ನಕಲಿ ಖಾತೆಗಳ ವಿರುದ್ಧ ಟ್ವಿಟರ್ ಸಮರ : ಸೆಲೆಬ್ರಿಟಿಗಳಿಗೆ ಶುರುವಾದ ಆತಂಕ
Team Udayavani, Jun 16, 2021, 2:33 PM IST
ಅತೀ ದೊಡ್ಡ ಹಾಗೂ ಪರಿಣಾಮಕಾರಿ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಟ್ವಿಟ್ಟರ್ ದಿನದಿಂದ ದಿನಕ್ಕೆ ಕೆಲವೊಂದು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರುತ್ತಿದೆ.
ಟ್ವಿಟರ್ ನಲ್ಲಿ ಫೇಕ್ ಅಕೌಂಟ್ ಗಳ ಹಾವಳಿ ಜಾಸ್ತಿ. ಇದು ಅನೇಕ ಆವಾಂತರಗಳಿಗೆ ಎಡೆ ಮಾಡಿಕೊಡುತ್ತವೆ. ಇವುಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಟ್ವಿಟರ್ ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ನಕಲಿ ಖಾತೆಗಳನ್ನು ಮುಲಾಜಿಲ್ಲದೆ ಕಿತ್ತು ಬೀಸಾಕುತ್ತಿದೆ.
ನಕಲಿ ಖಾತೆಗಳನ್ನು ಒಕ್ಕಲೆಬ್ಬಿಸುತ್ತಿರುವ ಟ್ವಿಟರ್ ಕಟ್ಟು ನಿಟ್ಟಿನ ಕ್ರಮದಿಂದಾಗಿ ರಾಜಕಾರಣಿಗಳು ಸೇರಿದಂತೆ ಸೆಲೆಬ್ರಿಟಿಗಳ ಬೆಂಬಲಿಗರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗುತ್ತಿದೆ.
ಜನಪ್ರಿಯ ತಾಣಗಳಲ್ಲಿ ಟ್ವಿಟ್ಟರ್ ಕೂಡ ಒಂದು.ಅನೇಕ ಬಳಕೆದಾರರನ್ನು ಹೊಂದಿರುವ ಮತ್ತು ಸೆಲೆಬ್ರಿಟಿ, ಸಿನಿಮಾ ತಾರೆಯರು, ರಾಜಕಾರಣಿ ಹೀಗೆ ನಾನಾ ದೇಶದ ಜನಸಾಮಾನ್ಯರು ಟ್ವಿಟ್ಟರ್ ಅನ್ನು ಬಳಸುತ್ತಾರೆ.
ಕೆಲವು ದಿನಗಳಿಂದ ಟ್ವಿಟ್ಟರ್ನಲ್ಲಿರುವ ಕೆಲವು ಖಾತೆಗಳ ಅನುಯಾಯಿ ಸಂಖ್ಯೆಯಲ್ಲಿ ಏರಿಳಿತ ಕಂಡುಬಂದಿದೆ. ಇತ್ತೀಚೆಗೆ ಟ್ವಿಟ್ಟರ್ನಲ್ಲಿ ಸ್ಪಾಮ್ ಪ್ರೊಫೈಲ್ಗಳು ಹೆಚ್ಚಾಗಿ ಕಂಡುಬಂದವು. ಅದನ್ನು ಗಮನಿಸಿದ ಟ್ವಿಟ್ಟರ್ ತೆಗೆದುಹಾಕಿದೆ. ಇದರಿಂದಾಗಿ ಕೆಲವು ಖಾತೆ ಅನುಯಾಯಿಗಳ ಸಂಖ್ಯೆಯಲ್ಲಿ ಏರಿಳಿತ ಕಾಣಲು ಪ್ರಮುಖ ಕಾರಣವಾಗಿದೆ. ಇತ್ತೀಚೆಗೆ ಬಾಲಿವುಡ್ ನಟರನ್ನು ಒಳಗೊಂಡು, ಅನುಪಮ್ ಖೇರ್ ಮತ್ತು ಟಿವಿ ಪತ್ರಕರ್ತ ರಿಚರ್ ಖೇರ್ ಅವರು ಒಂದು ದಿನದಲ್ಲಿ ನೂರಾರು ಅನುಯಾಯಿಗಳನ್ನು ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ದೂರು ನೀಡಿದ್ದಾರೆ.
ಟ್ವಿಟ್ಟರ್ ತನ್ನ ಖಾತೆದಾರರ ಪಾಸ್ವರ್ಡ್ ಪರಿಶೀಲನೆ ಮತ್ತು ಫೋನ್ ನಂಬರ್ ಪರಿಶೀಲಿಸುತ್ತಿದೆ. ಸ್ಪಾಮ್ ಅನ್ನು ತಡೆಗಟ್ಟಲು ಮತ್ತು ಖಾತೆದಾರರನ್ನು ಸುರಕ್ಷಿತವಾಗಿಡಲು ನಿಯಮಿತವನ್ನಾಗಿ ಮಾಡುತ್ತೇವೆ ಎಂದು ಹೇಳಿದೆ.
ಕೆಲವು ಖಾತೆಗಳು ತಾತ್ಕಾಲಿಕ ಐಡಿಗಳೊಂದಿಗೆ ಮತ್ತು ಟ್ರೋಲ್ ಖಾತೆಗಳಿಗಾಗಿ ನಿರ್ವಹಿಸುತ್ತಾರೆ. ಇದನ್ನರಿತು ಟ್ವಿಟ್ಟರ್ ಪರಿಶೀಲಿಸುತ್ತಿದೆ. ಜೊತೆಗೆ ಸ್ಪಾಮ್ ಖಾತೆಗಳನ್ನು ಕಿತ್ತೆಸೆಯುತ್ತಿದೆ.
ಕಂಪನಿ ಬಳಕೆದಾರರಿಗೆ ತಮ್ಮ ವೈಯ್ಯಕ್ತಿಕ ವಿವರವನ್ನು ಸರಿಯಾಗಿ ನಮೂದಿಸಲು ಸವಾಲು ಹಾಕಿದೆ. ಸ್ಪಂದಿಸದ ಖಾತೆಗಳಿನ್ನು ಲಾಕ್ ಮಾಡುತ್ತದೆ. ಈ ಸಮಯದಲ್ಲಿ ಪ್ರಪಫೈಲ್ ಒಳಗೊಂಡ ಫಾಲೋವರ್ಸ್ಗ ಳ ಬಗ್ಗೆ ಟ್ವಿಟ್ಟರ್ ಚಿಂತಿಸುವುದಿಲ್ಲ.
ಒಟ್ಟಿನಲ್ಲಿ ಟ್ವಿಟರ್ ಕ್ರಮದಿಂದ ಸಾಕಷ್ಟು ಫೇಕ್ ಅಕೌಂಟ್ ಗಳಿಗೆ ಬೀಗ ಬಿದ್ದಿದೆ. ಇದರಿಂದ ಸೆಲೆಬ್ರಿಟಿಗಳ ಫಾಲೋವರ್ಸ ಸಂಖ್ಯೆಗಳು ಕಡಿಮೆ ಯಾಗುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇದು ವಿಶ್ವದ ಅತಿ ಎತ್ತರದ ಏಕಶಿಲಾ ಬೆಟ್ಟ… Online ನೋಂದಣಿ ಇಲ್ಲದೆ ಚಾರಣಕ್ಕೆ ಅವಕಾಶವಿಲ್ಲ
Team India: ಈ ಆಟಗಾರರಿಗೆ ಚಾಂಪಿಯನ್ಸ್ ಟ್ರೋಫಿಯೇ ಕೊನೆಯ ಐಸಿಸಿ ಕೂಟ!
Maha Kumbh 2025: ನಾಗಾ ಸಾಧುಗಳಿಗೂ…ಅಘೋರಿಗಳಿಗೂ ಇರುವ ವ್ಯತ್ಯಾಸವೇನು? ಆಹಾರ ಪದ್ಧತಿ ಹೇಗೆ
Blue City Of Blue Color:ಇದು ಭಾರತದಲ್ಲಿರುವ ಜಗತ್ತಿನ ಏಕೈಕ ನೀಲಿ ನಗರ! ಏನಿದರ ವಿಶೇಷತೆ
The Gambia: ಗ್ಯಾಂಬಿಯಾ ಎನ್ನುವ ಎನ್‌ಕ್ಲೇವ್ ರಾಷ್ಟ್ರ: ಈ ದೇಶ ಇರುವುದೇ 30 ಕಿ.ಮೀ.ಉದ್ದ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.