ಹಾಲು ಉತ್ಪಾದಕರ ಸಂಘ ಹೊಸ ಸಾಧನೆಯನ್ನು ಸೃಷ್ಟಿಸುವಂತಾಗಲಿ: ಶಾಸಕ ಎನ್.ಎ.ನೆಲ್ಲಿಕುನ್ನು
Team Udayavani, Jun 19, 2021, 12:26 PM IST
ಬದಿಯಡ್ಕ: ಗ್ರಾಮದ ಜನರಿಗೆ ನೆರವಾಗುವ ರೀತಿಯಲ್ಲಿ ಆರಂಭಿಸಿದ ಹಾಲು ಉತ್ಪಾದಕರ ಸಂಘ ಹಾಲುತ್ಪಾದನೆಯಲ್ಲಿ ಹೊಸ ಸಾಧನೆಯನ್ನು ಸೃಷ್ಟಿಸುವಂತಾಗಲಿ ಎಂದು ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಹೇಳಿದರು.
ಅವರು ಬೆಳ್ಳೂರು ಹಾಲು ಉತ್ಪಾದಕರ ಸಹಕಾರಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. ಹೈನುಗಾರಿಕೆಯಂತಹ ಚಟುವಟಿಕೆಗಳ ಮೂಲಕ ಕೃಷಿಕರು ಹೆಚ್ಚು ಹೆಚ್ಚು ಆದಾಯವನ್ನು ಪಡೆಯಬಹುದು. ನ್ಯಾಯಯುತವಾಗಿ ದೊರಕಬಹುದಾದ ಎಲ್ಲಾ ಸೌಲಭ್ಯಗಳ ಪ್ರಯೋಜನ ಪಡೆದು ಈ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆಗೆ ಸಹಕಾರಿ ಸಂಘ ಕಾರಣವಾಗಲಿ ಎಂದರು. ಬೆಳ್ಳೂರು ಪಂಚಾಯತು ಅಧ್ಯಕ್ಷ ಶ್ರೀಧರ.ಎಂ ಅಧ್ಯಕ್ಷತೆವಹಿಸಿದ್ದರು. ಕಾರಡ್ಕ ಬ್ಲಾಕ್ ಪಂಚಾಯತು ಮಾಜಿ ಅಧ್ಯಕ್ಷ ಸಿಜಿ ಮ್ಯಾಥ್ಯೂ ಹಾಲು ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಿದರು.
ಪಂಚಾಯತು ಸದಸ್ಯರಾದ ಗೀತಾ.ಬಿ.ಎನ್, ದುರ್ಗಾದೇವಿ ಹಾಗೂ ಕುಳದಪಾರೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಮನೋಹರ.ಎನ್.ಎ. ಶುಭ ಹಾರೈಸಿದರು. ಡೈರಿ ಇಲಾಖಾ ಅಧಿಕಾರಿಗಳಾದ ಅರವಿಂದ ಬಾಲನ್, ಬಿನುಮೋನ್ ರೈತರಿಗೆ ಇಲಾಖೆ ನೀಡುವ ಅನುಕೂಲತೆಗಳ ಕುರಿತು ಮಾಹಿತಿ ನೀಡಿದರು. ನೆಟ್ಟಣಿಗೆ ಸರಕಾರಿ ಮೃಗಾಸ್ಪತ್ರೆ ಸರ್ಜನ್ ಡಾ.ಸಿನು ವರ್ಗೀಸ್ ಉತ್ತಮ ಗುಣಮಟ್ಟದ ಗೋವುಗಳ ಸಾಕಣೆಯ ಪ್ರಯೋಜನಗಳನ್ನು ತಿಳಿಸಿದರು. ಸಹಕಾರಿ ಸಂಘದ ಅಧ್ಯಕ್ಷ ರಾಜಗೋಪಾಲ ಕೈಪಂಗಳ ಸಂಘದ ರೂಪೀಕರಣದ ಕುರಿತು ವರದಿ ಸಲ್ಲಿಸಿದರು. ಕಲ್ಲಗ ಚಂದ್ರಶೇಖರ ರಾವ್ ಸ್ವಾಗತಿಸಿ ಸುಜಯಕುಮಾರಿ ಧನ್ಯವಾದವಿತ್ತರು.
ಸಂಘದ ಸ್ಥಾಪನೆಯ ಉದ್ದೇಶ ಹೈನುಗಾರಿಕೆಗೆ ಹೆಚ್ಚು ಪ್ರೋತ್ಸಾಹ ನೀಡುವುದು. ಆ ಮೂಲಕ ಗ್ರಾಮದ ಅಭಿವೃದ್ಧಿ. ಗ್ರಾಮಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಎಂಬುದನ್ನು ಮರೆಯಬಾರದು– ಕಲ್ಲಗ ಚಂದ್ರಶೇಖರ ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.