ಮರಾಠಿಗೆ ಹೊರಟ ‘ಅಗ್ನಿ ಸಾಕ್ಷಿ’…
Team Udayavani, Jun 27, 2021, 1:26 PM IST
ಬೆಂಗಳೂರು: ಸುಮಾರು 6 ವರ್ಷಗಳ ಕಾಲ ಪ್ರಸಾರಗೊಂಡ ಕನ್ನಡದ ಅಗ್ನಿ ಸಾಕ್ಷಿ ಧಾರಾವಾಹಿ ಇದೀಗ ಮತ್ತೊಂದು ದಾಖಲೆ ಬರೆಯುತ್ತಿದೆ. ಎಲ್ಲರ ಅಚ್ಚುಮೆಚ್ಚಿನ ಮೆಗಾ ಸೀರಿಯಲ್ ಆಗಿ ಹೊರ ಹೊಮ್ಮಿದ ಅಗ್ನಿ ಸಾಕ್ಷಿ ಇದೀಗ ಮರಾಠಿ ಭಾಷೆಗೆ ರಿಮೇಕ್ ಆಗಿ ಪ್ರಸಾರಗೊಳ್ಳಲು ಸಿದ್ಧತೆ ನಡೆಸಿದೆ.
ಕನ್ನಡಿಗರ ಮನೆ ಮಾತಾಗಿದ್ದ ಅಗ್ನಿ ಸಾಕ್ಷಿ ಬಹುಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿತ್ತು. ಆಕರ್ಷಕ ಕಥಾ ಹಂದರದ ಈ ಧಾರಾವಾಹಿ ಅಪಾರ ವೀಕ್ಷಕರ ಬಳಗವನ್ನು ಹೊಂದಿತ್ತು. ಟಿ.ಆರ್.ಪಿಯಲ್ಲೂ ಮೇಲುಗೈ ಸಾಧಿಸಿತ್ತು. ನಟ ವಿಜಯ ಸೂರ್ಯ ಹಾಗೂ ನಟಿ ವೈಷ್ಣವಿ ಗೌಡ ಅವರಿಗೆ ದೊಡ್ಡ ಯಶಸ್ಸು ತಂದು ಕೊಟ್ಟ ಕೀರ್ತಿ ಅಗ್ನಿಸಾಕ್ಷಿಗೆ ಸಲ್ಲುತ್ತದೆ. ಈ ಜೋಡಿಯ ಕೆಮಿಸ್ಟ್ರಿ ಈ ಧಾರಾವಾಹಿಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಯಿತು. ಕಳೆದ ವರ್ಷ ಮುಕ್ತಾಯಗೊಂಡ ಅಗ್ನಿಸಾಕ್ಷಿ ಇದೀಗ ಮರಾಠಿ ಭಾಷೆಯಲ್ಲಿ ತೆರೆ ಕಾಣುತ್ತಿದೆ.
ಜುಲೈ 5 ರಿಂದ ಪ್ರಸಾರ :
ಕನ್ನಡದಲ್ಲಿ ಬ್ಲಾಕ್ ಬಸ್ಟರ್ ಧಾರಾವಾಹಿ ಎನ್ನಿಸಿಕೊಂಡ ಅಗ್ನಿಸಾಕ್ಷಿ ಮರಾಠಿಯಲ್ಲಿ ಸೋನಾಚಿ ಪಾವಲೆ ಹೆಸರಿನೊಂದಿಗೆ ಜುಲೈ 5 ರಿಂದು ಪ್ರಸಾರವಾಗಲಿದೆ. ಆದಿತ್ಯಾ ಧ್ರುವಾ ಹಾಗೂ ಜ್ಯೋತಿ ನಿಮ್ಶೆ ಹೊಸ ಪ್ರತಿಭೆಗಳು ಈ ಧಾರಾವಾಹಿಯಲ್ಲಿ ನಾಯಕ-ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.