ವಕೀಲರ ಯೋಗವಿದ್ಯಾ
Team Udayavani, Jun 21, 2021, 10:09 PM IST
ಸಾಗರ: ತಾಲೂಕಿನ ಮಂಚಾಲೆ ಕಾನಗೋಡಿನ ಶ್ರೀಧರಮೂರ್ತಿ ವೃತ್ತಿಯಲ್ಲಿ ವಕೀಲರು. ಆದರೆ ಯೋಗಪಟುಗಳ ನಿರ್ಮಾಣದಲ್ಲಿ ಬದ್ಧತೆಯುಳ್ಳವರು. ತಾಲೂಕಿನ ಹಲವು ಶಿಕ್ಷಣ ಸಂಸ್ಥೆಗಳಲ್ಲಿನ ಮಕ್ಕಳಲ್ಲಿ ಯೋಗಾಸಕ್ತಿ ಬೆಳೆಸುತ್ತಿರುವ ಶ್ರೀಧರಮೂರ್ತಿ ತಮ್ಮ ಶ್ರೀ ಗುರುಕುಲಂ ಯೋಗವಿದ್ಯಾ ಕೇಂದ್ರದ ಮೂಲಕ ಯೋಗಪಟುಗಳನ್ನು ರೂಪಿಸುತ್ತಿದ್ದಾರೆ.
ವರದಹಳ್ಳಿ ರಸ್ತೆಯ ವನಶ್ರೀ ಸಂಸ್ಥೆ ನಡೆಸುವ ಶಾಲೆಯಲ್ಲಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ಯೋಗಾಸನ ಶ್ರೀಧರಮೂರ್ತಿಯವರಿಗೆ ಯೋಗ ಕಲಿಯಲು ಪ್ರೇರಣೆಯಾಯಿತು. ಸುಮಾರು 25 ಕ್ಕೂ ಹೆಚ್ಚು ಆಸನಗಳನ್ನು ಕಲಿತರು. ಯೋಗಾಸನದ ತಾಂತ್ರಿಕ ಸಂಗತಿಗಳನ್ನೆಲ್ಲಾ ಕರಗತ ಮಾಡಿಕೊಂಡರು. ವನಶ್ರೀ ಸಂಸ್ಥೆಯ ಮಂಜಪ್ಪ ಇವರಿಗೆ ಮಾರ್ಗದರ್ಶನ ಮಾಡಿದರು. ನಂತರ ತಾವು ಕಲಿತದ್ದನ್ನು ಇತರರಿಗೆ ಕಲಿಸುವ ಇಚ್ಛೆಯಿಂದ ತರಬೇತಿ ನೀಡಲು ಆರಂಭಿಸಿದರು. ಕಳೆದ 8 ವರ್ಷಗಳಿಂದ ಶ್ರೀ ಗುರುಕುಲಂ ಯೋಗ ವಿದ್ಯಾಕೇಂದ್ರದ ಮೂಲಕ ಯೋಗಪಟುಗಳಿಗೆ ತರಬೇತಿ ನೀಡುತ್ತಿದ್ದಾರೆ. ಎಲ್. ಸಂಧ್ಯಾ, ಯಶವಂತ, ರೂಪ ಮುಂತಾದ ಮಾರ್ಗದರ್ಶಕರು ಕಾಲ ಕಾಲಕ್ಕೆ ಒದಗಿದ್ದಾರೆ. ದಾನಿಗಳು, ಪೋಷಕರು ಸಹಾಯಹಸ್ತ ಚಾಚಿದ್ದಾರೆ.
ಸೇವಾಸಾಗರ ವಿದ್ಯಾಸಂಸ್ಥೆ, ಅನ್ನಾವರ ಅಡಕೆ ಕಂಪೆನಿ ತರಬೇತಿಗೆ ಸ್ಥಳಾವಕಾಶ ನೀಡಿದೆ. ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಫೆಡರೇಷನ್ ಯೋಗವನ್ನು ವಿಸ್ತರಿಸಿದೆ. ಗುರುಕುಲಂನ ಎಂ.ಎಸ್.ಸಂಧ್ಯಾ, ಚಂದನ್, ಶ್ರೇಯಸ್, ಕಾವ್ಯ, ಪ್ರಜ್ಞಾ, ತನ್ವಿತಾ, ಸಾನ್ವಿ, ಭರತ್, ನಿರ್ಮಲ, ಸವಿತ ಮುಂತಾದವರು ರಾಷ್ಟ್ರ ಮಟ್ಟದಲ್ಲಿ ಮಿಂಚಿದ್ದಾರೆ.
ಕರ್ನಾಟಕದ ಬಹುತೇಕ ಕಡೆಗಳಲ್ಲಿನ ಹಾಗೂ ದೇಶದ ಹಲವು ಕಡೆಗಳಲ್ಲಿನ ಸ್ಪರ್ಧೆಗಳಲ್ಲಿ ಗುರುಕುಲಂನ ಯೋಗಪಟುಗಳು ಸಾಧನೆ ಮಾಡಿದ್ದಾರೆ. ಕೋವಿಡ್ ಕಾಲದಲ್ಲಿ ಆನ್ ಲೈನ್ ಸ್ಪರ್ಧೆಗಳಲ್ಲೂ ಗುರುಕುಲದ ವಿದ್ಯಾರ್ಥಿಗಳು ಪ್ರಶಸ್ತಿ ಬಾಚುತ್ತಿದ್ದಾರೆ. ಗುರುಕುಲಂ ಯೋಗಪಟುಗಳು ಏಷಿಯನ್ ಚಾಂಪಿಯನ್ ಆಗಿ ಹೊರಹೊಮ್ಮಬೇಕೆಂಬ ಶ್ರೀಧರಮೂರ್ತಿಯವರ ಹಂಬಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
Holehonnuru: ಕಿರು ಅರಣ್ಯ ಪ್ರದೇಶದಲ್ಲಿ ಕಡವೆ ಬೇಟೆ; ಆರೋಪಿ ಬಂಧನ
Hosanagara: ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ಪಲ್ಟಿ; ದೇಗುಲಕ್ಕೆ ಹಾನಿ
Shimoga: ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ನಾಪತ್ತೆಯಾಗಿದ್ದ ಮೂವರ ಶವ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.