ಲಾಕ್‌ಡೌನ್‌ ‘ಖುಷಿ’ಯಾಗಿದೆ. ಆದರೆ.. ರಿಲೀಸ್‌ ಸಿನಿಮಾಗಳ ನಿರೀಕ್ಷೆಯಲ್ಲಿ ದಿಯಾ ನಟಿ

Team Udayavani, Jun 18, 2021, 1:42 PM IST

kushee ravi

ಕಳೆದ ವರ್ಷದ ಆರಂಭದಲ್ಲಿ ತೆರೆಕಂಡ “ದಿಯಾ’ ಚಿತ್ರದ ಮೂಲಕ ಸಿನಿಪ್ರಿಯರ ದಿಲ್‌ ಗೆದ್ದ ನಟಿ ಖುಷಿ ರವಿ. “ದಿಯಾ’ ಬಳಿಕ ಒಂದರ ಹಿಂದೊಂದು ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಯಶಸ್ವಿಯಾದ ಖುಷಿ ಕೈಯಲ್ಲಿ ಮೂರ್‍ನಾಲ್ಕು ಸಿನಿಮಾಗಳಿವೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗಾಗಲೇ ಖುಷಿ ನಾಯಕಿಯಾಗಿ ಅಭಿನಯಿಸಿರುವ ಕನಿಷ್ಟ ಎರಡು ಸಿನಿಮಾಗಳಾದ್ರೂ ಬಿಡುಗಡೆಯಾಗಬೇಕಿತ್ತು. ಆದ್ರೆ ಕೊರೊನಾ ಲಾಕ್‌ಡೌನ್‌ನಿಂದ ಎಲ್ಲ ಕ್ಷೇತ್ರಗಳಂತೆ ಸಿನಿಮಾದಲ್ಲೂ ಲೆಕ್ಕಾಚಾರಗಳು ತಲೆಕೆಳಗಾಗಿ, ಥಿಯೇಟರ್‌ಗಳು ಬಂದ್‌ ಆಗಿರುವುದರಿಂದ, ಸದ್ಯ ಖುಷಿ ಅಭಿನಯದ ಸಿನಿಮಾಗಳು ತಮ್ಮ ಬಿಡುಗಡೆಯನ್ನು ಎದುರು ನೋಡುತ್ತಿವೆ.

ಇದೇ ವೇಳೆ ಮಾತಿಗೆ ಸಿಕ್ಕ ನಟಿ ಖುಷಿ ರವಿ, “”ದಿಯಾ’ ಸಿನಿಮಾ ಆದಮೇಲೆ ಒಳ್ಳೆಯ ಪ್ರಾಜೆಕ್ಟ್ಗಳು ಸಿಕ್ಕಿವೆ. ಎಲ್ಲವೂ ಕೂಡ ಒಂದಕ್ಕಿಂತ ಒಂದು ಡಿಫ‌ರೆಂಟ್‌ ಆಗಿದೆ. ಲಾಕ್‌ಡೌನ್‌ ಇಲ್ಲದೆ ಥಿಯೇಟರ್‌ಗಳು ಓಪನ್‌ ಇದ್ದಿದ್ದರೆ, ಇಷ್ಟೊತ್ತಿಗಾಗಲೇ ಕನಿಷ್ಟ ಅವುಗಳಲ್ಲಿ ಒಂದೆರಡು ಸಿನಿಮಾಗಳಾದ್ರೂ ರಿಲೀಸ್‌ ಆಗಿರುತ್ತಿದ್ದವು. ಸದ್ಯಕ್ಕೆ ಕೋವಿಡ್‌ ಭಯದಿಂದ ಥಿಯೇಟರ್‌ಗಳು ಬಂದ್‌ ಆಗಿರೋದ್ರಿಂದ, ಅವು ಮತ್ತೆ ಯಾವಾಗ ರೀ-ಓಪನ್‌ ಆಗುತ್ತವೆಯೋ, ನಮ್ಮ ಸಿನಿಮಾಗಳು ಯಾವಾಗ ರಿಲೀಸ್‌ ಆಗುತ್ತದೆಯೋ ಗೊತ್ತಿಲ್ಲ. ನಾನು ಕೂಡ ಅದನ್ನೇ ಕಾಯುತ್ತಿದ್ದೇನೆ’ ಎನ್ನುತ್ತಾರೆ.

“ಕಳೆದ ಮೂರ್‍ನಾಲ್ಕು ವರ್ಷದಿಂದ ಸಿನಿಮಾಗಳಲ್ಲಿ ಹೆಚ್ಚು ಬಿಝಿಯಾಗಿದ್ದರಿಂದ, ಮನೆಯಲ್ಲಿ ಹೆಚ್ಚು ಸಮಯ ಕಳೆಯಲು ಸಾಧ್ಯವಾಗಿರಲಿಲ್ಲ. ನನ್ನ ಮಗಳು, ಗಂಡ ಹೀಗೆ ಫ್ಯಾಮಿಲಿಯಲ್ಲಿ ಎಲ್ಲರನ್ನೂ ಮಿಸ್‌ ಮಾಡಿಕೊಳ್ಳುತ್ತಿದ್ದೆ. ಆದ್ರೆ ಈ ಲಾಕ್‌ಡೌನ್‌ನಿಂದ ಸಿನಿಮಾ ಶೂಟಿಂಗ್‌ ಸೇರಿದಂತೆ ಬೇರೇನೂ ಆ್ಯಕ್ಟಿವಿಟಿಸ್‌ ಇಲ್ಲದಿದ್ದರಿಂದ, ಕಂಪ್ಲೀಟ್‌ ಮನೆಯಲ್ಲೇ ಲಾಕ್‌ ಆಗಬೇಕಾಯ್ತು. ಹೀಗಾಗಿ ಮನೆಯಲ್ಲಿ ಫ್ಯಾಮಿಲಿ ಜೊತೆ ಹೆಚ್ಚು ಸಮಯ ಕಳೆಯೋದಕ್ಕೆ ಅನುಕೂಲವಾಯ್ತು. ಆ ಮಟ್ಟಿಗೆ ಲಾಕ್‌ ಡೌನ್‌ನಿಂದ “ಖುಷಿ’ಯಾಗಿದೆ’ ಎನ್ನುತ್ತಾರೆ ಖುಷಿ.

“ಕೋವಿಡ್‌ ಭಯ ಹೆಚ್ಚಾಗಿದ್ದರಿಂದ, ಲಾಕ್‌ಡೌನ್‌ನಲ್ಲಿ ಎಲ್ಲರೂ ಅನಿವಾರ್ಯವಾಗಿ ಮನೆಯಲ್ಲಿರದೆ ಬೇರೆ ದಾರಿಯಿರಲಿಲ್ಲ. ಆದರೆ ನನ್ನ ಕೆಲಸ ಮತ್ತು ವೃತ್ತಿಯ ವಿಷಯಕ್ಕೆ ಬಂದಾಗ ಲಾಕ್‌ಡೌನ್‌ ಅಥವಾ ಮತ್ತಿತರ ಯಾವುದೋ ಕಾರಣಗಳಿಂದ ನಾನು ಮನೆಯಲ್ಲಿ ಹೆಚ್ಚು ಸಮಯ ಕುಳಿತುಕೊಂಡಿರಲು ಸಾಧ್ಯವಿಲ್ಲ. ಹಾಗಾಗಿ ಆದಷ್ಟು ಬೇಗ ಕೋವಿಡ್‌ ಭಯ ದೂರವಾಗಿ, ಲಾಕ್‌ಡೌನ್‌ ಕ್ಲಿಯರ್‌ ಆಗಲಿ. ಮೊದಲಿನಂತೆ ನಮ್ಮ ಕೆಲಸಗಳು ಶುರುವಾಗಲಿ ಎಂದು ಬಯಸುತ್ತೇನೆ’ ಎನ್ನುತ್ತಾರೆ ಖುಷಿ.

ಸದ್ಯ ಖುಷಿ ರವಿ ಅಭಿನಯದ “ನಕ್ಷೆ’, “ಸ್ಫೂಕಿ ಕಾಲೇಜ್‌’ ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿದ್ದು, ಥಿಯೇಟರ್‌ ಗಳು ಓಪನ್‌ ಆಗುತ್ತಿದ್ದಂತೆ ರಿಲೀಸ್‌ ಆಗುವ ಯೋಚನೆಯಲ್ಲಿವೆ. ಇದರ ನಡುವೆ ಇನ್ನೂ ಪೃಥ್ವಿ ಅಂಬಾರ್‌ ನಾಯಕನಾಗಿರುವ ಹೊಸ ಚಿತ್ರದಲ್ಲೂ ಖುಷಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಲಾಕ್‌ಡೌನ್‌ ತೆರೆವಾಗುತ್ತಿದ್ದಂತೆ ಆ ಸಿನಿಮಾದ ಶೂಟಿಂಗ್‌ ಶುರುವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಖುಷಿ.

ಇನ್ನು ಈ ಲಾಕ್‌ಡೌನ್‌ನಲ್ಲಿ ಒಂದಷ್ಟು ಒಳ್ಳೆಯ ಸ್ಕ್ರಿಪ್ಟ್ ಕೇಳಿರುವ ಖುಷಿ, ಅದರಲ್ಲಿ ಕೆಲವೊಂದನ್ನು ಒಪ್ಪಿಕೊಂಡಿದ್ದು, ಆ ಸಿನಿಮಾಗಳು ಕೂಡ ಶೀಘ್ರದಲ್ಲಿಯೇ ಅನೌನ್ಸ್‌ ಆಗಬಹುದು ಎನ್ನುವ ಮಾಹಿತಿ ನೀಡಿದ್ದಾರೆ.

ಟಾಪ್ ನ್ಯೂಸ್

1-reee

Chikkamagaluru: ದತ್ತಪೀಠದಲ್ಲಿ ಕುಂಕುಮ ಲೇಪಿಸಿ ಧಾರ್ಮಿಕ ಭಾವನೆಗೆ ಧಕ್ಕೆ: ಖಾದ್ರಿ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

Vijay Raghavendra is in Rudrabhishekam Movie

Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್‌ ರಾಘವೇಂದ್ರ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

Love Reddy movie released today

Love Reddy: ತೆರೆಗೆ ಬಂತು ʼಲವ್‌ ರೆಡ್ಡಿʼ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1-reee

Chikkamagaluru: ದತ್ತಪೀಠದಲ್ಲಿ ಕುಂಕುಮ ಲೇಪಿಸಿ ಧಾರ್ಮಿಕ ಭಾವನೆಗೆ ಧಕ್ಕೆ: ಖಾದ್ರಿ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.