ಮಳೆಗೆ ಲೋಂಡಾ ರೈಲು ನಿಲ್ದಾ ಣ ಜಲಾವೃತ
Team Udayavani, Jun 21, 2021, 7:33 PM IST
ಬೆಳಗಾವಿ: ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಖಾನಾಪುರ ತಾಲೂಕಿನ ಲೋಂಡಾ ಗ್ರಾಮದ ಬಳಿ ಹರಿಯುವ ಪಾಂಡರಿ ನದಿಯಲ್ಲಿ ಪ್ರವಾಹ ಬಂದಿದ್ದರಿಂದ ಲೋಂಡಾ ರೈಲು ನಿಲ್ದಾಣ ಒಂದನೇ ಪ್ಲಾಟ್ಫಾರ್ಮ್ ಕೆಲಕಾಲ ಜಲಾವೃತಗೊಂಡಿತ್ತು.
ಶನಿವಾರ ಮಧ್ಯಾಹ್ನ ಬಳಿಕ ಲೋಂಡಾ ನಿಲ್ದಾಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಪಾಂಡರಿ ನದಿಯ ನೀರು ಹರಿದುಬಂದಿತ್ತು. ರೈಲ್ವೆ ಕೆಳ ಸೇತುವೆ, ಪ್ರವೇಶದ್ವಾರ, ರೈಲ್ವೆ ಹಳಿಗಳು, ಮೊದಲ ಪ್ಲಾಟ್ ಫಾರ್ಮ್ ಸೇರಿದಂತೆ ರೈಲು ನಿಲ್ದಾಣ ಮತ್ತು ಅಕ್ಕಪಕ್ಕದ ತಗ್ಗು ಪ್ರದೇಶದಲ್ಲಿ ನೀರು ನುಗ್ಗಿತ್ತು.
ಪರಿಸ್ಥಿತಿಯ ಗಂಭೀರತೆ ಅರಿತ ರೈಲ್ವೆ ಇಲಾಖೆ ಲೋಂಡಾ ಜಂಕ್ಷನ್ ಮೂಲಕ ಸಂಚರಿಸುವ ಎಲ್ಲ ರೈಲುಗಳನ್ನು ಎರಡು ಮತ್ತು ಮೂರನೇ ಪ್ಲಾಟ್ ಫಾರ್ಮ್ ಮೂಲಕ ಸಂಚರಿಸುವಂತೆ ಮಾಡಿದ್ದರಿಂದ ಯಾವುದೇ ಸಮಸ್ಯೆ ಆಗಲಿಲ್ಲ. ಶನಿವಾರ ಸಂಜೆಯ ನಂತರ ಮಳೆ ಅಬ್ಬರ ಕುಗ್ಗಿದ್ದರಿಂದ ಪ್ರವಾಹ ಇಳಿಮುಖಗೊಂಡಿತು. ರವಿವಾರ ರೈಲ್ವೆ ಪ್ಲಾಟ್ ಫಾರ್ಮ್ ಮತ್ತು ಇತರ ಪ್ರದೇಶಗಳು ಪ್ರವಾಹದಿಂದ ಮುಕ್ತವಾ ದವು ಎಂದು ಲೋಂಡಾ ಪಿಡಿಒ ಬಾಲರಾಜ್ ಭಜಂತ್ರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.