ಸ್ಯಾಮ್‍ ಸಂಗ್‍ ಎಂ 42: ಹೇಗಿದೆ ಎಂ ಸರಣಿಯ ಮೊದಲ 5ಜಿ ಫೋನ್‍?


Team Udayavani, Jun 25, 2021, 9:15 AM IST

ಹೇಗಿದೆ ಸ್ಯಾಮ್‍ ಸಂಗ್‍ ಎಂ 42 ಎಂ ಸರಣಿಯ ಮೊದಲ 5ಜಿ ಫೋನ್‍?

ಅನೇಕ ಭಾರತೀಯರ ಮೆಚ್ಚಿನ ಮೊಬೈಲ್‍ ಫೋನ್‍ ಬ್ರಾಂಡ್‍ ಸ್ಯಾಮ್‍ ಸಂಗ್‍. ಹೊಸದೊಂದು ಫೋನ್‍ ಕೊಳ್ಳಬೇಕೆಂದು ಕೊಂಡಾಗ ಅನೇಕರು ಸ್ಯಾಮ್‍ ಸಂಗ್‍ ಅನ್ನು ಪರಿಗಣಿಸುತ್ತಾರೆ. ಕೊರಿಯಾ ಮೂಲದ ಸ್ಯಾಮ್‍ ಸಂಗ್‍ ಭಾರತದ ಬ್ರಾಂಡೇನೋ ಎಂಬಷ್ಟು ಜನರಿಗೆ ಚಿರಪರಿಚಿತವಾಗಿದೆ.

ಚೀನಾ ಮೂಲದ ಶಿಯೋಮಿ, ವಿವೋ, ಒಪ್ಪೋ, ರಿಯಲ್‍ಮಿ, ಐಕೂ ಇತ್ಯಾದಿ ಬ್ರಾಂಡ್‍ಗಳು ಆನ್‍ಲೈನ್‍ ಮಾರಾಟದ ಮೂಲಕ ಮಿತವ್ಯಯದ ದರಕ್ಕೆ ಉತ್ತಮ ತಾಂತ್ರಿಕ ಅಂಶಗಳನ್ನೊಳಗೊಂಡ ಫೋನ್‍ಗಳನ್ನು ಕೊಡಲು ಆರಂಭಿಸಿದವು. ಅದುವರೆಗೂ ಕೊಂಚ ಹೆಚ್ಚಿನ ದರವನ್ನೇ ಇಡುತ್ತಿದ್ದ ಸ್ಯಾಮ್‍ಸಂಗ್‍ ಈಗ ಪೈಪೋಟಿ ಜಾಸ್ತಿಯಾದ ಪರಿಣಾಮ, ಆನ್‍ಲೈನ್‍ ಮಾರಾಟವನ್ನೇ ಗುರಿಯಾಗಿಸಿಕೊಂಡು ಹಲವು ಫೋನ್‍ಗಳನ್ನು ಹೊರತರಲಾರಂಭಿಸಿದೆ.

ಇನ್ನು ಕೆಲವು ತಿಂಗಳಲ್ಲಿ ಭಾರತದಲ್ಲಿ 5ಜಿ ನೆಟ್‍ ವರ್ಕ್ ಸೌಲಭ್ಯ ಬರಲಿರುವುದರಿಂದ 5ಜಿ ಸೌಲಭ್ಯ ಇರುವ ಫೋನ್‍ಗಳಿಗೆ  ಕಂಪೆನಿಗಳು ಆದ್ಯತೆ ನೀಡುತ್ತಿವೆ. ಸ್ಯಾಮ್‍ ಸಂಗ್‍ನ ಎಂ ಸರಣಿಯ, ( ಮಧ್ಯಮ ದರ್ಜೆಯ) ಫೋನ್‍ಗಳಲ್ಲಿ 5ಜಿ ಇರುವ ಮೊದಲ ಫೋನ್‍ ಇದು. ಅದುವೇ ಸ್ಯಾಮ್‍ ಸಂಗ್‍ ಗೆಲಾಕ್ಸಿ ಎಂ42 5ಜಿ.

ಈ ಫೋನು ಎರಡು ಆವೃತ್ತಿಗಳಲ್ಲಿ ಲಭ್ಯ. 6 ಜಿಬಿ ರ್ಯಾಮ್ ಮತ್ತು 128 ಜಿಬಿ ಆಂತರಿಕ ಸಂಗ್ರಹ ಆವೃತ್ತಿಗೆ 22,000 ರೂ., 8 ಜಿಬಿ+128 ಜಿಬಿ ಆವೃತ್ತಿಗೆ 24000 ರೂ. ಇದೆ.

ಪೈಪೋಟಿ ಹೆಚ್ಚಿರುವುದರಿಂದ ತನ್ನ ಮಧ್ಯಮ ದರ್ಜೆಯ ಫೋನ್‍ ಗಳನ್ನು ಆಕರ್ಷಕವಾಗಿ ಕಾಣುವಂತೆ ವಿನ್ಯಾಸ ಮಾಡುವಲ್ಲಿ ಸ್ಯಾಮ್‍ ಸಂಗ್‍ ಆಸಕ್ತಿ ವಹಿಸುತ್ತಿರುವುದು ಒಳ್ಳೆಯದು. ಗೆಲಾಕ್ಸಿ ಎಂ. 42ರ ಹಾರ್ಡ್‍ ವೇರ್ ವಿನ್ಯಾಸ ಹೆಚ್ಚಿನ ದರದ ಫೋನ್‍ಗಳನ್ನು ಹೋಲುತ್ತದೆ. ಹಿಂಬದಿ ಮತ್ತು ಫೋನಿನ ಫ್ರೇಮ್‍ ಪಾಲಿಕಾರ್ಬೊನೇಟ್‍ ಆಗಿದ್ದರೂ, ಗ್ಲಾಸ್‍ ಫಿನಿಶಿಂಗ್‍ ಬರುವಂತೆ ರೂಪಿಸಲಾಗಿದೆ. ಅಲ್ಲದೇ ಫೋನಿನ ಹಿಂಬದಿ ವಿನ್ಯಾಸವೇ ವಿಶಿಷ್ಟವಾಗಿದೆ. ನಾಲ್ಕು ಬಣ್ಣದ ಶೇಡ್‍ಗಳನ್ನು ಹಂತ ಹಂತವಾಗಿ ನೀಡಲಾಗಿದೆ.

6.6 ಇಂಚಿನ ಸೂಪರ್ ಅಮೋಲೆಡ್‍ ಪರದೆ ನೀಡಲಾಗಿದೆ. ಪರದೆಯ ಮೇಲ್ಭಾಗದ ಮಧ್ಯದಲ್ಲಿ ಸೆಲ್ಫಿ ಕ್ಯಾಮರಾಕ್ಕೆ ನೀರಿನ ಹನಿಯ ವಿನ್ಯಾಸ ನೀಡಲಾಗಿದೆ. ಎಲ್ಲ ಸರಿ ಆದರೆ, ಪರದೆಗೆ  ಫುಲ್‍ ಎಚ್‍ಡಿ ಪ್ಲಸ್‍ ಡಿಸ್‍ಪ್ಲೇ ನೀಡಿಲ್ಲದಿರುವುದು ಕೊರತೆಯಾಗಿದೆ. ಎಚ್‍.ಡಿ. ಪ್ಲಸ್‍ (720*1600) ರೆಸ್ಯೂಲೇಷನ್‍ ಇದೆ. (265 ಪಿಪಿಐ) ಇನ್ನೆಲ್ಲ ಅಂಶಗಳನ್ನೂ ತೃಪ್ತಿಕರವಾಗಿ ನೀಡಿ, ಪರದೆಯನ್ನು ಫುಲ್‍ ಎಚ್‍ಡಿ ಪ್ಲಸ್‍ ನೀಡಲು ಚೌಕಾಸಿ ತೋರಿದ್ದೇಕೆಂದು ಅನಿಸದಿರದು. ಆದರೂ ಅಮೋಲೆಡ್‍ ಪರದೆ ಆ ಕೊರತೆಯನ್ನು ನೀಗಿಸುತ್ತದೆ. ಪರದೆಯ ಮೇಲೆಯೇ ಸೆಕ್ಯುರಿಟಿಗಾಗಿ ಫಿಂಗರ್ ಪ್ರಿಂಟ್‍ ಸ್ಕ್ಯಾನರ್‌ ನೀಡಲಾಗಿದೆ.

ಕ್ವಾಲ್‍ಕಾಂ ಸ್ನಾಪ್‍ಡ್ರಾಗನ್‍ 750 ಜಿ ಪ್ರೊಸೆಸರ್ ನೀಡಿರುವುದು ತೃಪ್ತಿಕರ ವಿಷಯ. ಸಾಮಾನ್ಯವಾಗಿ ಸ್ಯಾಮ್‍ ಸಂಗ್‍ ತನ್ನ ಆರಂಭಿಕ ಮತ್ತು ಮಧ್ಯಮ ದರ್ಜೆಯ ಫೋನ್‍ಗಳಲ್ಲಿ ಸ್ನಾಪ್‍ ಡ್ರಾಗನ್‍ ಪ್ರೊಸೆಸರ್‍ ನೀಡುವುದು ಅಪರೂಪ. ಇದರಲ್ಲಿ ಸ್ನಾಪ್‍ಡ್ರಾಗನ್‍ 750 ಪ್ರೊಸೆಸರ್ ನೀಡಿ ಉದಾರತೆ ತೋರಿದೆ! ಈ ಪ್ರೊಸೆಸರ್ ಮಧ್ಯಮ ದರ್ಜೆಯಲ್ಲಿ ಹೆಚ್ಚಿನ ಸಾಮರ್ಥ್ಯದ್ದು. 30-35 ಸಾವಿರ ಬೆಲೆಯ ಫೋನ್‍ಗಳಲ್ಲೂ ಇದನ್ನು ಬಳಸಲಾಗುತ್ತದೆ. ಹಾಗಾಗಿ ಫೋನಿನ ವೇಗ ಚೆನ್ನಾಗಿದೆ.

ಇದು ಅಂಡ್ರಾಯ್ಡ್ 11 ಆವೃತ್ತಿ ಹೊಂದಿದ್ದು, ಇದಕ್ಕೆ ಸ್ಯಾಮ್‍ ಸಂಗ್‍ನ ಸ್ವಂತದ ಒನ್‍ ಯುಐ 3.1 ಅನ್ನು ಹೊಂದಾಣಿಕೆ ಮಾಡಲಾಗಿದೆ. ಸ್ಯಾಮ್‍ ಸಂಗ್‍ ಫೋನ್‍ಗಳ ಬಳಕೆದಾರರಿಗೆ ಚಿರಪರಿಚಿತವಾಗಿರುವ ಯೂಸರ್ ಇಂಟರ್ ಫೇಸ್ ಇದರಲ್ಲೂ ಇದೆ. ಆದರೆ ಥೀಮ್‍ ಗಳು, ವಾಲ್‍ಪೇಪರ್ ಗಳು ಹೊಸದಾಗಿವೆ. ಹಾಗಾಗಿ ಫೋನ್‍ ಯುಐ ಫ್ರೆಶ್‍ ಆಗಿ ಕಾಣುತ್ತದೆ.  ಐಕಾನ್‍ಗಳ ಪ್ಯಾಕ್ ಗಳ ಡಿಸೈನ್‍ ಇನ್ನೊಂದಿಷ್ಟು ಇದ್ದರೆ ಒಳ್ಳೆಯದು.

ಇದರಲ್ಲಿ 48 ಮೆ.ಪಿ., 8 ಮೆ.ಪಿ. 5 ಮೆ.ಪಿ. ಮತ್ತು 5 ಮೆ.ಪಿ. ಲೆನ್ಸ್ ಗಳಿರುವ ನಾಲ್ಕು ಕ್ಯಾಮರಾಗಳು ಹಿಂಬದಿಯಲ್ಲಿವೆ. ಮುಂಬದಿಗೆ 20 ಮೆಗಾ ಪಿಕ್ಸಲ್‍ ಕ್ಯಾಮರಾ ನೀಡಲಾಗಿದೆ. ಈ ರೇಂಜಿನಲ್ಲಿ ಸ್ಯಾಮ್‍ಸಂಗ್‍ ಕ್ಯಾಮರಾಗಳು ನಿರಾಸೆ ಮೂಡಿಸುವುದಿಲ್ಲ. 64 ಮೆ.ಪಿ. ಕೊಟ್ಟಿದ್ದರೆ ಇನ್ನೂ ಉತ್ತಮವಾಗುತ್ತಿತ್ತು.

5000 ಎಂಎಎಚ್‍ ನ ದೊಡ್ಡ ಬ್ಯಾಟರಿ ಇದೆ. ಟೈಪ್‍ ಸಿ ಪೋರ್ಟ್‍ ನೀಡಲಾಗಿದೆ. ಇಷ್ಟು ದೊಡ್ಡ ಬ್ಯಾಟರಿ ಚಾರ್ಜ್‍ ಮಾಡಲು 15 ವ್ಯಾಟ್ಸ್ ಚಾರ್ಜರ್  ಕೊಡಲಾಗಿದೆ. ಇದರಿಂದ ಚಾರ್ಜಿಂಗ್‍ ನಿಧಾನ ಗತಿಯಲ್ಲಾಗುತ್ತದೆ.  ಶೂನ್ಯದಿಂದ 15 ನಿಮಿಷಕ್ಕೆ ಶೇ. 12ರಷ್ಟು ಚಾರ್ಜ್‍ ಆಗುತ್ತದೆ. ಅರ್ಧಗಂಟೆಗೆ ಶೇ. 25ರಷ್ಟು ಚಾರ್ಜ್‍ ಆದರೆ. 1 ಗಂಟೆಗೆ ಶೇ. 50ರಷ್ಟು ಚಾರ್ಜ್ ಆಗುತ್ತದೆ. ಸಂಪೂರ್ಣ ಚಾರ್ಜ್ ಆಗಲು 2 ಗಂಟೆ 15 ನಿಮಿಷ ತೆಗೆದುಕೊಳ್ಳುತ್ತದೆ. ಇನ್ನೂ ವೇಗವಾಗಿ ಚಾರ್ಜ್‍ ಆಗಬೇಕೆಂದರೆ ಪ್ರತ್ಯೇಕವಾಗಿ 33 ವ್ಯಾಟ್ಸ್ ಚಾರ್ಜರನ್ನು ಗ್ರಾಹಕ ಖರೀದಿಸಬೇಕು.

ಪ್ರತಿಸ್ಪರ್ಧಿ ಕಂಪೆನಿಗಳು ಈ ಕೆಟಗರಿಯಲ್ಲಿ 33 ವ್ಯಾಟ್ಸ್ ಫಾಸ್ಟ್ ಚಾರ್ಜರ್ ಅನ್ನು ಫೋನ್‍ ನೊಂದಿಗೆ ನೀಡುತ್ತವೆ. 20 ಸಾವಿರ ಮೇಲ್ಪಟ್ಟ ಫೋನ್‍ಗಳಲ್ಲಾದರೂ ಸ್ಯಾಮ್‍ ಸಂಗ್‍ 33 ವ್ಯಾಟ್ಸ್ ವೇಗದ ಚಾರ್ಜರನ್ನು ಬಾಕ್ಸ್ ನೊಂದಿಗೆ ನೀಡುವ ಮನಸ್ಸು ಮಾಡಬೇಕು.

8 ಜಿಬಿ ರ್ಯಾಮ್ ಮಾದರಿಗೆ 2 ಸಾವಿರ ರೂ. ಜಾಸ್ತಿ ಇರುವುದರಿಂದ,  6 ಜಿಬಿ ರ್ಯಾಮ್ ಸಾಕಷ್ಟಾದ್ದರಿಂದ ಆ ಮಾದರಿ ಕೊಳ್ಳುವುದು ಮಿತವ್ಯಯಕರ.

-ಕೆ.ಎಸ್‍. ಬನಶಂಕರ  ಆರಾಧ್ಯ

ಟಾಪ್ ನ್ಯೂಸ್

Riots against mosque survey: Police fire tear gas at Sambhal

Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Rishabh Pant gave gifts to those who helped during the accident

Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್‌ ನೀಡಿದ ರಿಷಭ್‌ ಪಂತ್‌

1

BBK11: ಇವತ್ತು ಬಿಗ್‌ಬಾಸ್‌ ಮನೆಯಿಂದ ಆಚೆ ಬರುವುದು ಇವರೇ ನೋಡಿ

Vijayapura: One-year-old child kidnapped from district hospital: Crime detected on CCTV

Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ 

Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ 

Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…ಡ್ರೋನ್‌ ಏರ್‌ಟ್ಯಾಕ್ಸಿ

Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

18-uv-fusion

UV Fusion: ನಿಸ್ವಾರ್ಥ ಜೀವ

17-ckm

Kaduru: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದ ಕಾರ್ಯಕರ್ತ

16-pongal

Pongal: ಹೀಗೊಂದು ಪೊಂಗಲ್‌ ಪ್ರಯೋಗ

15-uv-fusion

Pendulum Wall Clock: ನಮ್ಮ ಮನೆಯಲ್ಲಿ ಒಂದು ಅದ್ಭುತ ಇದೆ ಗೊತ್ತಾ?

Vijay Raghavendra is in Rudrabhishekam Movie

Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್‌ ರಾಘವೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.