ಮಳೆಗಾಲದಲ್ಲಿ ಕಾಲುಗಳ ಬಗ್ಗೆ ಇರಲಿ ಕಾಳಜಿ
ಅರಶಿಣ ಮಿಶ್ರಣ ಹಚ್ಚುವುದರಿಂದ ಉರಿ, ಚರ್ಮ ಏಳಕುವುದನ್ನು ತಡೆಗಟ್ಟಬಹುದು.
Team Udayavani, Jun 25, 2021, 2:55 PM IST
ಮಳೆಗಾಲ ಎಂದರೆ ಸಾಕು, ಮನಸ್ಸಿಗೆ ಉಲ್ಲಾಸ, ಮಣ್ಣಿನ ಘಮ,ಇವುಗಳ ಜೊತೆ ಬರುವುದು ಮಳೆಗಾಲದ ರೋಗಗಳು. ಡೆಂಗೀ, ಚಿಕುನ್ಗು ನ್ಯ, ಕೆಮ್ಮು, ಶೀತ, ವಾಂತಿ, ಭೇದಿ, ಇತ್ಯಾದಿ ವ್ಯಾಧಿಗಳು ನಮ್ಮನ್ನು ಬಾಧೀಸುತ್ತವೆ. ಇಷ್ಟಲ್ಲದೆ, ಚರ್ಮ ವ್ಯಾಧಿಗಳು ಬಹಳವಾಗಿ ಕಾಡುತ್ತವೆ.
ಸಮಾನ್ಯವಾಗಿ ಚರ್ಮದ ಫಂಗಲ್ ಇನ್ಫೆಕ್ಷನ್ಸ್ಅಥವಾ ಶಿಲೀಂಧ್ರ ಸೋಂಕು ಕಂಡುಬರುತ್ತದೆ. ಇದು ಸಾಮಾನ್ಯವಾಗಿ ಕೈ ಬೆರಳು, ಕಾಲು ಬೆರಳು, ತೊಡೆ ಸಂಧಿ, ಕಂಕುಳು, ಕುತ್ತಿಗೆ ಹಾಗೂ ಹೆಂಗಸರಲ್ಲಿ ಸ್ತನಗಳ ಬಳಿ ಕಂಡುಬರುತ್ತವೆ.
ಕಾಲ ಬೆರಳುಗಳ ಸೋoಕನ್ನು tenia ಪೇಡಿಸ್ ಅಥವಾ Athlete’s foot ಎಂದು ಕೂಡ ಕರೆಯಲ್ಪಡುತ್ತದೆ. ಇದನ್ನು ಆಡು ಭಾಷೆಯಲ್ಲಿ ಕಾಲು ಹುಳ ತಿನ್ನುವುದು ಎಂದು ಕೂಡ ಹೇಳುತ್ತಾರೆ. ಇದು ಕಾಲುಗಳ ಬೆರಳಿನ ಮಧ್ಯೆ ಇರುವ ಚರ್ಮದ ಸೋಂಕು.
ಸೋಂಕಿನ ಸೂಚನೆಗಳು :
ಬೆರಳುಗಳ ಮಧ್ಯೆ ತುರಿಕೆ, ಚುಚ್ಚಿದ ಭಾವನೆ, ಉರಿ. ತೇವಾಂಶ ಉಂಟಾದಂತೆ ಕಾಣುವುದು ಚರ್ಮ ಸುಲಿದಂತಾಗುವುದು ಅಥವಾ ಏಳಕುವುದು
ಒಂದು ಅಥವಾ ಎರಡು ಕಾಲುಗಳಲ್ಲೂ ಕಾಣಿಸಿಕೊಳ್ಳುವುದು.
ಯಾರಿಗೆ ಕಾಡುವುದು?
ಒದ್ದೆ ನೆಲದಲ್ಲಿ, ಕೆಸರಲ್ಲಿ ಕೆಲಸ ಮಾಡುವವರು. ತುಂಬಾ ಹೊತ್ತು ಒದ್ದೆ ಸಾಕ್ಸ್ ನಲ್ಲಿ ಇರುವುದು. ಸೋಂಕಿಗೆ ಒಳಗಾದವರ ಸಾಕ್ಸ್, ಟವೆಲ್ ಗಳನ್ನು ಉಪಯೋಗಿಸುವುದು. ಪಾದದ ಚರ್ಮ ಅಥವಾ ಉಗುರಲ್ಲಿ ಗಾಯ ಇರುವವರು. ಸಕ್ಕರೆ ಖಾಯಿಲೆ ಅಥವಾ ಇಮ್ಮ್ಯೂನ್ ಡಿಸಾರ್ಡರ್ಸ್ ಇರುವವರು.
ತಡೆಗಟ್ಟುವುದು ಹೇಗೆ?
ಕೆಸರಲ್ಲಿ ಅಥವಾ ಒದ್ದೆ ನೆಲದಲ್ಲಿ ಹೋಗಿ ಬಂದ ಕೂಡಲೇ ಸಾಬೂನು, ಬಿಸಿನೀರಿನಲ್ಲಿ ಕಾಲು ಹಾಗೂ ಬೆರಳುಗಳ ನಡುವೆ ತೊಳೆದು, ಸರಿಯಾಗಿ ಒರೆಸಿ, ಒಣಗಿಸುವುದು. ಸೋಂಕುಳ್ಳವರ ಸಾಕ್ಸ್, ಟವೆಲ್ಸ್, ಶೂಸ್, ಇತ್ಯಾದಿ ವಸ್ತುಗಳನ್ನು ಉಪಯೋಗಿಸದಿರುವುದು. ಸಾಂಡಲ್ಸ್ ಮಾದರಿಯ ಚಪ್ಪಲಿ ಯಥೇಚ್ಛ ಬಳಕೆ.
ಒದ್ದೆ ಶೂ ಅಥವಾ ಸಾಕ್ಸ್ ಗಳನ್ನು ಧರಿಸದೆ ಇರುವುದು. ಗಾಳಿಯಾಡಲು ಸಹಕರಿಸುವ ಬಟ್ಟೆಯಿಂದ ಮಾಡಲ್ಪಟ್ಟ ಸಾಕ್ಸ್ ಗಳನ್ನು ಬಳಸುವುದು.
ಬಂದಾಗ ಮನೆಮದ್ದು:
ಬಿಸಿ ನೀರಿಗೆ ಉಪ್ಪು ಸೇರಿಸಿ ಅದರಲ್ಲಿ ಕಾಲುಗಳ್ಳನ್ನಿಡುವುದರಿಂದ ಸೋಂಕಿನ ಪ್ರಮಾಣ ತಗ್ಗಿಸಬಹುದು ಹಾಗೂ ಗಾಯವನ್ನು ಸ್ವಚ್ಛಗೊ ಳಿಸಬಹುದು. ಆಲೋವೆರಾ ಹಾಗೂ ಅರಶಿಣ ಮಿಶ್ರಣ ಹಚ್ಚುವುದರಿಂದ ಉರಿ, ಚರ್ಮ ಏಳಕುವುದನ್ನು ತಡೆಗಟ್ಟಬಹುದು.ಬೇವಿನ ಎಣ್ಣೆ ಹಚ್ಚುವುದು. ಬೆಳ್ಳುಳ್ಳಿ ಜಜ್ಜಿ, ಅದರ ರಸ ಸವರುವುದು.
ವೈದ್ಯರ ಬಳಿ ಯಾವಾಗ ಹೋಗಬೇಕು ?
*3 ವಾರಕ್ಕಿಂತ ಹೆಚ್ಚು ದಿನಗಳಾದರೂ ವಾಸಿಯಾಗದಿರುವುದು.
*ಗಾಯದಲ್ಲಿ ಪಸ್ ಬರುವುದು ಅಥವಾ ಜ್ವರ ಬರುವುದು.
*ಬೆರಳುಗಳ ಎಡೆಯಲ್ಲಿ ಅಲ್ಲದೆ, ಪಾದ, ಕೈ, ಕೈಬೆರಳು, ತೊಡೆ ಸಂದುಗಳಲ್ಲಿ ಸೋಂಕು ಕಾಣಿಸಿಕೊಳ್ಳುವುದು.
*ಈ tenia pedis ಸೋಂಕು ಮಹಾಮಾರಿ ಅಲ್ಲ. ಆದರೆ ನಿರ್ಲಕ್ಷದಿಂದ ವೇದನೆ ಬಹಳ. ಮಳೆಗಾಲದಲ್ಲಿ ಎಚ್ಚರವಹಿಸದಿದ್ದಲ್ಲಿ ಅಥವಾ ಅದಕ್ಕೆ ಸೂಕ್ತ ಕ್ರಮದಲ್ಲಿ ಮನೆಮದ್ದು ಮಾಡುವುದರಿಂದ ಹಿತವಾಗುವುದಾದರೆ ನಾವೇಕೆ ಮಾಡಬಾರದು?
ಡಾ. ಭಾವನಾ. ಎಂ,
ಸಹಾಯಕ ಉಪನ್ಯಾಸಕಿ – SVYASA,
Founder – Hear to heal teleclinic
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Snuff: ನಶ್ಯ ತಂದಿಟ್ಟ ಸಮಸ್ಯೆ
Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Manipal ಪಾಯ್ಸನ್ ಇನ್‌ಫಾರ್ಮೇಶನ್ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ
Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್; ಹೆತ್ತವರು ತಿಳಿದಿರಬೇಕಾದ ಅಂಶಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.