![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 16, 2021, 7:09 PM IST
ಕವರತ್ತಿ: ಲಕ್ಷದ್ವೀಪಕ್ಕೆ ಆಡಂಬರ ಯಾತ್ರೆಗಳನ್ನು ಕೈಗೊಳ್ಳುತ್ತಿದ್ದಾರೆ, ದುಂದು ವೆಚ್ಚಗಳನ್ನು ಮಾಡುತ್ತಾರೆ ಎಂಬ ಭ್ರಷ್ಟಾಚಾರ ಆರೋಪಗಳು ಲಕ್ಷದ್ವೀಪದ ಅಡ್ಮಿನಿಸ್ಟ್ರೇಟರ್ ಪ್ರಫುಲ್ ಖೋಡಾ ಪಟೇಲ್ ವಿರುದ್ಧ ಕೇಳಿ ಬಂದಿವೆ.
ಲಕ್ಷದ್ವೀಪ ಮಾತ್ರವಲ್ಲದೆ ದಮನ್ ಹಾಗೂ ದಿಯು ಕೂಡಾ ಪ್ರಫುಲ್ ಅಧೀನದಲ್ಲಿದೆ. ಒಂದು ಬಾರಿ ದ್ವೀಪಕ್ಕೆ ಬರಬೇಕಾದರೆ ಪ್ರಫುಲ್ 23 ಲಕ್ಷ ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಡಾರ್ನಿಯರ್ ವಿಮಾನವನ್ನು ಚಾರ್ಟ್ ಮಾಡಿಕೊಂಡು ಪ್ರಯಾಣ ಮಾಡುತ್ತಾರೆ. ಲಕ್ಷದ್ವೀಪದ ಇದುವರೆಗಿನ ಅಡ್ಮಿನಿಸ್ಟ್ರೇಟರ್ ಗಳಲ್ಲಿ ಯಾರೂ ಡಾರ್ನಿಯರ್ ವಿಮಾನಗಳನ್ನು ಬಳಸಿಲ್ಲ. ಆರು ತಿಂಗಳಲ್ಲಿ ನಾಲ್ಕು ಬಾರಿ ಪ್ರಫ್ಹುಲ್ ಪಟೇಲ್ ದ್ವೀಪಕ್ಕೆ ಡಾರ್ನಿಯರ್ ವಿಮಾನದಲ್ಲಿ ತೆರಳಿದ್ದಾರೆ ಎಂಬಿತ್ಯಾದಿ ಆರೋಪಗಳು ವರದಿಯಾಗಿವೆ.
ಇದನ್ನೂ ಓದಿ : ಒಡಿಶಾದಲ್ಲಿ ಜುಲೈ 1ರವರೆಗೆ ಲಾಕ್ ಡೌನ್ ವಿಸ್ತರಣೆ, ವಾರಾಂತ್ಯದ ಲಾಕ್ ಡೌನ್ ಮುಂದುವರಿಕೆ
ಅಡ್ಮಿನಿಸ್ಟ್ರೇಟರ್ ರಾಗಿ ಅಧಿಕಾರ ವಹಿಸಿಕೊಂಡ ನಂತರ ಪ್ರಫುಲ್ ಪಟೇಲ್ ಇದು ನಾಲ್ಕನೇ ಭೇಟಿ. ಕಳೆದ ಮೂರು ದಿನಗಳ ಪ್ರಯಾಣಕ್ಕಾಗಿ 93 ಲಕ್ಷ ರೂ. ಲಕ್ಷದ್ವೀಪ ಸರ್ಕಾರ ವಹಿಸಬೇಕಾಗುತ್ತದೆ. ಈ ಬಾರಿಯ ಭೇಟಿಯ ನಂತರ ಇದು ಒಂದೂವರೆ ಕೋಟಿ ರೂ. ಆಗುಲಿದ್ದು, ಈ ಖರ್ಚು ವೆಚ್ಚವನ್ನು .ಲಕ್ಷದ್ವೀಪ ಸರ್ಕಾರ ಭರಿಸಬೇಕಾಗುತ್ತದೆ.
ದಮನ್ ಹಾಗೂ ದಿಯು ನ ಲೋಕೋಪಯೋಗಿ ಇಲಾಖೆಯ ಸಿಬ್ಬಂದಿ ಪ್ರಫುಲ್ ಪಟೇಲ್ ವಿರುದ್ಧ ಪ್ರಧಾನ ಮಂತ್ರಿಗೆ ಪತ್ರದಲ್ಲಿ ದೂರು ನೀಡಲಾಗಿದ್ದು, 400 ಕೋಟಿ ರೂ.ಗಳ ನಿರ್ಮಾಣ ಕಾರ್ಯವನ್ನು ತನ್ನ ಸಂಬಂಧಿಕರಿಗೆ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇನ್ನು, ಅಧಿಕೃತ ವಸತಿ ವಶಪಡಿಸಿಕೊಳ್ಳಲು ಮಾತ್ರ 17.5 ಕೋಟಿ ರೂ. ಖರ್ಚು ಮಾಡಿದ್ದಾರೆಂದು ಕೂಡ ದೂರಿನಲ್ಲಿ ತಿಳಿಸಲಾಗಿದೆ. ಈ ಯಾವುದೇ ಆರೋಪಗಳಿಗೆ ಪ್ರಫುಲ್ ಪಟೇಲ್ ಈವರೆಗೆ ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸಲಿಲ್ಲ ಎಂದು ವರದಿಯಾಗಿದೆ.
ಇದನ್ನೂ ಓದಿ : ಜೂನ್ 20ರಿಂದ ರಾತ್ರಿ ಕರ್ಫ್ಯೂ ಕೊನೆಗೊಳ್ಳಲಿದೆ, ಹೊರಗಡೆ ಮಾಸ್ಕ್ ಅಗತ್ಯವಿಲ್ಲ: ಫ್ರಾನ್ಸ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.