ಧಾರ್ಮಿಕ ಕಾರ್ಯಗಳಿಂದ ಶ್ರೇಯಸ್ಸು: ಶ್ರೀಶೈಲ ಶ್ರೀ
Team Udayavani, Jun 17, 2021, 10:19 PM IST
ಸಿರುಗುಪ್ಪ: ನಾವು ಸಾರ್ವಜನಿಕರಿಗಾಗಿ ಮಾಡುವ ಸೇವೆಯಿಂದಾಗಿ ನಮಗಾಗುವ ಉಪಯೋಗಕ್ಕಿಂತ ಜನರು ಆ ಕಲ್ಯಾಣ ಮಂಟಪಗಳಲ್ಲಿ ಮಾಡುವ ಶುಭಕಾರ್ಯಗಳಲ್ಲಿನ ಪುಣ್ಯದ ಪಾಲು ನಮಗೂ ದೊರೆಯುತ್ತದೆ. ನಾವು ಮಾಡುವ ಧಾರ್ಮಿಕ ಕಾರ್ಯಗಳೇ ನಮಗೆ ಶ್ರೇಯಸ್ಸು ತರುತ್ತವೆಂದು ಶ್ರೀಶೈಲಪೀಠದ 1008 ಜಗದ್ಗುರು ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದರು.
ನಗರದಲ್ಲಿರುವ ಪಿನಾಕಿನಿ ಆಶ್ರಮಕ್ಕೆ ಮಂಗಳವಾರ ಭೇಟಿ ನೀಡಿ ನಿರ್ಮಾಣವಾಗುತ್ತಿರುವ ನೂತನ ಕಲ್ಯಾಣ ಮಂಟಪದ ಕಾಮಗಾರಿಯನ್ನು ಪರಿಶೀಲನೆ ನಡೆಸಿ ಮಾತನಾಡಿದ ಅವರು, ಕೊರೊನಾ ಮಹಾಮಾರಿಗೆ ಪೂಜ್ಯರು, ಕೊಡುಗೈದಾನಿಗಳು, ಬಲಿಯಾಗುತ್ತಿರುವುದು ವಿಷಾದನೀ ಯವಾದದ್ದು ಜಗತ್ತಿನಿಂದ ಕೊರೊನಾವನ್ನು ದೂರಮಾಡಿ ಮನುಕುಲಕ್ಕೆ ಒಳಿತು ಮಾಡುವಂತೆ ಭಗವಂತನಲ್ಲಿ ಪ್ರಾರ್ಥಿಸೋಣ. ಕಟ್ಟಡದ ಶೇ. 50ರಷ್ಟು ಕಾಮಗಾರಿ ನಡೆದಿದ್ದು ಕಾಮಗಾರಿಯ ಕಾರ್ಯಯೋಜನೆ ನಮಗೆ ಖುಷಿ ತಂದಿದೆ.
ಸರ್ಕಾರದ ಸೇವೆ, ಭಕ್ತರ ಸೇವೆಯಿಂದಾಗಿ ಪಿನಾಕಿನಿ ಆಶ್ರಮದಲ್ಲಿ ಕಟ್ಟಡ ನಿರ್ಮಾಣ ಪ್ರಾರಂಭವಾದಾಗಿನಿಂದ ಪ್ರವಾಹ, ಕೊರೊನಾ ಒಂದನೇ ಮತ್ತು ಎರಡನೇ ಅಲೆಯಂಥ ಸಂಕಷ್ಟ ಸಮಯದಲ್ಲೂ ಭಕ್ತರು ಶಕ್ತಿಮೀರಿ ಗುರುಸೇವೆ, ಧಾರ್ಮಿಕ ಸೇವೆ, ಸಾಮಾಜಿಕ ಸೇವೆಗೆ ಸಹಾಯ ಮಾಡುತ್ತಿರುವುದು ಸಂತಸದ ಸಂಗತಿಯಾಗಿದ್ದು ಇನ್ನೂ ಈ ಕಾಮಗಾರಿಯ ಸೇವೆಗಾಗಿ ವಾಗ್ಧಾನ ನೀಡಿರುವ ಭಕ್ತರು ಗುರುಸೇವೆಗೆ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಮುಂದಾಬೇಕೆಂದು ಕರೆನೀಡಿದರು.
ಮಾಜಿ ಶಾಸಕ ಚಂದ್ರಶೇಖರಯ್ಯ ಸ್ವಾಮಿ, ಬಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚೊಕ್ಕಬಸವನಗೌಡ, ಮುಖಂಡರಾದ ಎಚ್.ಕೆ. ಮಲ್ಲಿಕಾರ್ಜುನಯ್ಯ ಸ್ವಾಮಿ, ಚನ್ನಬಸವನಗೌಡ, ಎನ್.ಜಿ. ಬಸವರಾಜಪ್ಪ, ಶಿವಶಂಕರಗೌಡ, ಯು. ಅಮರೇಶಪ್ಪ, ಆರ್. ಬಸವಲಿಂಗಪ್ಪ, ದೊಡ್ಡ ವೀರೇಶಗೌಡ, ಟಿ.ಎಂ. ಶಿವಕುಮಾರ, ಬಿ.ಎಂ. ಯರಿಸ್ವಾಮಿ, ಬಿ.ಎಂ.ಜಡಿಸ್ವಾಮಿ, ಎನ್.ವೀರನಗೌಡ, ಎಂ. ವೀರನಗೌಡ, ಎ. ಶಿವರುದ್ರಗೌಡ, ನಾ.ಮ. ಜಗದೀಶ, ಶಂಭುಲಿಂಗಯ್ಯ ಗಾಣದಾಳ್, ಮಂಜುನಾಥಗೌಡ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
Mangaluru: ಅಂಬೇಡ್ಕರ್ – ಸಂವಿಧಾನ ಯಾರಿಗೂ ಟೂಲ್ ಆಗಬಾರದು: ಕೈ ವಿರುದ್ದ ಸಂತೋಷ್ ಟೀಕೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.