ಆರೋಗ್ಯ ಇಲಾಖೆ ಆಸ್ಪತ್ರೆಗಳಲ್ಲಿ ಹೆಚ್ಚಿನ ಕೊರೊನಾ ರೋಗಿಗಳಿಗೆ ಚಿಕಿತ್ಸೆ
Team Udayavani, Jun 26, 2021, 1:20 PM IST
ಮುಂಬಯಿ: ರಾಜ್ಯ ಸರಕಾರದ ವತಿಯಿಂದ ಅಸಮರ್ಪಕ ನಿಧಿ ಮತ್ತು ಸಿಬಂದಿ ಕೊರತೆಯ ಹೊರತಾಗಿಯೂ ಕೊರೊನಾ ಆತಂಕದ ಸಂದರ್ಭ ರಾಜ್ಯದ ಆರೋಗ್ಯ ಇಲಾಖೆಯ ಆಸ್ಪತ್ರೆಗಳಲ್ಲಿ ಹೆಚ್ಚಿನ ಸಂಖ್ಯೆಯ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡುವುದರ ಜತೆಗೆ ರಾಜ್ಯ ಆರೋಗ್ಯ ಇಲಾಖೆಯು ಕಡಿಮೆ ಮರಣ ಪ್ರಮಾಣವನ್ನು ಹೊಂದಿದೆ.
ಆರೋಗ್ಯ ಇಲಾಖೆಯ ಆಸ್ಪತ್ರೆಗಳಲ್ಲಿನ ವೈದ್ಯರು ಒಂದು ವರ್ಷಕ್ಕೂ ಹೆಚ್ಚು ಕಾಲ ದಿಂದ ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ. ಅಂತೆಯೇ ಮನಪಾ ಆಸ್ಪತ್ರೆಗಳು ಮತ್ತು ಇತರ ಖಾಸಗಿ ಆಸ್ಪತ್ರೆಗಳಲ್ಲಿಯೂ ಕೊರೊನಾ ಚಿಕಿತ್ಸೆಯನ್ನು ನೀಡಲಾಗಿದೆ. ಆರೋಗ್ಯ ಇಲಾಖೆಯ ಆಸ್ಪತ್ರೆಗಳಲ್ಲಿನ ವೈದ್ಯರಿಗೆ ಕೊರೊನಾ ರೋಗಿಗಳ ಚಿಕಿತ್ಸೆಯ ಜತೆಗೆ ವ್ಯಾಕ್ಸಿನೇಶನ್, ಮಕ್ಕಳ ಆರೋಗ್ಯದ ಕಾಳಜಿ ಮತ್ತು ವಿವಿಧ ರಾಷ್ಟ್ರೀಯ ಮಟ್ಟದ ಆರೋಗ್ಯ ಸಂಬಂಧಿತ ಅಭಿಯಾನಗಳಲ್ಲಿ ಪಾಲ್ಗೊಳ್ಳ ಬೇಕಾಯಿತು. ಕೊರೊನಾ ಅವಧಿ ಯಲ್ಲಿ ಗರ್ಭವತಿಯರ, ತಾಯಿ ಮತ್ತು ಮಕ್ಕಳ ಮರಣ ಪ್ರಮಾಣವನ್ನು ತಡೆಗಟ್ಟಲು ಆರೋಗ್ಯ ಇಲಾಖೆ ಜಾಗರೂಕತೆಯಿಂದ ಕಾರ್ಯ ನಿರ್ವಹಿಸುತ್ತಿದೆ ಎಂದು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ| ಪ್ರದೀಪ್ ವ್ಯಾಸ್ ತಿಳಿಸಿದ್ದಾರೆ.
ಆರೋಗ್ಯ ಇಲಾಖೆಯಿಂದ ಮಹತ್ತರ ಪಾತ್ರ
ರಾಜ್ಯದ ಸಮಗ್ರ ಆರೋಗ್ಯ ಮತ್ತು ಕೊರೊನಾ ಚಿಕಿತ್ಸಾ ಯೋಜನೆಯಲ್ಲಿ ಆರೋಗ್ಯ ಇಲಾಖೆಯ ಪ್ರಮುಖ ಪಾತ್ರವಿದೆ. ಆರೋಗ್ಯ ಇಲಾಖೆಯ ಆಸ್ಪತ್ರೆ ಗಳಲ್ಲಿ ಶೇ. 38.31ರಷ್ಟು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಎಲ್ಲ ಮನಪಾ ಆಸ್ಪತ್ರೆಗಳಲ್ಲಿ ಒಟ್ಟು ಶೇ. 32.76ರಷ್ಟು ರೋಗಿಗಳು, ಖಾಸಗಿ ಆಸ್ಪತ್ರೆಗಳಲ್ಲಿ ಶೇ. 16.75 ಮತ್ತು 18 ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ. 1.22ರಷ್ಟು ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. ಇದಲ್ಲದೆ ಕೆಲವು ಕೊರೊನಾ ರೋಗಿಗಳಿಗೆ ಕೇಂದ್ರ ಸರಕಾರಿ ಆಸ್ಪತ್ರೆ, ರೈಲ್ವೇ, ರಕ್ಷಣಾ ಇಲಾಖೆ ಆಸ್ಪತ್ರೆಗಳು ಮತ್ತು ಮಹಾತ್ಮಾ ಫುಲೆ ಜನ ಆರೋಗ್ಯ ಯೋಜನೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಆರೋಗ್ಯ ಇಲಾಖೆಯ ಜಿÇÉಾ ಆಸ್ಪತ್ರೆ ಗಳು ಮತ್ತು ಗ್ರಾಮೀಣ ಆಸ್ಪತ್ರೆಗಳಲ್ಲಿ ಸುಮಾರು 48,000 ಹಾಸಿಗೆಗಳು ಲಭ್ಯ ವಿವೆ. ಇವುಗಳಲ್ಲಿ ಹೆಚ್ಚಿನವು ಕೊರೊನಾ ರೋಗಿಗಳಿಗೆ ಮೀಸಲಾಗಿವೆ. ಈ ಆಸ್ಪತ್ರೆಗಳಲ್ಲಿ ಈ ವರೆಗೆ 22,72,283 ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. ಈ ಪೈಕಿ 22,25,839 ರೋಗಿಗಳು ಚೇತರಿಸಿಕೊಂಡಿದ್ದು, 33,808 ರೋಗಿಗಳು ಸಾವನ್ನಪ್ಪಿ¨ªಾರೆ. ಆರೋಗ್ಯ ಇಲಾಖೆಯ ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳ ಮರಣ ಪ್ರಮಾಣವು ಶೇ. 1.48 ರಷ್ಟಿದ್ದು, ಇದು ರಾಷ್ಟ್ರೀಯ ಮತ್ತು ರಾಜ್ಯದ ಮರಣ ಪ್ರಮಾಣಕ್ಕಿಂತ ಕಡಿಮೆಯಾಗಿದೆ.
ಮನಪಾ ಆಸ್ಪತ್ರೆಗಳಲ್ಲಿ ಒಟ್ಟು 19,11,697 ರೋಗಿಗಳಿಗೆ ಚಿಕಿತ್ಸೆ
ಎಲ್ಲ ಮನಪಾ ಆಸ್ಪತ್ರೆಗಳಲ್ಲಿ ಒಟ್ಟು 19,11,697 ರೋಗಿಗಳು ಚಿಕಿತ್ಸೆ ಪಡೆ ದರೆ, 24,508 ರೋಗಿಗಳು ಸಾವನ್ನಪ್ಪಿ ¨ªಾರೆ. ಈ ಪೈಕಿ 7,21,963 ರೋಗಿಗಳು ಮುಂಬಯಿ ಮುನ್ಸಿಪಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಈ ವರೆಗೆ 15,338 ಮಂದಿ ಸಾವನ್ನಪ್ಪಿ¨ªಾರೆ. ಬಳಿಕದ ಸ್ಥಾನಗಳಲ್ಲಿ ಪುಣೆ, ನಾಗಪುರ ಮತ್ತು ಇತರ ಮಹಾನಗರ ಪಾಲಿಕೆಗಳು ಸೇರಿವೆ. ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟು 9,21,846 ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದ್ದು, ಈ ಪೈಕಿ 30,492 ಮಂದಿ ಸಾವನ್ನಪ್ಪಿದ್ದಾರೆ. ಸಾವಿನ ಪ್ರಮಾಣವು ಶೇ. 3.11ರಷ್ಟಿದ್ದರೆ, ಮಹಾತ್ಮಾ ಫುಲೆ ಜನ ಆರೋಗ್ಯ ಯೋಜನೆಯ ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟು 74,538 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. 5,183 ಸಾವುಗಳನ್ನು ದಾಖಲಿಸಿದ್ದು, ಮರಣ ಪ್ರಮಾಣ 6.94ರಷ್ಟಿದೆ. ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಒಟ್ಟು 71,286 ರೋಗಿ ಗಳಿಗೆ ಚಿಕಿತ್ಸೆ ನೀಡಲಾಗಿದೆ. 1,826 ಸಾವುಗಳು ವರದಿಯಾಗಿದ್ದು, ಮರಣ ಪ್ರಮಾಣ ಶೇ. 2.64ರಷ್ಟಿದೆ.
3ನೇ ಅಲೆ ಎದುರಿಸಲು ಸಿದ್ಧತೆ
ಜೂ. 16ರ ವರೆಗೆ ರಾಜ್ಯದಲ್ಲಿ ನೋಂದಾಯಿತ 58,33,865 ರೋಗಿ ಗಳಲ್ಲಿ 22,25,839 ರೋಗಿಗಳು ಅಥವಾ ಶೇ. 38.94 ರೋಗಿಗಳು ಆರೋಗ್ಯ ಇಲಾಖೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈಗ ಆರೋಗ್ಯ ಇಲಾಖೆ ಮೂರನೇ ಅಲೆಯನ್ನು ಎದುರಿಸಲು ಸಿದ್ಧತೆ ನಡೆಸುತ್ತಿದೆ. ಮಕ್ಕಳಿಗೆ ಪ್ರತ್ಯೇಕ ಹಾಸಿಗೆಗಳು, ಉಪಕರಣಗಳು ಮತ್ತು ಔಷಧಗಳನ್ನು ಒದಗಿಸುವುದರ ಜತೆಗೆ ಮಕ್ಕಳ ವೈದ್ಯರ ನೇಮಕಾತಿಯ ಕೆಲಸ ನಡೆಯುತ್ತಿದೆ. ಆಮ್ಲಜನಕ ಉತ್ಪಾದನೆಯ ಯೋಜನೆ ನಡೆಯುತ್ತಿದೆ. ಆರೋಗ್ಯ ಇಲಾಖೆ ಮಳೆಗಾಲದ ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ಸಿದ್ಧತೆ ಮಾಡಿಕೊಂಡಿದೆ. ತಾಯಂದಿರು ಮತ್ತು ಮಕ್ಕಳ ಮರಣವನ್ನು ತಡೆಗಟ್ಟಲು ಲಸಿಕೆ ನೀಡುವ ಕಾರ್ಯಕ್ರಮವನ್ನು ಚುರುಕುಗೊಳಿಸಬೇಕಾಗಿದೆ ಎಂದು ಡಾ| ಪ್ರದೀಪ್ ವ್ಯಾಸ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.