ಧೈರ್ಯವೇ ಗೆಲುವಿಗೆ ಸಾಧನ

Team Udayavani, Jun 28, 2021, 8:00 AM IST

ಧೈರ್ಯವೇ ಗೆಲುವಿಗೆ ಸಾಧನ

ಪುಟ್ಟ ಬಾವಿ. ಬಾವಿಯಲ್ಲಿ ತೇಲುವ ತುಂಡು ಕಟ್ಟಿಗೆ. ಕಟ್ಟಿಗೆಯ ಮೇಲೆ ಒಂದು ಕಪ್ಪೆ. ಇನ್ನೊಂದೆಡೆ ಕಪ್ಪೆಯನ್ನೇ ದಿಟ್ಟಿಸುವ ಹಾವು. ಹಾವಿಗೆ ಭರ್ಜರಿ ಊಟದ ಕನಸು. ಕಪ್ಪೆಯನ್ನು ತಿನ್ನುವ ಆಸೆಯಲ್ಲಿ ಕಪ್ಪೆಯನ್ನು ಸಮೀಪಿಸುತ್ತದೆ. ತನ್ನತ್ತ ಬರುವ ಹಾವು ಕಂಡ ಕಪ್ಪೆ ದಾರಿ ಕಾಣದೆ “ಧೈರ್ಯಂ ಸರ್ವತ್ರ ಸಾಧನಂ’ ಎಂದು ಇಡೀ ಶಕ್ತಿಯನ್ನು ಬಳಸಿ ಮೇಲೆ ಹಾರಿತು. ಕಪ್ಪೆ ಹವಣಿಸಲು ನೀರಿನಿಂದ ಮೇಲೆ ಹಾರಿತು ಹಾವು. ಹಾವು ನೀರಿನಿಂದ ಮೇಲೆ ಬರುವುದನ್ನೇ ಕಾಯುತ್ತಿದ್ದ ಹದ್ದು ಕ್ಷಣಾರ್ಧದಲ್ಲಿ ಬಂದು ಹಾವನ್ನು ತನ್ನ ಕಾಲುಗಳಲ್ಲಿ ಹಿಡಿದು ಹಾರಿಹೋಯಿತು. ತಾಳ್ಮೆಯಿಂದ ಗುರಿ ಸ್ಪಷ್ಟವಿದ್ದ ಹದ್ದು ಆಹಾರ ಪಡೆಯಿತು. ಆಸೆಯ ಹಾವು ಆಹಾರವಾಯಿತು. ಧೈರ್ಯದ ಕಪ್ಪೆ ಬದುಕಿತು.

ನನ್ನ ಜೀವನ ಇಂದೇ ಕೊನೆ, ಹಾವಿಗೆ ಆಹಾರವಾಗಲಿಕ್ಕೆ ನಾನು ಹುಟ್ಟಿದ್ದು ಎಂದು ಕಪ್ಪೆ ಹೆದರಿ ಪ್ರಯತ್ನ ಮಾಡದೇ  ಇರುತ್ತಿದ್ದರೆ ಅದು ಬದುಕಲು ಸಾಧ್ಯವಿತ್ತೇ. ತನ್ನ ಮುಂದಿರುವ ಕಪ್ಪೆಯಂತೆ ತನಗೂ ಶತ್ರುಗಳು ಇದ್ದಾರೆ ಎಂದು ಹಾವು ವಿಚಾರ ಮಾಡಿ ಅಕ್ಕಪಕ್ಕ ನೋಡಿದಿದ್ದರೆ ಅದು ಸಾಯುತ್ತಿತ್ತೇ. ಅವಸರ ಮಾಡಿ ತಲೆ ಮಾತ್ರ ಕಾಣುವ ಹಾವನ್ನು ಹಿಡಿಯಲು ಹದ್ದು ಬಂದರೆ ಅದರ ಹೊಟ್ಟೆ ತುಂಬುತ್ತಿತ್ತೇ.. ಇದರ ನೀತಿ ಧೈರ್ಯದಿಂದ ಮಾಡಿದ ಕಾರ್ಯ ಸಿದ್ಧಿಸುವುದು. ಕರ್ಮ ನಮ್ಮದು ಪ್ರತಿಫಲ ದೇವರದ್ದು ಎಂಬಂತೆ ಪ್ರಯತ್ನದಲ್ಲಿಯೇ ಗೆಲುವಿದೆ.

ಪ್ರಯತ್ನವೇ ಪಡದೆ ನನಗೆ ಗೆಲುವಿಲ್ಲ ಎನ್ನುವುದು ಮೂರ್ಖತನ. ಪ್ರಯತ್ನ ಪಟ್ಟು ಸೋತರೆ ಅದು ಪಾಠವಾಗುತ್ತದೆ. ಗೆದ್ದರೆ ಇನ್ನಷ್ಟು  ಸಾಧನೆಗೆ ಸ್ಫೂರ್ತಿಯಾಗುತ್ತದೆ. ಆದರೆ ಪ್ರಯತ್ನವೇ ಪಡದೆ ಹಣೆಬರಹವನ್ನೋ, ದುರಾದೃಷ್ಟವನ್ನೋ ಹೊಣೆ ಮಾಡಿದರೆ ನಾವು ನಿಂತಲ್ಲೇ ನಿಂತಿರುತ್ತೇವೆ. ಧೈರ್ಯದಿಂದ ನನ್ನಿಂದ ಸಾಧ್ಯ ಅಂದುಕೊಂಡವನನ್ನು ಸೋಲಿಸುವುದು ಎಂದಿಗೂ ಸಾಧ್ಯವಿಲ್ಲ. ಬದುಕಲು ಬೇಕಿರುವುದು ಧೈರ್ಯ ಮತ್ತು ಪ್ರಯತ್ನ ಜತೆಗೆ ತಾಳ್ಮೆ.

ಇಂದಿನ ಕೊರೊನಾದ ಹಾವಳಿಯಲ್ಲಿ ಭಯವೇ ಕೊರೊನಾವಾದರೆ, ಧೈರ್ಯವೇ ವ್ಯಾಕ್ಸಿನ್‌ ಎಂಬ ಮಾತು ಸಹಜವೆನಿಸುತ್ತದೆ. ಇಂದು ಧೈರ್ಯವೇ ದಿವ್ಯ ಔಷಧ. ವಿಪತ್ತು ಬರುವುದು ಸಹಜ, ಅದನ್ನು ಧೈರ್ಯವಾಗಿ ಎದುರಿಸಬೇಕು. ಆಪತ್ತನ್ನು ಅವಕಾಶವಾಗಿ ಬಳಸುವ ಜಾಣ್ಮೆ ಹಾಗೂ ಧೈರ್ಯವಿದ್ದರೆ ಎಲ್ಲವನ್ನೂ ಜಯಿಸಬಹುದು, ಸಾಧಿಸಬಹುದು. ಜಿಂಕೆಯ ಓಡುವ ವೇಗ ಸಿಂಹದ ವೇಗಕ್ಕಿಂತ ಹೆಚ್ಚಿದ್ದರೂ ಭಯದಿಂದ ಜಿಂಕೆ ಸಿಂಹಕ್ಕೆ ಆಹಾರವಾಗುತ್ತದೆ. ಇದುವೇ ಅಂಜಿಕೆ. ಶೇಕ್ಸ್‌ಪಿಯರ್‌ಹೇಳುವಂತೆ ಹೇಡಿ ಸಾಯುವುದು ಹಲವು ಸಲ, ಧೈರ್ಯಶಾಲಿ ಸಾಯುವುದು ಒಂದೇ ಸಲ.

ಶಾಂತಾರಾಮ ಚಿಬ್ಬುಲಕರ

ಹಳಿಯಾಳ

ಟಾಪ್ ನ್ಯೂಸ್

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ

Allegation against Amit Shah: Canadian diplomats summoned

Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

UV Fusion: ಪ್ರಕೃತಿ ಅವಶ್ಯ ಮನುಜನಿಗೆ

13

UV Fusion: ಎತ್ತ ಕಡೆ ಸಾಗುತ್ತಿದೆ ಈಗಿನ ಯುವ ಜನತೆ ?

12-uv-fusion

UV Fusion: ತಂಡ ಕಟ್ಟಿದ, ಗೆದ್ದ…

11-

Healthy lifestyle: ಸ್ವಸ್ಥ ಆರೋಗ್ಯಕ್ಕೆ ಸ್ವಸ್ಥ ಜೀವನ ಕ್ರಮ

10

UV Fusion: ಸಂಭ್ರಮದ ಹಬ್ಬಕ್ಕೆ ಬಾಂಧವ್ಯವೇ ಬೆಸುಗೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.