ಬಾಂಗ್ಲಾ ದೇಶಕ್ಕೆ ಕೆಎಂಎಫ್ ಹಾಲಿನ ಪುಡಿ ರಫ್ತು
Team Udayavani, Jun 16, 2021, 2:18 PM IST
ಬೆಂಗಳೂರು: ಪ್ರಪ್ರಥಮ ಬಾರಿಗೆ ಕರ್ನಾಟಕಹಾಲು ಮಹಾಮಂಡಳಿಯ ಸದಸ್ಯ ಹಾಲುಒಕ್ಕೂಟವಾದ ಬೆಂಗಳೂರು ಹಾಲು ಒಕ್ಕೂಟದ ಘಟಕ ನಂದಿನಿ ಹಾಲು ಉತ್ಪನ್ನಗಳಲ್ಲಿ ಒಂದಾದ ಹಾಲಿನ ಪುಡಿಯನ್ನು ಕನಕಪುರ ಘಟಕದಿಂದ ಬಾಂಗ್ಲಾದೇಶಕ್ಕೆ ರಫ್ತು ಮಾಡಲು ಚಾಲನೆನೀಡಲಾಗಿದೆ.
ಕನಕಪುರದ ಘಟಕದಿಂದ 500 ಮೆ.ಟನ್‌ನಂದಿನಿ ಕೆನೆರಹಿತ ಹಾಲಿನ ಪುಡಿಯನ್ನುಬಾಂಗ್ಲಾದೇಶಕ್ಕೆ ರಫ್ತು ಮಾಡಲು ಮಂಗಳವಾರಚಾಲನೆ ನೀಡಲಾಗಿದೆ. ಬಾಂಗ್ಲಾದೇಶದಿಂದ 500ಮೆ.ಟನ್ ನಂದಿನಿ ಕೆನೆರಹಿತ ಹಾಲಿನ ಪುಡಿಗೆಬೇಡಿಕೆ ಬಂದಿದ್ದು, ರಫ್ತು ಪರವಾನಗಿಯನ್ನುಪಡೆದಿರುವ ಕನಪುರದ ನಂದಿನಿ ಹಾಲು ಉತ್ಪನ್ನಕಾಂಪ್ಲೆಕ್ಸ್‌ನಲ್ಲಿ ಹಿರಿಯ ಅಧಿಕಾರಿಗಳು ಚಾಲನೆನೀಡಿದರು.
ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷರುಹಾಗೂ ಆಡಳಿತ ಮಂಡಲಿ ನಿರ್ದೇಶಕರು,ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರಾದ ಬಿ.ಸಿ.ಸತೀಶ್, ಮಾರುಕಟ್ಟೆ ವಿಭಾಗದ ನಿರ್ದೇಶಕರಾದಎಂ.ಟಿ.ಕುಲಕರ್ಣಿ, ಬೆಂಗಳೂರು ಹಾಲು ಒಕ್ಕೂಟದಕಾರ್ಯನಿರ್ವಾಹಕ ನಿರ್ದೇಶಕರುಕಾರ್ಯಕ್ರಮದಲ್ಲಿ ಹಸಿರು ನಿಶಾನೆ ತೋರಿಸಿದ್ದಾರೆ.ಬೆಂಗಳೂರು ಹಾಲು ಒಕ್ಕೂಟದ ಅಂಗಘಟಕವಾದ ರಾಮನಗರ ಜಿಲ್ಲೆಯ ಕನಕಪುರತಾಲೂಕಿನ ಶಿವನಹಳ್ಳಿಯಲ್ಲಿ ನಂದಿನಿ ಹಾಲುಉತ್ಪನ್ನ ಕಾಂಪ್ಲೆಕ್ಸ್ ಡಿಸೆಂಬರ್-2018 ರಲ್ಲಿ ಲೋಕಾರ್ಪಣೆಗೊಂಡಿತ್ತು.
ದಿನವಹಿ 7 ಲಕ್ಷ ಲೀ.ಹಾಲನ್ನು ಸ್ವೀಕರಿಸಿ, ಸಂಸ್ಕರಿಸುವ ಸಾಮರ್ಥಯವನ್ನುಹೊಂದಿದ್ದು, ಸದರಿ ಡೇರಿ ಘಟಕದಲ್ಲಿ ದಿನನಿತ್ಯಸರಾಸರಿ 35 ಮೆ.ಟನ್ ಹಾಲಿನ ಪುಡಿ, 35 ಮೆ.ಟನ್ ಚೀಸ್ ಸೇರಿದಂತೆ 20 ಮೆ.ಟನ್ ಬೆಣ್ಣೆಯನ್ನುಉತ್ಪಾದಿಸುವ ಯಂತ್ರೋಪಕರಣಗಳನ್ನುಅಳವಡಿಸಲಾಗಿದೆ.
ಒಕ್ಕೂಟದ ಘಟಕದಿಂದ ಉತ್ಪಾದಿಸುವ ಕೆನೆರಹಿತಹಾಲಿನ ಪುಡಿ, ಯುಎಚ್‌ಟಿ ಟೆಟ್ರಾಪ್ಯಾಕ್ ಹಾಲು,ತುಪ್ಪ ಹಾಗೂ ಬೆಣ್ಣೆಯನ್ನು ಬಾಂಗ್ಲಾದೇಶ್, ಆಫ್ಘಾನಿಸ್ತಾನ್, ಸಿಂಗಾಪೂರ್, ಭೂತಾನ್, ಮಿಡಲ್‌ಈಸ್ಟ್ ದೇಶಗಳು, ಆಸ್ಟ್ರೇಲಿಯಾ ಹಾಗೂಯುಎಸ್‌ಎ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ.
ಇತ್ತೀಚಿಗೆ ಯುಎಸ್‌ಎಗೆ ನಂದಿನಿ ತುಪ್ಪವನ್ನು 1ಲೀಟರ್ ಟಿನ್‌ಗಳಲ್ಲಿ ರಫ್ತು ಮಾಡಲಾಗಿದ್ದು,ಯುಎಸ್‌ಎ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆವ್ಯಕ್ತವಾಗಿದೆ. ನಂದಿನಿ ಸಿಹಿ ಉತ್ಪನ್ನಗಳನ್ನು ಸಹಆಮದು ಮಾಡಿಕೊಳ್ಳಲು ಬೇಡಿಕೆ ಬರುತ್ತಿದ್ದು,ನಂದಿನಿ ಉತ್ಪನ್ನಗಳನ್ನು ರಫ್ತು ಮಾಡಲು ಆದ್ಯತೆನೀಡಲಾಗುತ್ತಿದೆ. ಉತ್ತಮ ಪ್ರತಿಕ್ರಿಯೆ ನಂದಿನಿಬ್ರಾÂಂಡ್ ಇಮೇಜ್‌ಗೆ ಒಂದು ಹೆಗ್ಗಳಿಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು
Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.