ಅಷ್ಟಾಂಗ ಯೋಗದಿಂದ ಮೋಕ್ಷ ಪ್ರಾಪ್ತಿ

Team Udayavani, Jun 22, 2021, 6:45 PM IST

ಅಷ್ಟಾಂಗ ಯೋಗದಿಂದ ಮೋಕ್ಷ ಪ್ರಾಪ್ತಿ

ಶಿವಮೊಗ್ಗ: ಅಷ್ಟಾಂಗ ಯೋಗದಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ. ಯೋಗ, ಉತ್ತಮ ಕರ್ಮ ಮತ್ತು ಸದ್ವಿಚಾರಗಳನ್ನು ಪಾಲಿಸುವವರು ಎಲ್ಲರಿಗೂ ಒಳ್ಳೆಯದನ್ನು ಬಯಸುವವರು ಯೋಗಿಗಳಾಗುತ್ತಾರೆ. ಅಹಂಕಾರ ಇಲ್ಲದ ವರ್ತನೆಯಿಂದ ಮಾನವನ ಉದ್ಧಾರವಾಗುತ್ತದೆ ಎಂದು ಅವಧೂತರಾದ ಗೌರಿಗದ್ದೆಯ ವಿನಯ್‌ ಗುರೂಜಿ ಹೇಳಿದರು.

ವಿನೋಬ ನಗರದ ಕಲ್ಲಹಳ್ಳಿಯ ಶ್ರೀ ಶಿವಗಂಗಾ ಯೋಗಕೇಂದ್ರದಲ್ಲಿ ಸಚಿವ ಈಶ್ವರಪ್ಪ ದೇಣಿಗೆಯಿಂದ ನಿರ್ಮಿಸಿದ ಮುಖ್ಯದ್ವಾರದ ಸ್ವಾಗತ ಕಮಾನಿನ ಲೋಕಾರ್ಪಣೆ ಹಾಗೂ ಅಂತಾರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

“ನಾನು ನನ್ನದು’ ಎಂಬ ಅಹಂಕಾರದ ವರ್ತನೆಯನ್ನು ಬಿಡುವುದೇ ಯೋಗ. ಯೋಗದಿಂದಲೇ ಭಾರತ ಇಂದು ವಿಶ್ವಗುರುವಾಗಿದೆ. ಮೊದಲು ನಿನ್ನಲ್ಲಿರುವ ಶಕ್ತಿಯನ್ನು ಜಾಗೃತಗೊಳಿಸಿ ನಾಡಿ ಶುದ್ಧೀಕರಣದಿಂದ ದೇಹಕ್ಕೆ ಮತ್ತು ಮನಸ್ಸಿಗೆ ಅಗತ್ಯವಾದ ಉತ್ತಿಷ್ಠ ಮತ್ತು ಜಾಗೃತ ಸ್ಥಿತಿಯನ್ನು ಯೋಗದಿಂದ ತಲುಪಬಹುದು. 40 ವರ್ಷದ ಮಹಿಳೆಯೊಬ್ಬರು ಯಾವುದೇ ಆಹಾರವನ್ನು ಸೇವಿಸದೇ ಯೋಗದಿಂದಲೇ ಬದುಕಿದ ಉದಾಹರಣೆ ಇದೆ. ನಮ್ಮ ದೇಶದಲ್ಲಿ ನೂರಾರು ಯೋಗ ಸಾಧಕರು ಅಸಾಮಾನ್ಯ ಸಾಧನೆ ಮಾಡಿದ್ದಾರೆ. “ಸೋಹಂ ಧ್ಯಾನ ನಾನು ನೀನೇ’ ಎಂದು ಪರಮಾತ್ಮನನ್ನು ಧ್ಯಾನಿಸುವುದೇ ಯೋಗವಾಗಿದೆ ಎಂದು ಹೇಳಿದರು.

ಸಮಚಿತ್ತದಲ್ಲಿರಲು ಯೋಗ ಬಿಟ್ಟರೆ ಬೇರೆ ಹಾದಿ ಇಲ್ಲ. ಭಜನೆಯಿಂದ ಭಾವಶುದ್ಧಿಯಾಗುತ್ತದೆ. ಯೋಗದಿಂದ ದೇಹ ಶುದ್ಧವಾಗುತ್ತದೆ. ಮಾತೆಯರು ಸಣ್ಣವರಿದ್ದಾಗಲೇ ಯೋಗಾಭ್ಯಾಸ ಆರಂಭಿಸಿ ತಮ್ಮ ಮಕ್ಕಳಿಗೂ ಉತ್ತಮ ಸಂಸ್ಕಾರ ನೀಡಬೇಕು. ಯಾರ ಸಹವಾಸವನ್ನು ಜಾಸ್ತಿ ಮಾಡುತ್ತೇವೆಯೋ ಅವರ ಗುಣವೇ ಬರುತ್ತದೆ. ಸಂಸ್ಕಾರದಿಂದ ಮಾತ್ರ ಭಾರತ ಇಷ್ಟು ದೊಡ್ಡ ಮಟ್ಟಿಗೆ ನಿಂತಿದೆ. ಜೀವನವನ್ನು ಯೋಗದಿಂದ ಪೂರ್ಣದ ಕಡೆಗೆ ತೆಗೆದುಕೊಂಡು ಹೋಗಬಹುದು ಎಂದರು.

ಕಂಡವರ ವಿಚಾರ ಮಾತನಾಡಿದರೆ ಅದು ಮೈಲಿಗೆಯಾಗುತ್ತದೆ. ಅದನ್ನು ಬಿಟ್ಟು ಎಲ್ಲರನ್ನೂ ಒಂದುಗೂಡಿಸುವ ಯೋಗದೆಡೆಗೆ ಮನಸ್ಸು ಮಾಡಿ ಎಂದು ತಿಳಿಸಿದರು. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಬೇಡವಾದ್ದನ್ನು ಬಿಟ್ಟು ಬೇಕಾಗಿರುವುದನ್ನು ಮಾತ್ರ ಸ್ವೀಕರಿಸಿ. ಪಂಚೇಂದ್ರಿಯಗಳು ಉಪಕಾರದ ಜೊತೆಗೆ ಅಪಕಾರ ಮಾಡುತ್ತವೆ. ಅದನ್ನು ಹಿಡಿತದಲ್ಲಿಟ್ಟುಕೊಂಡು ಮನಸ್ಸನ್ನು ಯೋಗದೆಡೆಗೆ ಕೇಂದ್ರೀಕರಿಸಿದಾಗ ಸಾಧನೆ ಮಾಡಬಹುದು ಎಂದರು.

ಶಾಸಕ ಎಸ್‌. ರುದ್ರೇಗೌಡ, ಶಿವಗಂಗಾ ಯೋಗಕೇಂದ್ರದ ಯೋಗಾಚಾರ್ಯ ಡಾ| ಸಿ.ವಿ. ರುದ್ರಾರಾಧ್ಯ, ಸೂಡಾ ಅಧ್ಯಕ್ಷ ಎಸ್‌.ಎಸ್‌. ಜ್ಯೋತಿಪ್ರಕಾಶ್‌, ಪಾಲಿಕೆಸದಸ್ಯೆ ಅನಿತಾ ರವಿಶಂಕರ್‌, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಕ್ಷರಿ, ಎಸ್‌.ವೈ. ಅರುಣಾದೇವಿ ಇನ್ನಿತರರು ಇದ್ದರು

ಟಾಪ್ ನ್ಯೂಸ್

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

Belthangady: ಅಪಘಾತದಲ್ಲಿ ಗಾಯಗೊಂಡು 14 ವರ್ಷ ಜೀವನ್ಮರಣ ಹೋರಾಟ ಮಾಡಿದ್ದ ಶಿಕ್ಷಕಿ ಸಾವು

Belthangady: 14 ವರ್ಷ ಜೀವನ್ಮರಣ ಸ್ಥಿತಿಯಲ್ಲಿದ್ದ ಶಿಕ್ಷಕಿ ಸಾವು

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

CT Ravi ಜಾಮೀನು ಅರ್ಜಿ ವಿಚಾರಣೆ ಇಂದು ಬೆಳಗಾವಿ ಕೋರ್ಟ್‌ನಿಂದ ಬೆಂಗಳೂರಿಗೆ ವರ್ಗ

CT Ravi ಜಾಮೀನು ಅರ್ಜಿ ವಿಚಾರಣೆ ಇಂದು ಬೆಳಗಾವಿ ಕೋರ್ಟ್‌ನಿಂದ ಬೆಂಗಳೂರಿಗೆ ವರ್ಗ

1-s-v

ಜನಪ್ರತಿನಿಧಿಗಳು ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ಸಕಾಲ

1-chenna

ಕನ್ನಡದ ಅಸ್ಮಿತೆಗೆ ಗೊ.ರು.ಚನ್ನಬಸಪ್ಪ 21 ಸೂತ್ರಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ

CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ

ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

Sakrebailu: ತಾಂತ್ರಿಕ ದೋಷದಿಂದ ಸುಟ್ಟು ಕರುಕಲಾದ ಬಸ್

Sakrebailu: ತಾಂತ್ರಿಕ ದೋಷದಿಂದ ಸುಟ್ಟು ಕರಕಲಾದ ಬಸ್

ಭದ್ರಾವತಿಯ ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಫೋಟ: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ

ಭದ್ರಾವತಿಯ ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ

1-eeee

Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

Belthangady: ಅಪಘಾತದಲ್ಲಿ ಗಾಯಗೊಂಡು 14 ವರ್ಷ ಜೀವನ್ಮರಣ ಹೋರಾಟ ಮಾಡಿದ್ದ ಶಿಕ್ಷಕಿ ಸಾವು

Belthangady: 14 ವರ್ಷ ಜೀವನ್ಮರಣ ಸ್ಥಿತಿಯಲ್ಲಿದ್ದ ಶಿಕ್ಷಕಿ ಸಾವು

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

CT Ravi ಜಾಮೀನು ಅರ್ಜಿ ವಿಚಾರಣೆ ಇಂದು ಬೆಳಗಾವಿ ಕೋರ್ಟ್‌ನಿಂದ ಬೆಂಗಳೂರಿಗೆ ವರ್ಗ

CT Ravi ಜಾಮೀನು ಅರ್ಜಿ ವಿಚಾರಣೆ ಇಂದು ಬೆಳಗಾವಿ ಕೋರ್ಟ್‌ನಿಂದ ಬೆಂಗಳೂರಿಗೆ ವರ್ಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.