ಕಪ್ಪು ರಂಧ್ರಗಳ ಬಗೆಗಿನ ವಿಜ್ಞಾನಿ ಸ್ಟೀಫನ್ ಹಾಕಿಂಗ್ಸ್ ಪ್ರಮೇಯಕ್ಕೆ ವಿಜ್ಞಾನಿಗಳ ಮೊಹರು
1971ರಲ್ಲಿ ಪ್ರಸ್ತಾಪಿಸಿದ್ದ ಪ್ರಮೇಯ ಅಧ್ಯಯನ ಮಾಡಿ ಸೈ ಎಂದ ಭೌತಶಾಸ್ತ್ರಜ್ಞರು
Team Udayavani, Jun 20, 2021, 9:25 PM IST
ವಾಷಿಂಗ್ಟನ್: ಯುನೈಟೆಡ್ ಕಿಂಗ್‌ಡಮ್‌ನ ಖ್ಯಾತ ಖಗೋಳ ವಿಜ್ಞಾನಿ ದಿವಂಗತ ಸ್ಟೀಫನ್ ಹಾಕಿಂಗ್ಸ್ ಪ್ರಸ್ತಾಪಿಸಿದ್ದ ಕಪ್ಪು ರಂಧ್ರಗಳ (ಬ್ಲಾಕ್ ಹೋಲ್) ಸಿದ್ಧಾಂತಗಳಲ್ಲಿ ಒಂದು ಸಿದ್ಧಾಂತ ಈಗ ನಾನಾ ಪ್ರಯೋಗಗಳ ಮೂಲಕ ಸಾಬೀತಾಗಿದೆ.
ಅಂತರಿಕ್ಷದಲ್ಲಿರುವ ಕಪ್ಪು ರಂಧ್ರಗಳ ಅಗಲವು ಸಮಯ ಕಳೆದಂತೆ ಕಡಿಮೆಯಾಗುವುದಿಲ್ಲ ಎಂಬ ಸಿದ್ಧಾಂತವೊಂದನ್ನು 1971ರಲ್ಲೇ ಹಾಕಿಂಗ್ಸ್ ಮಂಡಿಸಿದ್ದರು. “ಕಪ್ಪು ರಂಧ್ರದ ಆಕಾರ ಹಾಗೂ ಅಗಲ ಎಂದಿಗೂ ಕಡಿಮೆಯಾಗದು. ಹಾಗೆಯೇ, ಅವುಗಳ ಒಟ್ಟಾರೆ ಸಾಂದ್ರತೆ ಕೂಡ ಎಂದಿಗೂ ಇಳಿಕೆಯಾಗದು. ಈ ಎರಡೂ ಕಾರಣಗಳಿಂದಾಗಿ, ಕಪ್ಪು ಕುಳಿಗಳ ಶಕ್ತಿ ಎಂದಿಗೂ ಕುಂದದು’ ಎಂದು ಅವರು ತಿಳಿಸಿದ್ದರು. ಅವರ ಈ ಸಿದ್ಧಾಂತ, ಥರ್ಮೋ ಡೈನಮಿಕ್ಸ್‌ನ 2ನೇ ನಿಯಮವನ್ನು ಹೋಲುವುದರಿಂದ ಹಲವಾರು ಭೌತಶಾಸ್ತ್ರಜ್ಞರ ಗಮನ ಸೆಳೆದಿತ್ತು.
ದಶಕಗಳವರೆಗೆ ನಡೆಸಲಾಗಿರುವ ನಿರಂತರ ಅಧ್ಯಯನದ ಫಲವಾಗಿ, “ಕಪ್ಪು ಕುಳಿಗಳ ಬಗ್ಗೆ ಹಾಕಿಂಗ್ಸ್ ಹೇಳಿರುವುದು ಸತ್ಯ. ಕಪ್ಪು ರಂಧ್ರಗಳು ಅಸ್ತಿತ್ವದಲ್ಲಿ ಇರುವುದರಿಂದಲೇ ಇಡೀ ಅಂತರಿಕ್ಷವು ಒಂದು ನಿರ್ದಿಷ್ಟತೆಯಲ್ಲಿ ಸಾಗುತ್ತಿದೆ ಎಂಬುದು ತಿಳಿದುಬಂದಿದೆ’ ಎಂದು ವಿಜ್ಞಾನ ಲೋಕ ಹೇಳಿದೆ.
ಇದನ್ನೂ ಓದಿ :ಮೂಗಿನಲ್ಲೇ ಟೈಪ್ ಮಾಡಿ ದಾಖಲೆ! ಬರೋಬ್ಬರಿ 9 ಗಿನ್ನೆಸ್ ದಾಖಲೆಗಳ ಸರದಾರ ವಿನೋದ್ ಕುಮಾರ್
ಏನಿದು ಕಪ್ಪು ರಂಧ್ರ?
ಅಂತರಿಕ್ಷದ ಕಪ್ಪು ರಂಧ್ರಗಳು ನದಿಗಳಲ್ಲಿರುವ ಸುಳಿಗಳಿದ್ದಂತೆ. ಇವುಗಳ ಬಳಿಗೆ ಸಾಗುವ ನಕ್ಷತ್ರಗಳು, ಧೂಮಕೇತುಗಳು… ಅಷ್ಟೇ ಏಕೆ ಇಡೀ ಗ್ರಹಗಳನ್ನೇ ಇವು ನುಂಗಿಬಿಡುತ್ತವೆ. ಈ ಕಪ್ಪು ರಂಧ್ರಗಳೊಳಗೆ ಸೆಳೆಯಲ್ಪಟ್ಟು ನಾಶವಾಗುವ ನಕ್ಷತ್ರ, ಧೂಮಕೇತು ಅಥವಾ ಗ್ರಹಗಳು ಎಲ್ಲಿ ಹೋಗುತ್ತವೆ ಎಂಬುದಕ್ಕೆ ಈವರೆಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಇಂಥ ಕಪ್ಪು ರಂಧ್ರಗಳು ಅಂತರಿಕ್ಷದಲ್ಲಿ ಕಣ್ಣಿಗೆ, ಯಾವುದೇ ಉಪಗ್ರಹದ ಪರಿವೀಕ್ಷಣೆಗೆ ಅಥವಾ ವಿದ್ಯುದಯಸ್ಕಾಂತ ವಿಕಿರಣಗಳಿಗೂ ಕಾಣದಂತೆ, ಪತ್ತೆಯಾಗದಂತೆ ತಿರುಗುತ್ತಿರುತ್ತವೆ. ಇವುಗಳ ಅಧ್ಯಯನಕ್ಕಾಗಿ ಸ್ಟೀಫನ್ ಹಾಕಿನ್ಸ್ ತಮ್ಮಿಡೀ ಜೀವನವನ್ನೇ ಮುಡುಪಾಗಿಟ್ಟಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.