ತನ್ನ ಉತ್ಪನ್ನಗಳ ಬಿಡಿ ಭಾಗಗಳ ‘ಡೋರ್ ಡೆಲಿವರಿ’ಗೆ ಮುಂದಾದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್
Team Udayavani, Jun 18, 2021, 4:35 PM IST
ನವ ದೆಹಲಿ : ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಗ್ರಾಹಕ ಸ್ನೇಹಿ ಯೋಜನೆಯೊಂದಕ್ಕೆ ಮುಂದಾಗಿದ್ದು, ತನ್ನಿಂದ ಉತ್ಪಾದನೆಯಾಗುವ ಎಲ್ಲಾ ವಾಹನಗಳ ಬಿಡಿ ಭಾಗಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವಂತಹ ನಿರ್ಧಾರಕ್ಕೆ ಬಂದಿದೆ.
2015ರಲ್ಲಿ ಪ್ರಾರಂಭಿಸಲಾದ “ಟೊಯೋಟಾ ಪಾರ್ಟ್ಸ್ ಕನೆಕ್ಟ್”ನ ವಿಸ್ತೃತ ಈ ಕ್ರಮವು, ಕಂಪೆನಿಯ ವಿಶ್ವಾಸಾರ್ಹ ಉತ್ಪಾದನೆಯ ಬಿಡಿ ಭಾಗಗಳ ಲಭ್ಯತೆ ಹಾಗೂ ಪ್ರವೇಶದೊಂದಿಗೆ ಗ್ರಾಹಕರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಗುರಿಯನ್ನು ಹೊಂದಿರುವ ಪ್ರಮುಖ ಔಟ್ ರೀಚ್ ಪ್ರೋಗ್ರಾಂ ಆಗಿದೆ.
ಇದನ್ನೂ ಓದಿ : ಯಶ್ ಅಭಿಮಾನಿಗಳಿಗೆ ನಿರಾಸೆ ತಂದ ತರಣ್ ಟ್ವೀಟ್ : ಜುಲೈ 16ಕ್ಕೆ ಕೆಜಿಎಫ್ 2 ರಿಲೀಸ್ ಡೌಟ್?
ಇತ್ತೀಚೆಗೆ ಕಂಪೆನಿ ಪ್ರಾರಂಭಿಸಿದ ಈ “ಡೋರ್ ಡೆಲಿವರಿ”ಯೋಜನೆಯು ಗ್ರಾಹಕ ಸ್ನೇಹಿ ಯೋಜನೆಯಾಗಿದ್ದು, ಗ್ರಾಹಕರಿಗೆ ಮತ್ತಷ್ಟು ಅನುಕೂಲ ಒದಗಿಸಲಿದೆ.
“ಡೋರ್ ಡೆಲಿವರಿ” ಸೌಲಭ್ಯದ ಮುಖಾಂತರ ಗ್ರಾಹಕರು ಡೀಲರ್ ಶಿಪ್ ಗಳಿಂದ ಬಿಡಿ ಭಾಗಗಳನ್ನು ತೆಗೆದುಕೊಂಡು ಹೋಗುವುದಕ್ಕೆ ಹಾಗೂ ಅದನ್ನು ಮನೆಗೆ ತರಿಸಿಕೊಳ್ಳೂವ ಸೌಲಭ್ಯವೂ ಇದರಲ್ಲಿದೆ.
ಈ ಕಾರ್ಯಕ್ರಮದ ಅಡಿಯಲ್ಲಿ ಕಾರ್ ಕೇರ್ ಗಳು, ಎಂಜಿನ್ ಆಯಿಲ್ ಮತ್ತು ಟೈರ್, ಬ್ಯಾಟರಿ ಮುಂತಾದ ವಿಭಾಗಗಳನ್ನು ಒಳಗೊಂಡಂತೆ ಉತ್ಪನ್ನಗಳ ವ್ಯಾಪ್ತಿಯನ್ನು ಸಂಸ್ಥೆ ವಿಸ್ತರಿಸಿಕೊಂಡಿದೆ. ಸಂಸ್ಥೆಯ ಈ ಸೇವೆಯು ಪ್ರಸ್ತುತ 12 ನಗರಗಳಲ್ಲಿ ಲಭ್ಯವಿದೆ ಮತ್ತು 2021ರ ಅಂತ್ಯದ ವೇಳೆಗೆ ದೇಶದ ಎಲ್ಲಾ ನಗರಗಳಿಗೆ ವಿಸ್ತರಿಸಲಾಗುವುದು ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನು, ಈ ಕುರಿತಾಗಿ ಮಾತನಾಡಿದ ಟೊಯೋಟಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ನವೀನ್ ಸೋನಿ, ಈ ಹೋಮ್ ಡೆಲಿವರಿ ಕಸ್ಟಮರ್ ಔಟ್ ರೀಚ್ ಸೌಲಭ್ಯದೊಂದಿಗೆ ಉತ್ಪನ್ನಗಳ ವಿಶ್ವಾಸರ್ಹತೆಯನ್ನು ಉಳಿಸಿಕೊಳ್ಳುವ ನಮ್ಮ ಬದ್ಧತೆಯ ಕಡೆಗೆ ಮತ್ತೊಂದು ಮೈಲುಗಲ್ಲನ್ನು ಸಾಧಿಸಿದ್ದೇವೆ. ಗ್ರಾಹಕರು ಮತ್ತು ವಾಹನಗಳ ಸುರಕ್ಷತೆಯ ಕಡೆಗೆ ಕಂಪೆನಿಯ ನಂಬಿಕಾರ್ಹ ಬಿಡಿ ಭಾಗಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದಿದ್ದಾರೆ.
ಟಿಕೆಎಂ ಉತ್ಪನ್ನಗಳು ಮತ್ತು ಸೇವೆಗಳು ಸರಿಯಾಗಿ ತಲುಪುತ್ತಿವೆ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕೆ ಇವೆಲ್ಲ ನಮ್ಮ ಪ್ರಯತ್ನಗಳಾಗಿವೆ ಎಂದು ಹೇಳಿದ್ದಾರೆ.
ಹೆಚ್ಚಿನ ವಿವರಗಳಿಗಾಗಿ ಗ್ರಾಹಕರು ಟೊಯೋಟಾ ಪಾರ್ಟ್ಸ್ ಕನೆಕ್ಟ್ www.toyotapartsconnect.in ಭೇಟಿ ನೀಡಬಹುದು ಅಥವಾ ಹತ್ತಿರದ ಟೊಯೋಟಾ ಡೀಲರ್ ಶಿಪ್ ನನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ : ಅಕ್ಟೋಬರ್ ನಲ್ಲಿ ಮತ್ತೆ ಭಾರತದಲ್ಲಿ ಕೋವಿಡ್ 3ನೇ ಅಲೆ ಸಾಧ್ಯತೆ: ರಾಯಿಟರ್ಸ್ ಸಮೀಕ್ಷೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
Udupi: ವಕ್ಫ್ ಬೋರ್ಡ್ ಭೂ ಕಬಳಿಕೆ ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.