ದ್ವಿತೀಯ ಟಿ20 ಪಂದ್ಯ : ಇಂಗ್ಲೆಂಡ್‌ಗೆ ಸರಣಿ
Team Udayavani, Jun 25, 2021, 11:31 PM IST
ಕಾರ್ಡಿಫ್: ಆತಿಥೇಯ ಇಂಗ್ಲೆಂಡ್ ವಿರುದ್ಧ ದ್ವಿತೀಯ ಟಿ20 ಪಂದ್ಯದಲ್ಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಶ್ರೀಲಂಕಾ ಸರಣಿಯನ್ನು ಕಳೆದುಕೊಂಡಿದೆ. ಇಲ್ಲಿನ “ಸೋಫಿಯಾ ಗಾರ್ಡನ್’ನಲ್ಲಿ ನಡೆದ 2ನೇ ಮುಖಾ ಮುಖೀಯನ್ನು ಇಂಗ್ಲೆಂಡ್ ಡಿ-ಎಲ್ ನಿಯಮದಂತೆ 5 ವಿಕೆಟ್‌ಗಳಿಂದ ಗೆದ್ದಿತು.
ಮೊದಲು ಬ್ಯಾಟಿಂಗ್ ನಡೆಸಿದ ಲಂಕೆಗೆ ಗಳಿಸಲು ಸಾಧ್ಯವಾದದ್ದು 7 ವಿಕೆಟಿಗೆ 111 ರನ್ ಮಾತ್ರ. ಚೇಸಿಂಗ್ ವೇಳೆ 12 ಓವರ್ ಮುಗಿದ ಬಳಿಕ ಮಳೆ ಸುರಿದ ಕಾರಣ ಇಂಗ್ಲೆಂಡ್ ಗುರಿಯನ್ನು ಪರಿಷ್ಕರಿಸಲಾಯಿತು. 18 ಓವರ್‌ಗಳಲ್ಲಿ 103 ರನ್ ಟಾರ್ಗೆಟ್ ಲಭಿಸಿತು. ಇಂಗ್ಲೆಂಡ್ 16.1 ಓವರ್‌ಗಳಲ್ಲಿ 5 ವಿಕೆಟಿಗೆ 108 ರನ್ ಬಾರಿಸಿ ಜಯ ಸಾಧಿಸಿತು. ಮೊದಲ ಪಂದ್ಯವನ್ನು ಆಂಗ್ಲರ ಪಡೆ 8 ವಿಕೆಟ್‌ಗಳಿಂದ ಗೆದ್ದಿತ್ತು. ಅಂತಿಮ ಮುಖಾಮುಖೀ ಶನಿವಾರ ನಡೆಯಲಿದೆ.
ಇಂಗ್ಲೆಂಡ್ ಘಾತಕ ಬೌಲಿಂಗ್
ಲಂಕೆಯ ಬ್ಯಾಟಿಂಗ್ ಮೊದಲ ಪಂದ್ಯಕ್ಕಿಂತಲೂ ಹೀನಾಯವಾಗಿತ್ತು. ಇಂಗ್ಲೆಂಡ್ ಇನ್ನಷ್ಟು ಘಾತಕ ಬೌಲಿಂಗ್ ನಡೆಸಿತು. ಕುಸಲ್ ಮೆಂಡಿಸ್ (39) ಮತ್ತು ಕುಸಲ್ ಪೆರೆರ (21) 3ನೇ ವಿಕೆಟಿಗೆ ಸಣ್ಣದೊಂದು ಹೋರಾಟ ನಡೆಸಿದರೂ ಪ್ರಯೋಜನವಾಗಲಿಲ್ಲ.
ಇದನ್ನೂ ಓದಿ :ವಿಂಬಲ್ಡನ್ ಡ್ರಾ : ಮೊದಲ ಸುತ್ತಿನಲ್ಲಿ ಜೊಕೋಗೆ ಸುಲಭ ಎದುರಾಳಿ
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ-20 ಓವರ್‌ಗಳಲ್ಲಿ 7 ವಿಕೆಟಿಗೆ 111 (ಮೆಂಡಿಸ್ 39, ಪೆರೆರ 21, ವುಡ್ 18ಕ್ಕೆ 2, ರಶೀದ್ 24ಕ್ಕೆ 2). ಇಂಗ್ಲೆಂಡ್-16.1 ಓವರ್‌ಗಳಲ್ಲಿ 5 ವಿಕೆಟಿಗೆ 108 (ಲಿವಿಂಗ್‌ಸ್ಟೋನ್ ಔಟಾಗದೆ 29, ಬಿಲ್ಲಿಂಗ್ಸ್ 24, ಕರನ್ ಔಟಾಗದೆ 16, ಹಸರಂಗ 20ಕ್ಕೆ 2).
ಪಂದ್ಯಶ್ರೇಷ್ಠ: ಲಿಯಮ್ ಲಿವಿಂಗ್‌ಸ್ಟೋನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.