ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಳ
Team Udayavani, Jun 22, 2021, 7:19 PM IST
ದೇವನಹಳ್ಳಿ: ಕಳೆದ 2 ತಿಂಗಳಿಂದ ವಿಧಿಸಲಾಗಿದ್ದಲಾಕ್‌ಡೌನ್ ತೆರವಾಗಿದ್ದು, ಬೆಂ.ಗ್ರಾಂ ಜಿಲ್ಲೆಯಲ್ಲಿಜನಜಂಗುಳಿ, ವಾಹನ ದಟ್ಟಣೆ ಹೆಚ್ಚಿನ ಸಂಖ್ಯೆಯಲ್ಲಿಕಂಡುಬಂತು.
ಈ ಹಿಂದೆ ಜಾರಿಗೊಳಿಸಿರುವ ಮಾರ್ಗಸೂಚಿಪ್ರಕಾರ ಅಗತ್ಯ ವಸ್ತು ಖರೀದಿಗಾಗಿ ಬೆಳಗ್ಗೆ 6ರಿಂದ10ಗಂಟೆಯವರೆಗೆ ನಿಗದಿಪಡಿಸಿದ್ದ ಸಮಯವನ್ನುಸರ್ಕಾರದ ನಿರ್ದೇಶನದಂತೆ ಬೆಳಗ್ಗೆ 6ರಿಂದಮಧ್ಯಾಹ್ನ 2ಗಂಟೆಯವರೆಗೆಅವಕಾಶ ಕಲ್ಪಿಸಲಾಗಿದೆ.
ಸರ್ಕಾರ ಕೋವಿಡ್ ಸೋಂಕು ನಿಯಂತ್ರಿಸಲುವಿಧಿಸಲಾಗಿದ್ದ ಲಾಕ್‌ಡೌನ್ ನಿಮಿತ್ತ ಕಳೆದ2ತಿಂಗಳಿನಿಂದ ಬಿಕೋ ಅನ್ನುತ್ತಿದ್ದ ಜಿಲ್ಲೆಯ ಪ್ರಮುಖ ರಸ್ತೆಗಳು, ಸೋಮವಾರದಿಂದ ಮಧ್ಯಾಹ್ನದವರೆವಿಗೂ ಅನ್‌ಲಾಕ್ ಆದ ಹಿನ್ನೆಲೆಯಲ್ಲಿ ರಸ್ತೆಗಳುವಾಹನ ದಟ್ಟಣೆ ಹೆಚ್ಚಾಗಿತ್ತು.
ಗ್ರಾಹಕರಿಂದ ತುಂಬ ಅಂಗಡಿಗಳು: ಬೆಳಗ್ಗೆ 6ಗಂಟೆಯಿಂದಲೇ ದಿನಸಿ, ಬೇಕರಿ, ಹೋಟೆಲ್‌ಗಳುಕೇವಲ ಪಾರ್ಸೆಲ್ ಸೇವೆ ಮುಂದುವರಿಸಿದ್ದವು.ಕಟ್ಟಡ ನಿರ್ಮಾಣ ಸಾಮಗ್ರಿಗಳು, ಬಟ್ಟೆ, ಮೊಬೈಲ್‌ಅಂಗಡಿಗಳು ಗ್ರಾಹಕರಿಂದ ತುಂಬಿ ತುಳುಕುತ್ತಿದ್ದವು.ಕೃಷಿ ಚಟುವಟಿಕೆಗೆ ಸಂಬಂಧಿಸಿದ ಬಿತ್ತನೆ ಬೀಜ,ರಸಗೊಬ್ಬರ ಸೇರಿ ಇನ್ನಿತರೆ ಪರಿಕರಗಳ ಮಳಿಗೆಗಳೂತೆರೆದು ರೃತರಿಗೆ ಅಗತ್ಯ ಸೇವೆ ನೀಡುವಲ್ಲಿ ನಿರತರಾಗಿದ್ದರು.
ಇನ್ನೂ ಎಂದಿನಂತೆ ದಿನಸಿ ಅಂಗಡಿಗಳುಹಾಲು, ಹಣ್ಣು, ಹೂವು, ರಸ್ತೆಬದಿ ವ್ಯಾಪಾರಸ್ಥರವಹಿವಾಟು ಎಂದಿನಂತೆ ಮುಂದುವರಿದಿತ್ತು.
ಬಸ್ಗಾಗಿ ಪ್ರಯಾಣಿಕರ ಪರದಾಟ: ಲಾಕ್‌ಡೌನ್‌ಸಡಿಲಿಕೆ ಆಗುತ್ತಿದ್ದಂತೆ ಜಿಲ್ಲೆಯಲ್ಲಿ ವಾಣಿಜ್ಯಚಟುವಟಿಕೆಗಳು ಎಂದಿನಂತೆ ಆರಂಭವಾಗಿದೆ.ಸಾರಿಗೆ, ಖಾಸಗಿ ಬಸ್‌ಗಳು ಸಂಚರಿಸಿದವು. ಬಿಎಂಟಿಸಿಮತ್ತುಕೆಎಸ್‌ಆರ್‌ಟಿಸಿಬಸ್‌ಗಳಲ್ಲಿ ಶೇ.50ರಷ್ಟುಸೀಟುಗಳನ್ನು ಹಾಕುವಂತೆ ಸರ್ಕಾರ ಆದೇಶಿಸಿರುವ ಹಿನ್ನೆಲೆಯಲ್ಲಿ 2 ಸೀಟುಗಳ ಪೈಕಿ ಒಬ್ಬರೇ ಒಂದುಸೀಟಿನಲ್ಲಿ ಕುಳಿತುಕೊಳ್ಳುವಂತೆ ಬಸ್‌ಕಾರ್ಯನಿರ್ವಾಹಕರು ಸೂಚನೆ ನೀಡುತ್ತಿದ್ದರು.
ಆದರೆ, ಕೆಲವರು ಬಸ್ ಕೊರತೆಯಿಂದ ಪಕ್ಕಪಕ್ಕದಲ್ಲಿಯೇ ಕುಳಿತು ಸಾಮಾಜಿಕ ಅಂತರ ಇಲ್ಲದೇಪ್ರಯಾಣಿಸುತ್ತಿದ್ದರು.ಸೋಮವಾರದಿಂದಲೇ ಸಾರಿಗೆ ಬಸ್‌ಗಳು ರಸ್ತೆಗೆಇಳಿಯಲು ಸರ್ಕಾರ ಅವಕಾಶ ನೀಡಲಾಗಿದ್ದರೂ,ಸಿಬ್ಬಂದಿಗಳು ಕೋವಿಡ್ ಪರೀಕ್ಷೆ ಕಡ್ಡಾಯದ ಹಿನ್ನೆಲೆಯಲ್ಲಿ ಕೆಲವು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದಂತಾಗಿದ್ದು, ಇದರಿಂದ ಬಸ್‌ಗಳಿಗೆ ಪ್ರಯಾಣಿಕರುಪರದಾಡಿದರು. ಬಸ್‌ಗಳು ಬಸ್ ನಿಲ್ದಾಣಕ್ಕೆಬರುತ್ತಿರುವಾಗಲೇ ನೂಕು ನುಗ್ಗಲಿನಲ್ಲಿ ಜನರುಬಸ್ ಹತ್ತುತ್ತಿರುವ ದೃಶ್ಯಗಳುಕಂಡುಬಂತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.