ಬಸವನಾಡಲ್ಲಿ ಆನ್‌ಲೈನ್ ವಂಚಕರ ಹಾವಳಿ
Team Udayavani, Jun 24, 2021, 7:38 PM IST
ತಾಳಿಕೋಟೆ: ಲಾಕಡೌನ್ ವೇಳೆ ಕ್ರಿಯಾಶೀಲರಾಗಿರುವ ಸೈಬರ್ ಕದೀಮರು ಸಾಮಾಜಿಕ ಜಾಲತಾಣ ನಕಲಿ ಫೇಸ್‌ಬುಕ್ ಪ್ರೊಫೈಲ್ ಸೃಷ್ಟಿಸಿ ಸಂಬಂಧಿಕರಿಗೆ, ಸ್ನೇಹಿತರಿಗೆ ಮೆಸೆಜ್ ಮೂಲಕ ತುರ್ತಾಗಿ ಹಣ ಕಳುಹಿಸಿ ಎಂದು ವಂಚಿಸಲು ಯತ್ನಿಸಿರುವ ಪ್ರಕರಣಗಳು ಹೆಚ್ಚಾಗತೊಡಗಿದ್ದು ಆತಂಕಕ್ಕೆ ಕಾರಣವಾಗಿದೆ. ಫೇಸ್‌ಬುಕ್ ಖಾತೆಯಲ್ಲಿರುವ ಫೋಟೊ, ಇತರೆ ವಿವರಗಳನ್ನು ನಕಲಿ ಖಾತೆಗೆ ಜೋಡಿಸಿ ಆ ಅಸಲಿ ಖಾತೆಯಲ್ಲಿರುವ ಸಂಬಂಧಿಕರಿಗೆ, ಸ್ನೇಹಿತರ ಒಡನಾಟ ಗುರುತಿಸಿ ಮೆಸೇಜ್ ಮೂಲಕ ತುರ್ತಾಗಿ ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆಗೆ ಯತ್ನಿಸುತ್ತಿದ್ದಾರೆ.
ಇನ್ನೂ ಕೆಲ ವಂಚಕರು ಫೋನ್‌ಪೇ ಮೂಲಕ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಸೈಬರ್ ಕದೀಮರು ಮುದ್ದೇಬಿಹಾಳ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ), ಅವರ ಪತ್ನಿ ಮಹಾದೇವಿ ಹೆಸರಿನಲ್ಲಿ, ಪೊಲೀಸ್ ಅ ಧಿಕಾರಿ ಎಸ್. ಎಚ್. ಪವಾರ ಅಲ್ಲದೇ ಪತ್ರಕರ್ತರು, ಶಿಕ್ಷಕರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ ಆನ್‌ಲೈನ್ ಮೂಲಕ ಹಣ ವರ್ಗಾಯಿಸಿ ಎಂದು ಮನವಿ ಮಾಡಿ ವಂಚನೆಗೆ ಯತ್ನಿಸಿದ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ನಕಲಿ ಖಾತೆ ಸೃಷ್ಟಿಯಾಗಿದ್ದು ಕಂಡಕೆಲವರು ಯಾರೂ ಹಣ ಹಾಕಬೇಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.
ಶಾಸಕ ನಡಹಳ್ಳಿ ದಂಪತಿ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿ 10ರಿಂದ 20 ಸಾವಿರ ರೂ.ವರೆಗೆ ತುರ್ತಾಗಿ ಹಣಕ್ಕೆ ಮನವಿ ಮಾಡುತ್ತಿದ್ದಾರೆ. ಪತ್ರಕರ್ತರ ಹೆಸರಲ್ಲೂ ನಕಲಿ ಖಾತೆ ಸೃಷ್ಟಿಸಿ ಹಣ ಬೇಡಿಕೆಯ ಮನವಿ ಮಾಡುತ್ತಿದ್ದಾರಲ್ಲದೇ, ಮರುದಿನ ನಿಮ್ಮ ಖಾತೆ ಮರಳಿಸುತ್ತೇನೆ ಸಂಕಷ್ಟದಲ್ಲಿದ್ದೇನೆ ಕೊಡಿ ಎಂಬ ಬೇಡಿಕೆ ಸಂದೇಶಗಳ ಕಥೆಗಳನ್ನು ಕಟ್ಟುತ್ತಿದ್ದಾರೆ. ಆಸ್ಪತ್ರೆ ನೆಪದ ಮೇಲೆ ಬೇಡಿಕೆ: ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸುವ ಮುನ್ನಾ ಫೇಸ್‌ಬುಕ್ ಖಾತೆದಾರನ ಬಗ್ಗೆ ಎಲ್ಲ ಅರಿತುಕೊಂಡು ನಾನು ಆಸ್ಪತ್ರೆಯಲ್ಲಿದ್ದೇನೆ, ಸಂಬಂಧಿಕರಿಗೆ ಹಣದ ಅವಶ್ಯಕತೆ ಬಿದ್ದಿದೆ. ಇನ್ನೂ ನಾಲ್ಕು ದಿನ ಆಸ್ಪತ್ರೆಯಲ್ಲಿರಬೇಕು. ಬಂದ ನಂತರ ಹಣ ಕೊಡುತ್ತೇನೆ.
ಲಾಕ್‌ಡೌನ್ ಕಾರಣ ವಾಹನ ಸೌಕರ್ಯವಿಲ್ಲ, ಅರ್ಜೆಂಟಾಗಿ ಹಣ ಹಾಕು ಎಂಬ ಸಂದೇಶಗಳನ್ನು ಕಳುಹಿಸಲಾಗುತ್ತಿದೆ. ಇದನ್ನು ನೋಡಿದ ಕೆಲವು ಗೆಳೆಯರು ಫೇಸ್‌ಬುಕ್ ಖಾತೆದಾರನಿಗೆ ಫೋನ್ ಮಾಡಿ ಕೇಳಿದ್ದಾಗ ನಕಲಿ ಖಾತೆ ಸೃಷ್ಟಿಯಾಗಿರುವ ಮಾಹಿತಿಗಳು ಹೊರ ಬಿಳತೊಡಗಿದೆ. ದೂರು ನೀಡಿ: ತಮ್ಮ ಫೇಸ್‌ಬುಕ್ ಖಾತೆ ನಕಲಿ ಸೃಷ್ಟಿಯಾಗಿದೆ. ನಿಮ್ಮ ಹೆಸರಿನ ಮೇಲೆ ಹಣಕ್ಕೆ ಬೇಡಿಕೆ ಇಡುತ್ತಿರುವುದು ಗಮನಕ್ಕೆ ಬಂದ ತಕ್ಷಣ ಯುಆರ್ ಎಲ್ ಲಿಂಕ್ ಮೂಲಕ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದರೆ ತನಿಖೆ ಮಾಡಲು ಸಹಕಾರಿಯಾಗಲಿದೆ ಎಂಬುದು ತಜ್ಞರ ಮಾಹಿತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.