ಆನ್‌ಲೈನ್ ತರಗತಿಗೆ ನೆಟ್‌ವರ್ಕ್ ಸಮಸ್ಯೆ
Team Udayavani, Jun 26, 2021, 12:21 PM IST
ಸಾಂದರ್ಭಿಕ ಚಿತ್ರ
ಬಳ್ಳಾರಿ: ಕೋವಿಡ್ ಸೋಂಕು ನಿಯಂತ್ರಣಕ್ಕೆ ವಿಧಿಸಲಾದ ಲಾಕ್ ಡೌನ್‌ನಿಂದ ಬದಲಾದ ಆಧುನಿಕ ಶೈಕ್ಷಣಿಕ ಪದ್ಧತಿಯನ್ನು ಅಳವಡಿಸಿಕೊಳ್ಳುವಲ್ಲಿ ಗಣಿನಾಡಿನ ವಿದ್ಯಾರ್ಥಿಗಳು ಹಿಂದೆ ಬಿದ್ದಿದ್ದಾರೆ. ಗ್ರಾಮೀಣ ಭಾಗದ ಬಹುತೇಕ ವಿದ್ಯಾರ್ಥಿಗಳು ಸ್ಮಾರ್ಟ್‌ಫೋನ್, ಇಂಟರ್‌ನೆಟ್ ಸೌಲಭ್ಯಗಳ ಕೊರತೆಯಿಂದ ಸ್ನೇಹಿತರ, ಸಂಬಂಧಿಕರ ಮೊಬೈಲ್, ವೈಫೈಗಳನ್ನು ಆಶ್ರಯಿಸಿದ್ದರೆ ಈ ಎರಡೂ ಇಲ್ಲದ ವಿದ್ಯಾರ್ಥಿಗಳಿಗೆ ಶಿಕ್ಷಕರೇ ಮಾದರಿ ಪ್ರಶ್ನೋತ್ತರಗಳನ್ನು ನೀಡಿ ಮನೆಯಲ್ಲೇ ಬರೆಸಿ ಪರೀಕ್ಷೆಗೆ ಸಿದ್ಧಪಡಿಸಿದ್ದಾರೆ.
ಕೋವಿಡ್ ಸೋಂಕು, ಲಾಕ್‌ಡೌನ್ ವಿಧಿಸಿ ಶಾಲಾ-ಕಾಲೇಜುಗಳನ್ನು ಬಂದ್ ಮಾಡಿರುವ ರಾಜ್ಯ ಸರ್ಕಾರ, ಮಕ್ಕಳ ಶಿಕ್ಷಣಕ್ಕೆ ಯಾವುದೇ ಅಡ್ಡಿಯಾಗಬಾರದೆಂಬ ಉದ್ದೇಶದಿಂದ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಿ ಆನ್‌ಲೈನ್ ತರಗತಿಗೆ ಅವಕಾಶ ಕಲ್ಪಿಸಿತು. ಆದರೆ, ದಿಢೀರ್‌ಆಗಿ ಬಂದ ಈ ಶೈಕ್ಷಣಿಕ ಪದ್ಧತಿ ನಿರೀಕ್ಷಿತಪ್ರಮಾಣದಲ್ಲಿ ವಿದ್ಯಾರ್ಥಿಗಳನ್ನು ತಲುಪಿಲ್ಲ. ಅದರಲ್ಲೂ ಮುಖ್ಯವಾಗಿಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳುಸ್ಮಾರ್ಟ್‌ಫೋನ್, ಸಮರ್ಪಕ ಇಂಟರ್‌ನೆಟ್ ಸೌಲಭ್ಯಗಳಿಲ್ಲದೇ ಹಲವು ಸಮಸ್ಯೆಗಳನ್ನು ಎದುರಿಸುವಂತೆ ಮಾಡಿತು.
ಹಳ್ಳಿ ವಿದ್ಯಾರ್ಥಿಗಳಿಗೆ ಸರಣಿ ಸಮಸ್ಯೆ: ಗ್ರಾಮೀಣ ಭಾಗದ ಹಳ್ಳಿಗಾಡಿನ ಬಡವಿದ್ಯಾರ್ಥಿಗಳಲ್ಲಿ ಸ್ಮಾರ್ಟ್‌ಫೋನ್‌ಗಳೇ ಇರಲಿಲ್ಲ. ಕೆಲವೊಂದು ವಿದ್ಯಾರ್ಥಿಗಳಿಗೆ ಪೋಷಕರು ಕೊಡಿಸಿದ್ದರೆ, ಇನ್ನು ಕೆಲ ವಿದ್ಯಾರ್ಥಿಗಳು ಕೂಲಿ ಕೆಲಸ ಮಾಡಿ ಸ್ವತಃ ಫೋನ್ ಖರೀದಿಸಿದ್ದಾರೆ. ಸ್ಮಾರ್ಟ್‌ಫೋನ್ ಇಲ್ಲದ ಇನ್ನು ಕೆಲ ವಿದ್ಯಾರ್ಥಿಗಳು ಪಕ್ಕದ ಮನೆಯವರ ಅಥವಾ ಸ್ನೇಹಿತರ ಬಳಿಗೆ ಹೋಗಿ ಪ್ರತಿದಿನ ಆನ್‌ಲೈನ್ ತರಗತಿಗೆ ಹಾಜರಾಗಿದ್ದಾರೆ. ಅಲ್ಲದೇ, ಸ್ಮಾರ್ಟ್ ಫೋನ್ ಇದ್ದ ವಿದ್ಯಾರ್ಥಿಗಳು ಸಹ ಪ್ರತಿ ತಿಂಗಳು ಇಂಟರ್‌ನೆಟ್ ರೀಚಾರ್ಜ್ ಮಾಡಿಸಲು ಪೋಷಕರು ಸಮಯಕ್ಕೆ ಸರಿಯಾಗಿ ಹಣ ನೀಡದಿದ್ದರೆ, ನೀಡಲುತಡವಾದರೆ ಅಥವಾ ಕೇಳಲು ಹಿಂಜರಿದುಅವರಿವರನ್ನು ವೈಫೆ„ ಕೇಳಿ ಆನ್‌ಲೈನ್ ತರಗತಿಗೆ ಹಾಜರಾಗಿದ್ದಾರೆ. ಇವೆಲ್ಲ ಇದ್ದರೂ ಕೆಲವೊಮ್ಮೆ ಸಮರ್ಪಕ ನೆಟ್ ವರ್ಕ್ ಸಮಸ್ಯೆ ಎದುರಾಗಿದೆ. ಹೀಗೆ ಒಂದೊಕ್ಕೊಂದು ಸರಣಿ ಸಮಸ್ಯೆಗಳನ್ನು ಎದುರಿಸುವ ವಿದ್ಯಾರ್ಥಿಗಳಿಗೆ ಸೂಕ್ತ ಬೋಧನೆ ಸಿಗುವುದೇ ಕಷ್ಟವಾಗಿದೆ.
ಶೇ. 40ರಷ್ಟು ವಿದ್ಯಾರ್ಥಿಗಳಿಗೆ ಸಮಸ್ಯೆ: ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿಯೊಬ್ಬರು ಹೇಳುವಂತೆ ತಮ್ಮ ಸಮೀಕ್ಷೆ ಪ್ರಕಾರ ಶೇ. 60 ವಿದ್ಯಾರ್ಥಿಗಳಲ್ಲಿ ಸ್ಮಾರ್ಟ್‌ಫೋನ್‌ಗಳಿವೆ. ಶೇ. 20ರಷ್ಟು ವಿದ್ಯಾರ್ಥಿಗಳಿಗೆ ಮನೆಗಳಲ್ಲಿ ಬಳಸುವ ಚಿಕ್ಕ ಚಿಕ್ಕ ಮೊಬೈಲ್‌ಗಳಿವೆ. ಇನ್ನುಳಿದ ಶೇ. 20ರಷ್ಟು ವಿದ್ಯಾರ್ಥಿಗಳಿಗೆ ಮೊಬೈಲ್‌ಗಳೇ ಇಲ್ಲ. ಆನ್‌ಲೈನ್ ತರಗತಿಗಳು ಏಕಮುಖವಾದ್ದರಿಂದ ಎಲ್ಲರಿಗೂ ಅವಕಾಶ ನೀಡುವ ಸಲುವಾಗಿ ವಿದ್ಯಾರ್ಥಿಗಳು ತಮ್ಮೆಲ್ಲ ಸಂದೇಹಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತಾಂತ್ರಿಕ ತೊಂದರೆಯಿಂದಾಗಿ ಕೆಲವೊಮ್ಮೆ ಶಿಕ್ಷಕರ ಧ್ವನಿ ಸಮರ್ಪಕವಾಗಿ ಕೇಳಲ್ಲ.
ನಾವು ಕೇಳುವ ಸಂದೇಹಗಳು ಶಿಕ್ಷಕರಿಗೆ ಕೇಳಿಸಲ್ಲ. ಹೀಗಾಗಿ ಆನ್‌ಲೈನ್ ತರಗತಿ ವಿದ್ಯಾರ್ಥಿಗಳನ್ನು ಸಮರ್ಪಕವಾಗಿ ತಲುಪಿಲ್ಲ. ವಿದ್ಯಾರ್ಥಿಗಳ ಪೋಷಕರಿಗೂ ಈ ಬಗ್ಗೆ ಅಷ್ಟಾಗಿ ತಿಳಿವಳಿಕೆ ಇಲ್ಲದಿರುವುದು ಆನ್‌ಲೈನ್ ಶಿಕ್ಷಣ ಹಿನ್ನಡೆಗೆ ಕಾರಣ ಎನ್ನಲಾಗುತ್ತಿದೆ.
ಸಮರ್ಪಕ ಮೊಬೈಲ್‌ಗಳಿಲ್ಲದ ಶೇ. 40ರಷ್ಟು ವಿದ್ಯಾರ್ಥಿಗಳನ್ನು ಗುರುತಿಸಿರುವ ಆಯಾ ಶಾಲೆಗಳ ಶಿಕ್ಷಕರು, ಇತರೆ ಮೂಲಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಮೊಬೈಲ್‌ಗಳು ಇಲ್ಲದ ವಿದ್ಯಾರ್ಥಿಗಳು ದೂರದರ್ಶನ (ಚಂದನ ಟಿವಿ)ದಲ್ಲಿ ವಿಷಯವಾರು ಪ್ರಸಾರವಾಗುವುದನ್ನು ವೀಕ್ಷಿಸಬಹುದು. ಜತೆಗೆ ಮಾದರಿ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಿ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಮನೆಗಳಿಗೆ ತಲುಪಿಸಿ ಅವುಗಳನ್ನು ಮನೆಯಲ್ಲೇ ಬರೆದು ಪರೀಕ್ಷೆಯ ಬಗ್ಗೆ ಜಾಗೃತಿ ಮೂಡಿಸಿದ್ದಾರೆ ಎನ್ನುತ್ತಾರೆ ಅವರು.
ಅಲ್ಪಮಟ್ಟದಲ್ಲಿ ಆನ್‌ಲೈನ್ ತರಗತಿ ಯಶಸ್ವಿ: ಇನ್ನು ಪದವಿ ಹಂತದಲ್ಲಿ ಆನ್ ಲೈನ್ ತರಗತಿಗಳು ಭಾಗಶಃ ತಲುಪಿದೆ ಎನ್ನಬಹುದು. ಬಹುತೇಕ ವಿದ್ಯಾರ್ಥಿಗಳ ಬಳಿ ಸ್ಮಾರ್ಟ್‌ಫೋನ್‌ಗಳಿವೆ. ತಂತ್ರಜ್ಞಾನ ಬಳಸುವಷ್ಟು ಬೌದ್ಧಿಕ ಮಟ್ಟವೂ ಅವರಲ್ಲಿರುವ ಕಾರಣ ಅಲ್ಪಮಟ್ಟದಲ್ಲಿ ಆನ್‌ಲೈನ್ ತರಗತಿಗಳು ಯಶಸ್ವಿಯಾಗಿದೆ. ಬೋಧಕರು ಪಠ್ಯ ಬೋಧನೆಯನ್ನು ವೀಡಿಯೋ ರೆಕಾರ್ಡ್ ಮಾಡಿ ವಿದ್ಯಾರ್ಥಿಗಳ ಗ್ರೂಪ್‌ಗ್ಳಿಗೆ ಶೇರ್ ಮಾಡಿದ್ದಾರೆ. ಇದೂ ಇಲ್ಲದ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವನ್ನೇ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ವಿವಿ ಬೋಧಕರು ತಿಳಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ಶೇ. 40ರಷ್ಟು ವಿದ್ಯಾರ್ಥಿಗಳಲ್ಲಿ ಸ್ಮಾರ್ಟ್‌ಫೋನ್ ಇಲ್ಲ. ಫೋನ್ ಇದ್ದ ವಿದ್ಯಾರ್ಥಿಗಳಿಗೂ ಕೆಲವೊಮ್ಮೆ ತಾಂತ್ರಿಕ ಸಮಸ್ಯೆಗಳು ಎದುರಾಗಿವೆ. ಇದರ ನಡುವೆ ಬಹುತೇಕ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳಿಗೆ ಹಾಜರಾಗಿದ್ದಾರೆ ಎಂಬ ಮಾಹಿತಿ ಇದೆ. ಇನ್ನು ಫೋನ್ ಇಲ್ಲದ ವಿದ್ಯಾರ್ಥಿಗಳಿಗೆಶಿಕ್ಷಕರೇ ದೂರದರ್ಶನದಲ್ಲಿ ಪ್ರಸಾರವಾಗುವ ಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಮಾದರಿ ಪ್ರಶ್ನೆ ಪತ್ರಿಕೆಗಳನ್ನು ನೀಡಿ ಪರೀಕ್ಷೆಗೆ ಸಿದ್ಧಗೊಳಿಸಿದ್ದಾರೆ. -ಎರ್ರಿಸ್ವಾಮಿ,ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ, ಬಳ್ಳಾರಿ
ಆನ್‌ಲೈನ್ ತರಗತಿ ಸಲುವಾಗಿ ತಂದೆಯಿಂದ ಸ್ವಲ್ಪ ಹಣ ಪಡೆದು, ನಾನು ಕೂಲಿ ಕೆಲಸ ಮಾಡಿ ಬಂದ ಹಣದಲ್ಲಿ ಸ್ಮಾರ್ಟ್ ಫೋನ್ ಖರೀದಿಸಿದ್ದೇನೆ. ಆದರೆತಿಂಗಳಾಗುತ್ತಿದ್ದಂತೆ 250-300 ರೂಗಳ ಇಂಟರ್‌ನೆಟ್ ಪ್ಯಾಕ್ ಹಾಕಿಸುವುದು ಸಮಸ್ಯೆಯಾಗಿದೆ. ಪದೇ ಪದೇ ಪೋಷಕರನ್ನು ಹಣ ಕೇಳಲು ಬೇಸರವಾಗಿ ಅಥವಾ ಅವರು ನೀಡುವುದು ತಡವಾದಲ್ಲಿ ಸ್ನೇಹಿತರ ವೈಫೈ ಮೊರೆ ಹೋಗುತ್ತಿದ್ದೇವೆ. ಅವರು ಇದ್ದಷ್ಟು ಹೊತ್ತು ವೈಫೆ„ ಬಳಸುವುದು. ಕೆಲವೊಮ್ಮೆ ನೆಟ್ ಇಲ್ಲದಿದ್ದಾಗ ತರಗತಿಗೆ ಹಾಜರಾಗಿಲ್ಲ.-ಶಿವರಾಜ್, 10ನೇ ತರಗತಿ ವಿದ್ಯಾರ್ಥಿ ಹಂದ್ಯಾಳ್ ಗ್ರಾಮ
ನಮ್ಮ ಮನೆಯಲ್ಲಿ ಸ್ಮಾರ್ಟ್‌ಫೋನ್ ಇಲ್ಲ. ನಾವುಬಡವರಾಗಿದ್ದರಿಂದ ಖರೀದಿಸುವ ಗೋಜಿಗೂ ಹೋಗಿಲ್ಲ. ಹಾಗಾಗಿ ಆನ್‌ಲೈನ್ ತರಗತಿಗೆ ಹಾಜರಾಗುವುದು ನನಗೆ ಕಷ್ಟವಾಗುತ್ತಿತ್ತು.ದೂರದಲ್ಲಿರುವ ಸ್ನೇಹಿತರ ಮನೆಗೆ ಹೋಗಿ ಅವರ ಮೊಬೈಲ್‌ನಲ್ಲೇ ಹಾಜರಾಗುತ್ತಿದ್ದೆ.ಕೆಲವೊಮ್ಮೆ ಅವರಿಲ್ಲದಿದ್ದಾಗ ಮನೆಯಲ್ಲೇ ಪಠ್ಯಪುಸ್ತಕ ಓದುತ್ತಿದ್ದೆ.ಮೇಲಾಗಿ ಯಾಳಿ³ ಗ್ರಾಮ ಅಂತರಾಜ್ಯ ಗಡಿಗ್ರಾಮವಾದ್ದರಿಂದ ನೆಟ್‌ವರ್ಕ್ ಸರಿಯಾಗಿ ಬರಲ್ಲ.-ಶ್ರಾವಣಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ, ಯಾಳಿ³ ಗ್ರಾಮ
ನಮ್ಮ ಮನೆಯಲ್ಲಿ ಚಿಕ್ಕ ಫೋನ್ ಇದೆ. ಅದರಲ್ಲಿ ನೆಟ್‌ವರ್ಕ್ ಬರಲ್ಲ. ಹಾಗಾಗಿ ಪಕ್ಕದ ಮನೆಯವರ ಮೊಬೈಲ್‌ನಲ್ಲಿ ಆನ್ ಲೈನ್ ತರಗತಿಗೆ ಹಾಜರಾಗುತ್ತಿದ್ದೆ. ಕೆಲವೊಮ್ಮೆ ಅವರು ಬೇಗ ವಾಪಸ್ ಪಡೆಯುತ್ತಿದ್ದು, ತರಗತಿಯನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದೆ.-ರೇವತಿ, 10ನೇ ತರಗತಿ, ಹಗರಿ ಫಾರ್ಮ್ ಶಾಲೆ ವಿದ್ಯಾರ್ಥಿನಿ
-ವೆಂಕೋಬಿ ಸಂಗನಕಲ್ಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.