ಪ್ರಧಾನ್ ಮಂತ್ರಿ ಜನ ಧನ್ ಖಾತೆ ಹೇಗೆ ತೆರೆಯುವುದೆಂದು ನಿಮಗೆ ಗೊತ್ತೇ..? ಇಲ್ಲಿದೆ ಮಾಹಿತಿ
Team Udayavani, Jun 23, 2021, 4:55 PM IST
ನವ ದೆಹಲಿ : ಪ್ರಧಾನ್ ಮಂತ್ರಿ ಜನ ಧನ್ ಖಾತೆ ಎಂದರೆ ಏನು..? ಈ ಯೋಜನೆಯ ಬಗ್ಗೆ ನಿಮಗೆಷ್ಟು ಮಾಹಿತಿ ಇದೆ..?
ಪ್ರಧಾನ್ ಮಂತ್ರಿ ಜನ ಧನ್ ಖಾತೆ ಎಂದರೆ ಏನು..?
ಬ್ಯಾಂಕುಗಳು, ಅಂಚೆ ಕಚೇರಿಗಳು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಜ್ಹೀರೋ ಬ್ಯಾಲೆನ್ಸ್ ನೊಂದಿಗೆ ದೇಶದ ಬಡವರಿಗಾಗಿ ಖಾತೆ ತೆರೆಯುವ ಯೋಜನೆಯಾಗಿದೆ. ಸರ್ಕಾರ ಪ್ರಾರಂಭಿಸಿದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು, ಈ ಯೋಜನೆಯಡಿ ಬಡವರು ಸುಲಭವಾಗಿ ತನ್ನ ಬ್ಯಾಂಕ್ ಖಾತೆಯನ್ನು ತೆರೆಯಬಹುದಾಗಿದೆ. ಈ ಯೋಜನೆಯಡಿ ಅನೇಕ ರೀತಿಯ ಆರ್ಥಿಕ ಲಾಭಗಳು ಕೂಡಾ ಸಿಗಲಿದೆ.
ಇದನ್ನೂ ಓದಿ : ಡ್ರಗ್ಸ್ ಜಾಲ: ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಮುಂಬಯಿ ಎನ್ ಸಿಬಿ ಬಲೆಗೆ
ಈ ಯೋಜನೆಯಿಂದ ನಿಮ್ಮ ಪಾಲಾಗಲಿದೆ 1.30 ಲಕ್ಷ ರೂಪಾಯಿ..!
ಪ್ರಧಾನ್ ಮಂತ್ರಿ ಧನ್ ಯೋಜನೆ ಅಡಿಯಲ್ಲಿ ತೆರೆಯಲಾದ ಖಾತೆಯಲ್ಲಿ, ಖಾತೆದಾರರಿಗೆ ಒಟ್ಟು 1.30 ಲಕ್ಷ ರೂ. ಸಿಗಲಿದೆ. ಇದಲ್ಲದೆ ಅಪಘಾತ ವಿಮೆ ಕೂಡ ಇದರಲ್ಲಿ ಲಭ್ಯವಿದೆ. ಖಾತೆದಾರರಿಗೆ 1,00,000 ರೂ.ಗಳ ಅಪಘಾತ ವಿಮೆ ಮತ್ತು 30,000 ರೂ.ಗಳ ಜನರಲ್ ಇನ್ಶುರೆನ್ಸ್ ಸಿಗಲಿದ್ದು, ಒಂದು ವೇಳೆ, ಖಾತೆದಾರರಿಗೆ ಅಪಘಾತವಾದರೆ, 30,000 ರೂ. ಸಿಗಲಿದೆ. ಅಪಘಾತದಲ್ಲಿ ಖಾತೆದಾರನ ಸಾವು ಸಂಭವಿಸಿದರೆ, ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಖಾತೆಗೆ ಬರಲಿದೆ.
ಪ್ರಧಾನ್ ಮಂತ್ರಿ ಜನ ಧನ್ ಖಾತೆ ತೆರೆಯುವುದು ಹೇಗೆ..?
ಜನ ಧನ್ ಖಾತೆಯನ್ನು ತೆರೆಯಲು ಹತ್ತಿರದ ಬ್ಯಾಂಕ್ ಗೆ ಹೋಗಿ ಫಾರ್ಮ್ ನನ್ನು ಭರ್ತಿ ಮಾಡಬೇಕು. ಈ ಫಾರ್ಮ್ ನಲ್ಲಿಹೆಸರು, ಮೊಬೈಲ್ ಸಂಖ್ಯೆ, ಬ್ಯಾಂಕ್ ಶಾಖೆಯ ಹೆಸರು, ಅರ್ಜಿದಾರರ ವಿಳಾಸ, ನಾಮಿನಿ, ಉದ್ಯೋಗ, ಮತ್ತು ವಾರ್ಷಿಕ ಆದಾಯ ಮತ್ತು ಅವಲಂಬಿತರ ಸಂಖ್ಯೆ, ಎಸ್‌ಎಸ್‌ಎ ಕೋಡ್ ಅಥವಾ ವಾರ್ಡ್ ಸಂಖ್ಯೆ, ಗ್ರಾಮ ಕೋಡ್ ಅಥವಾ ಟೌನ್ ಕೋಡ್ ಮುಂತಾದ ವಿವರವಾದ ಮಾಹಿತಿಯನ್ನು ನೀಡಬೇಕಾಗುತ್ತದೆ. 10 ವರ್ಷಕ್ಕಿಂತ ,ಮೇಲ್ಪಟ್ಟ ಭಾರತೀಯ ನಾಗರೀಕರ ಹೆಸರಿನಲ್ಲಿ ಈ ಖಾತೆಯನ್ನು ತೆರೆಯಬಹುದು.
ಖಾತೆ ತೆರೆಯಲು ಏನೆಲ್ಲಾ ಬೇಕು..?
ಆಧಾರ್ ಕಾರ್ಡ್, ಪಾಸ್ ಪೋರ್ಟ್ ಅಥವಾ ಡ್ರೈವಿಂಗ್ ಲೈಸನ್ಸ್, ಪ್ಯಾನ್ ಕಾರ್ಡ್, ವೋಟರ್ ಐಡಿ, ನರೆಗಾ ಜಾಬ್ ಕಾರ್ಡ್, ಗೆಜೆಟೆಡ್ ಆಫೀಸರ್ ಮೂಲಕ ಜಾರಿ ಮಾಡಲಾದ ಲೆಟರ್, ಈ ದಾಖಲೆಗಳು ಜನಧನ ಖಾತೆ ತೆರಯವ ಸಂದರ್ಭದಲ್ಲಿ ಅಗತ್ಯವಿರುತ್ತದೆ.
ಇದನ್ನೂ ಓದಿ : ಮಲ್ಯ, ನೀರವ್ ಮೋದಿ,ಚೋಕ್ಸಿಗೆ ಸಂಬಂಧಿಸಿದ 18,170.02 ಕೋಟಿ ಮೌಲ್ಯದ ಸ್ವತ್ತುಗಳ ಮುಟ್ಟುಗೋಲು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.