![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jun 26, 2021, 7:10 AM IST
ರಾಯಚೂರು: ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೊರೊನಾ 3ನೇ ಅಲೆಗೆ ಸಿದ್ಧತೆ ಆರಂಭಿಸಿವೆ. ಕೇಂದ್ರವು ಪಿಎಂ ಕೇರ್ ನಡಿ ರಾಜ್ಯಕ್ಕೆ 50 ಆಮ್ಲಜನಕ ಉತ್ಪಾದನ ಘಟಕಗಳನ್ನು ಮಂಜೂರು ಮಾಡಿದೆ.
ಕೊರೊನಾ ಸಂದರ್ಭದಲ್ಲಿ ಆಮ್ಲಜನಕ ಸಿಗದೆ ಇದ್ದಾಗ ಬಹುತೇಕ ರಾಜ್ಯಗಳಿಂದ ಕೇಂದ್ರಕ್ಕೆ ಪಿಎಸ್‌ಎ ಆಮ್ಲಜನಕ ಉತ್ಪಾದನ ಘಟಕಗಳಿಗಾಗಿ ಬೇಡಿಕೆ ಬಂದಿತ್ತು. ಈಗ ಆದ್ಯತೆಯ ಅನುಸಾರ ಕೇಂದ್ರ ಸರಕಾರವು ಆಯಾ ರಾಜ್ಯಗಳಿಗೆ ಘಟಕಗಳನ್ನು ಮಂಜೂರು ಮಾಡುತ್ತಿದೆ.
ಎಲ್ಲೆಲ್ಲಿ ಘಟಕ?
ಬೆಂಗಳೂರು ನಗರ, ಗ್ರಾಮೀಣ ಸೇರಿ 6 ಘಟಕ, ಕಲಬುರಗಿ, ಮೈಸೂರು ಜಿಲ್ಲೆಗೆ ತಲಾ 3, ಬೀದರ್, ಗದಗ, ದಾವಣಗೆರೆ, ಕೊಡಗು, ಕೊಪ್ಪಳ, ಮಂಡ್ಯ, ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಉತ್ತರ ಕನ್ನಡ ಜಿಲ್ಲೆಗಳಿಗೆ ತಲಾ 2, ಉಳಿದ ಜಿಲ್ಲೆಗಳಿಗೆ ಒಂದೊಂದು ಘಟಕ ಮಂಜೂರಾಗಿದೆ.
ಜಿಲ್ಲೆಗೆ ನೋಡಲ್ ಅಧಿಕಾರಿ
ರಾಜ್ಯದಲ್ಲಿ ಘಟಕಗಳ ಸ್ಥಾಪನೆಗೆ ಡಿಫೆನ್ಸ್ ರಿಸರ್ಚ್ ಆ್ಯಂಡ್ ಡೆವಲಪ್‌ಮೆಂಟ್ ಆರ್ಗನೈಸೇಶನ್ (ಡಿಆರ್ ಡಿಒ), ಸೆಂಟ್ರಲ್ ಮೆಡಿಕಲ್ ಸರ್ವೀಸ್ ಸೊಸೈಟಿ (ಸಿಎಂಎಸ್‌ಎಸ್), ಎಚ್‌ಎಲ್‌ಎಲ್ ಇನ್ಫ್ರಾಟೆಕ್ ಸರ್ವಿಸ್ ಲಿ. ಸಂಸ್ಥೆಗಳಿಗೆ ಹೊಣೆ ನೀಡಲಾಗಿದೆ. ಘಟಕ ನಿರ್ವಹಣೆಗೆ ಜಿಲ್ಲೆಗೆ ಒಬ್ಬ ನೋಡಲ್ ಅಧಿಕಾರಿ, ಇಬ್ಬರು ತಾಂತ್ರಿಕ ಸಿಬಂದಿ ನಿಯೋಜಿಸಲಾಗುತ್ತಿದೆ. ರಾಜ್ಯಕ್ಕೆ ಒಬ್ಬ ನೋಡಲ್ ಅಧಿಕಾರಿ ಕಾರ್ಯ ನಿರ್ವಹಿಸಲಿದ್ದಾರೆ.
ಕೇಂದ್ರ ಸರಕಾರ 1 ಸಾವಿರ ಎಲ್‌ಪಿಎಂ ಸಾಮರ್ಥ್ಯದ ಆಮ್ಲಜನಕ ಉತ್ಪಾದನ ಘಟಕ ಮಂಜೂರು ಮಾಡಿರುವ ಮಾಹಿತಿ ಲಭ್ಯವಾಗಿದೆ.
-ಡಾ| ಬಸವರಾಜ ವಿ. ಪೀರಾಪುರ, ರಿಮ್ಸ್ ನಿರ್ದೇಶಕರು
You seem to have an Ad Blocker on.
To continue reading, please turn it off or whitelist Udayavani.