ಐಸಿಸಿ ವಿಶ್ವಕಪ್ ಟೆಸ್ಟ್ ಫೈನಲ್ : ಜಾಮೀಸನ್ ಜಬರ್ದಸ್ತ್ ದಾಳಿ; ಭಾರತ 217ಕ್ಕೆ ಆಲೌಟ್
Team Udayavani, Jun 20, 2021, 11:05 PM IST
ಸೌತಾಂಪ್ಟನ್ : ವೇಗಿ ಕೈಲ್ ಜಾಮೀಸನ್ ಅವರ ಜಬರ್ದಸ್ತ್ ಬೌಲಿಂಗ್ ದಾಳಿಗೆ ಪರದಾಡಿದ ಭಾರತ ಐಸಿಸಿ ವಿಶ್ವಕಪ್ ಟೆಸ್ಟ್ ಫೈನಲ್‌ನಲ್ಲಿ 217 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಕುಸಿದಿದೆ. ನ್ಯೂಜಿಲ್ಯಾಂಡ್ ಕೂಡ ಎಚ್ಚರಿಕೆಯ ಹಾಗೂ ನಿಧಾನ ಗತಿಯ ಬ್ಯಾಟಿಂಗ್ ನಡೆಸಿದ್ದು, ಮೂರನೇ ದಿನದಾಟದ ಚಹಾ ವಿರಾಮದ ವೇಳೆ ವಿಕೆಟ್ ನಷ್ಟವಿಲ್ಲದೆ 36 ರನ್ ಮಾಡಿದೆ.
ಮೊದಲೆರಡು ದಿನ ಮಳೆ ಹಾಗೂ ಬೆಳಕಿನ ಅಭಾವದಿಂದ ಅಡಚಣೆಗೊಳಗಾಗಿದ್ದ ಈ ಪಂದ್ಯಕ್ಕೆ ಮೂರನೇ ದಿನ ಯಾವುದೇ ಅಡ್ಡಿ ಯಾಗಲಿಲ್ಲ. ಮೊದಲೆರಡು ಅವಧಿಯ ಆಟ ಯಾವುದೇ ವಿಘ್ನವಿಲ್ಲದೆ ಸಾಗಿತು.
ಭಾರತ 3ಕ್ಕೆ 146 ರನ್ ಗಳಿಸಿದಲ್ಲಿಂದ ದಿನದಾಟ ಮುಂದುವರಿಸಿತ್ತು. ಆದರೆ ಕಿವೀಸ್ ವೇಗಕ್ಕೆ ತತ್ತರಿಸಿ ಮೊದಲ ಅವಧಿಯಲ್ಲೇ 4 ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಟಕ್ಕೆ ಸಿಲುಕಿತು. ಲಂಚ್ ವೇಳೆ ಭಾರತದ ಸ್ಕೋರ್ 7 ವಿಕೆಟಿಗೆ 211 ರನ್ ಆಗಿತ್ತು. ಮತ್ತೆ 6 ರನ್ ಸೇರಿಸುವಷ್ಟರಲ್ಲಿ ಆಲೌಟ್ ಆಯಿತು.
ಭಾರತದ ಸರದಿಯಲ್ಲಿ ಯಾರಿಂದಲೂ ಅರ್ಧ ಶತಕ ದಾಖಲಾಗಲಿಲ್ಲ. ಇದನ್ನು ಗಮ ನಿಸಿದಾಗ ಸೌತಾಂಪ್ಟನ್ ಟ್ರ್ಯಾಕ್‌ನಲ್ಲಿ ಬ್ಯಾಟಿಂಗ್ ಸುಲಭವಲ್ಲ ಎಂಬುದು ಅರಿ ವಾಗುತ್ತದೆ. ಇಲ್ಲಿ 250 ರನ್ ಗಳಿಸಿದರೂ ಅದು ದೊಡ್ಡ ಮೊತ್ತ ಎಂಬುದಾಗಿ ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ :ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ಬ್ಯಾಟಿಂಗ್ ಕುಸಿತ ; ಸಂಕಟದಲ್ಲಿ ವೆಸ್ಟ್ ಇಂಡೀಸ್
ಜಾಮೀಸನ್‌ಗೆ 5 ವಿಕೆಟ್
ಕೈಲ್ ಜಾಮೀಸನ್ ಕೇವಲ 31 ರನ್ ವೆಚ್ಚದಲ್ಲಿ 5 ವಿಕೆಟ್ ಉರುಳಿಸಿ ನ್ಯೂಜಿಲ್ಯಾಂಡಿಗೆ ಮೇಲುಗೈ ಒದಗಿಸಿದರು. ಇದರಲ್ಲಿ ಆರ್‌ಸಿಬಿ ಕಪ್ತಾನ ವಿರಾಟ್ ಕೊಹ್ಲಿ ವಿಕೆಟ್ ಕೂಡ ಸೇರಿತ್ತು. 2021ರ ಐಪಿಎಲ್‌ನಲ್ಲಿ ಜಾಮೀಸನ್ ಆರ್‌ಸಿಬಿ ಆಟಗಾರನಾಗಿದ್ದಾರೆ ಎಂಬುದನ್ನು ಮರೆಯುವಂತಿಲ್ಲ. ಅವರು ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ 5 ವಿಕೆಟ್ ಕಿತ್ತ 5ನೇ ನಿದರ್ಶನ ಇದಾಗಿದೆ. ಕೇವಲ 8 ಟೆಸ್ಟ್ ಗಳಲ್ಲಿ ಅತ್ಯಧಿಕ 5 ಸಲ 5 ಪ್ಲಸ್ ವಿಕೆಟ್ ಉರುಳಿಸಿದ ನ್ಯೂಜಿಲ್ಯಾಂಡಿನ ಮೊದಲ ಬೌಲರ್ ಎಂಬುದು ಜಾಮೀಸನ್ ಹೆಗ್ಗಳಿಕೆ. ಟ್ರೆಂಟ್ ಬೌಲ್ಟ್ ಮತ್ತು ನೀಲ್ ವ್ಯಾಗ್ನರ್ ತಲಾ 2 ವಿಕೆಟ್ ಉರುಳಿಸಿದರು.
ರನ್ ಸೇರಿಸದ ಕೊಹ್ಲಿ
ಸ್ಕೋರ್ 149ಕ್ಕೆ ಏರಿದ ವೇಳೆ ಕೊಹ್ಲಿ ವಿಕೆಟನ್ನು ಉರುಳಿಸುವ ಮೂಲಕವೇ ಜಾಮೀಸನ್ ಭಾರತದ ಕುಸಿತಕ್ಕೆ ಚಾಲನೆ ನೀಡಿದರು. ಕೊಹ್ಲಿ ಹಿಂದಿನ ದಿನದ ಮೊತ್ತಕ್ಕೇ ವಾಪಸಾದರು (44). 132 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ ಕೇವಲ ಒಂದು ಬೌಂಡರಿ ಒಳಗೊಂಡಿತ್ತು. 7 ರನ್ ಒಟ್ಟುಗೂಡುವಷ್ಟರಲ್ಲಿ ರಿಷಭ್ ಪಂತ್ ಅವರನ್ನೂ ಜಾಮೀಸನ್ ಪೆವಿಲಿಯನ್ನಿಗೆ ಕಳುಹಿಸಿದರು. ಖಾತೆ ತೆರೆಯಲು 19 ಎಸೆತ ತೆಗೆದುಕೊಂಡ ಪಂತ್ ಆಟ ಒಂದೇ ಬೌಂಡರಿಗೆ ಸೀಮಿತಗೊಂಡಿತು.
ಕೊಹ್ಲಿಯೊಂದಿಗೆ 61 ರನ್ ಜತೆಯಾಟದಲ್ಲಿ ಪಾಲ್ಗೊಂಡ ರಹಾನೆ ಅರ್ಧ ಶತಕಕ್ಕೆ ಒಂದು ರನ್ ಬೇಕೆನ್ನುವಾಗ ವ್ಯಾಗ್ನರ್ ಮೋಡಿಗೆ ಸಿಲುಕಿದರು. 49 ರನ್ ಮಾಡಿದ ರಹಾನೆ ಭಾರತದ ಸರದಿಯ ಟಾಪ್ ಸ್ಕೋರರ್ (117 ಎಸೆತ, 5 ಬೌಂಡರಿ). ಪಂತ್ ಮತ್ತು ರಹಾನೆ ಇಬ್ಬರೂ ಸ್ಲಿಪ್ ಫೀಲ್ಡರ್ ಲ್ಯಾಥಂಗೆ ಕ್ಯಾಚಿತ್ತರು. ಅಶ್ವಿನ್ 22, ಜಡೇಜ 15 ರನ್ ಮಾಡಿದರು.
ಸ್ಕೋರ್ ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್
ರೋಹಿತ್ ಶರ್ಮ ಸಿ ಸೌಥಿ ಬಿ ಜಾಮೀಸನ್ 34
ಶುಭಮನ್ ಗಿಲ್ ಸಿ ವಾಟಿÉಂಗ್ ಬಿ ವ್ಯಾಗ್ನರ್ 28
ಚೇತೇಶ್ವರ್ ಪೂಜಾರ ಎಲ್‌ಬಿಡಬ್ಲ್ಯು ಬೌಲ್ಟ್ 8
ವಿರಾಟ್ ಕೊಹ್ಲಿ ಎಲ್‌ಬಿಡಬ್ಲ್ಯು ಜಾಮೀಸನ್ 44
ಅಜಿಂಕ್ಯ ರಹಾನೆ ಸಿ ಲ್ಯಾಥಂ ಬಿ ವ್ಯಾಗ್ನರ್ 49
ರಿಷಭ್ ಪಂತ್ ಸಿ ಲ್ಯಾಥಂ ಬಿ ಜಾಮೀಸನ್ 4
ರವೀಂದ್ರ ಜಡೇಜ ಸಿ ವಾಟಿÉಂಗ್ ಬಿ ಬೌಲ್ಟ್ 15
ಆರ್. ಅಶ್ವಿನ್ ಸಿ ಲ್ಯಾಥಂ ಬಿ ಸೌಥಿ 22
ಇಶಾಂತ್ ಶರ್ಮ ಸಿ ಟೇಲರ್ ಬಿ ಜಾಮೀಸನ್ 4
ಜಸ್‌ಪ್ರೀತ್ ಬುಮ್ರಾ ಎಲ್‌ಬಿಡಬ್ಲ್ಯು ಜಾಮೀಸನ್ 0
ಮೊಹಮ್ಮದ್ ಶಮಿ ಔಟಾಗದೆ 4
ಇತರ 5
ಒಟ್ಟು (ಆಲೌಟ್) 217
ವಿಕೆಟ್ ಪತನ: 1-62, 2-63, 3-88, 4-149, 5-156, 6-182, 7-205, 8-213, 9-213.
ಬೌಲಿಂಗ್: ಟಿಮ್ ಸೌಥಿ 22-6-64-1
ಟ್ರೆಂಟ್ ಬೌಲ್ಟ್ 21.1-4-47-2
ಕೈಲ್ ಜಾಮೀಸನ್ 22-12-31-5
ಕಾಲಿನ್ ಡಿ ಗ್ರ್ಯಾಂಡ್‌ಹೋಮ್ 12-6-32-0
ನೀಲ್ ವ್ಯಾಗ್ನರ್ 15-5-40-2
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಗೋಡ್ಸೆ ವಿಚಾರಧಾರೆಗಳ ಹೊಂದಿರುವ ಬಿಜೆಪಿಗರು ಗಾಂಧಿ ವಿಚಾರಗಳ ಒಪ್ಪಲ್ಲ: ಸುರ್ಜೇವಾಲಾ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Puthige Matha: ವಿಶ್ವ ಗೀತಾ ಪರ್ಯಾಯಕ್ಕೆ ಇಂದಿಗೆ ವರ್ಷ ಪೂರ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.