ವ್ಯಾಕ್ಸಿನ್ ನೆರವಿಗಾಗಿ ನನ್ನನ್ನು ಸಂಪರ್ಕಿಸಿ : ಕೆಪಿಸಿಸಿಅಧ್ಯಕ್ಷಡಿ.ಕೆ.ಶಿವಕುಮಾರ್
Team Udayavani, Jun 23, 2021, 6:58 PM IST
ಬೆಂಗಳೂರು : ಕೋವಿಡ್ ಲಸಿಕೆ ಪಡೆದು ಕೊಳ್ಳುವುದರಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಎದುರಾದರೆ ತಮಗೆ ತಿಳಿಸುವಂತೆ ರಾಜ್ಯದ ಜನತೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು ”ಸದ್ಯಕ್ಕೆ ನಾವು ಕಠಿಣ ಸಮಯವನ್ನು ಎದುರಿಸುತ್ತಿದ್ದು ‘ವ್ಯಾಕ್ಸಿನ್ ಕರ್ನಾಟಕ’ ಅಭಿಯಾನದ ಮೂಲಕ ರಾಜ್ಯದ ಸಮಸ್ತರು ಲಸಿಕಾಕರಣಕ್ಕಾಗಿ ಹೊರಾಡುತ್ತಿದ್ದೇವೆ. ಹಾಗಾಗಿ ರಾಜ್ಯದ ಯಾರೊಬ್ಬರಿಗಾದರೂ ವ್ಯಾಕ್ಸಿನ್ನ ಅವಶ್ಯಕತೆ ಇದ್ದರೆ ಅಥವ ಯಾವುದೇ ಪ್ರದೇಶದಲ್ಲಿ ವ್ಯಾಕ್ಸಿನ್ನ ಕೊರತೆ ಎದುರಾಗಿದ್ದರೆ ತಮಗೆ ಟ್ವೀಟ್ ಮಾಡಿ ತಿಳಿಸಿದರೆ ಸಾಕು, ಈ ಬಗ್ಗೆಸ್ವತಃ ನಾನೇ ಸರ್ಕಾರಕ್ಕೆ ಪತ್ರ ಬರೆದು ನಿಮ್ಮ ಪ್ರದೇಶದಲ್ಲೇ ಲಸಿಕೆ ಸಿಗುವಂತೆ ಮಾಡುತ್ತೇನೆ” ಎಂದು ಕೆಪಿಸಿಸಿ ಅಧ್ಯಕ್ಷರು ಭರವಸೆ ನೀಡಿದ್ದಾರೆ.
ಅಲ್ಲದೆ, ಮುಂಬರಲಿರುವ ಕೋವಿಡ್ ಮೂರನೇ ಅಲೆಯ ಬಗ್ಗೆಯೂ ಆತಂಕವನ್ನುವ್ಯಕ್ತಪಡಿಸಿರುವ ಅವರು, ”3ನೆ ಅಲೆಯಲ್ಲಿ ಮಕ್ಕಳೇ ಹೆಚ್ಚು ಟಾರ್ಗೆಟ್ ಆಗಲಿರುವುದಾಗಿ ತಜ್ಞರು ಹೇಳಿದ್ದಾರೆ. ಹಾಗಾಗಿಸುಮಾರು 80% ಕ್ಕಿಂತ ಹೆಚ್ಚು ಜನರು ಲಸಿಕೆ ಪಡೆಯುವುದರ ಮೂಲಕ ಮೂರನೇ ಅಲೆಯನ್ನುತಡೆಯಬಹುದಾಗಿದೆ. ಈ ಕುರಿತುಜೂನ್ 19 ರಿಂದಲೇ ತಮ್ಮ ಪಕ್ಷ ನಡೆಸುತ್ತಿರುವ ‘ವ್ಯಾಕ್ಸಿನ್ ಕರ್ನಾಟಕ’ ಅನ್ನೋ ಲಸಿಕಾಕರಣ ಅಭಿಯಾನವು ಎಷ್ಟುಮಹತ್ವದ್ದು ಅನ್ನುವುದನ್ನು ಅವರುಟ್ವೀಟ್ನಲ್ಲಿ ಪ್ರಸ್ತಾಪಿಸಿದ್ದಾರೆ.
ಇದಷ್ಟೇ ಆಲ್ಲದೆ, ತಮ್ಮ ಪಕ್ಷದ ಮೂಲಕ ರಾಜ್ಯದಲ್ಲೇ ಮೊದಲ ಬಾರಿ 17 ವಯಸ್ಸಿನ ಒಳಗಿನ ಸುಮಾರು 95 ಲಕ್ಷ ವಿದ್ಯಾರ್ಥಿಗಳಿಗಾಗಿ ಸೋಷಿಯಲ್ಮೀಡಿಯಾದಲ್ಲಿ ವ್ಯಾಕ್ಸಿನೇಷನ್ ಮಹತ್ವ ಸಾರುವ ಸಾಂಸ್ಕೃತಿಕ ಸ್ಪರ್ಧೆಯೊಂದನ್ನುನಡೆಸಲಾಗುತ್ತಿದೆ. ಇದರಲ್ಲಿನ 100 ಅತ್ಯುತ್ತಮ ಜಾಗೃತಿ ಮೂಡಿಸುವ ವಿಡಿಯೋಗಳಿಗೆ ತಲಾ ಒಂದೊಂದು ಅಂದರೆ ಒಟ್ಟು 100 ಆಂಡ್ರಾಯ್ಡ್ ಗಳನ್ನು ನೀಡಲಾಗುತ್ತಿರುವುದಾಗಿಯೂ ಅವರು ತಿಳಿಸಿದರು.
ಈಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ಪ್ರತಿಯೊಬ್ಬ ವಿದ್ಯಾರ್ಥಿಯೂ 2 ನಿಮಿಷಗಳಷ್ಟುಅವಧಿಯ ಲಸಿಕಾಕರಣದ ಜಾಗೃತಿ ಮೂಡಿಸುವ ವಿಡಿಯೋ ಒಂದನ್ನು ತಯಾರಿಸಿ ಸೋಷಿಯಲ್ಮೀಡಿಯಾ ವೇದಿಕೆಯಲ್ಲಿ #VaccinateKarnatakaಟ್ಯಾಗ್ನೊಂದಿಗೆwww.vaccinatekarnataka.inಗೆಕಳಿಸಬಹುದಾಗಿದೆ.
ಈ ಅಭಿಯಾನಕ್ಕೆ ಈಗಾಗಲೇ ರಾಜ್ಯಾದ್ಯಂತ ಸಾವಿರಾರು ಮಕ್ಕಳು ಸ್ಪಂದಿಸುತ್ತಿದ್ದು ಸಾವಿರಾರು ವಿಡಿಯೋಗಳನ್ನು ಕಳುಹಿಸಿ ಅಂರ್ಜಾಲದಲ್ಲಿ ದೊಡ್ಡಸಂಚಲವನ್ನುಉಂಟುಮಾಡಿದ್ದಾರೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Kasaragod: ಫ್ಯಾಶನ್ ಗೋಲ್ಡ್ ವಂಚನೆ ಪ್ರಕರಣ: ಪೂಕೋಯ ತಂಙಳ್ ಮತ್ತೆ ಬಂಧನ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.