ಆಯುಕ್ತರಿಂದ ದೂರು ಸ್ವೀಕಾರ
Team Udayavani, Jun 27, 2021, 7:44 PM IST
ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ವಾಹನ ಕಳವು ಪ್ರಕರಣಗಳ ಬಗ್ಗೆಕಠಿಣ ಕ್ರಮವಹಿಸುವುದಾಗಿ ಪೊಲೀಸ್ ಆಯುಕ್ತಕಮಲ್ ಪಂತ್ ತಿಳಿಸಿದ್ದಾರೆ.ಕೋವಿಡ್ ಹಿನ್ನೆಲೆಯಲ್ಲಿ ಟ್ವಿಟರ್ ಮೂಲಕ ಶನಿವಾರ ಬೆಳಗ್ಗೆ 11.30ರಿಂದಮಧ್ಯಾಹ್ನ1 ಗಂಟೆವರೆಗೆ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.
ಈ ವೇಳೆಬಹುತೇಕ ದೂರುಗಳು ವಾಹನ ಕಳವು, ಸಂಚಾರ ದಟ್ಟಣೆ, ಪೊಲೀಸರದೌರ್ಜನ್ಯ, ಪಾರ್ಕಿಂಗ್ ಬಗ್ಗೆಯೇ ಬಂದಿದ್ದವು.ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ರಾತ್ರಿವೇಳೆ ಮನೆ ಮುಂದೆ ನಿಲ್ಲಿಸಿದವಾಹನಗಳನ್ನು ಕಳವುಮಾಡುತ್ತಿದ್ದಾರೆ. ಈ ಬಗ್ಗೆ ಕ್ರಮಕೈಗೊಳ್ಳುತ್ತೇವೆ. ಜತೆಗೆಸಿಸಿ ಕ್ಯಾಮೆರಾಗಳ ಅಳವಡಿಕೆ ಬಗ್ಗೆ ಆದ್ಯತೆ ಕೊಡಲಾಗುತ್ತದೆ ಎಂದರು.ಸಾರ್ವಜನಿಕರೊಬ್ಬರು ಕಳೆದ ಎರಡು-ಮೂರುವರ್ಷಗಳಿಂದ ಬೆಂಗಳೂರು ಸೇರಿ ಕರ್ನಾಟಕದಲ್ಲಿ ಬಾಂಗ್ಲಾದೇಶ, ನೈಜಿರಿಯಾ,ದಕ್ಷಿಣ ಸೂಡಾನ್, ಪಾಕಿಸ್ತಾನ, ಶ್ರೀಲಂಕಾ, ಅರಬ್ ದೇಶಗಳಿಂದ ಬಂದಅಕ್ರಮ ವಲಸಿಗರ ಸಂಖ್ಯೆ ಹೆಚ್ಚಾಗಿದೆಎಂದು ಗಮನ ಸೆಳೆ ದಾಗ, ಅಕ್ರಮವಲಸೆಯನ್ನು ಪೊಲೀ ಸರುಗಂಭೀರವಾಗಿ ಪರಿಗಣಿಸಿದ್ದಾರೆ.
ಅಂತಹವರು ಕಂಡು ಬಂದರೆ ತಕ್ಷಣಕ್ರಮ ಜರುಗಿಸುತ್ತೇವೆ ಎಂದರು.ಇನ್ನೂ ಕೆಲವರು ತಮಿಳುನಾಡಿನಕೃಷ್ಣಗಿರಿಯಲ್ಲಿ ಅಲ್ಲಿನ ಜಿಲ್ಲಾ ಪೊಲೀಸರಿಂದ ಕನ್ನಡಿಗರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ದೂರುಗಳು ಹೇಳಿಕೊಂಡರು. ಶಾಂತಲಾ ಎಂಬ ಮಹಿಳೆ ಅಮಾಯಕ ಕನ್ನಡಿಗರ ಮೇಲೆ ಕಾನೂನಾತ್ಮಕ ದೌರ್ಜನ್ಯ ನಡೆಸುತ್ತಿದ್ದಾರೆ. ಈಬಗ್ಗೆ ತಮ್ಮ ಬಳಿ ಸಾಕ್ಷ ವಿದೆ ಎಂದು ದೂರಿದರು.
ಈ ದೂರನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎಂದರು.ರವಿ ಎಂಬುವರು ಬಹಳಷ್ಟು ಮಂದಿಗಂಡಸರು ವರದಕ್ಷಿಣೆ ಕುರಿತಂತೆ ಸುಳ್ಳುಪ್ರಕರಣದಲ್ಲಿ ತೊಂದರೆಗೆ ಒಳಗಾಗಿದ್ದಾರೆ. ಯಾವುದೇ ಸಾಕ್ಷ Âಗಳಿಲ್ಲದೆದಾಖಲಿಸುವ ಪೂರ್ವಾಗ್ರಹ ಪೀಡಿತ ಪ್ರಕರಣದಲ್ಲಿ ಮನೆ ಮಂದಿಯನ್ನೆಲ್ಲಾಸೇರಿಸಲಾಗುತ್ತಿದೆ ಎಂದಾಗ, ಇದು ಸೂಕ್ಷ ¾ವಾದ ವಿಷಯ. ಪೊಲೀಸರು ಎಲ್ಲಾ ದೃಷ್ಟಿಕೋನಗಳಿಂದಲೂ ಪರಿಶೀಲನೆ ನಡೆಸುತ್ತಾರೆ. ಏಕಮುಖವಾಗಿ ನಿರ್ಧಾರತೆಗೆದುಕೊಳ್ಳುವುದಿಲ್ಲ ಎಂದರು.ಮಹಿಳೆಯೊಬ್ಬರು ತಮ್ಮ ಅಳಲನ್ನು ತೋಡಿಕೊಂಡಿದ್ದು, ನಾನು ಒಂಟಿಮಹಿಳೆ. ರೇರಾ ಆದೇಶದ ಹೊರತಾಗಿಯೂ ಖಾಸಗಿ ಬಿಲ್ಡರ್ ಒಂದು ನಮ್ಮಹಣವನ್ನು ವಾಪಾಸ್ ನೀಡದೆ 2018ರಿಂದ ಕಿರುಕುಳ ನೀಡುತ್ತಿದ್ದಾನೆ. ನನ್ನತಂದೆ ಇದೇ ವ್ಯಥೆಯಲ್ಲಿ ಮೃತಪಟ್ಟರು ಎಂದು ಹೇಳಿಕೊಂಡಿದ್ದಾರೆ. ಆದರೆಅದಕ್ಕೆ ಪರಿಹಾರವನ್ನು ರೇರಾ ಪ್ರಾಧಿಕಾರವೇ ನೀಡಬೇಕು. ಇಂತಹ ಪ್ರಕರಣಗಳಿಗೆ ಸಕ್ಷಮ ಪ್ರಾಧಿಕಾರ ರೇರಾ ಮಾತ್ರ ಎಂದು ಆಯುಕ್ತರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
PM Modi: 43 ವರ್ಷದ ಬಳಿಕ ಪ್ರಧಾನಿ ಮೋದಿ ಕುವೈತ್ ಭೇಟಿ… ಇಲ್ಲಿದೆ ಎರಡು ದಿನದ ವೇಳಾಪಟ್ಟಿ
UI Movie Review: ಫೋಕಸ್ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!
Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್ ವಾಹನ
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.