![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Jun 16, 2021, 7:20 PM IST
ಚಿಕ್ಕಬಳ್ಳಾಪುರ: ತೈಲ ಬೆಲೆ ಏರಿಕೆ ಖಂಡಿಸಿಕಾಂಗ್ರೆಸ್ ಕಾರ್ಯಕರ್ತರು ನಗರದ ಪೆಟ್ರೋಲ್‌ಬಂಕ್ ಮುಂದೆ ಪ್ರತಿಭಟನೆ ನಡೆಸಿ, ಕೇಂದ್ರಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಕಾಂಗ್ರೆಸ್ ಕಚೇರಿಯಿಂದಮುಖ್ಯರಸ್ತೆಯಲ್ಲಿ ಪ್ರತಿಭಟನೆ ಮೆರವಣಿಗೆನಡೆಸಿದ ಕಾರ್ಯಕರ್ತರು, ಕೇಂದ್ರ, ರಾಜ್ಯಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವಡಾ.ಕೆ.ಸುಧಾಕರ್ ವಿರುದ್ಧ ಘೋಷಣೆ ಕೂಗಿದರು.
ಪಕ್ಷದ ಜೊತೆ ಕೈಜೋಡಿಸಿ: ಕೊರೊನಾಸಂಕಷ್ಟದ ಸಮಯದಲ್ಲಿ ಪೆಟ್ರೋಲ್-ಡೀಸೆಲ್, ಅಗತ್ಯ ವಸ್ತುಗಳ ಬೆಲೆ ಏರಿಕೆಮಾಡಿ ಕೇಂದ್ರ ಹಾಗೂ ರಾಜ್ಯ ಬಿಜೆಪಿಸರ್ಕಾರ ಜನ ವಿರೋಧಿ ಧೋರಣೆ ಅನುಸರಿಸುತ್ತಿದೆ. ಇಂತಹ ಪಕ್ಷವನ್ನು ಅಧಿಕಾರದಿಂದಕೆಳಗೆ ಇಳಿಸಲು ಕಾಂಗ್ರೆಸ್ ಪಕ್ಷದೊಂದಿಗೆಜನಸಾಮಾನ್ಯರು ಕೈಜೋಡಿಸಬೇಕೆಂದು ಮನವಿ ಮಾಡಿದರು.
ಜನರ ಕಷ್ಟ ಕೇಳುವವರೇ ಇಲ್ಲ:ಗೌರಿಬಿದನೂರು ಶಾಸಕ ಎನ್.ಶಿವಶಂಕರ್‌ರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಉಸ್ತುವಾರಿಸಚಿವ ಡಾ.ಕೆ.ಸುಧಾಕರ್ ಅವರ ಕೃಪಕಟಾಕ್ಷದಿಂದ ಭ್ರಷ್ಟಾಚಾರ ತಾಂಡವವಾಡುತ್ತಿದೆ,ಆಡಳಿತ ವ್ಯವಸ್ಥೆ ಹದಗೆಟ್ಟಿದೆ, ಸಾಮಾನ್ಯಜನರ ಕಷ್ಟವನ್ನು ಕೇಳವವರು ಇಲ್ಲದಂತಾಗಿದೆಎಂದು ಆರೋಪಿಸಿದರು.
ಸಚಿವರ ದರ್ಬಾರ್: ಜಿಲ್ಲಾ ಉಸ್ತುವಾರಿಸಚಿವರು ಜನಪರ ಆಡಳಿತ ನಡೆಸುವಬದಲಿಗೆ ಹಿಂದೆ ಮುಂದೆ ಬೆಂಗಾವಲುವಾಹನ ನಿಯೋಜಿಸಿಕೊಂಡು ದರ್ಬಾರ್‌ಮಾಡುತ್ತಿದ್ದಾರೆ. ನಾನೂ ಸಚಿವನಾಗಿ ಕೆಲಸಮಾಡಿದ್ದೇನೆ. ಎಂದೂ ಬೆಂಗಾವಲು ವಾಹನಇಟ್ಟುಕೊಂಡಿರಲಿಲ್ಲ. ಅಧಿ ಕಾರ ಶಾಶ್ವತವಲ್ಲ,ಡೋಂಗಿ ರಾಜಕಾರಣ ಉಳಿಯುವುದಿಲ್ಲ,ಕಾಲ ಬದಲಾಗುತ್ತದೆ ಎಂಬುದು ಮರೆಯಬಾರದು ಎಂದು ಎಚ್ಚರಿಕೆ ನೀಡಿದರು.
ಮಂತ್ರಿಗಿರಿಗೆ ಬ್ರೇಕ್?: ರಾಜ್ಯದಲ್ಲಿಕೊರೊನಾ ಸೋಂಕು ನಿಯಂತ್ರಿಸಲುವಿಫಲವಾಗಿರುವ ಆರೋಗ್ಯ ಮತ್ತು ಜಿಲ್ಲಾಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್‌ಅವರಿಗೆ ಬಿಜೆಪಿಯವರೇ ಸಚಿವ ಸಂಪುಟದಿಂದ ಗೇಟ್‌ಪಾಸ್ ಕೊಡಿಸಲು ತಯಾರಿನಡೆಸಿದ್ದಾರೆ ಎಂದು ಭವಿಷ್ಯ ನುಡಿದರು.
ಜನರ ಕೈಗೆ ಸಿಗಲ್ಲ: ಜಿಲ್ಲಾ ಉಸ್ತುವಾರಿಸಚಿವರು ಜನಸಾಮಾನ್ಯರ ಕೈಗೆ ಸಿಗುತ್ತಿಲ್ಲ,ಅವರ ಜೊತೆ ಮಾತನಾಡುವ ಹಾಗಿಲ್ಲ,ಫೋನ್ ಕರೆಗೂ ಸಿಗಲ್ಲ, ನೀವು ಯಾವಜನಪ್ರತಿನಿಧಿ, ನಿಮ್ಮ ಟಾಕು ಟೀಕುನೋಡುವುದಕ್ಕಾ ಜನ ಓಟು ಹಾಕಿದ್ದು ಎಂದುಪ್ರಶ್ನಿಸಿದ ಶಿವಶಂಕರೆಡ್ಡಿ, ಮುಂದಿನವಿಧಾನಸಭಾ ಚುನಾವಣೆಯಲ್ಲಿ ತಕ್ಕ ಪಾಠಕಲಿಸುತ್ತೇವೆ ಎಂದು ಸವಾಲು ಹಾಕಿದರು
Govt Schools: ಈ ಬಾರಿಯೂ ಬೇಸಗೆಯಲ್ಲಿ ಮಕ್ಕಳಿಗೆ ಭರಪೂರ ಬಿಸಿಯೂಟ
MLA Pradeep Eshwar : ಎತ್ತಿನಹೊಳೆ ಕಾಮಗಾರಿಗೆ 500 ಕೋಟಿ ನೀಡಿ; ಪ್ರದೀಪ್
Chintamani: ಹಿಂಬಾಲಿಸಿ ಬಂದು ವ್ಯಕ್ತಿಯೊಬ್ಬರ ಹ*ತ್ಯೆಗೈದ ದುಷ್ಕರ್ಮಿಗಳು!
Gudibanda: ವಿವಿಧ ಪ್ರಕರಣಗಳ ಕಳ್ಳನ ಬಂಧನ, 152 ಗ್ರಾಂ ಬಂಗಾರ ವಶ
BJP Rift: ಸಂಸದ ಕೆ.ಸುಧಾಕರ್ ಚಿಕ್ಕಬಳ್ಳಾಪುರ ಜಿಲ್ಲೆಗೆ ಶಾಪ: ಸಂದೀಪ ರೆಡ್ಡಿ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
Kasaragod: ಹಲ್ಲೆ ಪ್ರಕರಣ; ಕೇಸು ದಾಖಲು
You seem to have an Ad Blocker on.
To continue reading, please turn it off or whitelist Udayavani.