ತಿನ್ನಲು ಕಹಿ, ಆರೋಗ್ಯಕ್ಕೆ ಸಿಹಿ ಈ ಹಾಗಲಕಾಯಿ


ಆದರ್ಶ ಕೊಡಚಾದ್ರಿ, Jun 21, 2021, 12:54 PM IST

health-tips-for-healthy-life

ಉತ್ತಮ ಆರೋಗ್ಯವು ಮನುಷ್ಯ ತನ್ನ  ಬದುಕಿನಲ್ಲಿ ಮಾಡಬಹುದಾದ ಎಲ್ಲಾ ವಿಧವಾದ ಸಾಧನೆಗಳಿಗೆ ಬಹುದೊಡ್ಡ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಯಾವ ವ್ಯಕ್ತಿ ಆರೋಗ್ಯಕರವಾದ ದೇಹ ಹಾಗೂ ಮನಸ್ಸನ್ನು ಹೊಂದಿರುತ್ತಾನೋ ಆತ ಅತ್ಯಂತ ಸುಲಭವಾಗಿ ತನ್ನ ಸಾಧನೆಯ ಗುರಿಯನ್ನು ತಲುಪಲು ಸಾಧ‍್ಯ.ಈ ಕಾರಣದಿಂದಾಗಿ ಜನರು ತಮ್ಮ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಲು ಸದಾ ಪ್ರಯತ್ನ ಪಡುತ್ತಾರೆ.

ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಗುವ ನೈಸರ್ಗಿಕ ಪದಾರ್ಥಗಳು ನಮ್ಮ ಆರೋಗ್ಯವನ್ನು ಉತ್ತಮಗೊಳಿಸುವಲ್ಲಿ ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತವೆ. ನಾವು ದಿನನಿತ್ಯ ಸೇವಿಸುವ ಆಹಾರ ಪದಾರ್ಥಗಳಲ್ಲಿ ಈ ರೀತಿಯ ಸೊಪ್ಪು ತರಕಾರಿಗಳನ್ನು ಸೇವನೆ ಮಾಡುವುದರಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಂದ ಪಾರಾಗಬಹುದಾಗಿದ್ದು ಅಂತಹ ಒಂದು ಅತ್ಯುತ್ತಮ ಆಹಾರ ಪದಾರ್ಥವೆಂದರೆ ಅದು ಹಾಗಲಕಾಯಿ.

ಹಾಗಲಕಾಯಿ ಕಹಿಗೆ ಹೆಸರುವಾಸಿಯಾಗಿದೆ. ಅದರ ಸೇವನೆ ಹಲವು ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಪ್ರಾಚೀನ ಕಾಲದಿಂದಲೂ ಔಷಧಿಗಳಲ್ಲಿ ಮತ್ತು ಆಹಾರ ತರಕಾರಿಗಳಲ್ಲಿ ಹಾಗಲಕಾಯಿಯನ್ನು ಬಳಸಿಕೊಂಡು ಬಂದಿದ್ದಾರೆ. ಇದು ತನ್ನಲ್ಲಿ  ಸಾಕಷ್ಟು ಪ್ರಮಾಣದಲ್ಲಿ ಕಬ್ಬಿಣ, ಮೆಗ್ನೀಷಿಯಂ, ಮತ್ತು ಪೊಟ್ಯಾಷಿಯಂ ಜೀವಸತ್ವ – ಸಿ ಹಾಗೂ ಅಧಿಕ ಪ್ರಮಾಣದಲ್ಲಿ ನಾರಿನಾಂಶವನ್ನು ಒಳಗೊಂಡಿದ್ದು ದೇಹದಲ್ಲಿ ರೋಗನಿರೋಧ ಶಕ್ತಿಯನ್ನು ಹೆಚ್ಚಿಸುವಲ್ಲಿ ಅತ್ಯಂತ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ.

ಹಾಗಲಕಾಯಿಯನ್ನು ಏಕೆ ಸೇವನೆ ಮಾಡಬೇಕು?

ಇಷ್ಟೊಂದು ಕಹಿ ಇರುವ ಹಾಗಲಕಾಯಿಯನ್ನು ಏಕೆ ಸೇವಿಸಬೇಕು? ಇದರಿಂದ ಯಾವ ಪ್ರಯೋಜನವಿದೆ ಎಂಬ ಪ್ರಶ್ನೆ ಹಲವರಲ್ಲಿ ಸಾಮಾನ್ಯವಾಗಿ ಇರುತ್ತದೆ. ಆದರೆ ಸೇವನೆಗೆ ಅಷ್ಟು ಹಿತಕರವೆನಿಸದಿದ್ದರೂ ಆರೋಗ್ಯದ ದೃಷ್ಟಿಯಿಂದ ಇದು ಸಂಜೀವಿನಿಯಾಗಿ ಕಾರ್ಯನಿರ್ವಹಿಸುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಹಾಗಲಕಾಯಿ ವೈರಸ್  ಮತ್ತು ಬ್ಯಾಕ್ಟೀರಿಯಾಗಳ ವಿರುದ್ದ ಹೋರಾಡುವ ಸಾಮರ್ಥ್ಯವನ್ನು ಹೊಂದಿರುವುದರಿಂದ  ಇದು ವಿವಿಧ ರೀತಿಯ ಅಲರ್ಜಿಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಉತ್ತಮಗೊಳ್ಳುತ್ತದೆ.

ಅತಿಸಾರ ಮೂಲವ್ಯಾಧಿ ನಿವಾರಕ

ನಾವು ಸೇವಿಸುವ ಆಹಾರದಲ್ಲಿ ಏರುಪೇರುಗಳಾಗಿ ಅತಿಸಾರದಂತಹ ಸಮಸ್ಯೆಗಳು ಕಂಡುಬಂದರೆ ಹಾಗಲಕಾಯಿಯನ್ನು ಸೇವನೆ ಮಾಡುವುದರಿಂದ ಅತಿಸಾರ ಬಹುಬೇಗ ಗುಣಮುಖವಾಗುತ್ತದೆ. ಮೂಲವ್ಯಾಧಿ ಸಮಸ್ಯೆಯಿಂದ ಬಳಲುತ್ತಿರುವವರು ಹಾಗಲಕಾಯಿಯನ್ನು ಹೆಚ್ಚು ಬಳಕೆ ಮಾಡುವುದರಿಂದ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ,

ಮಧುಮೇಹ ನಿವಾರಕ

ಸಾಮಾನ್ಯವಾಗಿ ಮಧುಮೇಹದ ಸಮಸ್ಯೆ ಇರುವವರು ಹಾಗಲಕಾಯಿಯನ್ನು ಸೇವಿಸುವುದು ಅತಿ ಉತ್ತಮ. ದೀರ್ಘ ಕಾಲದವರೆಗೆ ಮಧುಮೇಹಿಗಳು ಹಾಗಲಕಾಯಿಯನ್ನು ಹಸಿಯಾಗಿ ಹಾಗೂ ಬೇಯಿಸಿ ಸೇವನೆ ಮಾಡುವುದರಿಂದಾಗಿ ದೇಹದಲ್ಲಿ ಸಕ್ಕರೆಯ ಅಂಶ ಸ್ಥಿಮಿತದಲ್ಲಿರಲು ಸಾಧ್ಯವಾಗುತ್ತದೆ.

ಹಾಗಲಕಾಯಿಗಳನ್ನು ಸಣ್ಣ ಸಣ್ಣ ಹೋಳುಗಳನ್ನಾಗಿ ಮಾಡಿ ನೆರಳಿನಲ್ಲಿ ಒಣಗಿಸಿ ಪುಡಿ ಮಾಡಿ 3 ರಿಂದ ನಾಲ್ಕು ತಿಂಗಳವರೆಗೆ ಪ್ರತಿನಿತ್ಯ ಸೇವನೆ ಮಾಡುವುದರಿಂದಾಗಿ ದೇಹದಲ್ಲಿನ ಸಕ್ಕರೆಯ ಪ್ರಮಾಣ ಸ್ಥಿಮಿತಕ್ಕೆ ಬರುತ್ತದೆ.

ಹೊಟ್ಟೆ ಸಮಸ್ಯೆಗೆ ಪರಿಹಾರ

ಹೊಟ್ಟೆಯಲ್ಲಿ ಹುಣ್ಣು ಅಥವಾ ಕರುಳಿನಲ್ಲಿ ಹುಣ್ಣುಗಳಿದ್ದು ಸಮಸ್ಯೆ ಅನುಭವಿಸುತ್ತಿದ್ದರೆ , ಅಂತವರು ಹಾಗಲಕಾಯಿಯನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದಾಗಿ ಹುಣ್ಣು ಗುಣಮುಖವಾಗುತ್ತದೆ. ದೇಹದಲ್ಲಿರುವ ನಂಜಿನ ಅಂಶವನ್ನು ಹೊರಹಾಕುವಲ್ಲಿಯೂ ಕೂಡಾ ಇದು ಅತ್ಯಂತ ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತದೆ.

ರಕ್ತಶುದ್ಧಿ ಮಾಡುತ್ತದೆ

ಒಂದು ಲೋಟ ಹಾಗಲಕಾಯಿ ರಸದೊಂದಿಗೆ ಒಂದು ಚಮಚ ಲಿಂಬೆ ಹಣ್ಣಿನ ರಸವನ್ನು ಸೇರಿಸಿ ಬೆಳಗಿನ ಹೊತ್ತಿನಲ್ಲಿ ಪ್ರತಿನಿತ್ಯ ಸೇವನೆ ಮಾಡುವುದರಿಂದಾಗಿ  ರಕ್ತಶುದ್ಧಿಯಾಗುತ್ತದೆ ಹಾಗೂ ಹಲವಾರು ರೀತಿಯ ಚರ್ಮರೋಗಗಳಿಗೆ ರಾಮಬಾಣವಾಗಿ ಕಾರ್ಯನಿರ್ವಹಿಸುವ ಮೂಲಕ ಕಾಯಿಲೆಗಳನ್ನು ಬಹುಬೇಗ ಗುಣಪಡಿಸುತ್ತದೆ.

ಕಿವಿಡುತನ ನಿವಾರಣೆ

ಹಾಗಲಕಾಯಿಯ ಬೀಜವನ್ನು ಹಾಗೂ ಕರಿ ಜೀರಿಗೆಯನ್ನು ಸಮಪ್ರಮಾಣದಲ್ಲಿ ಬೆರೆಸಿ ಅರೆದು ಅದರ ರಸದ ಎರಡು ಮೂರು ಹನಿಗಳನ್ನು ಪ್ರತಿನಿತ್ಯ ಎರಡು ಬಾರಿ ಕಿವಿಯಲ್ಲಿ ಹಾಕಿದರೆ ಕಿವುಡುತನದ ಸಮಸ್ಯೆಯ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತದೆ.

ಪಿತ್ತನಾಶಕ

ಹಾಗಲಕಾಯಿಯ ಎಲೆಗಳ ರಸವನ್ನು ಸೇವನೆ  ಮಾಡುವುದರಿಂದ ಪಿತ್ತನಾಶವಾಗುವುದು. ಪಿತ್ತದ ಕಾರಣದಿಂದ  ವಾಂತಿಯ  ಅನುಭವವಾದಾಗ ಇದರ ಎಲೆಗಳನ್ನು ಉಪ್ಪಿನೊಂದಿಗೆ ಬೆರೆಸಿ ಸೇವನೆ ಮಾಡುವುದರಿಂದಾಗಿ ಸಮಸ್ಯೆ ಪರಿಹಾರವಾಗುತ್ತದೆ.

ಜೀರ್ಣಕ್ರಿಯೆಗೆ ಸಹಾಯಕ

ಹಾಗಲಕಾಯಿಯನ್ನು ಊಟಕ್ಕಿಂತ ಮೊದಲು ಸೇವನೆ ಮಾಡಿ ನಂತರ ಆಹಾರ ಸೇವಿಸುವುದರಿಂದಾಗಿ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಹಾಗೂ ಹೊಟ್ಟೆಯಲ್ಲಿ  ಜಂತುಹುಳುಗಳಿದ್ದರೆ ಹಾಗಲಕಾಯಿಯನ್ನು ಸೇವನೆ ಮಾಡುವುದರಿಂದ ಅವುಗಳು ನಾಶವಾಗುತ್ತದೆ.

ಟಾಪ್ ನ್ಯೂಸ್

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ

6-tulsi

Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

4

Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್‌ ಬಾಟಲಿ ಸದ್ದು  

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.