ಸಹಕಾರಿ ವಲಯದಲ್ಲಿ ಸಂಘಟಿತ ಮಾರುಕಟ್ಟೆ ನಿರ್ಮಿಸಿ
Team Udayavani, Jun 27, 2021, 4:34 PM IST
ಸಿಂದಗಿ: ರೈತ ಉತ್ಪಾದಕರ ಸಂಸ್ಥೆಗಳ ಸ್ಥಾಪನೆ ಮೂಲಕ ಸಹಕಾರಿ ವಲಯದಲ್ಲಿ ಸಂಘಟಿತ ಮಾರುಕಟ್ಟೆ ನಿರ್ಮಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ಹೇಳಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯ ಆವರಣದಲ್ಲಿರುವ ಚನ್ನವೀರ ಶಿವಾಚಾರ್ಯರ ರೈತ ಉತ್ಪಾದಕರ ಕಂಪನಿಗೆ ಭೇಟಿ ನೀಡಿ ಕಂಪನಿಯ ಕಾರ್ಯ ಚಟುವಟಿಕೆ ಪರಿಶೀಲಿಸಿ ಮಾತನಾಡಿದ ಅವರು, ರೈತರು ಬೆಳೆದ ಬೆಳೆಯನ್ನು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುವ ಮೂಲಕ ತಮ್ಮ ಆದಾಯ ದ್ವಿಗುಣಗೊಳಿಸಿಕೊಳ್ಳಬೇಕು.
ಇಂದಿನ ಪರಿಸ್ಥಿತಿಯಲ್ಲಿ ರೈತ ತಾನು ಬೆಳೆದ ಬೆಳೆಗೆ ಶೇ.40 ರಷ್ಟು ಹಣ ಪಡೆದರೆ ಮಧ್ಯವರ್ತಿ ಶೇ.60 ರಷ್ಟು ಹಣ ಪಡೆಯುತ್ತಾನೆ. ಇಂಥ ಮಾರುಕಟ್ಟೆಯ ಪರಿಸ್ಥಿತಿಯಲ್ಲಿ ರೈತನ ಶ್ರಮ ವ್ಯರ್ಥವಾಗುತ್ತಿದೆ. ಇದನ್ನು ಮನಗಂಡ ಸರಕಾರ ರೈತ ಉತ್ಪಾದಕರ ಕಂಪನಿ (ಎಫ್‌ಪಿಓ)ಗಳನ್ನು ಪ್ರಾರಂಭಿಸಲು ಮುಂದಾಗಿದೆ. ತಾಲೂಕಿಗೆ 5 ರೈತ ಉತ್ಪಾದಕರ ಕಂಪನಿ (ಎಫ್‌ಪಿಓ)ಗಳು ಸ್ಥಾಪನೆ ಮಾಡಲು ಅವಕಾಶ ಸಿಕ್ಕಿರುವುದನ್ನು ರೈತರು ಸದುಪಯೋಗ ಪಡೆಸಿಕೊಳ್ಳ ಬೇಕು ಎಂದು ಸಲಹೆ ನೀಡಿದರು.
ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಚನ್ನವೀರ ಶಿವಾಚಾರ್ಯ ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ಅಶೋಕ ಅಲ್ಲಾಪೂರ ಮಾತನಾಡಿ, ರಾಜ್ಯದಲ್ಲಿ ಒಟ್ಟು 10 ಸಾವಿರ ಎಫ್ ಪಿಓಗಳನ್ನು ಸ್ಥಾಪಿಸಲು ಒಂದು ಸಾವಿರ ಕೋಟಿ ರೂ. ಮೀಸಲಿಟ್ಟಿದೆ. ಆದ್ದರಿಂದ ಈ ಭಾಗದ ರೈತರು ಎಫ್ ಪಿಓಗಳ ಬಗ್ಗೆ ತಿಳಿದುಕೊಂಡು ಸದಸ್ಯರಾಗುವುದು ಅತ್ಯವಶ್ಯಕ ಎಂದು ಹೇಳಿದರು. ಜಿಲ್ಲಾ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಮಹಾದೇವ ಅಂಬಲಿ ಮಾತನಾಡಿ, ರೈತ ಉತ್ಪಾದಕರ ಸಂಸ್ಥೆಯು ರೈತ-ಗ್ರಾಹಕ ಸಂಬಂಧ ಬೆಸೆಯುವ ಕೆಲಸ ಮಾಡುತ್ತದೆ.
ಈ ವಹಿವಾಟಿನಲ್ಲಿ ಮಧ್ಯವರ್ತಿಯ ವ್ಯವಹಾರಕ್ಕೆ ಆಸ್ಪದವಿಲ್ಲ. ಒಂದಷ್ಟು ರೈತ ಸದಸ್ಯರು ಕಾನೂನಾತ್ಮಕವಾಗಿ ತಮ್ಮದೇ ಕಂಪನಿ ಸ್ಥಾಪಿಸಿಕೊಳ್ಳಬಹುದು ಎಂದು ಹೇಳಿದರು. ತಾಲೂಕಿನಲ್ಲಿ ಪ್ರತಿ ಹಳ್ಳಿಯಲ್ಲಿರುವ ಆಸಕ್ತ ರೈತರು ಗುಂಪು ರಚನೆ ಮಾಡಬೇಕು. ಹೋಬಳಿ ಮಟ್ಟದಲ್ಲಿ ರೈತ ಉತ್ಪಾದಕರ ಸಂಸ್ಥೆ ರಚನೆಯಾಗುತ್ತದೆ. ತಾಲೂಕಿನ ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಬಿಜೆಪಿ ಜಿಲ್ಲಾ ಅಸಂಘಟಿತ ಕಾರ್ಮಿಕರ ಪ್ರಕೋಷ್ಠದ ಸಂಚಾಲಕ ಮುತ್ತು ಶಾಬಾದಿ, ಹಿರಿಯ ಮುಖಂಡ ಚಂದ್ರಶೇಖರ ನಾಗೂರ, ಶ್ರೀಶೈಲ ಕಕ್ಕಳಮೇಲಿ, ಚನ್ನವೀರ ಶಿವಾಚಾರ್ಯ ರೈತ ಉತ್ಪಾದಕರ ಕಂಪನಿಯ ತಾಂತ್ರಿಕ ಮಾರ್ಗದರ್ಶನದ ತಂಡದ ಅಧ್ಯಕ್ಷ ಬಿ.ಪಿ. ಹುಲಸಗುಂದ, ವ್ಯವಹಾರಿಕ ಅಭಿವೃದ್ಧಿಯ ತಂಡದ ಅಧ್ಯಕ್ಷ ಸುಭಾಶ ಜಾಲವಾದಿ, ಸಾಮಾಜಿಕ ಸಂಪರ್ಕ ತಂಡದ ಅಧ್ಯಕ್ಷ ಗಂಗಾಧರ ಪವಾರ, ಹಣಕಾಸಿನ ನಿರ್ವಹಣೆ ತಂಡದ ಅಧ್ಯಕ್ಷ ರೇವಣಸಿದ್ದಪ್ಪ ಬಡಾನೂರ, ನಿರ್ದೇಶಕರಾದ ಶೈಲಜಾ ಸ್ಥಾವರಮಠ, ರಮೇಶ ಪೂಜಾರ, ಶಂಕರಲಿಂಗ ನಿಗಡಿ, ಮಲ್ಲಣ್ಣ ಅಂಬಲಿ, ನಿಂಗಪ್ಪ ಭಾವಿಕಟ್ಟಿ, ಸಿಇಓ ನಿವೇದಿತಾ ಹಿರೇಮಠ ವರ್ತಕರಾದ ಬಿ.ಎಚ್. ಬಿರಾದಾರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.