆರಿಗೆ ವಿಧಿ ಸಿ ಜನಸಾಮಾನ್ಯರ ಬದುಕು ಹೈರಾಣಾಗುವಂತೆ ಮಾಡಿದೆ ಎಂದು ಕಿಸಾನ್ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಸಚಿನ್ ಮೀಗಾ ಹೇಳಿದರು.
ಬೇಗಾರಿನ ಪೆಟ್ರೋಲ್ ಬಂಕ್ ಬಳಿ ಸೋಮವಾರ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ನೇತೃತ್ವದಲ್ಲಿ ತೈಲ ಬೆಲೆ ಏರಿಕೆ ವಿರುದ್ಧ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಅವರು ಮಾತನಾಡಿದರು.
ದಿನ ನಿತ್ಯದ ವಸ್ತು ಬೆಲೆ ಗಗನಕ್ಕೇರಿದೆ. ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್ ಸರಕಾರದ ಮೇಲೆ ಒತ್ತಡ ಹೇರಿ ತೈಲ ಬೆಲೆ ಇಳಿಕೆ ಬಗ್ಗೆ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ವ್ಯಾಕ್ಸಿನ್ ಕೊರತೆ ತೀವ್ರವಾಗಿದ್ದು, ಗ್ರಾಮ- ಗ್ರಾಮದಲ್ಲಿ ವ್ಯಾಕ್ಸಿನ್ ಹಾಕಬೇಕಿದೆ.
ನನ್ನ ಸ್ವಂತ ಗ್ರಾಮ ಮೀಗಾದ ಪ್ರತಿಯೊಬ್ಬರಿಗೂ ಉಚಿತ ಲಸಿಕೆ ನೀಡಲು ನಾನು ಆಸಕ್ತಿ ಹೊಂದಿದ್ದು,ಜಿಲ್ಲಾಡಳಿತ ಅನುಮತಿ ನೀಡಬೇಕು ಎಂದರು. ಬೇಗಾರ್ ಗ್ರಾಪಂ ಅಧ್ಯಕ್ಷ ಕೇಶವ್, ಸದಸ್ಯ ಲಕ್ಷಿ¾àಶ, ಕಾಂಗ್ರೆಸ್ ಮುಖಂಡರಾದ ನಟರಾಜ್, ಗೋಪಾಲ ನಾಯ್ಕ, ಸುಂದರೇಶ್,ಪ್ರಸನ್ನ, ಮಹೇಶ್, ಪ್ರದೀಪ್, ಶಶಿ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಸ್ಟಡಿ ಅಂತ್ಯ: ಶರಣಾಗತ ನಕ್ಸಲರನ್ನು ಬೆಂಗಳೂರಿಗೆ ಕರೆದೊಯ್ದ ಪೊಲೀಸರು
Chikkamagaluru: ಖಾಕಿ ಪಡೆಯ ಭರ್ಜರಿ ಕಾರ್ಯಾಚರಣೆ ; ಚಿನ್ನಾಭರಣ ದೋಚಿದ್ದ ದರೋಡೆಕೋರರ ಬಂಧನ
“ಕಾಂತಾರ-1′ ಚಿತ್ರೀಕರಣಕ್ಕೆ ಚಿಕ್ಕಮಗಳೂರಲ್ಲೂ ವಿಘ್ನ
BJP ಪಕ್ಷದ ಬಿಕ್ಕಟ್ಟು ಪರಿಹಾರ ಮಾಡಿ ಮೇಲೇಳುತ್ತೇವೆ: ಕೋಟ ಆಶಯ
Kota Srinivas Poojary: ಅಲೆಖಾನ್ ಹೊರಟ್ಟಿಯಲ್ಲಿ ಉಪಗ್ರಹ ಆಧಾರಿತ ದೂರ ಸಂಪರ್ಕ ಸೇವೆ
MUST WATCH
ಹೊಸ ಸೇರ್ಪಡೆ
Bandipur ಹೆದ್ದಾರಿಯಲ್ಲಿ ಚೆಲ್ಲಿದ ಅಕ್ಕಿ ಮೆಲ್ಲುತ್ತ ನಿಂತ ಕಾಡಾನೆಗಳು: ಟ್ರಾಫಿಕ್ ಜಾಮ್
Waqf Bill: ಜಂಟಿ ಸಂಸದೀಯ ಸಮಿತಿ ಸಭೆಯಲ್ಲಿ ಗದ್ದಲ; ವಿಪಕ್ಷದ ಎಲ್ಲಾ 10 ಸಂಸದರ ಅಮಾನತು
Dharwad: ಇನ್‌ಸ್ಟಾಗ್ರಾಮ್ ಪ್ರೀತಿಗೆ ಪತಿ ತೊರೆದ 24 ರ ಯುವತಿ ಬಲಿ
Udupi; ಪವರ್ ಪರ್ಬ 2025: ಫೆ. 8 ರಂದು ಬೆಂಕಿ ರಹಿತ ಅಡುಗೆ ಸ್ಪರ್ಧೆ
ಭಾರತಾಂಬೆಗೆ ಅವಮಾನ; ಕರ್ನಾಟಕ ವಿಶ್ವವಿದ್ಯಾಲಯದಿಂದ ಪಠ್ಯ ಹಿಂದಕ್ಕೆ