ಸಂಸ್ಕೃತ ಭಾರತದ ಜೀವ ಭಾಷೆ : ಸುಬ್ರಹ್ಮಣ್ಯ ಶ್ರೀ
Team Udayavani, Jun 16, 2021, 8:37 PM IST
ವಿದ್ಯಾನಗರ: ಸಂಸ್ಕೃತವು ದೇವ ಭಾಷೆ ಮಾತ್ರವಲ್ಲ ಭಾರತದ ಜೀವ ಭಾಷೆ. ಎಂದು ಕುಕ್ಕೆ ಸುಬ್ರಹ್ಮಣ್ಯ ಮಠದ ಪೀಠಾಧಿಪತಿಗಳಾದ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಹೇಳಿದ್ದಾರೆ.
ಅವರು ಅಸ್ತಿತ್ವಂ ಪ್ರತಿಷ್ಠಾನ ಕುಂಟಾರು ಇದರ ಸಹಯೋಗದೊಂದಿಗೆ ಸಂಸ್ಕೃತ ಭಾರತಿ ಕಾಸರಗೋಡು ಸಾಮಾಜಿಕ ಜಾಲತಾಣದ ಮುಖಾಂತರ ನಡೆಸಿದ ದಶದಿನ ಸಂಸ್ಕೃತ ಸಂಭಾಷಣ ವರ್ಗದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಇದನ್ನೂ ಓದಿ : ಸಿಎಂ ಬದಲಾವಣೆ ಇಲ್ಲ, ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ :ಅರುಣ್ ಸಿಂಗ್
ಸಂಸ್ಕೃತ ಇಂದು ಯಾವುದೇ ಒಂದು ವರ್ಗದ ಜನರ ಭಾಷೆಯಾಗಿಲ್ಲ. ದೇಶದ ಎಲ್ಲಾ ವರ್ಗದ ಜನರಿಗೂ ಹತ್ತಿರವಾದ ಭಾಷೆ. ಆ ನಿಟ್ಟಿನಲ್ಲಿ ಇಂತಹ ಶಿಬಿರಗಳು ಅತೀ ಅಗತ್ಯ. ಜನರು ಈ ಶಿಬಿರಗಳನ್ನು ಸದುಪಯೋಗ ಪಡಿಸಿಕೊಂಡು ಸಂಸ್ಕೃತ ಭಾಷೆ ಅಮೃತ ಭಾಷೆ ಎಂಬುದನ್ನು ಜಗತ್ತಿಗೆ ಸಾರಬೇಕು ಎಂದರು.
ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ತು ಸದಸ್ಯರಾದ ವೇದಮೂರ್ತಿ ಕಶೆಕೋಡಿ ಸೂರ್ಯನಾರಾಯಣ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅಧ್ಯಕ್ಷತೆ ವಹಿಸಿದ್ದರು. ಶ್ಯಾಮ ಸುದರ್ಶನ ಭಟ್ ಹೊಸಮೂಲೆ ಅತಿಥಿಯಾಗಿದ್ದರು. ಮಂಗಳೂರು ವಿಭಾಗದ ಸಂಯೋಜಕರಾದ ಸತ್ಯ ನಾರಾಯಣ ಸಂಸ್ಕೃತ ಭಾರತಿಯ ಕಾರ್ಯಚಟುವಟಿಕೆಗಳನ್ನು ಪರಿಚಯಿಸಿದರು. ಸಂಸ್ಕೃತ ಭಾರತೀ ಕಾಸರಗೋಡು ಜಿಲ್ಲಾ ಸಂಯೋಜಕ ಎಸ್.ಎಂ.ಉಡುಪ ಕುಂಟಾರು, ಶಿಬಿರದ ಸಂಸ್ಕೃತ ಶಿಕ್ಷಕಿ ಸಂದ್ಯಾ ವಿ ಕೆದಿಲಾಯ ಭಾಗವಹಿಸಿದರು.
ಇದನ್ನೂ ಓದಿ : ಬಿಜೆಪಿಯ ಸಚಿವರು ಹೈಕಮಾಂಡ್ ಪ್ರತಿನಿಧಿಯ ಮುಂದೆ ಅಹವಾಲು ನೀಡಲು ಕ್ಯೂನಲ್ಲಿದ್ದಾರೆ : ಸಿದ್ದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.