ಗೂನುಬೆನ್ನು ಸಮಸ್ಯೆ ನಿವಾರಣೆಗೆ ಸರಳ ಆಸನ
ಜೀರ್ಣ ಶಕ್ತಿಯೂ ಹೆಚ್ಚುವುದರ ಜತೆಗೆ ಬೆನ್ನಿನ ಮೂಳೆಯೂ ಹೆಚ್ಚು ಬಲವಾಗುವ ಜತೆಗೆ ಗೂನುಬೆನ್ನು ಸಮಸ್ಯೆ ನಿವಾರಣೆ
Team Udayavani, Jun 16, 2021, 8:39 AM IST
ಕೆಲವರು ಬಾಲ್ಯದಿಂದಲೇ ಕತ್ತು ಬಗ್ಗಿಸಿ ಅಥವಾ ಭುಜವನ್ನು ತಗ್ಗಿಸಿ ನಡೆಯುತ್ತಾರೆ. ಅಧಿಕ ಭಾರ ಹೊರುವುದೂ ಸೇರಿದಂತೆ ಹಲವು ಕಾರಣಗಳಿಂದ ಗೂನು ಬೆನ್ನಿನ ಸಮಸ್ಯೆ ತಲೆದೋರುತ್ತದೆ. ವಂಶವಾಹಿಯಾಗಿಯೂ ಈ ಸಮಸ್ಯೆ ಬರುವುದನ್ನು ಅಲ್ಲಗಳೆಯುವಂತಿಲ್ಲ. ಆರಂಭದಲ್ಲೇ ಈ ಸಮಸ್ಯೆಯ ನಿವಾರಣೆ ಅನಿವಾರ್ಯವಾಗಿದ್ದು, ನಿರ್ಲಕ್ಷಿಸಿದಲ್ಲಿ ಸಮಸ್ಯೆ ಹೆಮ್ಮರವಾಗಿ ಬೆಳೆಯಲಿದೆ. ಸರಳ ಯೋಗಾಸನಗಳನ್ನು ಮಾಡುವ ಮೂಲಕ ಈ ಸಮಸ್ಯೆಯ ಪರಿಹಾರ ಸಾಧ್ಯವಿದ್ದು, ಅಂತಹ ಕೆಲವು ಆಸನಗಳನ್ನು ಇಲ್ಲಿ ತಿಳಿಸಲಾಗಿದೆ.
ಪರ್ವತಾಸನ
ಪದ್ಮಾಸನದ ಮಾದರಿಯಲ್ಲಿ ಎರಡೂ ಕೈಯನ್ನು ಮೇಲೆತ್ತಿ ಹಸ್ತಗಳನ್ನು ಜೋಡಿಸಬೇಕು. ಇದರಿಂದ ಕಾಲುಗಳಿಗೆ ರಕ್ತಪರಿಚಲನೆ ಸರಾಗವಾಗಿ ಎಲುಬುಗಳು ಗಟ್ಟಿಯಾಗುತ್ತವೆ. ಈ ವೇಳೆ ಬೆನ್ನು ನೇರವಾಗುವುದರಿಂದ ಹೊಟ್ಟೆಯ ಬೊಜ್ಜು ಕರಗುವುದು.
ತಾಡಾಸನ
ನೆರವಾಗಿ ನಿಂತು ಎರಡು ಕೈಗಳನ್ನು ನಮಸ್ಕಾರ ಭಂಗಿಯಲ್ಲಿ ಜೋಡಿಸಬೇಕು. ಈ ಆಸನದಲ್ಲಿ ಶರೀರದಲ್ಲಿ ಎಲ್ಲೂ ಸಡಿಲತೆ ಇಲ್ಲದೆ ನಿಧಾನವಾಗಿ ಉಸಿರಾಟದ ಪ್ರಕ್ರಿಯೆ ಪ್ರಾರಂಭವಾಗಬೇಕು. ಇದರಿಂದ ಕಾಲುಗಳ ವಕ್ರತೆ ದೂರವಾಗುವುದರ ಜತೆಗೆ ಬೆನ್ನು ನೋವಿನ ನಿವಾರಣೆ ಸಾಧ್ಯ.
ಶಲಭಾಸನ
ನೆಲದ ಮೇಲೆ ಕೆಳಮುಖವಾಗಿ ಮಲಗಿ ಎರಡು ಕೈಗಳನ್ನು ಮುಷ್ಠಿಕಟ್ಟಿ ತೊಡೆಗಳ ಕೆಳಗೆ ಇಡಬೇಕು. ಕಾಲನ್ನು ಮೇಲೆ ಮಾಡಿ ಮುಖವನ್ನು ನಿಧಾನಕ್ಕೆ ಮೇಲೆತ್ತಬೇಕು. ಇದರಿಂದ ಕಾಲಿನ ಬಲ ಹೆಚ್ಚುತ್ತದೆ ಮತ್ತು ಬೆನ್ನು ನೋವು ದೂರವಾಗುತ್ತದೆ.
ಪಾದಹಸ್ತಾಸನ
ಈ ಆಸನದಲ್ಲಿ ಪಾದ ಮತ್ತು ಅಂಗೈ ಸಂಪೂರ್ಣವಾಗಿ ನೆಲದ ಮೇಲೆ ತಾಗಿರುತ್ತದೆ. ಸೂರ್ಯ ನಮಸ್ಕಾರದ ಮೂರನೇ ಭಂಗಿಯಲ್ಲಿ ಈ ಪಾದಹಸ್ತಾಸನವನ್ನು ಕಾಣಬಹುದಾಗಿದ್ದು ಇದನ್ನು ಬೆಳಗ್ಗೆ ಮಾಡುವುದು ಉತ್ತಮ. ಇದರಿಂದ ಬೆನ್ನಿಗೆ ವಿಶೇಷ ವ್ಯಾಯಾಮ ದೊರೆತಂತಾಗುತ್ತದೆ. ಹಟ್ಟೆಯ ಬೊಜ್ಜು ಕರಗಿಸಲು, ಜೀರ್ಣಕ್ರಿಯೆ ಉತ್ತಮವಾಗಲು ಮತ್ತು ಸೊಂಟ, ತೊಡೆ ನೋವಿನ ಸಮಸ್ಯೆ ನಿವಾರಣೆಯಾಗುತ್ತದೆ. ಇದನ್ನು ದಿನಕ್ಕೆ 10ರಿಂದ 15 ಬಾರಿ ಮಾಡುವುದರಿಂದ ಗೂನು ಬೆನ್ನಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಮಕರಾಸನ
ಮೊದಲು ಬೋರಲಾಗಿ ಮಲಗಿ ಬಳಿಕ ಕೈಗಳನ್ನು ಮಡಚಿ ಒಂದು ಕೆನ್ನೆಯನ್ನು ಕೈಗೆ ಒರೆಗಿಸಿಕೊಂಡು ವಿಶ್ರಾಂತಿ ಪಡೆಯಬೇಕು. ಬಹುತೇಕರಿಗೆ ಇದು ಆಸನವೆಂದು ತಿಳಿಯದಿದ್ದರೂ ದೈನಿಕವಾಗಿ ಮಲಗುವಾಗ ಈ ಭಂಗಿಯನ್ನು ತಮಗರಿವಿಲ್ಲದಂತೆ ಮಾಡುತ್ತಾರೆ. ಇದರಿಂದ ಶರೀರಕ್ಕೆ ವಿಶ್ರಾಂತಿ ಜತೆಗೆ ಗೂನು ಬೆನ್ನಿನ ಸಮಸ್ಯೆ ನಿವಾರಣೆ ಸಾಧ್ಯವಾಗುತ್ತದೆ.
ಧನುರಾಸನ
ನೆಲದ ಮೇಲೆ ಬೋರಲಾಗಿ ಮಲಗಿ ಬಳಿಕ ಎರಡು ಕಾಲನ್ನು ಮಂಡಿಗಳ ಬಳಿ ಹಿಂದಕ್ಕೆ ಬಗ್ಗಿಸಿ ಕೈಗಳಿಂದ ಕಾಲನ್ನು ಹಿಡಿದಿಟ್ಟು ಉಸಿರನ್ನು ಸಂಪೂರ್ಣವಾಗಿ ಹೊರಬಿಡಬೇಕು. ಧನುರಾಸನದಲ್ಲಿ ದೇಹವು ಬಿಲ್ಲಿನಂತೆ ಬಗ್ಗಿರುತ್ತದೆ. ಇದನ್ನು ಮಾಡುವುದರಿಂದ ಹೃದಯ, ಹೊಟ್ಟೆನೋವು ಸಮಸ್ಯೆ ನಿವಾರಣೆಯಾಗುವುದರೊಂದಿಗೆ ಶ್ವಾಸಕೋಶವು ಬಲಿಷ್ಠವಾಗುತ್ತದೆ. ಜೀರ್ಣ ಶಕ್ತಿಯೂ ಹೆಚ್ಚುವುದರ ಜತೆಗೆ ಬೆನ್ನಿನ ಮೂಳೆಯೂ ಹೆಚ್ಚು ಬಲವಾಗುವ ಜತೆಗೆ ಗೂನುಬೆನ್ನು ಸಮಸ್ಯೆ ನಿವಾರಣೆಯಾಗಲಿದೆ.
ಸೂಚನೆ: ಈ ಎಲ್ಲ ಆಸನಗಳನ್ನು ತರಬೇತಿ ಪಡೆದು ಮಾಡುವುದು ಒಳಿತು. ಯೋಗಾತ್ಮಕವಾಗಿ ಮಾಡಲು ಹೊರಟರೆ ಬೆನ್ನು ನೋವು, ಇತರ ಶಾರೀರಿಕ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.