ಲಸಿಕೆಗೆ ಒತ್ತು: ಜನಸಂದಣಿಗೆ ಅವಕಾಶವಿಲ್ಲ
Team Udayavani, Jun 16, 2021, 2:10 PM IST
ಬೆಂಗಳೂರು: ಅನ್‌ಲಾಕ್ ಪ್ರಕ್ರಿಯೆಪ್ರಾರಂಭವಾಗುತ್ತಿದ್ದಂತೆ ಬಿಬಿಎಂಪಿ ರಾಜಧಾನಿಜನರು ನಿರ್ವಹಿಸಬೇಕಾದ ಮಾರ್ಗಸೂಚಿಮತ್ತು ವಿವಿಧ ವಲಯಗಳಿಗೆ ಕೆಲವುನಿಯಮಗಳನ್ನು ಜಾರಿಗೊಳಿಸಿದೆ.ಈ ಬಗ್ಗೆ ಮಾರ್ಗಸೂಚಿ ಹೊರಡಿಸಿರುವ ಪಾಲಿಕೆ ಆಯುಕ್ತ ಗೌರವ್ ಗುಪ್ತ, ಲಸಿಕೆಹಾಕದಿದ್ದರೆ ಆಟೋ, ಟ್ಯಾಕ್ಸಿ ಚಾಲನೆಗೆ ಅವಕಾಶ ನೀಡದಿರುವುದು, ಉದ್ಯಾನವನದಲ್ಲಿ ನಡೆಗೆಗೆ ಅವಕಾಶ ನೀಡಿ ವ್ಯಾಯಾಮ ಪರಿಕರ ಬಳಕೆಗೆ ನಿರ್ಬಂಧ ಹೇರಿದ್ದಾರೆ.
ದಿನಸಿ ಅಂಗಡಿಗಳಲ್ಲಿಗ್ರಾಹಕರಿಗೆ ಸಾಮಗ್ರಿಮುಟ್ಟಲು ಅವಕಾಶನಿರ್ಬಂಧ ಸೇರಿದಂತೆವಿವಿಧ ಸೂಚನೆಗಳನ್ನುನೀಡಿದ್ದಾರೆ. ಎಲ್ಲಕಡೆಗಳಲ್ಲಿ ಶುದ್ಧತೆ ಮತ್ತುಮುಂಜಾಗ್ರತಾ ಕ್ರಮಗಳನ್ನು ಒತ್ತಿ ಒತ್ತಿ ಹೇಳಲಾಗಿದೆ. ಅಗತ್ಯವಾಗಿ ಲಸಿಕೆಹಾಕಿಸಿಕೊಳ್ಳಲು ಸೂಚಿಸಿದ್ದಾರೆ.
ಅಪಾರ್ಟ್‌ಮೆಂಟ್ ಸ್ಥಳಗಳಲ್ಲಿ ಸಮಾರಂಭ ನಡೆಸದಿರಿ: ಪಾಲಿಕೆ ವ್ಯಾಪ್ತಿಯ ಎಲ್ಲ 8ವಲಯಗಳಲ್ಲಿನ ಅಪಾರ್ಟ್‌ಮೆಂಟ್ ಸ್ಥಳಗಳಲ್ಲಿಜನಸಂದಣಿ ಸೇರುವ ಯಾವುದೇ ರೀತಿಯಸಮಾರಂಭಗಳನ್ನು ನಡೆಸುವಂತಿಲ್ಲ. ಅಪಾರ್ಟ್‌ಮೆಂಟ್ ಆವರಣಗಳಲ್ಲಿ ಜನ್ಮದಿನ ಆಚರಣೆ,ಪಾರ್ಟಿಗಳು ಸೇರಿದಂತೆ ಜನ ಸೇರುವ ಮತ್ತಿತರಸಭೆ, ಸಮಾರಂಭಗಳನ್ನು ಆಯೋಜಿಸುವಂತಿಲ್ಲ ಎಂದಿದ್ದಾರೆ.
ವ್ಯಾಯಮಶಾಲೆ, ಕ್ರೀಡಾ ಸೌಲಭ್ಯ,ಈಜುಕೊಳ, ಮನರಂಜನಾ ಕ್ಲಬ್‌ಗಳ ಬಳಕೆಗೂಅವಕಾಶವಿರುವುದಿಲ್ಲ. ಕೊರೊನಾ ಮೊದಲಅಲೆಯ ಸಂದರ್ಭದಲ್ಲಿ ಹೊರಡಿಸಿದ್ದ ಷರತ್ತುಗಳನ್ನು ಎರಡನೇ ಹಂತದ ಅಲೆಯಲ್ಲೂ ಮುಂದುವರಿಸಲಾಗಿದೆ. ಅಪಾರ್ಟ್‌ಮೆಂಟ್ ನಿವಾಸಿಗಳೆಲ್ಲರೂ ಬಳಸುವ ಸಾಮಾನ್ಯ ಪ್ರದೇಶಗಳನ್ನು,ಲಿಫ್ಟ್ಗಳಲ್ಲಿ ಸ್ವತ್ಛತೆ ಕಾಪಾಡಬೇಕು. ಸ್ವತ್ಛತಾನೌಕರರ ಆರೋಗ್ಯ ರಕ್ಷಣೆ ಬಗ್ಗೆ ಆರ್‌ಡಬ್ಲೂ$Âಎ(ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಟನೆ)ಕಾಳಜಿವಹಿಸಬೇಕು. ನಿವಾಸಿಗಳಲ್ಲಿ ಆತಂಕಹುಟ್ಟಿಸುವ ವದಂತಿಗಳನ್ನು ಹಬ್ಬಿಸಬಾರದು.ಅಗತ್ಯ ಕ್ರಮಗಳಿದ್ದರೆ ಆರೋಗ್ಯಾಧಿಕಾರಿಗಳಗಮನಕ್ಕೆ ತರಬೇಕು ಎಂದು ಸೂಚಿಸಿದ್ದಾರೆ.
ಈಗಾಗಲೇ ಪ್ರತ್ಯೇಕವಾಸಕ್ಕೆ ಸೂಚಿಸಿದವರುಮನೆಯಿಂದ ಹೊರಗಡೆ ತೆರಳದಂತೆ ಆರ್‌ಡಬ್ಲೂ$Âಎಗಳು ಎಚ್ಚರವಹಿಸಬೇಕು. ಸೋಂಕು ಲಕ್ಷಣಗಳುಕಂಡುಬಂದರೆ ಕೂಡಲೇ ಸಹಾಯವಾಣಿ ಸಂಖ್ಯೆ104ಗೆ ಸಂಪರ್ಕಿಸಬೇಕು ಎಂದು ಹೇಳಿದ್ದಾರೆ.ಲಸಿಕೆ ಕೊಡಿಸಲು ಕ್ರಮವಹಿಸಿ: ಅಪಾರ್ಟ್‌ಮೆಂಟ್ ಸಮುತ್ಛಯಗಳಲ್ಲಿ ಮಕ್ಕಳು ಹೊರಗಡೆಗುಂಪು ಸೇರಿ ಆಟ ಆಡುವುದಕ್ಕೆ ಅವಕಾಶ ನೀಡಬಾರದು. 60 ವರ್ಷ ಮೇಲ್ಪಟ್ಟವರು, ಮಧುಮೇಹ, ಕ್ಯಾನ್ಸರ್ ಇರುವವರು ಮನೆಯಲ್ಲೇಉಳಿಯುವಂತೆ ಸೂಚಿಸಬೇಕು. ಅಲ್ಲದೆ, ಎಲ್ಲನಿವಾಸಿಗಳಿಗೆ, ಸ್ವತ್ಛತಾ ಸಿಬ್ಬಂದಿಗೆ ಹಾಗೂ ಭದ್ರತಾಸಿಬ್ಬಂದಿಗೆ ಕಡ್ಡಾಯವಾಗಿ ಲಸಿಕೆ ಕೊಡಿಸಲುಕ್ರಮವಹಿಸಬೇಕು ಎಂದು ತಾಕೀತು ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.