ನದಿ ಪಾತ್ರದ ಗ್ರಾಮಗಳಲ್ಲಿ ಕಾಮಗಾರಿ ಕೈಗೊಳ್ಳಿ
ಜಿಲ್ಲಾಡಳಿತಕ್ಕೆ ಸಚಿವ ಬೊಮ್ಮಾಯಿ ಸೂಚನೆ! ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿ ವಸ್ತುನಿಷ್ಠ ವರದಿ ಸಲ್ಲಿಸಿ
Team Udayavani, Jun 22, 2021, 8:35 PM IST
ಹಾವೇರಿ: ಪ್ರವಾಹ ಬಾಧಿತ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಮುಂಚಿತವಾಗಿ ಕಾಮಗಾರಿ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.
ಬೆಂಗಳೂರಿನಿಂದ ಜಿಲ್ಲಾ ಹಾಗೂ ತಾಲೂಕು ಅ ಧಿಕಾರಿಗಳೊಂದಿಗೆ ಸೋಮವಾರ ವಿಡಿಯೋ ಸಂವಾದ ನಡೆಸಿ ಜಿಲ್ಲೆಯ ಅತಿವೃಷ್ಟಿ, ಪ್ರವಾಹದ ಸ್ಥಿತಿಗತಿ ಹಾಗೂ ಮುಂಗಾರು ಬಿತ್ತನೆ ಬೀಜ-ಗೊಬ್ಬರ ದಾಸ್ತಾನು ಕುರಿತಂತೆ ಮಾಹಿತಿ ಪಡೆದು ಅವರು ಮಾತನಾಡಿದರು.
ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒಗಳಿಗೆ ವರದಾ ಹಾಗೂ ತುಂಗಭದ್ರಾ ನದಿ ಪಾತ್ರದ ತಗ್ಗು ಪ್ರದೇಶಗಳ ಹಳ್ಳಿಗಳಿಗೆ ಭೇಟಿ ನೀಡಿ ಕಳೆದ ಮಳೆಗಾಲದಲ್ಲಿ ಪ್ರವಾಹಕ್ಕೆ ತುತ್ತಾದ ಗ್ರಾಮಗಳಲ್ಲಿ ಮುಂಚಿತವಾಗಿ ಡ್ರ್ಯೆನೇಜ್ ಸ್ವತ್ಛತೆ, ಕಾಲುವೆಗಳ ನಿರ್ಮಾಣ, ಸೇತುವೆಗಳ ಕಾಮಗಾರಿ, ಹೈ ಕಾಮಗಾರಿಗಳು ಹಾಗೂ ನದಿ, ಹಳ್ಳಗಳಿಗೆ ಕಾಲುವೆಗಳ ಸ್ವತ್ಛತೆ ಸೇರಿದಂತೆ ಪ್ರವಾಹ ಪೂರ್ವ ಕಾಮಗಾರಿ ಕೈಗೊಳ್ಳುವಂತೆ ಸಲಹೆ ನೀಡಿದರು.
ಅತಿವೃಷ್ಟಿ ಪ್ರವಾಹದಿಂದ ಹಾನಿಗೊಳಗಾದ ಮನೆಗಳ ಸಮೀಕ್ಷೆ ರಿಯಲ್ ಟೈಮ್‌ನಲ್ಲಿ ಆಗಬೇಕು. ಮನೆ ಹಾನಿಯಾದ ವರದಿ ತಕ್ಷಣವೇ ಪಂಚಾಯತ್ ಇಂಜಿನಿಯರ್‌ಗಳು ಕಡ್ಡಾಯವಾಗಿ ಸ್ಥಳಕ್ಕೆ ಭೇಟಿ ನೀಡಿ ವಸ್ತುಸ್ಥಿತಿ ಸಮೀಕ್ಷೆ ನಡೆಸಿ ಫೋಟೋ ಸಹಿತ ವರದಿ ನೀಡಬೇಕು. ಬೆಳಗ್ಗೆ 8 ಗಂಟೆಯೊಳಗಾಗಿ ಎಲ್ಲ ಪಿಡಿಒಗಳು ಗ್ರಾಮಗಳಿಗೆ ಭೇಟಿ ನೀಡಬೇಕು. ಎಲ್ಲ ಪಂಚಾಯಿತಿಗಳ ಹಾನಿ ವರದಿ 11 ಗಂಟೆಯೊಳಗಾಗಿ ತಾಪಂ ಇಒಗಳು ಕ್ರೋಢೀಕರಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸುವಂತೆ ಸೂಚನೆ ನೀಡಿದರು. ಪ್ರವಾಹದಂತಹ ತುರ್ತು ನಿರ್ವಹಣೆಗೆ ಅಗತ್ಯ ರೆಸ್ಕೂ ಪರಿಕರ ಖರೀದಿಸಬೇಕು. ಎಸ್‌ಡಿಆರ್ ಎಫ್‌ನಿಂದ ಬೋಟ್ ಸೇರಿದಂತೆ ಒಂದಿಷ್ಟು ರಕ್ಷಣಾ ಉಪಕರಣ ಕಳುಹಿಸಿಕೊಡುವುದಾಗಿ ಹೇಳಿದರು.
ಯೂರಿಯಾ ಪೂರೈಕೆ: ಮುಂಗಾರು ಬಿತ್ತನೆ ಬೀಜ, ಡಿಎಪಿ ಮತ್ತು ಯೂರಿಯಾ ದಾಸ್ತಾನು, ಪೂರೈಕೆ ಹಾಗೂ ರೈತರ ಬೇಡಿಕೆ ಪ್ರಮಾಣ ಕುರಿತಂತೆ ಜಂಟಿ ಕೃಷಿ ನಿರ್ದೇಶಕರಿಂದ ಮಾಹಿತಿ ಪಡೆದ ಸಚಿವರು ಜಿಲ್ಲೆಗೆ ಅಗತ್ಯ 500 ಟನ್ ಯೂರಿಯಾ ಗೊಬ್ಬರ ಪೂರೈಕೆಗೆ ಸಂಬಂಧಿ ಸಿದ ಅಧಿ ಕಾರಿಗಳು ಹಾಗೂ ಸಚಿವರೊಂದಿಗೆ ಚರ್ಚಿಸಿ ಪೂರೈಕೆಗೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಸೋಯಾ ಬಿತ್ತನೆ ಬೀಜದ ಕೊರತೆಯಾಗದಂತೆ ಕ್ರಮವಹಿಸಿ, ಈಗಾಗಲೇ ಹೆಚ್ಚುವರಿ ಪೂರೈಕೆಗೆ ಆರಂಭದಿಂದಲೇ ಸೂಚನೆ ನೀಡಲಾಗಿದೆ. ಮಧ್ಯ ಪ್ರದೇಶದಲ್ಲಿ ಸೋಯಾ ಬೀಜದ ಉತ್ಪಾದನೆ ಕಡಿಮೆ ಇದೆ ಹಾಗೂ ಹೊರ ರಾಜ್ಯಗಳಿಗೆ ಪೂರೈಕೆ ಮಾಡದಂತೆ ಆ ರಾಜ್ಯದ ಸರ್ಕಾರ ನಿರ್ಧಾರ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಸೋಯಾ ಬಿತ್ತನೆ ಕ್ಷೇತ್ರ ಹಾಗೂ ಬೇಡಿಕೆ ಬೀಜಗಳ ಮಾಹಿತಿ ಸಲ್ಲಿಸುವಂತೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅತಿವೃಷ್ಟಿ, ಮನೆಹಾನಿ, ಬೆಳೆಹಾನಿ ಕುರಿತಂತೆ ಮಾಹಿತಿ ನೀಡಿದರು. ವಿಪತ್ತು ನಿರ್ವಹಣೆಗೆ ಜಿಲ್ಲೆಯಲ್ಲಿ 22 ಕೋಟಿ ರೂ. ಅನುದಾನವಿದ್ದು, ಯಾವುದೇ ಹಣದ ಕೊರತೆ ಇಲ್ಲ. 141 ಗ್ರಾಮಗಳನ್ನು ಪ್ರವಾಹಕ್ಕೆ ತುತ್ತಾಗಬಹುದೆಂದು ಅಂದಾಜಿಸಲಾಗಿದೆ. ಈ ಗ್ರಾಮಗಳಲ್ಲಿ ಕಾಳಜಿ ಕೇಂದ್ರ ತೆರೆಯಲು ಈಗಾಗಲೇ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪ್ರತಿ ದಿನ ಜಲಾಶಯಗಳಿಂದ ಮಾಹಿತಿ ಪಡೆದು ನದಿ ಹರಿವಿನ ಪ್ರಮಾಣದ ಮೇಲೆ ನಿಗಾ ವಹಿಸಲಾಗಿದೆ. ಮುಂಗಾರಿನಲ್ಲಿ ಶೇ.23 ಪ್ರಮಾಣದಲ್ಲಿ ಹೆಚ್ಚುವರಿ ಮಳೆಯಾಗಿದೆ. 67 ಮನೆಗಳು ಇಂದಿನವರೆಗೆ ಭಾಗಶಃ ಹಾನಿಯಾಗಿವೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಹನುಮಂತರಾಯ, ಜಿಪಂ ಸಿಇಒ ಮಹಮ್ಮದ್ ರೋಷನ್, ಅಪರ ಜಿಲ್ಲಾ ಧಿಕಾರಿ ಎಸ್. ಯೋಗೇಶ್ವರ, ಉಪ ವಿಭಾಗಾಧಿ ಕಾರಿ ಶಿವಾನಂದ ಉಳ್ಳಾಗಡ್ಡಿ, ಜಂಟಿ ಕೃಷಿ ನಿರ್ದೇಶಕ ಮಂಜುನಾಥ, ಡಿಎಚ್‌ಒ ಡಾ| ಎಚ್.ಎಸ್. ರಾಘವೇಂದ್ರಸ್ವಾಮಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಪಿ.ಆರ್. ಹಾವನೂರ ಇತರ ಅ ಧಿಕಾರಿಗಳು ಇದ್ದರು.
ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ,ಅತಿವೃಷ್ಟಿ, ಮನೆಹಾನಿ, ಬೆಳೆಹಾನಿ, ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ,
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Madarsa Act: ಯುಪಿ ಮದರಸಾ ಕಾಯ್ದೆ ಸಿಂಧುತ್ವ ಎತ್ತಿಹಿಡಿದ ಸುಪ್ರೀಂ
Kharge: ಬೆಂಗಳೂರಿಗೆ ಬಂದು ನನ್ನ ಜತೆ ಚರ್ಚೆಗೆ ನಿಲ್ಲಿ: ಪ್ರಧಾನಿ ಮೋದಿಗೆ ಖರ್ಗೆ ಸವಾಲು
IPL Mega Auction: ನ.24 ಮತ್ತು 25 ಜೆಡ್ಡಾದಲ್ಲಿ ಐಪಿಎಲ್ ಹರಾಜು
Gautam Adani: ಯುಪಿಎ ಅವಧಿಯಲ್ಲಿ ರಾಹುಲ್ ಭೇಟಿಗೆ ಯತ್ನಿಸಿದ್ದರೇ ಅದಾನಿ?
Sharad Pawar: ಚುನಾವಣಾ ರಾಜಕೀಯ ನಿವೃತ್ತಿ ಸುಳಿವು ನೀಡಿದ ಎನ್‌ಸಿಪಿ ವರಿಷ್ಠ ಶರದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.