ನಕಲಿ ಕೋವಿಡ್ 19 ಲಸಿಕೆ ಶಿಬಿರದ ಹಗರಣ ಪ್ರಕರಣ; ನಾಲ್ವರನ್ನು ಬಂಧಿಸಿದ ಮುಂಬೈ ಪೊಲೀಸ್
ಬೇರೆ ಯಾವುದೋ ಲಸಿಕೆ ನೀಡಿದ್ದಾರೆಯೋ ಎಂಬ ಆತಂಕವನ್ನು ಗುಪ್ತಾ ಅವರು ವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.
Team Udayavani, Jun 18, 2021, 5:26 PM IST
ಮುಂಬಯಿ: ಮುಂಬೈಯಲ್ಲಿ ಹೌಸಿಂಗ್ ಸೊಸೈಟಿ ಆಯೋಜಿಸಿದ್ದ ನಕಲಿ ವ್ಯಾಕ್ಸಿನೇಷನ್ ಶಿಬಿರದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಸ್ಥಳೀಯ ನಿವಾಸಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡ ನಂತರ ಪ್ರಕರಣ ದಾಖಲಾದ ಬಳಿಕ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಯಡಿಯೂರಪ್ಪ ಕೂಡಾ ಸಾಮಾನ್ಯ ಕಾರ್ಯಕರ್ತರೇ..!: ಬಿಎಸ್ ವೈ ವಿರುದ್ಧ ಸಿ.ಟಿ ರವಿ ಆಕ್ರೋಶ
ಕೋವಿಡ್ ಲಸಿಕೆ ಹಗರಣದಲ್ಲಿ ಸಿನಿಮಾ ನಿರ್ಮಾಪಕ ರಮೇಶ್ ತೌರಾನಿ ಕೂಡಾ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಟಿಪ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥರಾಗಿರುವ ತೌರಾನಿ ಮೇ 30 ಮತ್ತು ಜೂನ್ 03ರಂದು 365 ನೌಕರರಿಗೆ ಲಸಿಕೆ ನೀಡಲು ಶಿಬಿರ ಆಯೋಜಿಸಿದ್ದರು. ಆದರೆ ಈವರೆಗೆ ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ದೊರಕಿಲ್ಲ ಎಂದು ವರದಿ ವಿವರಿಸಿದೆ.
ನಾವು ಪ್ರತಿಯೊಬ್ಬರು ಜಿಎಸ್ ಟಿ ಸೇರಿದಂತೆ ಒಂದು ಡೋಸ್ ಗೆ 1,200 ರೂಪಾಯಿ ಪಾವತಿಸಿದ್ದೇವೆ. ಆದರೆ ನಮಗೆ ಚಿಂತೆಯಾಗಿರುವುದು ಹಣಕ್ಕಿಂತ ಹೆಚ್ಚಾಗಿ ನಮಗೆ ನಿಜಕ್ಕೂ ಕೋವಿಶೀಲ್ಡ್ ನೀಡಿದ್ದಾರೆಯೇ ಅಥವಾ ಬೇರೆ ಯಾವುದೋ ಲಸಿಕೆ ನೀಡಿದ್ದಾರೆಯೋ ಎಂಬ ಆತಂಕವನ್ನು ಗುಪ್ತಾ ಅವರು ವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.
ಖಾಸಗಿ ಆಸ್ಪತ್ರೆಯ ಪ್ರತಿನಿಧಿಗಳೆಂದು ಹೇಳಿಕೊಳ್ಳುವ ಮೂಲಕ ತನ್ನ ಸದಸ್ಯರಿಗೆ ಕೋವಿಡ್ 19 ವ್ಯಾಕ್ಸಿನೇಷನ್ ಶಿಬಿರ ಆಯೋಜಿಸಿ ಕೆಲವು ವ್ಯಕ್ತಿಗಳು ವಂಚಿಸಿರುವುದಾಗಿ ಕಾಂದಿವಲಿಯ ಹೌಸಿಂಗ್ ಸೊಸೈಟಿ ಪೊಲೀಸರಿಗೆ ದೂರು ನೀಡಿದೆ. ಅಲ್ಲದೇ ತಮಗೆ ನೀಡಲಾದ ಲಸಿಕೆ ಕೂಡಾ ನಕಲಿ ಆಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.