ರೇಡಿಯೇಶನ್ ಥೆರಪಿ :ನೀವು ಹೊಂದಿರಬೇಕಾದ ಸಾಮಾನ್ಯ ಜ್ಞಾನ
Team Udayavani, Jun 20, 2021, 1:28 PM IST
ಕ್ಯಾನ್ಸರ್ ಗುಣಪಡಿಸುವಲ್ಲಿ ರೇಡಿಯೇಶನ್ ಥೆರಪಿ ಅಥವಾ ವಿಕಿರಣ ಚಿಕಿತ್ಸೆಯು ಒಂದು ಪ್ರಾಮುಖ್ಯವಾದ ಚಿಕಿತ್ಸಾ ವಿಧಾನವಾಗಿದೆ. ಜನಸಾಮಾನ್ಯರು ಇದನ್ನು “ಕರೆಂಟ್ ಟ್ರೀಟ್‌ಮೆಂಟ್’ ಅಥವಾ “ಶಾಕ್ ಟ್ರೀಟ್‌ಮೆಂಟ್’ ಎಂದು ಕರೆಯುವುದುಂಟು. ಆದರೆ ರೇಡಿಯೇಶನ್ ಚಿಕಿತ್ಸೆಯಲ್ಲಿ ಕ್ಯಾನ್ಸರ್‌ಪೀಡಿತ ಅಂಗಾಂಶಗಳನ್ನು ನಾಶ ಮಾಡಲು ಅತ್ಯುಚ್ಚ ಶಕ್ತಿಯ ಎಕ್ಸ್‌ರೇ ಅಥವಾ ಇತರ ಕಿರಣಗಳನ್ನು ಉಪಯೋಗಿಸಲಾಗುತ್ತದೆ. ಅಂದರೆ ಆರ್‌ಟಿ (ರೇಡಿಯೇಶನ್ ಥೆರಪಿ)ಯಲ್ಲಿ ಅತೀ ಹೆಚ್ಚು ಶಕ್ತಿ (ಮೆಗಾ ವೋಲ್ಟೆàಜ್ ರೇಂಜ್)ಯ ಎಕ್ಸ್‌ರೇಗಳನ್ನು ಉಪಯೋಗಿಸಲಾಗುತ್ತದೆ. ಆದರೆ ಎಕ್ಸ್‌ರೇ ಮತ್ತು ಸಿಟಿ ಸ್ಕ್ಯಾನ್ ಇಮೇಂಜಿಂಗ್‌ನಲ್ಲಿ ಕಡಿಮೆ ಶಕ್ತಿ (ಕಿಲೊ ವೊಲ್ಟೆàಜ್ ರೇಂಜ್)ಯ ಎಕ್ಸ್‌ರೇಗಳು ಬಳಕೆಯಾಗುತ್ತವೆ. ಈ ವಿಕಿರಣಗಳು ಬರಿಗಣ್ಣಿಗೆ ಕಾಣಿಸುವುದಿಲ್ಲ.
ಕ್ಯಾನ್ಸರ್ ಉಂಟುಮಾಡುವ ಎಕ್ಸ್‌ರೇಗಳನ್ನೇ ಕ್ಯಾನ್ಸರನ್ನು ಗುಣಪಡಿಸುವುದಕ್ಕೂ ಬಳಸಲಾಗುತ್ತವೆ ಎನ್ನುವುದು ಅಚ್ಚರಿಯ ವಿಚಾರವಲ್ಲವೆ! ಇದರ ಹಿಂದಿರುವ ಮೂಲತಣ್ತೀ ಎಂದರೆ, ಎಕ್ಸ್‌ರೇಗಳು ಕ್ಯಾನ್ಸರ್‌ಪೀಡಿತ ಅಥವಾ ಅಲ್ಲದ ಎಲ್ಲ ಸಜೀವ ಅಂಗಾಂಶಗಳಿಗೂ ಅಪಾಯಕಾರಿಯಾಗಿವೆ. ರೇಡಿಯೋಥೆರಪಿಯಲ್ಲಿ ಕ್ಯಾನ್ಸರ್‌ಪೀಡಿತ ಅಂಗಾಂಶಗಳಿಗೆ ಮಾತ್ರ ಅತ್ಯುಚ್ಚ ಡೋಸ್‌ನ ಎಕ್ಸ್‌ರೇಗಳನ್ನು ಬೀರಿ, ಸುತ್ತಮುತ್ತಲಿನ ಸಾಮಾನ್ಯ ಅಂಗಾಂಶಗಳಿರುವ ಪ್ರದೇಶಗಳಿಗೆ ಅತೀ ಕಡಿಮೆ ಹಾನಿಯಾಗುವಂತೆ ಮಾಡಲಾಗುತ್ತದೆ.
ಕ್ಯಾನ್ಸರ್‌ಗೆ ಚಿಕಿತ್ಸೆಯಾಗಿ ರೇಡಿಯೇಶನ್ ಚಿಕಿತ್ಸೆಯನ್ನು ಉಪಯೋಗಿಸುವಲ್ಲಿ ವಿಶೇಷ ತರಬೇತಿ- ಪರಿಣತಿಯನ್ನು ಪಡೆದಿರುವ ವೈದ್ಯರನ್ನು ರೇಡಿಯೇಶನ್ ಓಂಕಾಲಜಿಸ್ಟ್ ಎಂದು ಕರೆಯಲಾಗುತ್ತದೆ. ವೈದ್ಯರ ಶಿಫಾರಸನ್ನು ಆಧರಿಸಿ, ರೇಡಿಯೇಶನ್ ಥೆರಪಿಯನ್ನು ಮಾತ್ರವೇ ಅಥವಾ ಕೆಲವೊಮ್ಮೆ ಶಸ್ತ್ರಚಿಕಿತ್ಸೆಯ ಬಳಿಕ ಅಥವಾ ಕಿಮೊಥೆರಪಿಯಂತಹ ಔಷಧ ಚಿಕಿತ್ಸೆಯ ಜತೆಗೆ ಒದಗಿಸಲಾಗುತ್ತದೆ. ಎಲ್ಲ ಕ್ಯಾನ್ಸರ್ ಕೋಶಗಳನ್ನು ನಾಶಪಡಿಸಲು ಅಸಾಧ್ಯವಾದಾಗ ವೈದ್ಯರು ಕ್ಯಾನ್ಸರ್ ಗಡ್ಡೆಯನ್ನು ನಾಶಪಡಿಸಿ ರೋಗ ಲಕ್ಷಣಗಳನ್ನು ಉಪಶಮನಗೊಳಿಸಲು ರೇಡಿಯೇಶನ್ ಚಿಕಿತ್ಸೆಯನ್ನು ಉಪಯೋಗಿಸಬಹುದಾಗಿದೆ – ಇದನ್ನು ಉಪಶಮನಕಾರಿ ರೇಡಿಯೇಶನ್ ಚಿಕಿತ್ಸೆ ಎಂದು ಕರೆಯಲಾಗುತ್ತದೆ.
ರೇಡಿಯೇಶನ್ ಚಿಕಿತ್ಸೆಯನ್ನು ಎರಡು ವಿಧಾನಗಳಲ್ಲಿ ನೀಡಬಹುದಾಗಿದೆ – ಎಕ್ಸ್‌ಟರ್ನಲ್ ಬೀಮ್ ರೇಡಿಯೇಶನ್ ಚಿಕಿತ್ಸೆ ಮತ್ತು ಬ್ರ್ಯಾಕಿಥೆರಪಿ. ಎಕ್ಸ್‌ಟರ್ನಲ್ ಬೀಮ್ ರೇಡಿಯೇಶನ್ ಚಿಕಿತ್ಸೆ (ಇಬಿಆರ್‌ಟಿ)ಯು ಸಾಮಾನ್ಯ ವಿಧಾನವಾಗಿದ್ದು, ಇಲ್ಲಿ ದೇಹದಿಂದ ತುಸು ದೂರ (ಸಾಮಾನ್ಯವಾಗಿ ಸುಮಾರು 100 ಸೆಂ.ಮೀ.)ದಲ್ಲಿ ಇರಿಸಲಾದ ರೇಡಿಯೇಶನ್ ಮೂಲ ಹೊಂದಿರುವ ಯಂತ್ರದಿಂದ ರೇಡಿಯೇಶನ್ ನೀಡಲಾಗುತ್ತದೆ. ಈ ಯಂತ್ರವನ್ನು ಲೀನಿಯರ್ ಆ್ಯಕ್ಸಲರೇಟರ್ (ಲಿನ್ಯಾಕ್) ಎಂದು ಕರೆಯಲಾಗುತ್ತದೆ. ಒಂದು ರೇಡಿಯೇಶನ್ ಚಿಕಿತ್ಸೆಯ ರೆಜಿಮೆನ್ ಅಥವಾ ಶೆಡ್ನೂಲ್ ಸಾಮಾನ್ಯವಾಗಿ 1 ದಿನದಿಂದ ತೊಡಗಿ 8 ವಾರಗಳ ಅವಧಿಯಲ್ಲಿ ನೀಡಲಾಗುವ ನಿರ್ದಿಷ್ಟ ಸಂಖ್ಯೆಯ ರೇಡಿಯೇಶನ್ ಚಿಕಿತ್ಸೆಗಳನ್ನು ಒಳಗೊಂಡಿರುತ್ತದೆ.
ಸಿಟಿ ಸ್ಟಿಮ್ಯುಲೇಶನ್
ಈಗಾಗಲೇ ತಯಾರಿಸಿರುವ ಮಾಸ್ಕ್ ಧರಿಸಿದ್ದಂತೆ ಚಿಕಿತ್ಸೆ ನೀಡಬೇಕಾಗಿರುವ ದೇಹ ಭಾಗದ ಚಿತ್ರಣಗಳನ್ನು ಸಿಟಿ ಸ್ಕ್ಯಾನರ್ ಮೂಲಕ ಪಡೆಯಲಾಗುತ್ತದೆ. ಈ ಚಿತ್ರಣಗಳನ್ನು ವಿಶೇಷ ಸಾಫ್ಟ್ವೇರ್ ಆಧರಿತ ಕಂಪ್ಯೂಟರ್ ವ್ಯವಸ್ಥೆಗೆ ವರ್ಗಾಯಿಸಲಾಗುತ್ತದೆ. ಅದರ ಮೂಲಕ ಓಂಕಾಲಜಿಸ್ಟ್ ಸಿಟಿ ಸ್ಕ್ಯಾನ್ ಚಿತ್ರಣಗಳ ಮೇಲೆ ಕ್ಯಾನ್ಸರ್ ಗಡ್ಡೆ ಮತ್ತು ಅದು ಹರಡಿರುವ ಪ್ರದೇಶ ಹಾಗೂ ಗಡ್ಡೆಯ ಬಳಿ ಇರುವ ಇತರ ಅಂಗಾಂಗಗಳನ್ನು ಚಿತ್ರಿಸುತ್ತಾರೆ.
ಇಬಿಆರ್‌ಟಿಯ ಕಾರ್ಯವಿಧಾನ
ಇಮ್ಮೊಬಿಲೈಸೇಶನ್: ರೇಡಿಯೇಶನ್ ಚಿಕಿತ್ಸೆಯನ್ನು ನೀಡುವ ಸಂದರ್ಭದಲ್ಲಿ ರೋಗಿಯು ಹೊರಳಿದಾಗ ಅಥವಾ ಚಲಿಸಿದಾಗ ರೋಗಪೀಡಿತ ಭಾಗವನ್ನು ಬಿಟ್ಟು ಇತರ ಭಾಗಗಳು ವಿಕಿರಣಗಳಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸುವುದಕ್ಕಾಗಿ ಚಿಕಿತ್ಸೆಗೆ ಒಳಗಾಗಬೇಕಾದ ಭಾಗವನ್ನು ನಿಶ್ಚಲಗೊಳಿಸಲಾಗುತ್ತದೆ. ಸಾಮಾನ್ಯವಾಗಿ ಪ್ಲಾಸ್ಟಿಕ್ ಮೆಶ್ ಮೌಲ್ಡ್‌ನಿಂದ ಚಿಕಿತ್ಸೆಗೆ ಒಳಗಾಗಬೇಕಾದ ಭಾಗದ ಮೌಲ್ಡ್ ಅಥವಾ ಮಾಸ್ಕ್ ತಯಾರಿಸಲಾಗುತ್ತದೆ. ಹೀಗಾಗಿ ಕೆಳಗಿನ ಚಿತ್ರದಲ್ಲಿ ತೋರಿಸಿದಂತೆ ಸಿದ್ಧ ಮಾಸ್ಕ್ನ್ನು ರೋಗಿಯ ದೇಹದ ಆಕಾರಕ್ಕೆ ತಕ್ಕಂತೆ ಹೊಂದಿಸಿಕೊಳ್ಳಲಾಗುತ್ತದೆ. ರೇಡಿಯೋಥೆರಪಿ ನೀಡುವ ಸಂದರ್ಭದಲ್ಲಿ ಚಿಕಿತ್ಸೆಯು ಸಂಪೂರ್ಣವಾಗುವಲ್ಲಿಯ ವರೆಗೆ ಈ ಮಾಸ್ಕನ್ನು ರೋಗಿಯು ಧರಿಸಿರುವಂತೆ ಮಾಡಲಾಗುತ್ತದೆ.
ಚಿಕಿತ್ಸೆಯ ಯೋಜನೆ
ಕ್ಯಾನ್ಸರ್ ಗಡ್ಡೆ ಮತ್ತು ಇತರ ಅಂಗಾಂಗಗಳ ಬಗೆಗಿನ ಈ ಮಾಹಿತಿಗಳ ಆಧಾರದಲ್ಲಿ ಈಗಾಗಲೇ ಪಡೆಯಲಾದ ಸಿಟಿ ಚಿತ್ರಣಗಳ ಮೇಲೆ ವಿಶೇಷ ಸಾಫ್ಟ್ವೇರ್ ಆಧರಿತ ಕಂಪ್ಯೂಟರ್‌ನಲ್ಲಿ ಮೆಡಿಕಲ್ ಫಿಸಿಸಿಸ್ಟ್ ಚಿಕಿತ್ಸೆಯ ಯೋಜನೆಯನ್ನು
ರೂಪಿಸುತ್ತಾರೆ. ಯೋಜನೆ ರೂಪಿಸುವ ಸಂದರ್ಭದಲ್ಲಿ, ಕ್ಯಾನ್ಸರ್ ಗಡ್ಡೆಯು ಅತ್ಯಧಿಕ ರೇಡಿಯೇಶನ್ ಪಡೆಯುವಂತೆಯೂ, ಅದರ ಸುತ್ತಲಿನ ಸಹಜ ಅಂಗಾಂಗಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿ ರೇಡಿಯೇಶನ್‌ಗೆ ಒಳಗಾಗುವಂತೆಯೂ ಯೋಜಿಸಲು ಚಿಕಿತ್ಸೆ ನೀಡುವ ವೈದ್ಯರ ತಂಡ ಪ್ರಯತ್ನಿಸುತ್ತದೆ. ಯೋಜನೆಯು ಸಿದ್ಧವಾದ ಬಳಿಕ ಅದನ್ನು ಓಂಕಾಲಜಿಸ್ಟ್ ಪರಿಶೀಲಿಸುತ್ತಾರೆ, ಆ ಬಳಿಕ ರೋಗಿಯನ್ನು ಮೊದಲ ದಿನದ ಚಿಕಿತ್ಸೆಗಾಗಿ ಕರೆಯಲಾಗುತ್ತದೆ.
ಚಿಕಿತ್ಸೆ ನೀಡಿಕೆ
ಚಿಕಿತ್ಸೆಯ ಮೊದಲ ದಿನ ರೋಗಿಯನ್ನು ಲಿನ್ಯಾಕ್ ಮಶಿನ್ ಇರುವ ಕೊಠಡಿಯಲ್ಲಿ ಸಿಟಿ ಸ್ಕ್ಯಾನ್ ಚಿತ್ರಣಗಳನ್ನು ಪಡೆಯುವ ಸಂದರ್ಭದಲ್ಲಿ ಇರಿಸಿದ ಭಂಗಿಯಲ್ಲಿಯೇ ಮಾಸ್ಕ್ ಹಾಕಿಸಿ ಮಲಗಿಸಲಾಗುತ್ತದೆ. ಬಳಿಕ ಚಿಕಿತ್ಸೆಗೆ ಒಳಗಾಗಬೇಕಾದ ಭಾಗವನ್ನು ಗುರುತಿಸಲು ಚಿಕಿತ್ಸೆ ಪಡೆಯುವ ಭಂಗಿಯನ್ನು ಪುನರವಲೋಕಿಸಲಾಗುತ್ತದೆ. ಚಿಕಿತ್ಸೆಯ ಸಂಪೂರ್ಣ ಪ್ರಕ್ರಿಯೆಯ ಸಂದರ್ಭದಲ್ಲಿ ಯಥಾವತ್ ಭಂಗಿಯನ್ನು ಕಾಯ್ದುಕೊಳ್ಳುವುದಕ್ಕಾಗಿ ಮಾಸ್ಕ್ ಮೇಲೆ ಕೆಲವು ಗುರುತುಗಳನ್ನು ಮಾಡಲಾಗುತ್ತದೆ. ಚಿಕಿತ್ಸೆ ನೀಡುವ ಯಂತ್ರವಿರುವ ಕೊಠಡಿಯಿಂದ ಹೊರಗಿರುವ ಚಿಕಿತ್ಸಾ ನಿಯಂತ್ರಣ ಕೊಠಡಿಯಲ್ಲಿ ಕುಳಿತಿರುವ ರೇಡಿಯೇಶನ್ ತಂತ್ರಜ್ಞರು ಕಂಪ್ಯೂಟರ್ ನಿಯಂತ್ರಿತ ಲಿನ್ಯಾಕ್ ಯಂತ್ರವನ್ನು ನಿಯಂತ್ರಿಸುತ್ತಾರೆ ಮತ್ತು ಲಿನ್ಯಾಕ್ ಯಂತ್ರವು ರೋಗಿಯ ದೇಹದ ಸುತ್ತ ವರ್ತುಲಾಕಾರವಾಗಿ ತಿರುಗುತ್ತ ರೇಡಿಯೇಶನ್ ಬೀರುವಂತೆ ಮಾಡುತ್ತಾರೆ. ಸಾಮಾನ್ಯವಾಗಿ ಲಿನ್ಯಾಕ್ ಯಂತ್ರವಿರುವ ಕೊಠಡಿಯಲ್ಲಿ ಚಿಕಿತ್ಸೆ ಪಡೆಯುವ ರೋಗಿ ಮಾತ್ರ ಇರುತ್ತಾರಾದರೂ ನಿಯಂತ್ರಣ ಕೊಠಡಿಯಿಂದ ನಿಗಾ ಇರಿಸಲಾಗುತ್ತದೆ. ಚಿಕಿತ್ಸೆಯ ಅವಧಿಯು 5ರಿಂದ 10 ನಿಮಿಷಗಳಿಗಿಂತ ಹೆಚ್ಚು ಇರುವುದಿಲ್ಲ. ಹೀಗೆಯೇ ಇನ್ನುಳಿದ ಚಿಕಿತ್ಸಾ ಅವಧಿಗಳಲ್ಲಿಯೂ ಚಿಕಿತ್ಸೆಯನ್ನು ಒದಗಿಸಲಾಗುತ್ತದೆ.
ಒಂದು ಶತಮಾನಕ್ಕಿಂತಲೂ ಅಧಿಕ ಸಮಯದಿಂದ ರೇಡಿಯೇಶನ್ ಚಿಕಿತ್ಸೆಯನ್ನು ವೈದ್ಯರು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿ ನೀಡುತ್ತ ಬಂದಿದ್ದಾರೆ. ಕೆಲವು ಅಡ್ಡಪರಿಣಾಮಗಳು ಇರುವುದು ನಿಜವಾದರೂ ರೇಡಿಯೇಶನ್ ಚಿಕಿತ್ಸೆಯು ಇರುವ ಕ್ಯಾನ್ಸರನ್ನು ನಾಶಪಡಿಸುತ್ತದೆ. ರೇಡಿಯೇಶನ್ ಚಿಕಿತ್ಸೆಯು ಸ್ಥಳೀಯ ಚಿಕಿತ್ಸೆಯಾಗಿರುವುದರಿಂದ ಅಡ್ಡ ಪರಿಣಾಮಗಳು ಕೂಡ ಚಿಕಿತ್ಸೆಗೊಳಗಾದ ಭಾಗದಲ್ಲಿಯೇ ಕಂಡುಬರುತ್ತವೆ. ಚಿಕಿತ್ಸೆಗೆ ಒಳಗಾದ ಅಂಗದ ಆಧಾರದಲ್ಲಿ ಅಡ್ಡ ಪರಿಣಾಮಗಳು ರೋಗಿಯಿಂದ ರೋಗಿಗೆ ಭಿನ್ನವಾಗಿರುತ್ತವೆ. ರೇಡಿಯೇಶನ್‌ಗೆ ಒಳಗಾದ ಭಾಗದಲ್ಲಿ ಚರ್ಮ ಕಪ್ಪಗಾಗುವುದು, ಕೂದಲು ಉದುರುವುದು ಇತ್ಯಾದಿಗಳು ಸಾಮಾನ್ಯವಾಗಿ ಕಂಡುಬರುವ ಅಡ್ಡ ಪರಿಣಾಮಗಳಾಗಿವೆ. ಆದರೆ ಒಂದು ಚಿಕಿತ್ಸೆಯ ವಿಧಾನವಾಗಿ ನೋಡುವಾಗ ರೇಡಿಯೇಶನ್ ಚಿಕಿತ್ಸೆಯಿಂದ ಪ್ರಯೋಜನಗಳು ಅದರ ಅಡ್ಡಪರಿಣಾಮಗಳಿಗಿಂದ ಹೆಚ್ಚು ಗಣನೀಯವಾಗಿ ಕಂಡುಬರುತ್ತವೆ.
ಶಾಂಭವಿ
ಅಸಿಸ್ಟೆಂಟ್ ಪ್ರೊಫೆಸರ್, ಮೆಡಿಕಲ್ ರೇಡಿಯೇಶನ್ ಫಿಸಿಕ್ಸ್ ವಿಭಾಗ,
ಎಂಸಿಎಚ್‌ಪಿ, ಮಾಹೆ, ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Mangaluru: ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.