ಐಸಿಸಿ ವಿಶ್ವಕಪ್ ಟೆಸ್ಟ್ ಫೈನಲ್ : ಭಾರತದ 15 ಸದಸ್ಯರ ತಂಡ ಅಂತಿಮ
Team Udayavani, Jun 16, 2021, 7:00 AM IST
ಸೌತಾಂಪ್ಟನ್: ಚೊಚ್ಚಲ ಐಸಿಸಿ ವಿಶ್ವಕಪ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಾಗಿ ಭಾರತದ 15 ಸದಸ್ಯರ ತಂಡವನ್ನು ಮಂಗಳವಾರ ಅಂತಿಮಗೊಳಿಸಲಾಯಿತು. ಈ ಪಂದ್ಯಕ್ಕಾಗಿ 20 ಆಟಗಾರರ ಭಾರತ ತಂಡ ಇಂಗ್ಲೆಂಡಿಗೆ ಆಗಮಿಸಿತ್ತು.
ಮಾಯಾಂಕ್ ಅಗರ್ವಾಲ್, ಕೆ.ಎಲ್. ರಾಹುಲ್, ಶಾದೂìಲ್ ಠಾಕೂರ್, ಅಕ್ಷರ್ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ಹೊರ ಗಿರಿಸಲಾಗಿದೆ. ಪಂದ್ಯಕ್ಕೂ ಮುನ್ನ ಇನ್ನೂ 4 ಆಟಗಾರರು ತಂಡದಿಂದ ಬೇರ್ಪಡಲಿದ್ದಾರೆ.
ಅಗರ್ವಾಲ್ ಇಲ್ಲದ ಅಚ್ಚರಿ!
ಇವರಲ್ಲಿ ಕರ್ನಾಟಕದ ಮಾಯಾಂಕ್ ಅಗರ್ವಾಲ್ ಹೆಸರು ಕಾಣದಿರುವುದು ಅಚ್ಚರಿ ಎನಿಸಿದೆ. ಅಗರ್ವಾಲ್ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಬ್ಯಾಟಿಂಗ್ ದಾಖಲೆ ಹೊಂದಿರುವ ಆರಂಭಕಾರ ಎಂಬುದನ್ನು ಮರೆಯುವಂತಿಲ್ಲ. ಅವರು 12 ಪಂದ್ಯಗಳಿಂದ 857 ರನ್ ಬಾರಿಸಿದ್ದಾರೆ. ರಾಜ್ಯದ ಮತ್ತೂಬ್ಬ ಆಟಗಾರ ಕೆ.ಎಲ್. ರಾಹುಲ್ ಅವರನ್ನೂ ಕಡೆಗಣಿಸಲಾಗಿದೆ.
ತಂಡದಲ್ಲಿ ಶುಭಮನ್ ಗಿಲ್ ಕಾಣಿಸಿಕೊಂಡಿರುವುದರಿಂದ ಅವರು ರೋಹಿತ್ ಶರ್ಮ ಜತೆಗೆ ಆರಂಭಿಕನಾಗಿ ಕಣಕ್ಕಿಳಿಯುವುದು ಖಚಿತ. ಈ ಜೋಡಿ ಕಳೆದ ಆಸ್ಟ್ರೇಲಿಯ ಪ್ರವಾಸದಲ್ಲೂ ಇನ್ನಿಂಗ್ಸ್ ಆರಂಭಿಸಿತ್ತು. ಆದರೆ ಗಿಲ್ ಇಂಗ್ಲೆಂಡ್ ವಿರುದ್ಧ ವಿಫಲರಾಗಿದ್ದರು.
ಉಳಿದಂತೆ ಅಚ್ಚರಿಯೇನೂ ಗೋಚರಿಸಿಲ್ಲ. ಕೀಪರ್‌ಗಳಾಗಿ ರಿಷಭ್ ಪಂತ್ ಮತ್ತು ಸಾಹಾ ಇಬ್ಬರೂ ಕಾಣಿಸಿಕೊಂಡಿದ್ದಾರೆ. ಅಂತಿಮ ಆಯ್ಕೆ ಬ್ರಿಸ್ಬೇನ್ ಟೆಸ್ಟ್ ಹೀರೋ ರಿಷಭ್ ಪಂತ್ ಪಾಲಾಗಬಹುದು.
ಭಾರತ 3 ಸ್ಪೀಡ್, 2 ಸ್ಪಿನ್ ಕಾಂಬಿನೇಶನ್‌ನೊಂದಿಗೆ ಬೌಲಿಂಗ್ ಆಕ್ರಮಣ ಸಂಘಟಿಸುವ ಸಾಧ್ಯತೆ ಇದೆ. ಅಂತಿಮ ವಾಗಿ ಇಶಾಂತ್, ಶಮಿ, ಬುಮ್ರಾ, ಅಶ್ವಿನ್, ಜಡೇಜ ಅವಕಾಶ ಪಡೆಯುವ ಸಾಧ್ಯತೆ ಹೆಚ್ಚು. ಇವರಲ್ಲಿ ಜಡೇಜ ಆಲ್‌ರೌಂಡರ್ ಆಗಿರುವುದರಿಂದ ಹನುಮ ವಿಹಾರಿಗೆ ಅವಕಾಶ ಕಡಿಮೆ ಎನ್ನಬಹುದು.
ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮ, ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ರಿಷಭ್ ಪಂತ್, ಹನುಮ ವಿಹಾರಿ, ಆರ್. ಅಶ್ವಿನ್, ರವೀಂದ್ರ ಜಡೇಜ, ವೃದ್ಧಿಮಾನ್ ಸಾಹಾ, ಜಸ್‌ಪ್ರೀತ್ ಬುಮ್ರಾ, ಉಮೇಶ್ ಯಾದವ್, ಶಮಿ, ಇಶಾಂತ್ ಶರ್ಮ, ಮೊಹಮ್ಮದ್ ಸಿರಾಜ್.
ಕೇನ್ ವಿಲಿಯಮ್ಸನ್ ನ್ಯೂಜಿಲ್ಯಾಂಡ್ ನಾಯಕ
ಸೌತಾಂಪ್ಟನ್: ಭಾರತ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕಾಗಿ ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿ 15 ಆಟಗಾರರ ತಂಡ ಪ್ರಕಟಿಸಿದೆ. ಮೊಣಕೈ ಗಾಯಕ್ಕೆ ಸಿಲುಕಿದ್ದ ಕೇನ್ ವಿಲಿಯಮ್ಸನ್ ಸಂಪೂರ್ಣ ಚೇತರಿಸಿಕೊಂಡಿದ್ದು, ತಂಡವನ್ನು ಮುನ್ನಡೆಸಲಿದ್ದಾರೆ.
ಟ್ರೆಂಟ್ ಬೌಲ್ಟ್, ಟಿಮ್ ಸೌಥಿ, ರಾಸ್ ಟೇಲರ್ ಸೇರಿದಂತೆ ಟೆಸ್ಟ್ ಸ್ಪೆಷಲಿಸ್ಟ್ ಆಟಗಾರರು ತಂಡದಲ್ಲಿ ಕಾಣಿಸಿಕೊಂಡಿ¨ªಾರೆ.
ವಾಟಿಲಿಂಗ್ ಗೆ ವಿದಾಯ ಪಂದ್ಯ
ಬೆನ್ನುನೋವಿನ ಸಮಸ್ಯೆಯಿಂದ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್‌ನಿಂದ ಹೊರಗುಳಿದಿದ್ದ ವಿಕೆಟ್ ಕೀಪರ್ ಬ್ರಾಡ್ಲಿ ವಾಟಿÉಂಗ್ ಕೂಡ ತಂಡಕ್ಕೆ ಮರಳಿದ್ದಾರೆ. ಇದು ಅವರ ವಿದಾಯ ಟೆಸ್ಟ್ ಆಗಲಿದೆ.
ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ಪದಾರ್ಪಣ ಪಂದ್ಯದಲ್ಲೇ ದ್ವಿಶತಕ ಬಾರಿಸಿದ ಆರಂಭಕಾರ ಡೇವನ್ ಕಾನ್ವೆ ಮತ್ತೋರ್ವ ಪ್ರಮುಖ ಆಟಗಾರ.
ಕುತೂಹಲಕಾರಿ ಕದನಕ್ಕೆ ಎರಡೂ ತಂಡಗಳು ಸಜ್ಜಾಗಿವೆ. ವಿರಾಟ್ ಕೊಹ್ಲಿ ಪಡೆ ಅಭ್ಯಾಸ ಪಂದ್ಯ ಮುಗಿಸಿ ತಯಾರಾಗಿದ್ದರೆ,
ಕಿವೀಸ್ ತಂಡ ಇಂಗ್ಲೆಂಡ್‌ಗೆ ತವರಿನಲ್ಲಿಯೇ ಟೆಸ್ಟ್ ಸರಣಿ ಸೋಲುಣಿಸಿದ ಆತ್ಮವಿಶ್ವಾಸದಲ್ಲಿದೆ.
ನ್ಯೂಜಿಲ್ಯಾಂಡ್ ತಂಡ: ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಬ್ಲಿಂಡೆಲ್, ಟ್ರೆಂಟ್ ಬೌಲ್ಟ್, ಡೇವನ್ ಕಾನ್ವೆ, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಮ್ಯಾಟ್ ಹೆನ್ರಿ, ಕೈಲ್ ಜಾಮೀಸನ್, ಟಾಮ್ ಲ್ಯಾಥಂ, ಹೆನ್ರಿ ನಿಕೋಲ್ಸ್, ಅಜಾಜ್ ಪಟೇಲ್, ಟಿಮ್ ಸೌಥಿ, ರಾಸ್ ಟೇಲರ್, ನೀಲ್ ವ್ಯಾಗ್ನರ್, ಬ್ರಾಡ್ಲಿ ವಾಟಿÉಂಗ್, ವಿಲ್ ಯಂಗ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
Eden Gardens; ‘ಬಿ’ ಬ್ಲಾಕ್‌ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
PCB; ಚಾಂಪಿಯನ್ಸ್ ಟ್ರೋಫಿಗೆ ಅಧಿಕಾರಿಯ ನೇಮಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.