ರೋಗಿಗಳಿಲ್ಲದೆ ಜಂಬೋ ಕೋವಿಡ್ ಕೇರ್ ಸೆಂಟರ್‌ಗಳನ್ನು ಮುಚ್ಚಲು ಬಿಎಂಸಿ ನಿರ್ಧಾರ
Team Udayavani, Jun 20, 2021, 12:19 PM IST
ಮುಂಬಯಿ: ಕಡಿಮೆ ಕೊರೊನಾ ಸೋಂಕಿತರಿರುವ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ), ದಹಿಸರ್ ಮತ್ತು ಮುಲುಂಡ್‌ನಲ್ಲಿರುವ ಕೊರೊನಾ ಆಸ್ಪತ್ರೆಗಳನ್ನು ಇನ್ನೂ ಕೆಲವು ದಿನಗಳಲ್ಲಿ ಮುಚ್ಚಲು ಬಿಎಂಸಿ ನಿರ್ಧರಿಸಿದ್ದು, ಈ ಆಸ್ಪತ್ರೆಗಳ ಸಿಬಂದಿ ಸಂಖ್ಯೆಯನ್ನು ಕಡಿಮೆ ಮಾಡಲು ಮನಪಾ ಆದೇಶಿಸಿದೆ. ಒಂದೆಡೆ ರಾಜ್ಯದ ಕೊರೊನಾ ಕಾರ್ಯಪಡೆ ಮುಂದಿನ 4 ವಾರಗಳಲ್ಲಿ ಮೂರನೇ ಅಲೆ ಕಾಣಿಸಿಕೊಳ್ಳುವ ಕುರಿತು ಎಚ್ಚರಿಕೆ ನೀಡಿದ್ದು, ಆರಂಭಿಕ ದಿನಗಳಲ್ಲಿ ಮತ್ತೆ ವೈದ್ಯರು ಮತ್ತು ದಾದಿಯರ ಕೊರತೆ ಕಂಡು ಬರುವ ಸಾಧ್ಯತೆಯಿದೆ ಎನ್ನಲಾಗಿದೆ.
ಚಂಡಮಾರುತದ ಬಳಿಕ ಮತ್ತೆ ತೆರೆದಿಲ್ಲ
ಸಂಜೀವ್ ಜೈಸ್ವಾಲ್ ಅವರ ವರ್ಗಾವಣೆಯ ಬಳಿಕ ಮುಂಬಯಿಯಲ್ಲಿ ಆರು ದೊಡ್ಡ ಕೊರೊನಾ ಆಸ್ಪತ್ರೆಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೆಚ್ಚುವರಿ ಪುರಸಭೆ ಆಯುಕ್ತ ಸುರೇಶ್ ಕಾಕಾನಿಗೆ ವಹಿಸಲಾಗಿದೆ. ಅಧಿಕಾರ ವಹಿಸಿಕೊಂಡ ಅನಂತರ ಕಾಕನಿ ಅವರು ಮಂಗಳವಾರ ಸಭೆ ನಡೆಸಿ ಎಲ್ಲ ಪ್ರಮುಖ ಕೊರೊನಾ ಆಸ್ಪತ್ರೆಗಳನ್ನು ಪರಿಶೀಲಿಸಿದರು. ಚಂಡಮಾರುತದಿಂದಾಗಿ ಬಿಕೆಸಿ, ಮುಲುಂಡ್ ಮತ್ತು ದಹಿಸರ್ ಕೊರೊನಾ ಆಸ್ಪತ್ರೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಯಿತು. ಮಾನ್ಸೂನ್ ರಿಪೇರಿ ಕಾರ್ಯಗಳು ನಡೆಯುತ್ತಿವೆ ಎಂದು ಬಿಎಂಸಿ ಹೇಳಿದ ಬಳಿಕ ಆಸ್ಪತ್ರೆಗಳನ್ನು ವೈದ್ಯಕೀಯ ಸೇವೆಗಳಿಗಾಗಿ ಮತ್ತೆ ತೆರೆಯಲಾಗಿಲ್ಲ ಎಂದು ಈ ಸಂದರ್ಭ ತಿಳಿಸಿದರು.
ಕೊರೊನಾ ರೋಗಿಗಳಿಂದ ಮುಕ್ತ
ಪ್ರಸ್ತುತ ಗೋರೆಗಾಂನಲ್ಲಿರುವ ನೆಸ್ಕೊ ಮತ್ತು ಮರೋಲ್‌ನ ಸೆವೆನ್ ಹಿಲ್ಸ… ಆಸ್ಪತ್ರೆ ಯು ಕೊರೊನಾ ರೋಗಿಗಳಿಗೆ ಮುಕ್ತವಾ ಗಿದೆ. ನೆಸ್ಕೊ ಸುಮಾರು 3.5 ಸಾವಿರ ಹಾಸಿಗೆ ಗಳ ಸಾಮರ್ಥ್ಯವನ್ನು ಹೊಂದಿದ್ದು, ಸುಮಾರು 200 ರೋಗಿಗಳನ್ನು ಅಲ್ಲಿ ದಾಖಲಿಸ ಲಾಗಿದೆ. ರೋಗಿಗಳ ಸಂಖ್ಯೆ ಕಡಿಮೆಯಿರು ವಾಗ ಎಲ್ಲ ಕೊರೊನಾ ಆಸ್ಪತ್ರೆಗಳನ್ನು ಪ್ರಾರಂ ಭಿಸುವ ಬದಲು, ಬಿಕೆಸಿ, ಮುಲುಂಡ್, ದಹಿ ಸಾರ್ ಆಸ್ಪತ್ರೆಗಳು ಈಗಿರುವ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಶೇ. 50-60ಕ್ಕೆ ತಲುಪಿದ ಬಳಿಕ ಮತ್ತೆ ತೆರೆಯಲು ನಿರ್ಧರಿಸಿದೆ.
ನಿರ್ವಹಣಾ ಸೇವೆಗಳು ಮುಂದುವರಿಕೆ
ಈ ಆಸ್ಪತ್ರೆಗಳಲ್ಲಿ ಆಮ್ಲಜನಕ, ನೈರ್ಮಲ್ಯ, ಅಗ್ನಿಶಾಮಕ ಇತ್ಯಾದಿ ನಿರ್ವಹಣಾ ಸೇವೆಗಳು ಮುಂದುವರಿಯಲಿವೆ. ಇಲ್ಲಿ ಅಗತ್ಯ ಸಂಖ್ಯೆಯ ಸಿಬಂದಿ ಇಟ್ಟುಕೊಂಳ್ಳಲು ಸೂಚಿಸಲಾಗಿದೆ. ನೌಕರರಿಗೆ ಒಂದು ಅಥವಾ ಎರಡು ತಿಂಗಳು ವಿಶ್ರಾಂತಿ ನೀಡಿ ಮತ್ತೆ ಉದ್ಯೋಗ ನೀಡುವಂತೆ ಬಿಎಂಸಿ ಹೆಚ್ಚುವರಿ ಆಯುಕ್ತ ಸುರೇಶ್ ಕಾಕಾನಿ ಸೂಚಿಸಿದ್ದಾರೆ.
4 ವಾರಗಳಲ್ಲಿ 3ನೇ ಅಲೆ ಸಾಧ್ಯತೆ
ಕೊರೊನಾ ಆಕ್ಷನ್ ಫೋರ್ಸ್ ಮುಖ್ಯಮಂತ್ರಿಯವರೊಂದಿಗಿನ ಸಭೆಯಲ್ಲಿ ಮುಂದಿನ ಎರಡು ನಾಲ್ಕು ವಾರಗಳಲ್ಲಿ ಮೂರನೇ ಅಲೆ ಕಾಣಿಸುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಇದರಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ. ಈ ಹಿನ್ನೆಲೆ ದೊಡ್ಡ ಕೊರೊನಾ ಆಸ್ಪತ್ರೆಗಳ ಮಾನವಶಕ್ತಿಯನ್ನು ಕಡಿಮೆ ಮಾಡುವ ಪುರಸಭೆಯ ನಿರ್ಧಾರ ಎಷ್ಟು ಸೂಕ್ತವಾಗಿದೆ ಎಂಬ ಚರ್ಚೆ ನಡೆಯುತ್ತಿದೆ.
ಮಾನವಶಕ್ತಿ ಕಡಿತ ಸೂಕ್ತವಲ್ಲ
ಮೊದಲ ಅಲೆ ಬಳಿಕ ಪುರಸಭೆಯು ದೊಡ್ಡ ಕೊರೊನಾ ಆಸ್ಪತ್ರೆಗಳ ಮಾನವ ಶಕ್ತಿಯನ್ನು ಶೇ. 50ಕ್ಕಿಂತ ಕಡಿಮೆಗೊಳಿಸಿತು. ಗುತ್ತಿಗೆ ಅವಧಿ ಮುಗಿದ ವೈದ್ಯರು ಮತ್ತು ದಾದಿಯರ ಷರತ್ತುಗಳನ್ನು ಮತ್ತೆ ವಿಸ್ತರಿಸಲಾಗಿಲ್ಲ. 2ನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದಾಗ ಆಸ್ಪತ್ರೆಗಳಲ್ಲಿ ವೈದ್ಯರು ಸಿಬಂದಿ ಕೊರತೆ ಕಾಣಿಸಿಕೊಂಡಿದೆ.
60 ರೋಗಿಗಳಿಗೆ ಓರ್ವ ನರ್ಸ್
ಒಬ್ಬ ನರ್ಸ್ 60 ರೋಗಿಗಳಿಗೆ ನೋಡಿ ಗೊಳ್ಳಲು ತಿಳಿಸಲಾಗಿದ್ದು, ಅಲ್ಪಾವಧಿಗೆ ಮಾನವಶಕ್ತಿಯನ್ನು ಕಡಿಮೆ ಮಾಡುವ ನಿರ್ಧಾರ ಸರಿಯಲ್ಲ, ಏಕೆಂದರೆ ಮತ್ತೆ ಮಾನವ ಶಕ್ತಿ ಪಡೆಯುವುದು ಕಷ್ಟಕರವಾಗುತ್ತಿದೆ, ವಿಶೇಷವಾಗಿ ಅನುಭವಿ ವೈದ್ಯರು ಮತ್ತು ದಾದಿಯರನ್ನು ಮರಳಿ ಪಡೆಯುವುದು ಕಷ್ಟ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
ಬಿಕೆಸಿ ಕೊರೊನಾ ಆಸ್ಪತ್ರೆಯಲ್ಲಿ 2,328
ಹಾಸಿಗೆಗಳ ಸಾಮರ್ಥ್ಯವಿದೆ. ಇದು 896 ಆಮ್ಲ ಜನಕ ಹಾಸಿಗೆಗಳು ಮತ್ತು 12 ಡಯಾಲಿಸಿಸ್ ಘಟಕಗಳನ್ನು ಹೊಂದಿದೆ. ಆಸ್ಪತ್ರೆಯಲ್ಲಿ 395 ವೈದ್ಯರು, 299 ದಾದಿಯರು ಮತ್ತು 305 ವಾರ್ಡ್‌ಬಾಯ್‌ಗಳು ಸೇರಿದಂತೆ 1,399 ಉದ್ಯೋಗಿಗಳಿದ್ದಾರೆ. ಮುಲುಂಡ್ ಆಸ್ಪತ್ರೆಯಲ್ಲಿ 1,708 ಹಾಸಿಗೆಗಳಿವೆ. ಇದು 969 ಆಮ್ಲಜನಕ ಹಾಸಿಗೆಗಳನ್ನು ಹೊಂದಿದೆ. ಆಸ್ಪತ್ರೆಯಲ್ಲಿ 103 ವೈದ್ಯರು, 105 ದಾದಿಯರು ಮತ್ತು 90 ವಾರ್ಡ್‌ಬಾಯ್‌ಗಳು ಸೇರಿದಂತೆ 436 ಸಿಬಂದಿ ಇದ್ದಾರೆ. ದಹಿಸರ್ ಆಸ್ಪತ್ರೆಯಲ್ಲಿ 672 ಆಮ್ಲಜನಕ ಹಾಸಿಗೆಗಳೊಂದಿಗೆ 1,061 ಹಾಸಿಗೆಗಳಿವೆ. ಇದರಲ್ಲಿ 520 ಉದ್ಯೋಗಿಗಳು, 100 ವೈದ್ಯರು, 150 ದಾದಿಯರು ಮತ್ತು 60 ವಾರ್ಡ್‌ಬಾಯ್‌ಗಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.