ಡೆಲ್ಟಾ ಮತ್ತು ಡೆಲ್ಟಾ ಪ್ಲಸ್: ವ್ಯತ್ಯಾಸವೇನು? ಯಾವುದು ಹೆಚ್ಚು ಅಪಾಯಕಾರಿ?
Team Udayavani, Jun 24, 2021, 7:31 AM IST
ಹೊಸದಿಲ್ಲಿ: ದೇಶದಲ್ಲಿ ಕೋವಿಡ್19 ಸೋಂಕಿನ ಎರಡನೇ ಅಲೆಯ ಅಬ್ಬರ ಕಡಿಮೆಯಾಗುತ್ತಿರುವಂತೆಯೇ ಡೆಲ್ಟಾ ಮತ್ತು ಡೆಲ್ಟಾ ಪ್ಲಸ್ ಎಂಬ ರೂಪಾಂತರಿಯ ಹಾವಳಿ ಶುರುವಾಗಿದೆ.
ಕೋವಿಡ್-19 ವೈರಸ್ ನಿರಂತರವಾಗಿ ರೂಪ ಬದಲಿಸುತ್ತಿರುತ್ತದೆ. ಆ ರೀತಿ ಬದಲಾದ ವೈರಸ್‌ನ ರೂಪವನ್ನು “ರೂಪಾಂತರಿ’ ಎಂದು ಕರೆಯುತ್ತಾರೆ. ಡೆಲ್ಟಾ ( ಬಿ.1.617.2) ರೂಪಾಂತರಿಯು ಮೊದಲು ಕಂಡು ಬಂದಿದ್ದೇ ಭಾರತದಲ್ಲಿ. ಇದನ್ನು ಕಳವಳಕಾರಿ ರೂಪಾಂತರಿ ಎಂದು ಪರಿಗಣಿಸಲಾಗಿದೆ. ಇದು ಈಗ ಮತ್ತೂಂದು ಸ್ವರೂಪ ಪಡೆದಿದೆ. ಈ ಹೊಸ ಸ್ವರೂಪವೇ ಡೆಲ್ಟಾ ಪ್ಲಸ್ (ಬಿ.1.617.2.1). ಡೆಲ್ಟಾ ಮೊದಲು ಭಾರತದಲ್ಲಿ ಪತ್ತೆಯಾದರೆ, ಡೆಲ್ಟಾ ಪ್ಲಸ್ ಪತ್ತೆಯಾಗಿದ್ದು ಇಂಗ್ಲೆಂಡ್ ನಲ್ಲಿ (ಜೂನ್ 11ರಂದು)
ಎಷ್ಟು ಪ್ರಕರಣಗಳಿವೆ?
ಡೆಲ್ಟಾ ರೂಪಾಂತರಿಯು ಯು.ಕೆ .ಯಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿದೆ. ಅಲ್ಲಿನ ಒಟ್ಟು ಪ್ರಕರಣಗಳ ಪೈಕಿ ಶೇ.99ರಷ್ಟು ಕೇಸುಗಳು ಡೆಲ್ಟಾ ರೂಪಾಂತರಿಯದ್ದು. ಯುಕೆಯೊಂದರಲ್ಲೇ 33 ಸಾವಿರಕ್ಕೂ ಹೆಚ್ಚು ಮಂದಿ ಈ ಸೋಂಕಿಗೆ ಗುರಿಯಾಗಿದ್ದಾರೆ.
ಡೆಲ್ಟಾ ಪ್ಲಸ್ ರೂಪಾಂತರಿಯ ಪ್ರಕರಣ ಜೂ.18ರವರೆಗೆ ಜಗತ್ತಿನಾದ್ಯಂತ 205 ಆಗಿತ್ತು. 9 ದೇಶಗಳಲ್ಲಿ ಇದು ವ್ಯಾಪಿಸುತ್ತಿದೆ. ಭಾರತದಲ್ಲೇ 40 ಪ್ರಕರಣಗಳು ಪತ್ತೆಯಾಗಿವೆ
ಡೆಲಾ ಪ್ಲಸ್ ಹೆಚ್ಚು ಅಪಾಯಕಾರಿಯೇ?
2ನೇ ಅಲೆಯಲ್ಲಿ ಭಾರೀ ಪ್ರಮಾಣದಲ್ಲಿ ಸೋಂಕು ಪ್ರಕರಣಗಳು ಪತ್ತೆಯಾಗಲು ಡೆಲ್ಟಾ ರೂಪಾಂತರಿ ಕಾರಣ ಎಂದು ಹೇಳಲಾಗಿದೆ. ಮುಂಬರುವ ಮೂರನೇ ಅಲೆಯ ವೇಳೆ ಡೆಲ್ಟಾ ಪ್ಲಸ್ ರೂಪಾಂತರಿಯ ಪ್ರಭಾವ ಹೆಚ್ಚಿರುವ ಸಾಧ್ಯತೆಯಿದೆ ಎಂದೂ ಅಂದಾಜಿಸಲಾಗಿದೆ. ಇದು ಎಷ್ಟು ಅಪಾಯಕಾರಿ ಎಂಬುದು ಇನ್ನೂ ದೃಢಪಟ್ಟಿಲ್ಲ. ಆದರೆ, ಡೆಲ್ಟಾ ಪ್ಲಸ್‌ನ ವ್ಯಾಪಿಸುವಿಕೆಯ ವೇಗ ಹೆಚ್ಚಿರುವ ಕಾರಣ, 3ನೇ ಅಲೆಯು ನಿರೀಕ್ಷೆಗಿಂತಲೂ ಮುಂಚೆಯೇ ಅಪ್ಪಳಿಸುವ ಭೀತಿಯಿದೆ ಎನ್ನುತ್ತಾರೆ ತಜ್ಞರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.