ಸೇನಾ ಸಾಮರ್ಥ್ಯ ವೃದ್ಧಿಗೆ ಮುನ್ನುಡಿಯಾದ ಗಾಲ್ವಾನ್‌ ಸಂಘರ್ಷ

Team Udayavani, Jun 16, 2021, 6:00 AM IST

ಸೇನಾ ಸಾಮರ್ಥ್ಯ ವೃದ್ಧಿಗೆ ಮುನ್ನುಡಿಯಾದ ಗಾಲ್ವಾನ್‌ ಸಂಘರ್ಷ

ಭಾರತ ಮತ್ತು ಚೀನ ನಡುವಣ ಗಡಿಭಾಗದ ಪರ್ವತ ಶ್ರೇಣಿಯಲ್ಲಿರುವ ಗಾಲ್ವಾನ್‌ ಕಣಿವೆಯಲ್ಲಿನ ವಾಸ್ತವಿಕ ನಿಯಂತ್ರಣ ರೇಖೆ(ಎಲ್‌ಎಸಿ)ಯಲ್ಲಿ ತನ್ನ ಸರಹದ್ದನ್ನು ಮೀರಿ ಅಕ್ರಮವಾಗಿ ಪ್ರವೇಶಿಸಿದ್ದ ಚೀನದ ಪೀಪಲ್ಸ್‌ ಲಿಬ ರೇಶನ್‌ ಆರ್ಮಿಯ ತುಕಡಿಗಳನ್ನು ಭಾರತ ಯಶಸ್ವಿಯಾಗಿ ಹಿಮ್ಮೆ ಟ್ಟಿಸಿ ವರ್ಷ ಸಂದಿದೆ. ಕಳೆದ ವರ್ಷದ ಜೂನ್‌ 15 ಮತ್ತು 16ರ ನಡುವಿನ ರಾತ್ರಿ ನಡೆದ ಭಾರತ ಮತ್ತು ಚೀನ ಸೇನೆಯ ಈ ಸಂಘರ್ಷದಲ್ಲಿ ಭಾರ ತೀಯ ಸೇನೆಯ ಓರ್ವ ಕರ್ನಲ್‌ ಸಹಿತ 20 ಮಂದಿ ಯೋಧರು ವೀರ ಮರಣವನ್ನಪ್ಪಿದ್ದರು. ಇದೇ ವೇಳೆ ಭಾರತೀಯ ಯೋಧರು ಚೀನದ 43 ಯೋಧರನ್ನು ಹತ್ಯೆಗೈದಿದ್ದರಾದರೂ ಚೀನ ಸೇನೆ ಈ ಅಂಕಿಅಂಶವನ್ನು ಇಂದಿಗೂ ಮುಚ್ಚಿಟ್ಟಿದ್ದು ಗಾಲ್ವಾನ್‌ ಸಂಘರ್ಷದಲ್ಲಿ ತನ್ನ ನಾಲ್ವರು ಯೋಧರು ಮಾತ್ರವೇ ಮೃತಪಟ್ಟಿದ್ದರು ಎಂದು ಹೇಳುತ್ತಲೇ ಬಂದಿದೆ.

ಗಾಲ್ವಾನ್‌ ಸಂಘರ್ಷಕ್ಕೂ ಮುನ್ನ ಎಲ್‌ಎಸಿ ಯಲ್ಲಿನ ತನ್ನ ವ್ಯಾಪ್ತಿಯಿಂದ ಹೊರತಾದ ಪ್ರದೇಶದಲ್ಲಿ ಚೀನಿ ಯೋಧರು ನಿರ್ಮಿಸಿದ್ದ ಟೆಂಟ್‌ಗಳನ್ನು ಭಾರತೀಯ ಯೋಧರು ಧ್ವಂಸಗೈದಿದ್ದರು. ಆ ಬಳಿಕ ಚೀನಿ ಯೋಧರು ಎಲ್‌ಎಸಿ ಪ್ರದೇಶದಲ್ಲಿ ಕಾವಲಿಗಾಗಿ ನಿಯೋಜಿಸಲಾಗಿದ್ದ ಭಾರತೀಯ ಯೋ ಧರ ಮೇಲೆ ಕಲ್ಲುಗಳ ತೂರಾಟ ನಡೆಸಿದ್ದೇ ಅಲ್ಲದೆ ಕಬ್ಬಿಣದ ರಾಡ್‌, ಮೊಳೆಗಳನ್ನು ಪೋಣಿಸಿದ್ದ ಸರಳುಗಳಿಂದ ಹಲ್ಲೆ ನಡೆಸಿದ್ದರು. ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿದ್ದ ನಮ್ಮ ಯೋಧರು ಚೀನದ ಸೈನಿಕರನ್ನು ಹಿಮ್ಮೆಟ್ಟಿಸಿದ್ದರು. ಈ ಸಂಘರ್ಷದ ಬಳಿಕ ಗಾಲ್ವಾನ್‌ ಸಹಿತ ಎಲ್‌ಎಸಿಯಲ್ಲಿ ಚೀನ ಪಡೆಗಳ ಉಪಟಳ ತಿಂಗಳುಗಳ ಕಾಲ ಮುಂದುವರಿದೇ ಇತ್ತು. ಈ ಸಂಘರ್ಷ ಎರಡೂ ರಾಷ್ಟ್ರಗಳ ನಡುವೆ ಯುದ್ಧ ಭೀತಿಯನ್ನು ಸೃಷ್ಟಿಸಿತ್ತು. ಅನಂತರ ಎರಡೂ ಸೇನೆಗಳ ನಡುವೆ 11 ಸುತ್ತಿನ ಮಾತುಕತೆಗಳು ನಡೆದು ಕೊನೆಯಲ್ಲಿ ಚೀನ ಎಲ್‌ಎಸಿಯಲ್ಲಿನ ತನ್ನ ಪಡೆಗಳನ್ನು ವಾಪಸ್‌ ಕರೆಸಿಕೊಳ್ಳಲು ಸಮ್ಮತಿ ಸೂಚಿಸಿತು. ಅದರಂತೆ ಉಭಯ ರಾಷ್ಟ್ರಗಳೂ ಎಲ್‌ಎಸಿಯಿಂದ ತನ್ನ ಪಡೆಗಳನ್ನು ವಾಪಸ್‌ ಕರೆಸಿಕೊಂಡಿವೆ.

ಈ ಎಲ್ಲ ಬೆಳವಣಿಗೆಗಳ ನಡುವೆ ಭಾರತ, ಸೇನಾ ಮತ್ತು ರಾಜತಾಂತ್ರಿಕ ಸಂಧಾನ ಮಾರ್ಗಗಳ ಜತೆಜತೆಯಲ್ಲಿ ಚೀನದ ವಿರುದ್ಧ ಪರೋಕ್ಷವಾಗಿ ಆರ್ಥಿಕ, ವಾಣಿಜ್ಯ ಸಮರವನ್ನೇ ಸಾರಿತು. ಭಾರತದಲ್ಲಿ ಸಾರ್ವತ್ರಿಕವಾಗಿ ಬಳಕೆಯಲ್ಲಿದ್ದ ಚೀನದ ಹಲವಾರು ಆ್ಯಪ್‌, ವೆಬ್‌ಸೈಟ್‌ಗಳಿಗೆ ನಿಷೇಧ ಹೇರಿದ್ದೇ ಅಲ್ಲದೆ ಆಯಾತ-ನಿರ್ಯಾತ ವಿಚಾರದಲ್ಲೂ ಹಲವು ನಿರ್ಬಂಧ ಗಳನ್ನು ಹೇರುವ ಮೂಲಕ ಚೀನಕ್ಕೆ ಆರ್ಥಿಕವಾಗಿ ಬಲವಾದ ಹೊಡೆತ ನೀಡಿತು.

ಇಷ್ಟು ಮಾತ್ರವಲ್ಲದೆ ಗಾಲ್ವಾನ್‌ ಘರ್ಷಣೆಯ ಫ‌ಲವಾಗಿ ಭಾರತ ತನ್ನ ರಕ್ಷಣ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ. ಅತ್ಯಾಧುನಿಕ ಯುದ್ಧ ವಿಮಾ ನಗಳು, ಕ್ಷಿಪಣಿಗಳು ಸೇರ್ಪಡೆಗೊಂಡು ಭಾರತೀಯ ಸೇನೆ ಇನ್ನಷ್ಟು ಪ್ರಬಲ ವಾಗಿದ್ದು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸರ್ವಸನ್ನದ್ಧ ವಾಗಿದೆ. ರಕ್ಷಣ ಬೇಹುಗಾರಿಕೆಯನ್ನು ಬಲಪಡಿಸಲಾಗಿದ್ದು ಎಲ್‌ಎಸಿ ಪ್ರದೇಶದಲ್ಲಿ ಹೆಚ್ಚುವರಿ ಸಂಖ್ಯೆಯಲ್ಲಿ ಯೋಧರನ್ನು ನಿಯೋಜಿಸಲಾಗಿದ್ದರೆ ರಕ್ಷಣ ವಿಚಾರದಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸಲಾಗಿದ್ದು ಈ ಮೂಲಕ ಚೀನ ಸೇನೆಯ ಚಲನವಲನಗಳ ಮೇಲೆ ಹದ್ದುಗಣ್ಣಿರಿ ಸಲಾಗಿದೆ. ಎಲ್‌ಎಸಿಯಲ್ಲಿ ರಸ್ತೆಯಾದಿ ಯಾಗಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ಯಾವು ದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಅಗತ್ಯವಿರುವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಒಟ್ಟಿನಲ್ಲಿ ಗಾಲ್ವಾನ್‌ ಸಂಘರ್ಷದ ಪರಿಣಾಮ ಭಾರತ ಚೀನಕ್ಕೆ ತಕ್ಕ ಪಾಠ ಕಲಿಸಿದ್ದೇ ಅಲ್ಲದೆ ತನ್ನ ಸೇನಾ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಿಕೊಂಡಿತು.

ಟಾಪ್ ನ್ಯೂಸ್

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Protest: ಕಾಶ್ಮೀರ ಚರ್ಚೆ: ಆಕ್ಸ್‌ಫ‌ರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ

Protest: ಕಾಶ್ಮೀರ ಚರ್ಚೆ: ಆಕ್ಸ್‌ಫ‌ರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ

Chennai: ಲಾಟರಿ ಕಿಂಗ್‌ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ

Chennai: ಲಾಟರಿ ಕಿಂಗ್‌ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ

Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು

Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು

Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್‌ ಠಾಕ್ರೆ

Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್‌ ಠಾಕ್ರೆ

ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ

Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-editorial

Editorial: ಪಾಕ್‌ ಪ್ರೇರಿತ ಉಗ್ರರ ತಂತ್ರಕ್ಕೆ ಸೂಕ್ತ ಪ್ರತಿತಂತ್ರ ಈಗಿನ ತುರ್ತು

ಭಾರತ್‌ ಬ್ರ್ಯಾಂಡ್‌ ಆಹಾರಧಾನ್ಯ ಕಾಳಸಂತೆಕೋರರ ಮೇಲಿರಲಿ ನಿಗಾ

ಭಾರತ್‌ ಬ್ರ್ಯಾಂಡ್‌ ಆಹಾರಧಾನ್ಯ ಕಾಳಸಂತೆಕೋರರ ಮೇಲಿರಲಿ ನಿಗಾ

ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಕ್ಕೆ ನೆರವಾಗುವ ಕೋರ್ಸ್‌

ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಕ್ಕೆ ನೆರವಾಗುವ ಕೋರ್ಸ್‌

school

Karnataka; ಶಾಲಾ ಆಸ್ತಿ ಸಂರಕ್ಷಣೆ ಅಭಿಯಾನ ಎಲ್ಲ ಇಲಾಖೆಗಳಿಗೂ ಮಾದರಿ

Forest

Forest: ಅರಣ್ಯದಲ್ಲಿ ನಿರಂತರ ಗಣಿಗಾರಿಕೆ: ಸರಕಾರ ಚರ್ಚಿಸಿ ನಿರ್ಧರಿಸಲಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

CID

CID ನೂತನ ಡಿಐಜಿಪಿ ಆಗಿ ಶಾಂತನು ಸಿನ್ಹಾ

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್‌

Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್‌

Protest: ಕಾಶ್ಮೀರ ಚರ್ಚೆ: ಆಕ್ಸ್‌ಫ‌ರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ

Protest: ಕಾಶ್ಮೀರ ಚರ್ಚೆ: ಆಕ್ಸ್‌ಫ‌ರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.