ಒತ್ತುವರಿ ತೆರವಿಗೆ ಶಾಸಕ ತಿಪ್ಪಾರೆಡ್ಡಿ ಸೂಚನೆ
Team Udayavani, Jun 16, 2021, 10:34 PM IST
ಚಿತ್ರದುರ್ಗ: ನಗರದ ವಿ.ಪಿ. ಬಡಾವಣೆಯಲ್ಲಿ ಕನ್ಸರ್‌ವೆನ್ಸಿಗಳ ಒತ್ತುವರಿಯಾಗಿದ್ದು, ಕೂಡಲೇ ಅದನ್ನು ತೆರವುಗೊಳಿಸಿ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ನಗರಸಭೆ ಪೌರಾಯುಕ್ತರಿಗೆ ಸೂಚಿಸಿದರು.
ವಿ.ಪಿ. ಬಡಾವಣೆಯ 3ನೇ ಕ್ರಾಸ್ (ಹಿಟ್ಟಿನ ಗಿರಣಿ ಹತ್ತಿರ) ಸಿಸಿ ರಸ್ತೆ, ಕಾಮಗಾರಿಗೆ ಚಾಲನೆ ನೀಡಿ ಅಕ್ಕ-ಪಕ್ಕದಲ್ಲಿ ನಗರಸಭೆಯ ಜಾಗವಾದ ಕನ್ಸರ್‌ವೆನ್ಸಿಯನ್ನು ಕೆಲವರು ಒತ್ತುವರಿ ಮಾಡಿ ಗೇಟ್ ಹಾಕಿದ್ದನ್ನು ಕಂಡು ಕೋಪಗೊಂಡ ಶಾಸಕರು, ಇದನ್ನು ಯಾರು ಮಾಡಿದ್ದು, ಇಲ್ಲಿ ನಗರಸಭೆಯ ಜಾಗವನ್ನು ಒತ್ತುವರಿ ಮಾಡುವ ಮೂಲಕ ಮನೆಯನ್ನು ನಿರ್ಮಾಣ ಮಾಡಿ ಮೆಟ್ಟಿಲುಗಳನ್ನು ಹಾಕಿದ್ದಾರೆ ಇದರ ಬಗ್ಗೆ ಪೌರಾಯುಕ್ತರಿಗೆ ತಿಳಿಸಿ ಕೊಡಲೇ ತೆರವುಗೊಳಿಸುವಂತೆ ಸೂಚನೆ ನೀಡಿದರು.
ಜೆ.ಸಿ.ಆರ್. ಬಡಾವಣೆಯ ಎರಡನೇ ತಿರುವಿನಿಂದ ವಿ.ಪಿ. ಬಡಾವಣೆಗೆ ಬರುವ ದಾರಿಯ ಪಕ್ಕದಲ್ಲಿ ಇರುವ ಕನ್ಸರ್‌ವೆನ್ಸಿಗೆ ಅಡ್ಡಲಾಗಿ ಗೇಟ್ ಹಾಕಿದ್ದರಿಂದ ಇಲ್ಲಿ ಹಂದಿಗಳ ವಾಸ ಹೆಚ್ಚಾಗಿದೆ. ಇದರಿಂದ ನಗರದಲ್ಲಿ ರೋಗಗಳ ಹೆಚ್ಚಾಗುತ್ತಿದೆ. ಈಗಲೇ ಜನತೆ ಕೊರೊನಾಗೆ ತುತ್ತಾಗುತ್ತಿದ್ದಾರೆ. ಮುಂದೆ ಮತ್ತೂಂದು ರೋಗ ಬರುವುದು ಬೇಡ, ಇದರ ಬಗ್ಗೆ ನಿಗಾ ವಹಿಸಿ ಎಲ್ಲವನ್ನೂ ತೆರವುಗೊಳಿಸಿ ಎಂದರು.
ಇದೇ ವೇಳೆ ಸಮಯದಲ್ಲಿ ಅಲ್ಲೇ ಇದ್ದ ಸರ್ಕಾರದ ಸಹಾಯಕ ಔಷ ಧ ನಿಯಂತ್ರಣ ಕಚೇರಿಗೆ ಸಮಯ ಮೀರಿದ್ದರೂ ಕರ್ತವ್ಯಕ್ಕೆ ಹಾಜರಾಗದ ಅ ಧಿಕಾರಿ ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ನಗರಸಭಾ ಸದಸ್ಯೆ ರೋಹಿಣಿ ನವೀನ್, ಮುಖಂಡರಾದ ರವಿಕುಮಾರ್, ವೇದ ಪ್ರಕಾಶ್, ಕುಮಾರ್, ತಿಮ್ಮಣ್ಣ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
MUST WATCH
ಹೊಸ ಸೇರ್ಪಡೆ
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.