ಜನರಿಗೆ ತರಕಾರಿ ವಿತರಣೆ
Team Udayavani, Jun 23, 2021, 5:25 PM IST
ಕೆಂಗೇರಿ: ಬೆಂಗಳೂರು ನಗರ ಪ್ರದೇಶವ್ಯಾಪ್ತಿಯಲ್ಲಿ ಕೊರೊನಾ ಸೋಂಕು ಇಳಿಮುಖವಾಗುತ್ತಿರುವ ಸಂದರ್ಭದಲ್ಲಿರಾಜ್ಯ ಸರ್ಕಾರವು ಲಾಕ್‌ಡೌನ್ ಅನ್ನುಸಡಿಲಿಸುತ್ತಿದ್ದು ಸಾರ್ವಜನಿಕರು ಯಾವುದೇ ಕಾರಣಕ್ಕೂ ಎಚ್ಚರ ತಪ್ಪದೆ ಮುಂಜಾಗೃತರಾಗಿ ಇರಬೇಕೆಂದು ಸಹಕಾರಸಚಿವ ಎಸ್.ಟಿ.ಸೋಮಶೇಖರ್ ಮನವಿ ಮಾಡಿದರು.
ಯಶವಂತಪುರ ವಿಧಾನಸಭಾ ಕ್ಷೇತ್ರದ ಉಲ್ಲಾಳು ವಾರ್ಡ್ ಅಮ್ಮ ಆಶ್ರಮರಸ್ತೆ ನಗೆಮನೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಮಾರು 11ಸಾವಿರ ಜನರಿಗೆ ತರಕಾರಿಯನ್ನು ವಿತರಿಸಿಮಾತನಾಡಿ, ಕೊರೊನಾ ಸೋಂಕಿನಿಂದಸಾಕಷ್ಟುಜನರುಕೆಲಸವಿಲ್ಲದೆಪರದಾಡುತ್ತಿದ್ದು ಕುಟುಂಬ ನಿರ್ವಹಣೆಗೆ ದಾರಿಇಲ್ಲದೆ ದಿಕ್ಕು ತೋಚದೆ ಪರಿತಪಿಸುತ್ತಿದ್ದಾರೆ.
ನಗರ ಪ್ರದೇಶದಲ್ಲಿ ಸೋಂಕು ಇಳಿಮುಖವಾಗುತ್ತಿದಂತೆ ಕೆಲವು ಕೈಗಾರಿಕೆಗಳು ಗಾರ್ಮೆಂಟ್ಸ್‌ಗಳನ್ನು ಪುನರಾರಂಭಿಸುವ ಚಿಂತನೆಯಿಂದ ಅನ್‌ಲಾಕ್ ಘೋಷಣೆಯನ್ನು ಮಾಡುತ್ತಿದ್ದು ಸಾರ್ವಜನಿಕರು ಮಾಸ್ಕ್ಧರಿಸಿಕೊಂಡು,ಸಾಮಾಜಿಕ ಅಂತರ ಕಾಪಾಡುವುದರಮೂಲಕ ಸರ್ಕಾರದ ನಿಯಮವನ್ನುಪಾಲಿಸಬೇಕು ಎಂದು ಸೂಚಿಸಿದರು.
ಕ್ಷೇತ್ರದ ಪ್ರತಿ ವಾರ್ಡ್‌ನಲ್ಲಿರುವಬಡವರು, ಕೂಲಿ ಕಾರ್ಮಿಕರು,ಪೌರಕಾರ್ಮಿಕರು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಸೇರಿದಂತೆ ಎಲ್ಲಾ ವರ್ಗದ ಜನರು ಮತ್ತುಕೊರೊನಾ ವಾರಿಯರ್ಗಳಿಗೆ ಸಹಾಯಹಸ್ತವನ್ನು ನೀಡುತ್ತಿದ್ದು, ಅದರಅಂಗವಾಗಿ ಕೆಂಗೇರಿ ವಾರ್ಡ್,ದೊಡ್ಡಬೀದರಕಲ್ಲು ವಾರ್ಡ್ ಹಾಗೂಉಲ್ಲಾಳು ವಾರ್ಡ್‌ಗಳಲ್ಲಿ ಗ್ರಾಮೀಣಭಾಗದ ರೈತರಿಂದ ಸುಮಾರು 50 ಟನ್‌ತರಕಾರಿಗಳನ್ನು ಖರೀದಿಸಿ ನೇರವಾಗಿಜನರಿಗೆ ತರಕಾರಿ ಕಿಟ್‌ಗಳನ್ನುವಿತರಿಸಲಾಗಿದೆ.
ಇದರಿಂದ ರೈತರು ತಾವು ಬೆಳೆದಬೆಳೆಗೆ ಮಧ್ಯವರ್ತಿಗಳ ಹಾವಳಿ ಯಿಲ್ಲದೆತಮ್ಮ ಫಸಲಿಗೆ ಉತ್ತಮ ಬೆಲೆ ಲಭಿಸಿದಂತಾಗುತ್ತದೆ ಹಾಗೂ ಕೊರೊನಾ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಿದಂತಾಗುತ್ತದೆ ಎಂದು ತಿಳಿಸಿದರು.ಬೆಂಗಳೂರು ಉತ್ತರ ಜಿಲ್ಲಾ ಎಸ್.ಸಿ.ಮೋರ್ಚಾ ಅಧ್ಯಕ್ಷ ಜಿ. ಮುನಿರಾಜು,ಪಾಲಿಕೆ ಮಾಜಿ ಸದಸ್ಯರಾದವಿ.ವಿ.ಸತ್ಯನಾರಾಯಣ, ರ.ಆಂಜೀನಪ್ಪ,ಯುವ ಮುಖಂಡ ನಿಶಾಂತ್ ಸೋಮಶೇಖರ್, ಉಲ್ಲಾಳು ವಾರ್ಡ್ ಬಿಜೆಪಿಶಕ್ತಿ ಕೇಂದ್ರದ ಅಧ್ಯಕ್ಷ ಜಯರಾಮ್,ಪ್ರಧಾನ ಕಾರ್ಯದರ್ಶಿ ಗಿರೀಶ್,ಮುಖಂಡರಾದ ಅನಿಲ್‌ಕುಮಾರ್,ಎನ್.ಕದರಪ್ಪ, ಶಶಿಕುಮಾರ್, ಎನ್.ಸಿ.ಕುಮಾರ್, ಎನ್.ಸತ್ಯನಾರಾಯಣ, ಜೆ.ರಮೇಶ್, ಎಂ.ಹರೀಶ್‌ಕುಮಾರ್‌ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Response to Demand: ಬಿಸಿಯೂಟ ನೌಕರರಿಗೆ ಇಡುಗಂಟು: ಸರಕಾರದ ಮಾರ್ಗ ಸೂಚಿ ಪ್ರಕಟ
Imprisonment: ಸಂಘಟನೆಗಾಗಿ ದರೋಡೆ: ಜೆಎಂಬಿ ಉಗ್ರನಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ
Fraud: ಆಂಧ್ರ ಮಾಜಿ ಸಿಎಂ ಆಪ್ತನ ಹೆಸರಲ್ಲಿ ವಂಚನೆ
Arrested: ಸರ್ಕಾರಿ ನೌಕರಿ ಆಸೆ ತೋರಿಸಿ 46 ಜನಕ್ಕೆ 1 ಕೋಟಿ ವಂಚನೆ: ರೈಲ್ವೆ ಅಧಿಕಾರಿ ಸೆರೆ
Bengaluru: ಸಿನಿಮೀಯವಾಗಿ ಬೈಕ್ ಕಳ್ಳನನ್ನು ಹಿಡಿದ ಜಲಮಂಡಳಿ ಅಧಿಕಾರಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.