ಸಂಚಾರ ಮುಗಿಸಿದ ಸಂಚಾರಿಗೆ ನುಡಿನಮನ


Team Udayavani, Jun 27, 2021, 10:11 AM IST

Untitled-1

ಬದುಕಿನ ಪಾತ್ರಕ್ಕೆ ತೆರೆ ಎಳೆದು, ಕಾಣದ ದಾರಿಯ ಸಂಚಾರ ಪ್ರಾರಂಭಿಸಿದ ಸಂಚಾರಿ ವಿಜಯ್‌ ನಮ್ಮ ಕನ್ನಡದ ಹೆಮ್ಮೆ.

ಸಂಚಾರಿ ಎಂದರೆ ಸಂಚಲನ ಮೂಡಿಸಿದ ರಾಷ್ಟ್ರಪ್ರಶಸ್ತಿ ವಿಜೇತ ನಟ ಇನ್ನು ನಮ್ಮೆಲ್ಲರ ಮನದಲ್ಲಿ ನೆನಪು ಮಾತ್ರ. ಜುಲೈ  17ರ 1983 ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಿಂಗಟಗೆರೆ ಹೋಬಳಿ, ಲಿಂಗಾಪುರ ಗ್ರಾಮದಲ್ಲಿ ಈ ಉದಯೋನ್ಮುಖ ದೈತ್ಯ ಪ್ರತಿಭೆಯ ಉದಯವಾಯಿತು. ತಂದೆ ಬಸವರಾಜಯ್ಯ ಚಿತ್ರ ಕಲಾವಿದರಾಗಿದ್ದು, ಸಂಗೀತ ವಾದಕರಾಗಿದ್ದರು. ತಾಯಿ ಗೌರಮ್ಮ ಜನಪದ ಕಲಾವಿದೆಯಾಗಿದ್ದು, ಭದ್ರಾವತಿ ಆಕಾಶವಾಣಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ಇಡೀ ಕುಟುಂಬವೇ ಕಲೆಯನ್ನು ಆರಾಧಿಸುತ್ತಿದ್ದಿದ್ದರಿಂದ ಸಂಚಾರಿ ವಿಜಯ್‌ ಬಾಲ್ಯದಿಂದಲೇ ಕಲಾ ಮಾತೆಯ ಆರಾಧನೆಯಲ್ಲಿ ತೊಡಗಿಸಿಕೊಂಡು ಚಿತ್ರ ಕಲಾವಿದರಾಗಿ ಗುರುತಿಸಿಕೊಂಡರು. ಅನಂತರ ರಂಗಭೂಮಿಯ ಆಸಕ್ತಿ ಇವರ ಸೆಳೆದು ಸಾವು ಧ್ಯೇಯಕ್ಕಿಲ್ಲ, ಶ್ಮಶಾನ ಕುರುಕ್ಷೇತ್ರ, ಸತ್ಯಾಗ್ರಹ, ಶೂದ್ರ ತಪಸ್ವಿ, ಸಾವಿರದವಳು, ಸಂತೆಯೊಳಗೊಂದು ಮನೆಯ ಮಾಡಿ, ಪ್ಲಾಸ್ಟಿಕ್‌ ಭೂತ,  ಹಳ್ಳಿಯೂರ ಹಮ್ಮಿàರ, ಕಮಲಮಣಿ ಕಾಮಿಡಿ ಕಲ್ಯಾಣ, ಸಾಂಬಶಿವ ಪ್ರಹಸನ, ಮುಂತಾದ ನಾಟಕಗಳಲ್ಲಿ ಅಭಿನಯಿಸಿ ರಂಗಪ್ರೇಮಿಗಳನ್ನು ಮನರಂಜಿಸಿದ್ದರು.

ಸಂಚಾರಿ ಥಿಯೇಟರ್‌ ಮೂಲಕ ಪಿನಾಕಿಯೇ, ಮಿಸ್‌ ಅಂಡಸ್ಟ್ಯಾಂಡಿಂಗ್‌ ನಂತಹ ನಾಟಕಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡರು. ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ್ದ ಇವರು ನಾಟಕ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿ ಪ್ರೇಕ್ಷಕ ಬಂಧುವಿಗೆ ಸಂಗೀತದ ರಸದೌತಣವನ್ನು ಉಣಬಡಿಸುತ್ತಿದ್ದರು.

ಕಷ್ಟಗಳ ಮೂಟೆ ಹೊತ್ತು ಚಿತ್ರರಂಗ ಪ್ರವೇಶಿಸಿದ ಇವರ ಆರಂಭದ ದಿನಗಳು ಸುಲಭ¨ªೆನಿರಲ್ಲಿಲ್ಲ. ಸದಾ ವಿಭಿನ್ನತೆ ಬಯಸುವ  ಸಂಚಾರಿ ಪಾಲಿಗೆ ಸಿಕ್ಕಿದ್ದು  ನಾನು ಅವನಲ್ಲ ಅವಳು ಎಂಬ ಚಿತ್ರ. ಈ ಚಿತ್ರ ನೋಡಿದ ಯಾವೊಬ್ಬ ಸಿನಿ ಅಭಿಮಾನಿಯು ಇವರ ಅಭಿನಯಕ್ಕೆ ಮನ ಸೋಲದೆ ಇರಲಾಗದು.ತಾನು ಆ ಮಂಗಳಮುಖೀ ಪಾತ್ರದಲ್ಲಿ ಪರಕಾಯ ಪ್ರವೇಶಿಸಿ ಚಿತ್ರರಸಿಕರನ್ನು ದಿಗ್ಭ್ರಮೆಗೊಳಿಸಿ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ಹೆಮ್ಮೆ ಇವರದ್ದು. ನಾನು ಅವನಲ್ಲ ಅವಳು ಎಂಬ ಚಿತ್ರ ಸದಾಕಾಲಕ್ಕೂ ಅವರ ಅಭಿಮಾನಿಗಳ  ಎದೆಯಲ್ಲಿ ಅಚ್ಚಳಿಯದೆ ಉಳಿದು ಸಂಚಾರಿಯು “ತೃತೀಯ ಲಿಂಗಿಯ’ ಪಾತ್ರದ ಮುಖಾಂತರ ಸದಾ ಜೀವಂತವಾಗಿರುತ್ತಾರೆ. ಅನಂತರ ಹರಿವು ಚಿತ್ರದ ನಟನೆಗಾಗಿ ರಾಜ್ಯ ಗ್ರಾಮೀಣ ನಟನ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ನಾತಿಚರಾಮಿ, ಕೃಷ್ಣ ತುಳಸಿ, ಕಿಲ್ಲಿಂಗ್‌ ವೀರಪ್ಪನ್‌,  6ನೇ ಮೈಲಿ, ಆಟಕ್ಕುಂಟು ಲೆಕ್ಕಕ್ಕಿಲ್ಲ, ಆಕ್ಟ್ 1978, ರಿಕ್ತ, ಪಾದರಸ, ಒಗ್ಗರಣೆ, ಶುದ್ಧಿ, ತಲೆದಂಡ ಇವರು ನಟಿಸಿದ ಕೆಲವು ಚಿತ್ರಗಳು ಮತ್ತು ಕೆಲವು ಇನ್ನೂ ತೆರೆಕಾಣಬೇಕಾದ್ದದ್ದು. ಇವರು ಕೊನೆಯದಾಗಿ ನಟಿಸಿ ಬಿಡುಗಡೆ ಹಂತದಲ್ಲಿರುವ ತಲೆದಂಡ ಚಿತ್ರದ ಟೀಸರ್‌ ನೋಡಿದ ಪ್ರತಿಯೊಬ್ಬ ಸಂಚಾರಿಯ ಅಭಿಮಾನಿಯು ಈಗ ಮಂತ್ರ ಮುಗ್ಧ! ಮಾಡಿದ ಪ್ರತೀ ಸಿನೆಮಾದಲ್ಲು ತನ್ನ ವಿಭಿನ್ನವಾದ ಪಾತ್ರದ ರೌದ್ರ ರೂಪ ತೋರಿಸಿ ಅಭಿಮಾನಿಗಳನ್ನು ಮನರಂಜಿಸುವ ಸಂಚಾರಿ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿ ಚಿತ್ರರಂಗದಲ್ಲೂ ತಮ್ಮನ್ನು ಗುರುತಿಸಿಕೊಂಡಿದ್ದಾರೆ.

38 ವರ್ಷದ ಈ ನಟನ ಸಾಧನೆ ಇನ್ನೂ ಹಲವಿತ್ತು, ಕನ್ನಡಕ್ಕೆ ಇನ್ನೂ ಪ್ರಶಸ್ತಿಗಳ ಸುರಿಮಳೆ ಬರುವುದಿತ್ತೇನು.ಸಂಚಾರಿಯ ಕನಸು ನೂರಿತ್ತು. ಇನ್ನೂ ಚಿತ್ರ ರಸಿಕರನ್ನು ಮನರಂಜಿಸಲಿತ್ತು. ಆದರೇನು ಮಾಡುವುದು,  ಸಂಚಾರಿ ಸಂಚಾರಿ ನಿಯಮವನ್ನು ಪಾಲಿಸಲಿಲ್ಲ ಎಂಬ ಅಪವಾದದ ದುಃಖದ ಸುದ್ದಿ ನೀಡುತ್ತಲೇ ಮರೆಯಾದರು. ಪಾದರಸದಂತಹ ನಟನೆಯ ಪರಿಪೂರ್ಣ ನಟ, ನಟನ ರಂಗದಲ್ಲಿ ತನ್ನದೇ ಛಾಪು ಮೂಡಿಸಿದ ಭೂಪ ಕನ್ನಡ ಚಿತ್ರರಂಗದಲ್ಲಿ ಮಿನುಗುತ್ತಿದ್ದ ಧ್ರುವತಾರೆ ಅನಿರೀಕ್ಷಿತವಾಗಿ ನಡೆದ ಅಪಘಾತದಲ್ಲಿ ವಿಧಿಯ ಕರೆಗೆ ಓಗೊಟ್ಟು ಸಂಚಾರ ಅಂತ್ಯಗೊಳಿಸಿದರು.

ಎಲ್ಲೆಲ್ಲೂ ನೀರವ ಮೌನ,  ಕನ್ನಡ ಚಿತ್ರರಂಗ ಮತ್ತೆ ಮತ್ತೆ ಬರಿದಾಗುತ್ತಿದೆ ಇಂತಹ ಅಮೋಘ ನಟರನ್ನು ಕಳೆದುಕೊಂಡು. ಹೋಗಿಬನ್ನಿ ಸಂಚಾರಿ ವಿಜಯ್.

ಜೀವನದ ಸಂಚಾರದಲ್ಲಿ ಕಣ್ಮರೆಯಾದರು ನಿಮ್ಮೆಲ್ಲ ಅಭಿಮಾನಿಗಳ  ನೆನಪಲ್ಲಿ ಸದಾಕಾಲವೂ ಸಂಚಾರಿಯಾಗಿ ನಿಶಬ್ದದಿಂದಲೇ ಸಂಚರಿಸುವಿರಿ. ಸಾವಲ್ಲೂ ಮಾನವೀಯತೆ ಮೆರೆದು ಅಂಗಾಗ ದಾನ ಮಾಡಿ ಇನ್ನೊಂದು ಜೀವಕ್ಕೆ ಆಸರೆಯಾದ ನಿಮ್ಮ ಅಭಿಮಾನಿ ನಾವು ಎಂಬ ಹೆಮ್ಮೆ, ಸಾರ್ಥಕತೆ ನಮ್ಮಲ್ಲಿದೆ.

 

 ಕೃತಿಕಾ ಸದಾಶಿವ

ದ್ವಿತೀಯ ಪತ್ರಿಕೋದ್ಯಮ ವಿವೇಕಾನಂದ ಕಾಲೇಜು ಪುತ್ತೂರು

ಟಾಪ್ ನ್ಯೂಸ್

Bangla–Pak

ಬಾಂಗ್ಲಾದೇಶದ ಭಾರತ ವಿರೋಧಿ ಮನಃಸ್ಥಿತಿ ಖಂಡನೀಯ

Boxing Day Test: ನೀಗಲಿ ಭಾರತದ ಬ್ಯಾಟಿಂಗ್‌ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್‌

Boxing Day Test: ನೀಗಲಿ ಭಾರತದ ಬ್ಯಾಟಿಂಗ್‌ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್‌

High-Court

Covid: ಎನ್‌-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Koteshwar: ಬೀಜಾಡಿಯ ಯೋಧ ಅನೂಪ್‌ ಪೂಜಾರಿ ಮೃತ್ಯು

Koteshwar: ಬೀಜಾಡಿಯ ಯೋಧ ಅನೂಪ್‌ ಪೂಜಾರಿ ಮೃತ್ಯು

pratap-Simha

Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್‌ ಸಿಂಹ

Christmas: ಕರಾವಳಿಯಲ್ಲಿ ಸಂಭ್ರಮದ ಕ್ರಿಸ್ಮಸ್‌ ಆಚರಣೆ

Christmas: ಕರಾವಳಿಯಲ್ಲಿ ಸಂಭ್ರಮದ ಕ್ರಿಸ್ಮಸ್‌ ಆಚರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Bangla–Pak

ಬಾಂಗ್ಲಾದೇಶದ ಭಾರತ ವಿರೋಧಿ ಮನಃಸ್ಥಿತಿ ಖಂಡನೀಯ

Boxing Day Test: ನೀಗಲಿ ಭಾರತದ ಬ್ಯಾಟಿಂಗ್‌ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್‌

Boxing Day Test: ನೀಗಲಿ ಭಾರತದ ಬ್ಯಾಟಿಂಗ್‌ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್‌

High-Court

Covid: ಎನ್‌-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Koteshwar: ಬೀಜಾಡಿಯ ಯೋಧ ಅನೂಪ್‌ ಪೂಜಾರಿ ಮೃತ್ಯು

Koteshwar: ಬೀಜಾಡಿಯ ಯೋಧ ಅನೂಪ್‌ ಪೂಜಾರಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.