ಜಮ್ಮು ವಾಯು ಪಡೆ ನಿಲ್ದಾಣದ ಮೇಲೆ ಡ್ರೋನ್ ಬಾಂಬ್ ದಾಳಿ ಶಂಕೆ
Team Udayavani, Jun 27, 2021, 11:20 AM IST
ಶ್ರೀನಗರ: ಜಮ್ಮು ವಾಯು ಪಡೆ ನಿಲ್ದಾಣದಲ್ಲಿ ನಡೆದ ಎರಡು ಸ್ಫೋಟಗಳ ತನಿಖೆ ಆರಂಭವಾಗಿದೆ. ಮಧ್ಯರಾತ್ರಿ ಐದು ನಿಮಿಷಗಳ ಅಂತರದಲ್ಲಿ ನಡೆದ ಎರಡು ಸ್ಪೋಟಗಳು ಇದೀಗ ಹಲವಾರು ಸಂಶಯಗಳಿಗೆ ಕಾರಣವಾಗಿದೆ.
ರಾತ್ರಿ 1.37ಕ್ಕೆ ವಿಮಾನ ನಿಲ್ದಾಣದ ತಾಂತ್ರಿಕ ಪ್ರದೇಶದ ಕಟ್ಟಡದ ಛಾವಣಿಯಲ್ಲಿ ಮೊದಲ ಸ್ಫೋಟವಾಗಿದೆ. 1.42ಕ್ಕೆ ಎರಡನೇ ಸ್ಪೋಟ ನಡೆದಿದೆ. ಸ್ಪೋಟದಿಂದಾಗಿ ಯಾವುದೇ ಸಾವು ನೋವು ಹಾನಿ ಸಂಭವಿಸಿಲ್ಲ.
“ಜಮ್ಮು ವಾಯುಪಡೆ ನಿಲ್ದಾಣದ ತಾಂತ್ರಿಕ ಪ್ರದೇಶದಲ್ಲಿ ಭಾನುವಾರ ಮುಂಜಾನೆ ಎರಡು ಕಡಿಮೆ ತೀವ್ರತೆಯ ಸ್ಫೋಟಗಳು ವರದಿಯಾಗಿವೆ. ಒಂದು ಕಟ್ಟಡದ ಮೇಲ್ಛಾಣಿಗೆ ಸಣ್ಣ ಹಾನಿಯಾಗಿದೆ. ಇನ್ನೊಂದು ತೆರೆದ ಪ್ರದೇಶದಲ್ಲಿ ಸ್ಫೋಟಗೊಂಡಿದೆ. ಯಾವುದೇ ಸಲಕರಣೆಗಳಿಗೆ ಯಾವುದೇ ಹಾನಿಯಾಗಿಲ್ಲ. ತನಿಖೆ ನಡೆಯುತ್ತಿದೆ “ಎಂದು ಭಾರತೀಯ ವಾಯುಪಡೆಯ ಅಧಿಕೃತ ಟ್ವಿಟರ್ ಹ್ಯಾಂಡಲ್ ಟ್ವೀಟ್ ಮಾಡಿದೆ.
ಇದನ್ನೂ ಓದಿ:ಜಮ್ಮು ವಾಯು ಪಡೆ ನಿಲ್ದಾಣದಲ್ಲಿ ಐದು ನಿಮಿಷದ ಅಂತರದಲ್ಲಿ ಎರಡು ಬಾರಿ ಸ್ಫೋಟ!
ವಾಯುಪಡೆಯ ನಿಲ್ದಾಣದ ಹೊರಗೆ ಬೃಹತ್ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ತನಿಖೆ ನಡೆಯುತ್ತಿದೆ ಮತ್ತು ಈ ಪ್ರಕರಣದಲ್ಲಿ ಭಯೋತ್ಪಾದಕ ಹಿನ್ನೆಲೆ ಸೇರಿದಂತೆ ಎಲ್ಲಾ ಕೋನಗಳಿಂದಲೂ ಪರಿಶೀಲಿಸಲಾಗುತ್ತಿದೆ.
ಸ್ಫೋಟಗಳ ಬಗ್ಗೆ ಮಾಹಿತಿ ತಿಳಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ವಾಯು ಸಿಬ್ಬಂದಿ ಉಪ ಮುಖ್ಯಸ್ಥ ಏರ್ ಮಾರ್ಷಲ್ ಹರ್ಜಿತ್ ಸಿಂಗ್ ಅರೋರಾ ಅವರೊಂದಿಗೆ ಘಟನೆ ಕುರಿತು ಮಾತನಾಡಿದರು.
ಡ್ರೋನ್ ದಾಳಿ ಶಂಕೆ: ವಿಮಾನ ನಿಲ್ದಾಣದ ಉನ್ನತ ಭದ್ರತಾ ವಲಯದೊಳಗೆ ಐಇಡಿ ಪೇಲೋಡ್ ಹಾಕಲು ಡ್ರೋನ್ ಬಳಸಲಾಗಿದೆಯೇ ಎಂದು ಭದ್ರತಾ ಸಂಸ್ಥೆಗಳು ಪರಿಶೀಲಿಸುತ್ತಿವೆ. ಈ ಡ್ರೋನ್‌ಗಳನ್ನು ರಾಡಾರ್‌ಗಳು ಪತ್ತೆ ಮಾಡುವುದಿಲ್ಲ. ಹಾಗಾಗಿ ರಾಡಾರ್ ಕಣ್ಣು ತಪ್ಪಿಸಿ ಒಳಬಂದಿರುವ ಸಾಧ್ಯತೆಯಿದೆ.
ಇದನ್ನೂ ಓದಿ: ದೇಶದಲ್ಲಿ 50 ಸಾವಿರ ಹೊಸ ಸೋಂಕು ಪ್ರಕರಣಗಳು ಪತ್ತೆ, 57 ಸಾವಿರ ಸೋಂಕಿತರು ಗುಣಮುಖ
ಭಾರತ-ಪಾಕಿಸ್ತಾನ ಗಡಿಯು ಈ ವಾಯುಪಡೆ ನಿಲ್ದಾಣದಿಂದ ಕೇವಲ 14 ಕಿ.ಮೀ ದೂರದಲ್ಲಿದೆ. ಈ ಹಿಂದೆಯೂ ಡ್ರೋನ್‌ಗಳನ್ನು ಬಳಸಿ ಭಾರತದ ಭೂಪ್ರದೇಶದೊಳಗೆ 12 ಕಿ.ಮೀ.ವರೆಗೆ ಶಸ್ತ್ರಾಸ್ತ್ರಗಳನ್ನು ಡ್ರಾಪ್ ಮಾಡಿದ್ದ ಘಟನೆ ನಡೆದಿತ್ತು.
ಪ್ರತ್ಯೇಕ ಘಟನೆಯಲ್ಲಿ ಜಮ್ಮು ಪೊಲೀಸರು ಭಾನುವಾರ ಇಬ್ಬರು ಭಯೋತ್ಪಾದಕ ಶಂಕಿತರನ್ನು ಬಂಧಿಸಿದ್ದಾರೆ. ಈ ಇಬ್ಬರ ಬಂಧನಕ್ಕೂ, ಸ್ಫೋಟ ಪ್ರಕರಣಕ್ಕೂ ಸಂಬಂಧವಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.